India vs England: ಮೊದಲೆರಡು ಟೆಸ್ಟ್​ಗಳಿಗೆ ಆತಿಥ್ಯವಹಿಸಲಿದೆ ಛೆಪಾಕ್ ಸ್ಟೇಡಿಯಂ.. ಈ ಮೈದಾನದ ವಿಶೇಷತೆಗಳೇನು ಗೊತ್ತಾ?

Chepauk Stadium: 1916 ರಲ್ಲಿ ಸ್ಥಾಪಿಸಿರುವ ಭಾರತದ ಅತ್ಯಂತ ಹಳೆಯ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಈ ಕ್ರೀಡಾಂಗಣ ಮೊದಲ ಬಾರಿಗೆ ರಣಜಿ ಟ್ರೋಫಿ ಪಂದ್ಯವನ್ನು ಆಯೋಜಿಸಿದ ಖ್ಯಾತಿಯನ್ನು ಹೊಂದಿದೆ.

India vs England: ಮೊದಲೆರಡು ಟೆಸ್ಟ್​ಗಳಿಗೆ ಆತಿಥ್ಯವಹಿಸಲಿದೆ ಛೆಪಾಕ್ ಸ್ಟೇಡಿಯಂ.. ಈ ಮೈದಾನದ ವಿಶೇಷತೆಗಳೇನು ಗೊತ್ತಾ?
ಎಂ.ಎ. ಚಿದಂಬರಂ ಕ್ರೀಡಾಂಗಣ
Follow us
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​

Updated on:Feb 03, 2021 | 6:25 PM

ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣವು ಚೆನ್ನೈನ ಕಡಲತೀರದಿಂದ ಕೆಲವೇ ಕೆಲವು ಮೀಟರ್ ದೂರದಲ್ಲಿರುವ ಛೆಪಾಕ್​ನಲ್ಲಿದೆ. ಚೆನ್ನೈಗೆ ಸಮೀಪವಿರುವ ಈ ಸ್ಥಳಕ್ಕೆ ಛೆಪಾಕ್ ಎಂಬ ಹೆಸರು ಬರುವುದಕ್ಕೂ ವಿಶೇಷ ಕಾರಣಗಳಿವೆ. ಛೆಪಾಕ್ ಎಂಬ ಪದವು ಉರ್ದು ಭಾಷೆಯ ಛೆ ಬಾಗ್​ ಎಂಬ ಪದದಿಂದ ಬಂದಿದೆ. ಉರ್ದುವಿನಲ್ಲಿ ಛೆ ಬಾಗ್ ಎಂದರೆ ಆರು ಉದ್ಯಾನವನಗಳು​ ಎಂದು ಅರ್ಥ. ಈ ಹಿಂದೆ ಮದ್ರಾಸ್ ಕ್ರಿಕೆಟ್ ಕ್ಲಬ್ ಮೈದಾನ ಅಥವಾ ಛೆಪಾಕ್ ಕ್ರೀಡಾಂಗಣ ಎಂದು ಕರೆಯಲಾಗುತ್ತಿದ್ದ ಈ ಕ್ರೀಡಾಂಗಣವನ್ನು ಬಿಸಿಸಿಐ ಮತ್ತು ತಮಿಳುನಾಡು ಕ್ರಿಕೆಟ್ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಂ.ಎ. ಚಿದಂಬರಂ ಅವರ ಸೇವಾರ್ಥವಾಗಿ ಎಂ.ಎ. ಚಿದಂಬರಂ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಯಿತು.

1916 ರಲ್ಲಿ ಸ್ಥಾಪಿಸಿರುವ ಈ ಕ್ರೀಡಾಂಗಣ, ಭಾರತದ ಅತ್ಯಂತ ಹಳೆಯ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಈ ಕ್ರೀಡಾಂಗಣ ಮೊದಲ ಬಾರಿಗೆ ರಣಜಿ ಟ್ರೋಫಿ ಪಂದ್ಯವನ್ನು ಆಯೋಜಿಸಿದ ಖ್ಯಾತಿಯನ್ನು ಹೊಂದಿದೆ. ಇದೇ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವೀರೇಂದ್ರ ಸೆಹ್ವಾಗ್ ಅವರು ಬಾರಿಸಿದ 319 ರನ್​, ಟೆಸ್ಟ್​ ಪಂದ್ಯವೊಂದರಲ್ಲಿ​ ಸಿಡಿಸಿದ ಅತಿ ಹೆಚ್ಚು ಸ್ಕೋರ್ ಆಗಿದೆ.

ಎಂ.ಎ. ಚಿದಂಬರಂ (ಛೆಪಾಕ್) ಕ್ರೀಡಾಂಗಣದ ವಿಶೇಷತೆಗಳು.. – ಮೊದಲ ರಣಜಿ ಪಂದ್ಯದಲ್ಲೇ ಮೈಸೂರು ವಿರುದ್ಧ ಜಯ ಸಾಧಿಸಿದ ಮದ್ರಾಸ್! ಮೊದಲ ಬಾರಿಗೆ ರಣಜಿ ಟ್ರೋಫಿ ಪಂದ್ಯವನ್ನು ಇಲ್ಲಿ ಆಡಿಸಲಾಯಿತು. ಇದರಲ್ಲಿ ಎಜಿ ರಾಮ್ ಸಿಂಗ್ 11 ವಿಕೆಟ್‌ಗಳನ್ನು ಪಡೆಯುವ ಮೂಲಕ ಮದ್ರಾಸ್ ಪರ ಬೌಲಿಂಗ್ ಮಾಡಿ ಒಂದು ದಿನದೊಳಗೆ ಮೈಸೂರು ವಿರುದ್ಧ ಜಯಗಳಿಸುವಂತೆ ಮಾಡಿದರು.

– ಭಾರತ 1951-52ರಲ್ಲಿ ಇಂಗ್ಲೆಂಡ್‌ನ್ನು ಇನ್ನಿಂಗ್ಸ್ ಮತ್ತು ಎಂಟು ರನ್‌ಗಳಿಂದ ಸೋಲಿಸಿ ಮೊದಲ ಟೆಸ್ಟ್ ಗೆಲುವು ದಾಖಲಿಸಿದೆ.

– 1986 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದೇ ಮೈದಾನದಲ್ಲಿ ನಡೆದ ಪಂದ್ಯ ಟೈ ಆಗುವುದರೊಂದಿಗೆ ಅಂತ್ಯವಾಯಿತು. ಇದರೊಂದಿಗೆ ಕ್ರಿಕೆಟ್ ಇತಿಹಾಸದಲ್ಲಿ ಟೈಯೊಂದಿಗೆ ಅಂತ್ಯವಾದ ಎರಡನೇ ಟೆಸ್ಟ್ ಪಂದ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

– ದಕ್ಷಿಣ ಆಫ್ರಿಕಾ ವಿರುದ್ಧ ವೀರೇಂದ್ರ ಸೆಹ್ವಾಗ್ ಇದೇ ಮೈದಾನದಲ್ಲಿ 319 ರನ್ ಸಿಡಿಸಿದ್ದರು.

– ಸಚಿನ್ ತೆಂಡೂಲ್ಕರ್ ದಕ್ಷಿಣ ಆಫ್ರಿಕಾ ವಿರುದ್ಧದ 200 ರನ್​ ಬಾರಿಸುವವರೆಗೆ, ಸಯೀದ್ ಅನ್ವರ್ ಅವರು ಭಾರತ ವಿರುದ್ಧ ಬಾರಿಸಿದ್ದ 194 ರನ್ ಈ ಮೈದಾನದಲ್ಲಿ ಸಿಡಿಸಿದ್ದ ಏಕದಿನ ಪಂದ್ಯದ ಅತ್ಯಧಿಕ ಸ್ಕೋರ್ ಆಗಿತ್ತು.

– ಈ ಮೈದಾನದಲ್ಲಿ ರಾಹುಲ್ ದ್ರಾವಿಡ್ ತಮ್ಮ 10,000 ನೇ ಟೆಸ್ಟ್ ರನ್ ಗಳಿಸಿದ್ದಾರೆ.

– ಈ ಕ್ರೀಡಾಂಗಣದಲ್ಲಿ ಸುನಿಲ್ ಗವಾಸ್ಕರ್ (1018 ರನ್) ಹೆಚ್ಚು ರನ್ ಗಳಿಸಿದ್ದರೆ, ಟೆಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್ 876 ರನ್ ಮತ್ತು ಗುಂಡಪ್ಪ ವಿಶ್ವನಾಥ್ 785 ರನ್ ಗಳಿಸಿದ್ದಾರೆ.

– ಅನಿಲ್ ಕುಂಬ್ಳೆ (48 ವಿಕೆಟ್) ಈ ಕ್ರೀಡಾಂಗಣದಲ್ಲಿ ಹೆಚ್ಚು ವಿಕೆಟ್ ಪಡೆದಿದ್ದಾರೆ ಮತ್ತು ಟೆಸ್ಟ್​ನಲ್ಲಿ ಕಪಿಲ್ ದೇವ್ 40 ವಿಕೆಟ್ ಮತ್ತು ಹರ್ಭಜನ್ ಸಿಂಗ್ 39 ವಿಕೆಟ್ ಗಳಿಸಿದ್ದಾರೆ.

– ಸಚಿನ್ ತೆಂಡೂಲ್ಕರ್ ಅವರು ಛೆಪಾಕ್​‌ನಲ್ಲಿ ಹೆಚ್ಚು ರನ್ ಗಳಿಸಿದ್ದಾರೆ. ಒಂಬತ್ತು ಟೆಸ್ಟ್‌ಗಳಲ್ಲಿ 87.60 ಸರಾಸರಿಯಲ್ಲಿ 876 ರನ್​ ಬಾರಿಸಿದ್ದಾರೆ.

– ಮೊಹಮ್ಮದ್ ರಫೀಕ್ ಅತಿ ಹೆಚ್ಚು ವಿಕೆಟ್ (14 ವಿಕೆಟ್) ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಅಜಿತ್ ಅಗರ್ಕರ್ ಮತ್ತು ಮೊರ್ನೆ ಮೊರ್ಕೆಲ್ (ತಲಾ 7 ವಿಕೆಟ್) ಇದ್ದಾರೆ.

– ಸಚಿನ್ ತೆಂಡೂಲ್ಕರ್ ಚೆಪಾಕ್​ನಲ್ಲಿ 5 ಶತಕಗಳನ್ನು ಬಾರಿಸಿ ಈ ಮೈದಾನದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಆಟಗಾರರಾಗಿದ್ದಾರೆ.

– ಈ ಮೈದಾನದಲ್ಲಿ ಧೋನಿಯ 224 ರನ್​ (ಫೆಬ್ರವರಿ 2013, ಆಸ್ಟ್ರೇಲಿಯಾ ವಿರುದ್ಧ) ಟೆಸ್ಟ್‌ನಲ್ಲಿ ಭಾರತದ ನಾಯಕನೊಬ್ಬ ಸಿಡಿಸಿದ ಅತ್ಯಧಿಕ ಸ್ಕೋರ್ ಆಗಿದೆ.

Photo Gallery | ಭಾರತ – ಇಂಗ್ಲೆಂಡ್ ಮೊದಲ ಟೆಸ್ಟ್​ಗೆ ಮೈದಾನದಲ್ಲಿ ಬೆವರಿಳಿಸಿದ ಟೀಂ ಇಂಡಿಯಾ ಆಟಗಾರ ಚಿತ್ರಪಟಗಳು..

Published On - 6:10 pm, Wed, 3 February 21

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು