ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಅಂತಿಮ ಐದನೇ ಟೆಸ್ಟ್ (5th Test) ಪಂದ್ಯ ಸೆ. 10 ಶುಕ್ರವಾರ ಮ್ಯಾಂಚೆಸ್ಟರ್ನಲ್ಲಿ ಆರಂಭವಾಗಬೇಕಿತ್ತು. ಆದರೆ, ಆಗಿದ್ದೇ ಬೇರೆ. ಕೊನೇಯ ಕ್ಷಣದ ವರೆಗೂ ಈ ಐದನೇ ಟೆಸ್ಟ್ ಪಂದ್ಯ ನಡೆಯುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಪಂದ್ಯ ಶುರುವಾಗಲು ಇನ್ನೇನು ಕೆಲವೇ ಕ್ಷಣಗಳು ಬಾಕಿಯಿರುವಾಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಪಂದ್ಯ ರದ್ದೆಂದು ಘೋಷಿಸಿತು. ಕೋವಿಡ್-19 (Covid-19) ಪ್ರಕರಣಗಳು ಹೆಚ್ಚಿದ್ದರಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ರದ್ದಾಗಲು ಕಾರಣ ಎಂದು ಹೇಳಲಾಗಿದೆ. ಆದರೆ, ಈ ಟೆಸ್ಟ್ ನಡೆಯದಿರಲು ಕೊರೊನಾ ಕಾರಣವಲ್ಲ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಅಕಾಡೆಮಿ ಸಿಇಒ ಟಾಮ್ ಹ್ಯಾರಿಸನ್ (Tom Harrison) ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಟಾಮ್, ಗುರುವಾರ ಟೀಮ್ ಇಂಡಿಯಾದ ಕಿರಿಯ ಫಿಸಿಯೊ ಯೋಗೇಶ್ ಪರ್ಮಾರ್ ಅವರಿಗೆ ಕೋವಿಡ್-19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಭಾರತದ ಕೆಲ ಹಿರಿಯ ಆಟಗಾರರು ಶುಕ್ರವಾರ ಐದನೇ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪಂದ್ಯ ಆರಂಭವಾಗುವ ಎರಡು ತಾಸು ಮುನ್ನ ಪಂದ್ಯವನ್ನು ರದ್ದುಗೊಳಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
“ಪಂದ್ಯ ರದ್ದಾಗಲು ಕೋವಿಡ್-19 ನಿಜವಾದ ಕಾರಣವಲ್ಲ. ಟೀಮ್ ಇಂಡಿಯಾ ಫಿಸಿಯೊಗೆ ಕೋವಿಡ್-19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮುಂದೆ ಏನಾಗಬಹುದೆಂಬ ಗ್ರಹಿಕೆ ಇತ್ತು. ಪಂದ್ಯದ ದಿನ ಪ್ರವಾಸಿ ಆಟಗಾರರಿಗೆ ಆರಾಮ ವಲಯ ನೀಡಿ ಭರವಸೆ ಮೂಡಿಸಲು ನಾವು ಸಾಕಷ್ಟು ಪ್ರಯತ್ನ ನಡೆಸಿದ್ದೆವು. ಆದರೆ, ಇದು ಫಲ ನೀಡಲಿಲ್ಲ. ಐದನೇ ಟೆಸ್ಟ್ ಪಂದ್ಯವಾಡಲು ಟೀಮ್ ಇಂಡಿಯಾ ಆರಾಮದಾಯಕವಾಗಿಲ್ಲ ಎಂಬುದು ನಮಗೆ ಗುರುವಾರ ಬೋಜನ ವೇಳೆಗೆ ಸ್ಪಷ್ಟವಾಗಿತ್ತು ಎಂಬ ಅಂಶವನ್ನು ಇದೇ ವೆಳೆ ಇಸಿಬಿ ಸಿಇಒ ತಿಳಿಸಿದ್ದಾರೆ.
ಇನ್ನೂ ಟೀಮ್ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಕೂಡ ಪಂದ್ಯ ರದ್ದಾಗಲು ಟೀಮ್ ಇಂಡಿಯಾ ಆಟಗಾರರು ಕಾರಣ, ಕೋವಿಡ್-19 ಭೀತಿಯಿಂದಾಗಿ ಭಾರತೀಯ ಆಟಗಾರರು ಹೆದರಿದ್ದರು ಎಂದು ಕಾರ್ತಿಕ್ ಹೇಳಿದ್ದಾರೆ.
“ನಾನು ನಾಲ್ಕನೇ ಟೆಸ್ಟ್ ಪಂದ್ಯದ ಬಳಿಕ ಭಾರತೀಯ ಕೆಲ ಆಟಗಾರರ ಜೊತೆ ಮಾತನಾಡಿದೆ. ಆದರೆ ಹೆಚ್ಚಿನವರಲ್ಲಿ ಮಾತನಾಡಿಲ್ಲ. ಅವರು ದಣಿದಿದ್ದಾರೆ. ಎಲ್ಲಾ ಪಂದ್ಯಗಳು ಬೆನ್ನು ಬೆನ್ನಿಗೆ ನಡೆದಿದ್ದಾಗಿದೆ. ಆದರೆ ಅವರಿಗೆ ಕೇವಲ ಒಬ್ಬನೇ ಒಬ್ಬ ಫಿಸಿಯೋ (ಯೋಗೇಶ್ ಪಾರ್ಮರ್) ಉಳಿದಿದ್ದರು. ಹೀಗಾಗಿ ಅವರೆಲ್ಲ ಆ ಒಬ್ಬನೇ ಫಿಸಿಯೋನ ಸಹಾಯ ಪಡೆಯಬೇಕಾಗಿತ್ತು. ಬಹಳ ಕೆಲಸಗಳು ಅವರಿಂದಲೇ ಆಗಬೇಕಾಗಿದೆ. ಈಗ ಅವರಿಗೂ ಪಾಸಿಟಿವ್ ಬಂದಿದೆ. ಹೀಗಾಗಿ ಸಮಸ್ಯೆ ಶುರುವಾಗಿದೆ,” ಎಂದು ಕಾರ್ತಿಕ್ ಹೇಳಿದರು.
ಮಂದಿನ ವರ್ಷ ಜುಲೈ ತಿಂಗಳಲ್ಲಿ ಭಾರತ ತಂಡ ಸೀಮಿತ ಓವರ್‌ಗಳ ಸರಣಿ ಆಡಲು ಇಂಗ್ಲೆಂಡ್‌ಗೆ ತೆರಳಲಿದೆ. ಬಹುಶಃ ಈ ಅವಧಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳಿಗೆ ಏಕೈಕ ಟೆಸ್ಟ್ ಪಂದ್ಯ ಆಡಿಸುವ ಸಾಧ್ಯತೆ ಇದೆ.
ಮಹೇಂದ್ರ ಸಿಂಗ್ ಧೋನಿಯನ್ನು ಮೆಂಟರ್ ಆಗಿ ನೇಮಕ ಮಾಡಿರುವುದು ಒಳ್ಳೆಯ ಕ್ರಮವೆಂದ ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್
Rashid Khan: ಟಿ20 ವಿಶ್ವಕಪ್ಗೆ ಅಫ್ಘಾನ್ ತಂಡ ಪ್ರಕಟ: ನಾಯಕತ್ವಕ್ಕೆ ರಶೀದ್ ಖಾನ್ ರಾಜೀನಾಮೆ
(India vs England: Covid-19 cases in the Indian camp was not the main reason behind the cancellation)