India vs England: 3ನೇ ಟೆಸ್ಟ್ಗೆ ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ?: ಪದಾರ್ಪಣೆಗೆ ಸಜ್ಜಾದ ಈ ಆಟಗಾರ!
3ನೇ ಕ್ರಮಾಂಕಕ್ಕೆ ಸೂಕ್ತವಾಗಿರುವ ಆಟಗಾರನನ್ನು ಟೀಮ್ ಇಂಡಿಯಾ ಆಯ್ಕೆ ಮಾಡಬಹುದು. ಪೂಜಾರ ಸ್ಥಾನ ತಪ್ಪಿದ್ದೇ ಆದಲ್ಲಿ ಸೂರ್ಯಕುಮಾರ್ ಯಾದವ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವುದು ಬಹುತೇಕ ಖಚಿತ.
ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೂರನೇ ಟೆಸ್ಟ್ ಆಗಸ್ಟ್ 25 ಬುಧವಾರದಿಂದ ಲೀಡ್ಸ್ನಲ್ಲಿ ನಡೆಯಲಿದೆ. ಈಗಾಗಲೇ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡನೇ ಟೆಸ್ಟ್ ಗೆದ್ದು ಬೀಗಿರುವ ಭಾರತ (India) 1-0 ಯಿಂದ ಮುನ್ನಡೆ ಕಾಯ್ದುಕೊಂಡಿದೆ. ಗೆಲುವಿನ ವಿಶ್ವಾಸದಲ್ಲಿರುವ ಟೀಮ್ ಮುಂದಿನ ಪಂದ್ಯಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಉಭಯ ತಂಡಗಳಿಗೆ ಮೂರನೇ ಪಂದ್ಯ ಮುಖ್ಯವಾಗಿರುವುದರಿಂದ ಕೊಹ್ಲಿ (Virat Kohli) ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಮಾಡುವುದು ಖಚಿತ.
ಮೊದಲ ಹಾಗೂ ಎರಡನೇ ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ ಚೇತೇಶ್ವರ್ ಪೂಜಾರ ಅವರನ್ನು ಕೈಬಿಡುವ ಸಾಧ್ಯತೆ ಇದೆ. ಇಂಗ್ಲೆಂಡ್ನಲ್ಲಿ ಪೂಜಾರ ಬ್ಯಾಟ್ ಈವರೆಗೆ ಅಷ್ಟೊಂದು ಸದ್ದು ಮಾಡಿಲ್ಲ. ಆಡಿದ 12 ಟೆಸ್ಟ್ನಲ್ಲಿ ಇವರು ಗಳಿಸಿದ್ದು ಒಟ್ಟು 593 ರನ್ಗಳನ್ನಷ್ಟೆ. ಇವರ ಸರಾಸರಿ 27ಕ್ಕಿಂತಲೂ ಕಮ್ಮಿಯಿದೆ.
ಎರಡನೇ ಟೆಸ್ಟ್ನಲ್ಲಿ ಪೂಜಾರ 206 ಎಸೆತಗಳಲ್ಲಿ 45 ರನ್ ಕಲೆಹಾಕಿದರಾದರೂ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಇದು ಸಹಾಯ ಮಾಡುವುದು ಅನುಮಾನ. ಹೀಗಾಗಿ 3ನೇ ಕ್ರಮಾಂಕಕ್ಕೆ ಸೂಕ್ತವಾಗಿರುವ ಆಟಗಾರನನ್ನು ಟೀಮ್ ಇಂಡಿಯಾ ಆಯ್ಕೆ ಮಾಡಬಹುದು. ಪೂಜಾರ ಸ್ಥಾನ ತಪ್ಪಿದ್ದೇ ಆದಲ್ಲಿ ಸೂರ್ಯಕುಮಾರ್ ಯಾದವ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವುದು ಬಹುತೇಕ ಖಚಿತ.
ದೇಶೀಯ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಸದ್ಯ ಸೀಮಿತ ಓವರ್ ಪಂದ್ಯಗಳಲ್ಲೂ ಟೀಮ್ ಇಂಡಿಯಾ ಪರ ಅದ್ಭುತ ಪ್ರದರ್ಶನ ತೋರಿರುವ ಸೂರ್ಯಕುಮಾರ್ ಯಾದವ್ ಇದೇ ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಡಿದ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯದಲ್ಲಿಯೇ ಅರ್ಧ ಶತಕ ಸಿಡಿಸಿ ಭರ್ಜರಿ ಆಗಮನ ಸಾರಿರುವ ಸೂರ್ಯಕುಮಾರ್ ಬಳಿಕ ಶ್ರೀಲಂಕಾದಲ್ಲಿ ನಡೆದ ಸೀಮಿತ ಓವರ್‌ಗಳ ಸರಣಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ.
77 ಪ್ರಥಮ ದರ್ಜೆ ಕ್ರಿಕೆಟ್ ಆಡಿರುವ ಅನುಭವ ಹೊಂದಿರುವ ಇವರು 44.01ರ ಸರಾಸರಿಯನ್ನು ಹೊಂದಿದ್ದಾರೆ. ಹೀಗಾಗಿ ಚೇತೇಶ್ವರ್ ಪೂಜಾರ ಸ್ಥಾನದಲ್ಲಿ ಇವರು ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಯಾದವ್ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಮಿಂಚಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರನಾಗಿದದ್ದಾರೆ.
ಸುದೀರ್ಘ ಕಾಲದಿಂದ ಕಾದ ಬಳಿಕ ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಸದ್ಯ ಟೆಸ್ಟ್ನಲ್ಲೂ ಅವಕಾಶ ಸಿಕ್ಕರೆ ಅತ್ಯುತ್ತಮವಾಗಿ ಉಪಯೋಗಿಸಿಕೊಳ್ಳುವುದು ಖಚಿತ.
T20 World Cup: ಭಾರತ- ಇಂಗ್ಲೆಂಡ್ ಟೆಸ್ಟ್ ನಡುವೆಯೇ ಟಿ-20 ವಿಶ್ವಕಪ್ ಕುರಿತು ಗಂಗೂಲಿ-ಕೊಹ್ಲಿ ಚರ್ಚೆ
IPL 2021: ರಿಚರ್ಡ್ಸನ್ ಅಲಭ್ಯ: ಆರ್ಸಿಬಿ ಆಯ್ಕೆ ಮಾಡಲಿರುವ ಬದಲಿ ಆಟಗಾರ ಯಾರು ಗೊತ್ತಾ?
(India vs England India Playing XI for 3rd Test Virat Kohli can select Suryakumar Yadav)
Published On - 11:14 am, Sat, 21 August 21