India vs England: ಟೀಮ್ ಇಂಡಿಯಾ 2-1 ಮುನ್ನಡೆಗೆ ಅಡ್ಡಿ ಪಡಿಸುತ್ತಾನ ವರುಣ?: ಅಂತಿಮ ದಿನದ ಹವಾಮಾನ ವರದಿ ಇಲ್ಲಿದೆ

| Updated By: Vinay Bhat

Updated on: Sep 06, 2021 | 10:18 AM

ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್​ನ ಅಂತಿಮ ದಿನ ಭಾರತಕ್ಕೆ ಸುಲಭ ಗೆಲುವು ಸಾಧಿಸುವ ಅವಕಾಶವಿತ್ತು. ಆದರೆ, ಇಂಗ್ಲೆಂಡ್​ಗೆ ಮಳೆರಾಯ ವರವಾಗಿ ಪರಿಣಮಿಸಿದೆ. ಆದರೆ, ಈ ಬಾರಿ ಹಾಗಾಗಲು ಚಾನ್ಸ್ ಇಲ್ಲ.

India vs England: ಟೀಮ್ ಇಂಡಿಯಾ 2-1 ಮುನ್ನಡೆಗೆ ಅಡ್ಡಿ ಪಡಿಸುತ್ತಾನ ವರುಣ?: ಅಂತಿಮ ದಿನದ ಹವಾಮಾನ ವರದಿ ಇಲ್ಲಿದೆ
India vs England
Follow us on

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ನಾಲ್ಕನೇ ಟೆಸ್ಟ್​ನ ಅಂತಿಮ ಐದನೇ ದಿನದಾಟದ ಮೇಲೆ ಎಲ್ಲರ ಕಣ್ಣಿದೆ. ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಉಭಯ ತಂಡಗಳು 1-1 ಅಂತರದ ಸಮಬಲ ಸಾಧಿಸಿದೆ. ಮೊದಲ ಟೆಸ್ಟ್ ಪಂದ್ಯ ಮಳೆಯಿಂದ ಡ್ರಾ ಆದರೆ, ಎರಡನೇ ಟೆಸ್ಟ್​ನಲ್ಲಿ ಭಾರತ ಗೆದ್ದು ಬೀಗಿತು. ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಜಯಿಸಿದ್ದು, ಸದ್ಯ ನಾಲ್ಕನೇ ಟೆಸ್ಟ್ (4th test) ಕುತೂಹಲ ಕೆರಳಿಸಿದೆ. ಅಂತಿಮ ದಿನದಲ್ಲಿ ಇಂಗ್ಲೆಂಡ್ ಗೆಲುವಿಗೆ 291 ರನ್​ಗಳ ಅವಶ್ಯಕತೆಯಿದ್ದರೆ, ಟೀಮ್ ಇಂಡಿಯಾ (Team India) ಗೆಲುವಿನಗೆ ಇಂಗ್ಲೆಂಡ್​ನ 10 ವಿಕೆಟ್ ಕೀಳಬೇಕಿದೆ. ಇದರ ನಡುವೆ ಈ ರೋಚಕ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆಯೇ?.

ಮೊದಲ ಟೆಸ್ಟ್​ನ ಅಂತಿಮ ದಿನ ಭಾರತಕ್ಕೆ ಸುಲಭ ಗೆಲುವು ಸಾಧಿಸುವ ಅವಕಾಶವಿತ್ತು. ಆದರೆ, ಇಂಗ್ಲೆಂಡ್​ಗೆ ಮಳೆರಾಯ ವರವಾಗಿ ಪರಿಣಮಿಸಿದೆ. ಆದರೆ, ಈ ಬಾರಿ ಹಾಗಾಗಲು ಚಾನ್ಸ್ ಇಲ್ಲ. ಇಂದಿನ ಐದನೇ ದಿನ ಲಂಡನ್​ನ ಕೆನ್ನಿಂಗ್ಟನ್ ಓವಲ್​ನಲ್ಲಿ ಮಳೆಯ ಸಾಧ್ಯತೆ ಇಲ್ಲ ಎಂದು ಹವಾಮಾನ ವರದಿ ಹೇಳಿದೆ. ಪಂದ್ಯ ಆರಂಭವಾಗುವ ಹೊತ್ತಿಗೆ ಮೋಡ ಮುಸುಕಿದ ವಾತಾವರಣ ಇದ್ದರೂ, ಮಳೆ ಬರುವ ಸಾಧ್ಯತೆ ಇಲ್ಲ.

ಲಂಡನ್​ನ ನ್ಯಾಟಿಂಗ್​ಹ್ಯಾಮ್​ ಓವಲ್​ನಲ್ಲಿ ನಡೆಯುತ್ತಿರು ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಗೆಲುವು ಅಥವಾ ಪಂದ್ಯ ಡ್ರಾ ಆಗುವುದು ಖಚಿತ ಎಂದೇ ಹೇಳಲಾಗುತ್ತಿದೆ. ಇಂದು ಅಂತಿಮ ದಿನದಾಟದಲ್ಲಿ ಆಂಗ್ಲರ ಗೆಲುವುಗೆ 291 ರನ್​ಗಳ ಅವಶ್ಯತೆಯಿದೆ. ಹೊಸ ಬಾಲ್ ಪ್ರಯೋಜವನ್ನು ಭಾರತೀಯ ವೇಗಿಗಳು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾರೆ ಎಂಬುದನ್ನು ನೋಡಬೇಕಿದೆ.

ಕೊಹ್ಲಿ ಪಡೆ ನೀಡಿರುವ 367 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿರುವ ಆಂಗ್ಲರು ನಾಲ್ಕನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 77 ರನ್ ಬಾರಿಸಿದೆ. ಪಂದ್ಯದ ಫಲಿತಾಂಶ ಅಂತಿಮ ದಿನಕ್ಕೆ ತಲುಪಿದ್ದು ಇಂಗ್ಲೆಂಡ್ ಗೆಲುವಿಗೆ 291 ರನ್​ಗಳ ಅವಶ್ಯಕತೆಯಿದ್ದರೆ, ಭಾರತದ ಗೆಲುವಿಗೆ ರೂಟ್ ಪಡೆಯ ವಿಕೆಟ್​ಗಳು ಬೇಕಾಗಿದೆ. ಹೀಗಾಗಿ ಐದನೇ ದಿನದಾಟದ ಸಾಕಷ್ಟು ಕುತೂಹಲ ಕೆರಳಿಸಿದೆ.

India vs England: ಟೀಮ್ ಇಂಡಿಯಾಕ್ಕೆ ಡಬಲ್ ಶಾಕ್: ಇಂದು ಫೀಲ್ಡ್​​ಗಿಳಿಯಲ್ಲ ಈ ಆಟಗಾರರು: 5ನೇ ಟೆಸ್ಟ್​ಗೂ ಅನುಮಾನ

Shardul Thakur: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಲಾರ್ಡ್ ಠಾಕೂರ್

(India vs England Kennington Oval Weather Day 5 No chances of rain as India aims to go 2-1 up against England)