AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಲಾರ್ಡ್ಸ್‌ ಟೆಸ್ಟ್​ಗೆ ಹೇಗಿರಲಿದೆ ಭಾರತದ ಪ್ಲೇಯಿಂಗ್ 11? ರಿಷಭ್ ಪಂತ್ ಹೇಳಿದ್ದೇನು?

India vs England Lords Test: ಭಾರತ ತಂಡವು ಎಡ್ಜ್‌ಬಾಸ್ಟನ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿದ ನಂತರ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದೆ. ಜಸ್ಪ್ರೀಟ್ ಬುಮ್ರಾ ಅವರ ಮರಳುವಿಕೆಯು ತಂಡಕ್ಕೆ ಬಲ ತುಂಬಿದೆ ಆದರೆ ಆಡುವ ಹನ್ನೊಂದರ ಸಂಯೋಜನೆಯ ಬಗ್ಗೆ ಅನಿಶ್ಚಿತತೆ ಇದೆ. ರಿಷಭ್ ಪಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ಆಡುವ XI ಬಗ್ಗೆ ಅಸ್ಪಷ್ಟವಾಗಿ ಉತ್ತರಿಸಿದ್ದು, ಪಿಚ್‌ನ ಸ್ಥಿತಿಯನ್ನು ಅವಲಂಬಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

IND vs ENG: ಲಾರ್ಡ್ಸ್‌ ಟೆಸ್ಟ್​ಗೆ ಹೇಗಿರಲಿದೆ ಭಾರತದ ಪ್ಲೇಯಿಂಗ್ 11? ರಿಷಭ್ ಪಂತ್ ಹೇಳಿದ್ದೇನು?
Team India
ಪೃಥ್ವಿಶಂಕರ
|

Updated on: Jul 09, 2025 | 10:03 PM

Share

ಎಡ್ಜ್‌ಬಾಸ್ಟನ್‌ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿರುವ ಟೀಂ ಇಂಡಿಯಾ (Team India) ಈಗ ಅದೇ ಪ್ರದರ್ಶನವನ್ನು ಪುನರಾವರ್ತಿಸುವ ಉದ್ದೇಶದಿಂದ ಲಾರ್ಡ್ಸ್‌ಗೆ (Lords Test) ಪ್ರವೇಶಿಸಲಿದೆ. ಶುಭ್​ಮನ್ ಗಿಲ್ (Shubman Gill) ನಾಯಕತ್ವದ ಭಾರತ ತಂಡವು ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡಚನ್ನು 336 ರನ್‌ಗಳಿಂದ ಸೋಲಿಸಿತು. ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಆಡುವ ಹನ್ನೊಂದರ ಭಾಗವಾಗಿರಲಿಲ್ಲವಾದ್ದರಿಂದ ಟೀಂ ಇಂಡಿಯಾದ ಆ ಯಶಸ್ಸು ವಿಶೇಷವಾಗಿತ್ತು. ಆದರೆ ಬುಮ್ರಾ ಲಾರ್ಡ್ಸ್ ಟೆಸ್ಟ್‌ನಲ್ಲಿ ತಂಡದಲ್ಲಿ ಆಡುವುದು ಖಚಿತವಾಗಿದೆ. ಹಾಗಿರುವಾಗ ಎಡ್ಜ್‌ಬಾಸ್ಟನ್‌ನಲ್ಲಿ ಆಡಿದ ತಂಡದಿಂದ ಒಬ್ಬ ಆಟಗಾರ ಬೆಂಚ್ ಕಾಯಬೇಕಾಗುತ್ತದೆ. ಇದೀಗ ಪಂದ್ಯದ ಒಂದು ದಿನ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪನಾಯಕ ರಿಷಭ್ ಪಂತ್ ಕೂಡ ನಾಳೆಯವರೆಗೂ ಸಸ್ಪೆನ್ಸ್ ಬಿಟ್ಟುಕೊಡದಿರಲು ನಿರ್ಧರಿಸಿದ್ದಾರೆ.

ಲೀಡ್ಸ್ ಮತ್ತು ಬರ್ಮಿಂಗ್ಹ್ಯಾಮ್ ನಂತರ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಇದೀಗ ಲಂಡನ್ ತಲುಪಿದೆ. ಉಭಯ ತಂಡಗಳ ನಡುವಿನ ಪಂದ್ಯ ಜುಲೈ 10 ರಿಂದ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಆಡುವುದು ಖಚಿತವಾಗಿದೆ. ಆದರೆ ಬುಮ್ರಾ ಬದಲಿಗೆ ತಂಡದಲ್ಲಿ ಯಾರ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಭಾರತದ ಆಡುವ XI ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಇದೀಗ ಪಂದ್ಯದ ಒಂದು ದಿನ ಮೊದಲು ಪತ್ರಿಕಾಗೋಷ್ಠಿಯಲ್ಲಿ ರಿಷಭ್‌ಗೆ ಪ್ಲೇಯಿಂಗ್ XI ಮತ್ತು ತಂಡದ ಸಂಯೋಜನೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಅವರು ಏನು ಹೇಳಿದರು ಎಂಬುದರ ವಿವರ ಇಲ್ಲಿದೆ.

ಆಡುವ XI ಬಗ್ಗೆ ಪಂತ್ ಅಸ್ಪಷ್ಟ ಉತ್ತರ

ನಮಗೆ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ. ಅದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಲವೊಮ್ಮೆ ವಿಕೆಟ್‌ನ ಸ್ವರೂಪ 2 ದಿನಗಳಲ್ಲಿ ಬದಲಾಗುತ್ತದೆ. ಅದಕ್ಕೆ ಅನುಗುಣವಾಗಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಅದು 3+1 (ಮೂರು ವೇಗಿಗಳು, 1 ಸ್ಪಿನ್ನರ್) ಅಥವಾ 3+2 (ಮೂರು ವೇಗಿಗಳು, 1 ಸ್ಪಿನ್ನರ್/ಆಲ್‌ರೌಂಡರ್) ಆಗಿರಬಹುದು. ಇದರರ್ಥ ಜುಲೈ 10 ರಂದು ಪಿಚ್ ನೋಡಿದ ನಂತರ ಭಾರತ ತಂಡವು ಆಡುವ XI ನ ಅಂತಿಮ ಆಯ್ಕೆಯನ್ನು ಮಾಡುತ್ತದೆ ಎಂದು ಪಂತ್ ಹೇಳಿದ್ದಾರೆ.

IND vs ENG: ಲಾರ್ಡ್ಸ್‌ ಟೆಸ್ಟ್​ಗೂ ಇದೆಯಾ ಮಳೆಯಾತಂಕ? ಇಲ್ಲಿದೆ ಐದು ದಿನಗಳ ಹವಾಮಾನ ವರದಿ

ಪ್ಲೇಯಿಂಗ್-11 ಪ್ರಕಟಿಸಿದ ಇಂಗ್ಲೆಂಡ್

ಟೀಂ ಇಂಡಿಯಾ ಎಂದಿನಂತೆ ಟಾಸ್​ವರೆಗೂ ಪ್ಲೇಯಿಂಗ್ 11 ಬಗ್ಗೆ ಗೌಪತ್ಯೆಯನ್ನು ಕಾಪಾಡಿಕೊಂಡಿದ್ದರೆ, ಇತ್ತ ಇಂಗ್ಲೆಂಡ್ ಎಂದಿನಂತೆ ಪಂದ್ಯಕ್ಕೆ ಒಂದು ದಿನ ಮೊದಲು ತನ್ನ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದೆ. ನಿರೀಕ್ಷೆಯಂತೆ, ವೇಗದ ಬೌಲರ್ ಜೋಶ್ ಟಂಗ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಸ್ಟಾರ್ ವೇಗಿ ಜೋಫ್ರಾ ಆರ್ಚರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಮೂಲಕ ಆರ್ಚರ್ ಸುಮಾರು ನಾಲ್ಕೂವರೆ ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತಿದ್ದಾರೆ.

ಇಂಗ್ಲೆಂಡ್‌ ತಂಡ: ಬೆನ್ ಸ್ಟೋಕ್ಸ್ (ನಾಯಕ), ಬೆನ್ ಡಕೆಟ್, ಜ್ಯಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಜೇಮೀ ಸ್ಮಿತ್, ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಶೋಯೆಬ್ ಬಶೀರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ