Rishabh Pant Records: ಶತಕ ಸಿಡಿಸಿ ಭರ್ಜರಿ ದಾಖಲೆ ಬರೆದ ರಿಷಭ್ ಪಂತ್

TV9kannada Web Team

TV9kannada Web Team | Edited By: Zahir PY

Updated on: Jul 18, 2022 | 11:04 AM

Rishabh Pant Records: ಭರ್ಜರಿ ಶತಕದ ಮೂಲಕ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡು ಇಂಗ್ಲೆಂಡ್ ಸರಣಿ ಗೆಲುವನ್ನು ಸ್ಮರಣೀಯವಾಗಿಸಿದ್ದಾರೆ.

Jul 18, 2022 | 11:04 AM
ಇಂಗ್ಲೆಂಡ್ ವಿರುದ್ದದ 3ನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ಗೆದ್ದಿದೆ. ಈ ಗೆಲುವಿನ ರೂವಾರಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್. ಏಕೆಂದರೆ ನಿರ್ಣಾಯಕ ಪಂದ್ಯದಲ್ಲಿ ಪಂತ್ 113 ಎಸೆತಗಳಲ್ಲಿ 125 ರನ್ ಬಾರಿಸಿದ್ದರು.ವಿಶೇಷ ಎಂದರೆ ಶತಕದೊಂದಿಗೆ ರಿಷಭ್ ಪಂತ್ ತಮ್ಮ ಹೆಸರಿಗೆ ಹೊಸ ದಾಖಲೆಯನ್ನು ಕೂಡ ಬರೆದರು.

1 / 5
 ಹೌದು, ಏಷ್ಯಾದ ಹೊರಗೆ ಏಕದಿನ ಕ್ರಿಕೆಟ್ ನಲ್ಲಿ ಶತಕ ಬಾರಿಸಿದ ಮೂರನೇ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ.ಈ ಸಾಧನೆ ಮೊದಲು ಮಾಡಿದ್ದು ರಾಹುಲ್ ದ್ರಾವಿಡ್.

2 / 5
1999 ರಲ್ಲಿ ಟೀಮ್ ಇಂಡಿಯಾ ಪರ ಕೀಪರ್ ಆಗಿದ್ದ ದ್ರಾವಿಡ್ ಶ್ರೀಲಂಕಾ ವಿರುದ್ದ ಇಂಗ್ಲೆಂಡ್​ ನಲ್ಲಿ 145 ರನ್​ ಗಳ ಶತಕ ಬಾರಿಸಿದ್ದರು.ಇದಾದ ಬಳಿಕ 2020 ರಲ್ಲಿ ನ್ಯೂಜಿಲೆಂಡ್ ವಿರುದ್ದ ಕೆಎಲ್ ರಾಹುಲ್ (112) ಕೂಡ ಶತಕ ಸಿಡಿಸಿ ಈ ದಾಖಲೆಯನ್ನು ಸರಿಗಟ್ಟಿದ್ದರು.

3 / 5
 ಇದೀಗ ಇಂಗ್ಲೆಂಡ್ ವಿರುದ್ದ ಭರ್ಜರಿ ಶತಕ ಸಿಡಿಸುವ ಮೂಲಕ ರಿಷಭ್ ಪಂತ್ ಈ ಸಾಧನೆ ಮಾಡಿದ ಮೂರನೇ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಈ ಮೂಲಕ ಏಷ್ಯಾದ ಹೊರಗೆ ಏಕದಿನ ಕ್ರಿಕೆಟ್​ ನಲ್ಲಿ ಶತಕ ಬಾರಿಸಿದ ವಿಶೇಷ ಸಾಧಕರ ಪಟ್ಟಿಗೆ ರಿಷಭ್ ಪಂತ್ ಎಂಟ್ರಿ ಕೊಟ್ಟಿದ್ದಾರೆ.

4 / 5
ಒಟ್ಟಿನಲ್ಲಿ ಒಂದು ಭರ್ಜರಿ ಶತಕದ ಮೂಲಕ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡು ಇಂಗ್ಲೆಂಡ್ ಸರಣಿ ಗೆಲುವನ್ನು ಸ್ಮರಣೀಯವಾಗಿಸಿದ್ದಾರೆ.

5 / 5

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada