Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG 4th T20 Highlights: ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದ ಭಾರತ

ಪೃಥ್ವಿಶಂಕರ
|

Updated on:Jan 31, 2025 | 10:40 PM

India vs England 4th T20I Live Score in Kannada: ಐದು ಪಂದ್ಯಗಳ ಟಿ20 ಸರಣಿಯನ್ನು ಭಾರತ 3-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಭಾರತ 181 ರನ್ ಗಳಿಸಿ ಗೆಲುವಿಗೆ 182 ರನ್​ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟುದ ಇಂಗ್ಲೆಂಡ್ ತಂಡ 19.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 166 ರನ್ ಗಳಿಸಲಷ್ಟೇ ಶಕ್ತವಾಯಿತು.

IND vs ENG 4th T20 Highlights: ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದ ಭಾರತ
India

ಐದು ಪಂದ್ಯಗಳ ಟಿ20 ಸರಣಿಯನ್ನು ಭಾರತ 3-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಭಾರತ 181 ರನ್ ಗಳಿಸಿ ಗೆಲುವಿಗೆ 182 ರನ್​ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟುದ ಇಂಗ್ಲೆಂಡ್ ತಂಡ 19.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 166 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಈ ಪಂದ್ಯವನ್ನು ಭಾರತ 15 ರನ್‌ಗಳಿಂದ ಗೆದ್ದುಕೊಂಡಿದಲ್ಲದೆ ಇಂಗ್ಲೆಂಡ್ ವಿರುದ್ಧ ತನ್ನ ಪಾರುಪತ್ಯವನ್ನು ಮುಂದವರೆಸಿದೆ.

LIVE NEWS & UPDATES

The liveblog has ended.
  • 31 Jan 2025 10:37 PM (IST)

    IND vs ENG 4th T20: ಭಾರತಕ್ಕೆ 15 ರನ್ ಜಯ

    ಪುಣೆ ಟಿ20 ಪಂದ್ಯವನ್ನೂ ಭಾರತ 15 ರನ್‌ಗಳಿಂದ ಗೆದ್ದು ಸರಣಿಯನ್ನು 3-1ರಿಂದ ವಶಪಡಿಸಿಕೊಂಡಿದೆ. ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ಗೆ 19 ರನ್‌ಗಳ ಅಗತ್ಯವಿದ್ದರೂ ಕೇವಲ 1 ವಿಕೆಟ್ ಮಾತ್ರ ಉಳಿದಿತ್ತು. ಅರ್ಷದೀಪ್ ಸಿಂಗ್ ಈ ಕೊನೆಯ ವಿಕೆಟ್ ಪಡೆದು ಇಂಗ್ಲೆಂಡ್ ತಂಡವನ್ನು 166 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟರು.

  • 31 Jan 2025 10:35 PM (IST)

    IND vs ENG 4th T20: ಓವರ್ಟನ್ ಔಟ್

    ಹರ್ಷಿತ್ ರಾಣಾ ತಮ್ಮ ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ಗೆ 9ನೇ ಹೊಡೆತ ನೀಡಿ ಗೆಲುವಿನ ಉಳಿದ ಭರವಸೆಯನ್ನು ಕೊನೆಗೊಳಿಸಿದರು. 19ನೇ ಓವರ್​ನಲ್ಲಿ ಕೊನೆಯ ಎಸೆತದಲ್ಲಿ ಜೇಮಿ ಓವರ್ ಟನ್ (19) ಅವರನ್ನು ಹರ್ಷಿತ್ ಬೌಲ್ಡ್ ಮಾಡಿದರು.

  • 31 Jan 2025 10:35 PM (IST)

    IND vs ENG 4th T20: ಸುಲಭ ಕ್ಯಾಚ್ ಕೈಚೆಲ್ಲಿದ ಸಂಜು

    19ನೇ ಓವರ್ ನಲ್ಲಿ ಹರ್ಷಿತ್ ರಾಣಾ ಎಸೆತದಲ್ಲಿ ಜೇಮಿ ಓವರ್ ಟನ್ ನೀಡಿದ ಕ್ಯಾಚ್ ಅನ್ನು ಸಂಜು ಸ್ಯಾಮ್ಸನ್ ಕೈಬಿಟ್ಟರು.

  • 31 Jan 2025 10:25 PM (IST)

    IND vs ENG 4th T20: ಆರ್ಚರ್ ಕೂಡ ಔಟ್

    ಇಂಗ್ಲೆಂಡ್‌ನ ಎಂಟನೇ ವಿಕೆಟ್ ಕೂಡ ಪತನಗೊಂಡಿದ್ದು, ರವಿ ಬಿಷ್ಣೋಯ್ ತಮ್ಮ ಕೊನೆಯ ಓವರ್‌ನಲ್ಲಿ ಜೋಫ್ರಾ ಆರ್ಚರ್ ಅವರನ್ನು ಬೌಲ್ಡ್ ಮಾಡುವ ಮೂಲಕ ಈ ಹೊಡೆತವನ್ನು ನೀಡಿದರು.

  • 31 Jan 2025 10:14 PM (IST)

    IND vs ENG 4th T20: ಕಾರ್ಸೆ ಕೂಡ ಔಟ್

    ವರುಣ್ ಚಕ್ರವರ್ತಿ ಒಂದೇ ಓವರ್‌ನಲ್ಲಿ 2 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾವನ್ನು ಮತ್ತೆ ಗೆಲುವಿನ ಟ್ರ್ಯಾಕ್​ಗೆ ತಂದಿದ್ದಾರೆ. ಬ್ರೂಕ್ ಅವರನ್ನು ಔಟ್ ಮಾಡಿದ ನಂತರ ವರುಣ್ ಬ್ರೇಡನ್ ಕಾರ್ಸೆ ವಿಕೆಟ್ ಪಡೆದರು.

  • 31 Jan 2025 10:11 PM (IST)

    IND vs ENG 4th T20: ಬ್ರೂಕ್‌ ಔಟ್

    ಹ್ಯಾರಿ ಬ್ರೂಕ್ ಅರ್ಧಶತಕ ಪೂರೈಸಿದ ತಕ್ಷಣ, ಮುಂದಿನ ಎಸೆತದಲ್ಲಿಯೇ ಕ್ಯಾಚ್ ಔಟ್ ಆದರು. ಮತ್ತೊಮ್ಮೆ ವರುಣ್ ಚಕ್ರವರ್ತಿ ಅವರನ್ನು ವಜಾಗೊಳಿಸಿದರು. ವರುಣ್ ಈ ಸರಣಿಯ 4 ಪಂದ್ಯಗಳಲ್ಲಿ 3 ರಲ್ಲಿ ಬ್ರೂಕ್ ವಿಕೆಟ್ ಪಡೆದಿದ್ದಾರೆ.

  • 31 Jan 2025 10:04 PM (IST)

    IND vs ENG 4th T20: ಬ್ರೂಕ್ ಬೌಂಡರಿ

    14ನೇ ಓವರ್‌ನಲ್ಲಿ ಹರ್ಷಿತ್ ರಾಣಾ ಮೇಲೆ ದಾಳಿ ನಡೆಸಿದ ಹ್ಯಾರಿ ಬ್ರೂಕ್ ಆ ಓವರ್‌ನಲ್ಲಿ ಸತತ 3 ಎಸೆತಗಳಲ್ಲಿ 6, 6 ಮತ್ತು 4 ರನ್ ಕಲೆಹಾಕಿದರು.

  • 31 Jan 2025 10:04 PM (IST)

    IND vs ENG 4th T20: ಲಿವಿಂಗ್‌ಸ್ಟನ್ ಕೂಡ ಔಟ್

    ಇಂಗ್ಲೆಂಡ್‌ನ ನಾಲ್ಕನೇ ವಿಕೆಟ್ ಕೂಡ ಪತನವಾಗಿದ್ದು, ಲಿಯಾಮ್ ಲಿವಿಂಗ್‌ಸ್ಟನ್ ಔಟಾಗಿದ್ದಾರೆ. ಶಿವಂ ದುಬೆಗೆ ಕನ್ಕ್ಯುಶನ್ ಬದಲಿಯಾಗಿ ಬಂದ ವೇಗದ ಬೌಲರ್ ಹರ್ಷಿತ್ ರಾಣಾ ಎರಡನೇ ಎಸೆತದಲ್ಲಿ ವಿಕೆಟ್ ಪಡೆದರು. ಇದು ಹರ್ಷಿತ್ ಅವರ ಚೊಚ್ಚಲ ಟಿ20 ಪಂದ್ಯವೂ ಆಗಿದೆ.

  • 31 Jan 2025 09:48 PM (IST)

    IND vs ENG 4th T20: 10 ಓವರ್‌ ಪೂರ್ಣ

    ಇಂಗ್ಲೆಂಡ್ ಇನಿಂಗ್ಸ್‌ನ 10 ಓವರ್‌ಗಳು ಪೂರ್ಣಗೊಂಡಿದ್ದು, ತಂಡ 3 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿದೆ. ಇನ್ನು ಮುಂದಿನ 10 ಓವರ್‌ಗಳಲ್ಲಿ 96 ರನ್‌ಗಳ ಅಗತ್ಯವಿದೆ.

  • 31 Jan 2025 09:48 PM (IST)

    IND vs ENG 4th T20: ಬಟ್ಲರ್ ವಿಕೆಟ್ ಪತನ

    3 ಓವರ್‌ಗಳಲ್ಲಿ ಇಂಗ್ಲೆಂಡ್ ಮೂರನೇ ವಿಕೆಟ್ ಕಳೆದುಕೊಂಡಿದ್ದು, ಈ ವೇಳೆ ನಾಯಕ ಜೋಸ್ ಬಟ್ಲರ್ ಔಟಾಗಿದ್ದಾರೆ. ಟೀಂ ಇಂಡಿಯಾಗೆ ಮತ್ತೊಮ್ಮೆ ಈ ಯಶಸ್ಸು ತಂದುಕೊಟ್ಟವರು ರವಿ ಬಿಷ್ಣೋಯ್.

  • 31 Jan 2025 09:47 PM (IST)

    IND vs ENG 4th T20: ಫಿಲ್ ಸಾಲ್ಟ್ ಕೂಡ ಔಟ್

    ವೇಗದ ಆರಂಭದ ನಂತರ ಇಂಗ್ಲೆಂಡ್‌ ಸತತವಾಗಿ ಇಬ್ಬರೂ ಆರಂಭಿಕರ ವಿಕೆಟ್‌ ಕಳೆದುಕೊಂಡಿತು. ಆರನೇ ಓವರ್‌ನಲ್ಲಿ ಬೆನ್ ಡಕೆಟ್ (23) ಮತ್ತು ಏಳನೇ ಓವರ್‌ನಲ್ಲಿ ಫಿಲ್ ಸಾಲ್ಟ್ (23) ಕೂಡ ಔಟಾದರು.

  • 31 Jan 2025 09:28 PM (IST)

    IND vs ENG 4th T20: ಬೆನ್ ಡಕೆಟ್ ಔಟ್

    ಇಂಗ್ಲೆಂಡ್ ತಂಡವು 62 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿದೆ. ರವಿ ಎಸೆತದಲ್ಲಿ ಬೆನ್ ಡಕೆಟ್‌ ಸೂರ್ಯನಿಗೆ ಕ್ಯಾಚ್ ನೀಡಿ ಔಟಾದರು. ಜೋಸ್ ಬಟ್ಲರ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದಾರೆ.

  • 31 Jan 2025 09:21 PM (IST)

    IND vs ENG 4th T20: ಡಕೆಟ್ ಸ್ಫೋಟಕ ಬ್ಯಾಟಿಂಗ್

    ಬೆನ್ ಡಕೆಟ್ ಮತ್ತೊಮ್ಮೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾವನ್ನು ಕಾಡುತ್ತಿದ್ದಾರೆ. ಮೂರನೇ ಓವರ್‌ನಲ್ಲಿ ಅರ್ಷ್‌ದೀಪ್ ಮೇಲೆ ಸತತ 3 ಬೌಂಡರಿಗಳನ್ನು ಬಾರಿಸಿದರು ಮತ್ತು ನಂತರದ ಓವರ್‌ನಲ್ಲಿ ವರುಣ್ ಚಕ್ರವರ್ತಿ ಮೇಲೆ ಬೌಂಡರಿ ಬಾರಿಸಿದರು.

  • 31 Jan 2025 09:14 PM (IST)

    IND vs ENG 4th T20: ಇಂಗ್ಲೆಂಡ್ ವೇಗದ ಆರಂಭ

    ಇಂಗ್ಲೆಂಡ್ 182 ರನ್ ಗಳ ಗುರಿ ಬೆನ್ನಟ್ಟಲು ಆರಂಭಿಸಿದ್ದು, ಕೇವಲ 2 ಓವರ್‌ಗಳಲ್ಲಿ 19 ರನ್‌ಗಳನ್ನು ಕಲೆಹಾಕಿದೆ.

  • 31 Jan 2025 09:05 PM (IST)

    IND vs ENG 4th T20: ಇಂಗ್ಲೆಂಡ್‌ ಬ್ಯಾಟಿಂಗ್ ಆರಂಭ

    ಭಾರತ ನೀಡಿದ 182 ರನ್ ಗಳ ಗುರಿ ಬೆನ್ನತ್ತಲು ಇಂಗ್ಲೆಂಡ್ ಸಜ್ಜಾಗಿದೆ. ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ಕ್ರೀಸ್‌ನಲ್ಲಿದ್ದಾರೆ.

  • 31 Jan 2025 09:00 PM (IST)

    IND vs ENG 4th T20: ಇಂಗ್ಲೆಂಡ್‌ಗೆ 181 ರನ್‌ಗಳ ಗುರಿ

    ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿದೆ. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಎರಡನೇ ರನ್ ಗಳಿಸುವ ಪ್ರಯತ್ನದಲ್ಲಿ ಶಿವಂ ದುಬೆ ರನ್ ಔಟ್ ಆದರು. ಜೇಮಿ ಓವರ್ಟನ್ ಅವರ ಈ ಕೊನೆಯ ಓವರ್​ನಲ್ಲಿ ಕೇವಲ 3 ರನ್ ನೀಡಿ 3 ವಿಕೆಟ್ ಪಡೆದರು.

  • 31 Jan 2025 08:48 PM (IST)

    IND vs ENG 4th T20: ಶಿವಂ ದುಬೆ ಅರ್ಧ ಶತಕ

    ಹಾರ್ದಿಕ್ ಪಾಂಡ್ಯ ನಂತರ ಶಿವಂ ದುಬೆ ಕೂಡ ಅರ್ಧಶತಕ ದಾಖಲಿಸಿದ್ದಾರೆ. ಶಿವಂ ಕೇವಲ 31 ಎಸೆತಗಳಲ್ಲಿ ಸತತ 2 ಬೌಂಡರಿಗಳೊಂದಿಗೆ ಅರ್ಧಶತಕ ಪೂರೈಸಿದರು.

  • 31 Jan 2025 08:47 PM (IST)

    IND vs ENG 4th T20: ಹಾರ್ದಿಕ್ ಫಿಫ್ಟಿ

    ಕಳೆದ ಪಂದ್ಯದಲ್ಲಿ ಸೋಲಿನ ಹೊಣೆ ಹೊತ್ತಿದ್ದ ಹಾರ್ದಿಕ್ ಪಾಂಡ್ಯ ದಿಟ್ಟ ಉತ್ತರ ನೀಡಿ ಕೇವಲ 27 ಎಸೆತಗಳಲ್ಲಿ ಬಿರುಸಿನ ಅರ್ಧಶತಕ ಸಿಡಿಸಿದ್ದಾರೆ. ಹಾರ್ದಿಕ್ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು.

  • 31 Jan 2025 08:18 PM (IST)

    IND vs ENG 4th T20: ದುಬೆ-ಪಾಂಡ್ಯ ಜೊತೆಯಾಟ

    ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ದಾಳಿ ಆರಂಭಿಸಿದ್ದು, 14ನೇ ಓವರ್‌ನಲ್ಲಿ ಟೀಂ ಇಂಡಿಯಾವನ್ನು 100 ರನ್‌ಗಳ ಗಡಿ ದಾಟಿಸಿದ್ದಾರೆ.

  • 31 Jan 2025 08:08 PM (IST)

    IND vs ENG 4th T20: ರಿಂಕು ಸಿಂಗ್ ಕೂಡ ಔಟ್

    ರಿಂಕು ಸಿಂಗ್ (30) ಕೂಡ ಪೆವಿಲಿಯನ್ ಗೆ ಮರಳಿದ್ದು, ಟೀಂ ಇಂಡಿಯಾ ಐದನೇ ವಿಕೆಟ್ ಕಳೆದುಕೊಂಡಿದೆ.

  • 31 Jan 2025 08:07 PM (IST)

    IND vs ENG 4th T20: ಭಾರತದ ಅರ್ಧ ಇನಿಂಗ್ಸ್ ಮುಗಿದಿದೆ

    ಟೀಮ್ ಇಂಡಿಯಾದ ಅರ್ಧದಷ್ಟು ಇನ್ನಿಂಗ್ಸ್ ಮುಗಿದಿದೆ ಅಂದರೆ ಅದರ 10 ಓವರ್‌ಗಳು ಪೂರ್ಣಗೊಂಡಿವೆ. ಈ 10 ಓವರ್‌ಗಳ ನಂತರ ಟೀಂ ಇಂಡಿಯಾ ಸ್ಕೋರ್ ಕೇವಲ 72 ರನ್ ಆಗಿದ್ದು, 4 ವಿಕೆಟ್‌ಗಳು ಬಿದ್ದಿವೆ. ರಿಂಕು ಮತ್ತು ಶಿವಂ ದುಬೆ ಕ್ರೀಸ್‌ನಲ್ಲಿದ್ದಾರೆ.

  • 31 Jan 2025 07:57 PM (IST)

    IND vs ENG 4th T20: ಅಭಿಷೇಕ್ ಶರ್ಮಾ ಔಟ್

    ಟೀಂ ಇಂಡಿಯಾ ನಾಲ್ಕನೇ ವಿಕೆಟ್ ಕಳೆದುಕೊಂಡಿದ್ದು, ಅಭಿಷೇಕ್ ಶರ್ಮಾ (29) ಕೂಡ ಪೆವಿಲಿಯನ್​ಗೆ ಮರಳಿದ್ದಾರೆ. 8ನೇ ಓವರ್​ನಲ್ಲಿ ಬಂದ ಆದಿಲ್ ರಶೀದ್ ಎರಡನೆ ಎಸೆತದಲ್ಲಿ ಅಭಿಷೇಕ್ ಕ್ಯಾಚಿತ್ತು ನಿರ್ಗಮಿಸಿದರು.

  • 31 Jan 2025 07:39 PM (IST)

    IND vs ENG 4th T20: ಭಾರತ 50 ರನ್ ಪೂರ್ಣ

    ಭಾರತದ ಇನ್ನಿಂಗ್ಸ್‌ನ 7 ಓವರ್‌ಗಳು ಪೂರ್ಣಗೊಂಡಿದ್ದು, ತಂಡವೂ 50ರ ಗಡಿ ದಾಟಿದೆ. ರಿಂಕು ಮತ್ತು ಅಭಿಷೇಕ್ ಕ್ರೀಸ್‌ನಲ್ಲಿ ನಿಂತಿದ್ದಾರೆ.

  • 31 Jan 2025 07:36 PM (IST)

    IND vs ENG 4th T20: ರಿಂಕು-ಅಭಿ ಜೊತೆಯಾಟ

    ಎರಡನೇ ಓವರ್‌ನಲ್ಲಿ 3 ವಿಕೆಟ್‌ಗಳ ಪತನದ ನಂತರ, ರಿಂಕು ಸಿಂಗ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು. ಇವರಿಬ್ಬರೂ ತಂಡಕ್ಕೆ ಬಲಿಷ್ಠ ಜೊತೆಯಾಟವನ್ನು ನೀಡಿದ್ದಾರೆ. ಪವರ್‌ಪ್ಲೇ ಅಂತ್ಯಕ್ಕೆ ಭಾರತದ ಸ್ಕೋರ್ 47 ರನ್ ಆಗಿದೆ.

  • 31 Jan 2025 07:19 PM (IST)

    IND vs ENG 4th T20: ಸೊನ್ನೆ ಸುತ್ತಿದ ಸೂರ್ಯ

    ಸಾಕಿಬ್ ಮಹಮೂದ್ ತಮ್ಮ ಮೊದಲ ಓವರ್ ನಲ್ಲೇ 3 ವಿಕೆಟ್ ಕಬಳಿಸಿ ಸಂಚಲನ ಮೂಡಿಸಿದರು. ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ನಂತರ ಮಹಮೂದ್ ಕೊನೆಯ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ (0) ಅವರ ವಿಕೆಟ್ ಪಡೆದರು.

  • 31 Jan 2025 07:13 PM (IST)

    IND vs ENG 4th T20: ತಿಲಕ್ ವರ್ಮಾ ಕೂಡ ಔಟ್

    ಸಾಕಿಬ್ ಮಹಮೂದ್ ಸತತ 2 ಎಸೆತಗಳಲ್ಲಿ 2 ವಿಕೆಟ್ ಪಡೆದರು. ಸ್ಯಾಮ್ಸನ್ ಔಟಾದ ಬಳಿಕ ಬಂದ ತಿಲಕ್ ವರ್ಮಾ (0) ಮೊದಲ ಎಸೆತದಲ್ಲಿಯೇ ಕ್ಯಾಚಿತ್ತು ಔಟಾದರು.

  • 31 Jan 2025 07:12 PM (IST)

    IND vs ENG 4th T20: ಸಂಜು ಸ್ಯಾಮ್ಸನ್ ಔಟ್

    ಎರಡನೇ ಓವರ್ ನ ಮೊದಲ ಎಸೆತದಲ್ಲಿ ಸಂಜು ಸ್ಯಾಮ್ಸನ್ (1) ಔಟಾದರು. ಸರಣಿಯಲ್ಲಿ ಮೊದಲ ಪಂದ್ಯವಾಡುತ್ತಿದ್ದ ವೇಗಿ ಸಾಕಿಬ್ ಮಹಮೂದ್ ಎಸೆತದಲ್ಲಿ ಸಂಜು ವಿಕೆಟ್ ಒಪ್ಪಿಸಿದರು.

  • 31 Jan 2025 06:56 PM (IST)

    IND vs ENG 4th T20: ಇಂಗ್ಲೆಂಡ್ ತಂಡ

    ಜೋಸ್ ಬಟ್ಲರ್, ಫಿಲ್ ಸಾಲ್ಟ್, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಜಾಕೋಬ್ ಬೆಥಾಲ್, ಲಿಯಾಮ್ ಲಿವಿಂಗ್‌ಸ್ಟನ್, ಜೇಮಿ ಓವರ್‌ಟನ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಆದಿಲ್ ರಶೀದ್, ಸಾಕಿಬ್ ಮಹಮೂದ್.

  • 31 Jan 2025 06:56 PM (IST)

    IND vs ENG 4th T20: ಭಾರತ ತಂಡ

    ಸೂರ್ಯಕುಮಾರ್ ಯಾದವ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್ ಮತ್ತು ವರುಣ್ ಚಕ್ರವರ್ತಿ.

  • 31 Jan 2025 06:35 PM (IST)

    IND vs ENG 4th T20: ಭಾರತ ಮೊದಲು ಬ್ಯಾಟಿಂಗ್

    ಟಾಸ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್​ ಆಯ್ದುಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ.

Published On - Jan 31,2025 6:34 PM

Follow us
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!