Mohammed Siraj: ಸಿ-ರಾಜ…ಗೆಟೌಟ್ ಅಂದವರೇ ಕಟೌಟ್ ನಿಲ್ಲಿಸಿದ್ರು

Mohammed Siraj's Cutout: ಟೀಕಾಕಾರರಿಗೆರ ಬಾಯಿ ಮುಚ್ಚಿಕೊಳ್ಳುವಂತೆ ಸಂಭ್ರಮಿಸುವ ಸಿರಾಜ್ ಅವರ ಕಟೌಟ್ ಅನ್ನು ನಿಲ್ಲಿಸಿ ಅಭಿಮಾನಿಗಳು ಸಂಭ್ರಮ ಪಟ್ಟಿದ್ದಾರೆ. ಇದೇ ಕಟೌಟ್ ನಿಲ್ಲಿಸಲು ಕಾರಣ ಆತನನ್ನು ಕೆಲ ನೆಟ್ಟಿಗರು ಹಾಗೂ ಟ್ರೋಲ್ ಪೇಜ್​ಗಳು ಆರಂಭದಿಂದಲೂ ಕಾಲೆಳೆಯುತ್ತಾ ಬಂದಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: Aug 21, 2021 | 2:52 PM

ಸೌತ್ ಸಿನಿರಂಗದಲ್ಲಿ ಕಟೌಟ್ ಸಂಪ್ರದಾಯ ಇಂದು ನಿನ್ನೆಯದಲ್ಲ. ಸೂಪರ್ ಸ್ಟಾರ್​ಗಳ ಚಿತ್ರಗಳು ತೆರೆ ಕಾಣುತ್ತಿದ್ದಂತೆ ಎಲ್ಲೆಂದ್ರಲ್ಲಿ ದೊಡ್ಡ ದೊಡ್ಡ ಕಟೌಟ್​ಗಳು ರಾರಾಜಿಸುತ್ತವೆ. ಇತ್ತೀಚೆಗೆ ಈ ಸಂಪ್ರದಾಯ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೂ ವಿಸ್ತರಿಸಿಕೊಂಡಿದೆ. ಇದಾಗ್ಯೂ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಕಟೌಟ್ ಪ್ರೀತಿಗೆ ಪಾತ್ರವಾದ ಆಟಗಾರ ಎಂದರೆ ಮಹೇಂದ್ರ ಸಿಂಗ್ ಧೋನಿ ಎನ್ನಬಹುದು.

1 / 6
ಈ ಹಿಂದೆ ತಮಿಳುನಾಡು ಹಾಗೂ ಕೇರಳದಲ್ಲಿ ಧೋನಿ ಕಟೌಟ್ ಎಲೆ ಎತ್ತಿದ್ದವು. ಇದಾಗ್ಯೂ ಅಭಿಮಾನಿಗಳಿಂದ ಮತ್ಯಾವ ಟೀಮ್ ಇಂಡಿಯಾ ಆಟಗಾರನಿಗೂ ಇಂತಹ ಗೌರವ ದಕ್ಕಿರಲಿಲ್ಲ. ಆದರೀಗ ಹೈದರಾಬಾದ್​​ ಕುವರನಿಗೆ ಅಲ್ಲಿನ ಜನ ಕಟೌಟ್ ನಿಲ್ಲಿಸಿದ್ದಾರೆ.

2 / 6
ಹೌದು, ಲಾರ್ಡ್ಸ್​​ನಲ್ಲಿ  ಇಂಗ್ಲೆಂಡ್​ ವಿರುದ್ದ ನಡೆದ 2ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು. ಕ್ರಿಕೆಟ್ ಕಾಶಿ ಎಂದು ಕರೆಯಲ್ಪಡುವ ಮೈದಾನದಲ್ಲಿ ಆಂಗ್ಲರನ್ನು 151 ರನ್​ಗಳಿಂದ ಬಗ್ಗು ಬಡಿದು ಐದು ಟೆಸ್ಟ್ ಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು. ಈ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಯುವ ವೇಗಿ ಮೊಹಮ್ಮದ್ ಸಿರಾಜ್.  ಒಟ್ಟು 8 ವಿಕೆಟ್​ ಉರುಳಿಸಿ ಗೆಲುವಿಗೆ ತಮ್ಮದೆಯಾದ ಕೊಡುಗೆ ನೀಡಿದ್ದರು.

3 / 6
ಮೈದಾನದಲ್ಲಿನ ಸಿರಾಜ್ ಅವರ ಈ ಅಮೋಘ ಸಾಧನೆಯ ಬೆನ್ನಲ್ಲೇ ಇತ್ತ ಹುಟ್ಟೂರಿನಲ್ಲಿ ಸಂಭ್ರಮ ಮನೆ ಮಾಡಿದೆ. ಅತ್ತ ಸಿರಾಜ್ ಕೊನೆಯ ವಿಕೆಟ್ ಉರುಳಿಸಿ ಜಯ ತಂದುಕೊಡುತ್ತಿದ್ದಂತೆ ಇತ್ತ ಹೈದರಾಬಾದಿನಲ್ಲಿನ ಸಿರಾಜ್ ಅವರ ನೆರೆಹೊರೆಯವರು ತಮ್ಮ ರಸ್ತೆಯಲ್ಲಿ ಬೃಹತ್ ಕಟೌಟ್ ನಿಲ್ಲಿಸಿದ್ದಾರೆ.

4 / 6
ಟೀಕಾಕಾರರಿಗೆರ ಬಾಯಿ ಮುಚ್ಚಿಕೊಳ್ಳುವಂತೆ ಸಂಭ್ರಮಿಸುವ ಸಿರಾಜ್ ಅವರ ಕಟೌಟ್ ಅನ್ನು ನಿಲ್ಲಿಸಿ ಅಭಿಮಾನಿಗಳು ಸಂಭ್ರಮ ಪಟ್ಟಿದ್ದಾರೆ. ಇದೇ ಕಟೌಟ್ ನಿಲ್ಲಿಸಲು ಕಾರಣ ಆತನನ್ನು ಕೆಲ ನೆಟ್ಟಿಗರು ಹಾಗೂ ಟ್ರೋಲ್ ಪೇಜ್​ಗಳು ಆರಂಭದಿಂದಲೂ ಕಾಲೆಳೆಯುತ್ತಾ ಬಂದಿದ್ದಾರೆ.

5 / 6
ಅಷ್ಟೊಂದು ಟೀಕೆ ಟಿಪ್ಪಣಿಗಳನ್ನು ಮಾಡಿದರೂ ಸಿರಾಜ್ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಗೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಇಂಗ್ಲೆಂಡ್ ತಂಡವನ್ನು ಲಾರ್ಡ್ಸ್​ನಲ್ಲಿ ಸಿರಾಜ್ ತಮ್ಮ ಬೌಲಿಂಗ್ ಅಸ್ತ್ರದಿಂದ ಬಗ್ಗು ಬಡಿದಿದ್ದಾರೆ. ಹೀಗಾಗಿ ತಂಡದಿಂದ ಗೆಟೌಟ್ ನೀಡಬೇಕು ಎನ್ನುವವರು  ಬಾಯಿ ಮುಚ್ಚಿಕೊಳ್ಳಿ ಎಂದು ತಿಳಿಸಲು ಸಿರಾಜ್ ಅವರ 'ಬಾಯ್ತುಚ್ಚು ಕಟೌಟ್' ನಿಲ್ಲಿಸಿ ಹೂಮಾಲೆ ಹಾಕಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

6 / 6
Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ