ಸಾಕಷ್ಟು ಕುತೂಹಲ ಕೆರಳಿಸಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಟೆಸ್ಟ್ ಸರಣಿ ಆಗಸ್ಟ್ 4ರಂದು ಶುರುವಾಗಲಿದೆ. ಆದರೆ, ಪಂದ್ಯ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಕ್ಕೆ (Team India) ದೊಡ್ಡ ಹೊಡೆತ ಬಿದ್ದಿತು. ಮೊದಲನೆಯದಾಗಿ ಶುಭ್ಮನ್ ಗಿಲ್ ಇಂಜುರಿಗೆ ತುತ್ತಾಗಿ ಸರಣಿಯಿಂದಲೇ ಹೊರಬಿದ್ದರೆ, ವಾಷಿಂಗ್ಟನ್ ಸುಂದರ್ ಹಾಗೂ ಆವೇಶ್ ಖಾನ್ ಕೂಡ ಗಾಯ ಮಾಡಿಕೊಂಡ ಪರಿಣಾಮ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಮೂವರು ಪ್ರಮುಖ ಆಟಗಾರರನ್ನು ಕಳೆದುಕೊಂಡಿರುವ ಭಾರತಕ್ಕೆ ತಲೆನೋವು ಶುರುವಾಗಿದೆ.
ಹೀಗಿರುವಾಗ ಮೂಲಗಳಿಂದ ಮಾಹಿತಿಯೊಂದು ಹೊರಬಿದ್ದಿದ್ದು, ಗಾಯಕ್ಕೆ ತುತ್ತಾಗಿ ಇಂಗ್ಲೆಂಡ್ ಸರಣಿಯಿಂದ ಹೊರಬಿದ್ದಿರುವ ಮೂವರು ಆಟಗಾರ ಬದಲಿಗೆ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್ ಮತ್ತು ಜಯಂತ್ ಯಾದವ್ರನ್ನು ಬದಲಿ ಆಟಗಾರರಾಗಿ ಬಿಸಿಸಿಐ ಆಯ್ಕೆ ಮಾಡುವತ್ತ ಚಿತ್ತ ನೆಟ್ಟಿದೆ ಎನ್ನಲಾಗಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಬಗ್ಗೆ ಬಿಸಿಸಿಐ ಜೊತೆ ಮಾತುಕತೆಯಲ್ಲಿದ್ದಾರಂತೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ವೇಳೆ ಶುಭ್ಮನ್ ಗಿಲ್ ಇಂಜುರಿಗೆ ತುತ್ತಾಗಿದ್ದರು. ವಾಷಿಂಗ್ಟನ್ ಸುಂದರ್ ಮತ್ತು ವೇಗಿ ಅವೇಶ್ ಖಾನ್ ಕಂಟ್ರಿ ಇಲೆವೆನ್ ತಂಡದ ಪರ ಅಭ್ಯಾಸ ಪಂದ್ಯದಲ್ಲಿ ಅಡುವ ವೇಳೆ ಕೈ ಬೆರಳಿನ ಗಾಯವಾಗಿತ್ತು. ಅದರಲ್ಲೂ ಆವೇಶ್ ಖಾನ್ ಅವರ ಕೈ ಬೆರಳು ಮುರಿತಕ್ಕೆ ಒಳಗಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮೂಲಕ ಭಾರತದ 3 ಮಂದಿ ಆಟಗಾರರು ಸರಣಿಯ ಆರಂಭಕ್ಕೂ ಮೊದಲೇ ತಂಡದಿಂದ ಹೊರ ಬಿದ್ದಂತಾಗಿದೆ. ಕೊಹ್ಲಿ ಅವರು ಶುಭ್ಮನ್ ಗಿಲ್ ಅವರ ಜಾಗಕ್ಕೆ ಬದಲಿ ಆಟಗಾರನನ್ನು ಇಂಗ್ಲೆಂಡ್ಗೆ ಕಳುಹಿಸುವಂತೆ ಕೋರಿದ್ದರು. ಆದರೆ, ಬಿಸಿಸಿಐ ಈ ಬಗ್ಗೆ ಒಲವು ತೋರಲಿಲ್ಲ. ಸದ್ಯ ಮೂವರು ಆಟಗಾರರು ತಂಡದಿಂದ ಹೊರಬಿದ್ದ ಪರಿಣಾಮ ಪೃಥ್ವಿ ಶಾ, ಸೂರ್ಯಕುಮಾರ್ ಮತ್ತು ಜಯಂತ್ ಯಾದವ್ರನ್ನು ಇಂಗ್ಲೆಂಡ್ ಸರಣಿಗೆ ಆಯ್ಕೆ ಮಾಡುವ ಅಂದಾಜಿದೆ.
ಶಾ ಹಾಗೂ ಸೂರ್ಯಕುಮಾರ್ ಸದ್ಯ ಶ್ರೀಲಂಕಾದಲ್ಲಿದ್ದಾರೆ. ಏಕದಿನ ಸರಣಿ ಮುಕ್ತಾಯಗೊಂಡಿದ್ದು ಟಿ-20 ಸರಣಿಗಾಗಿ ಸಜ್ಜಾಗುತ್ತಿದ್ದಾರೆ. ಇತ್ತ ಜಯಂತ್ ಯಾದವ್ ಭಾರತದಲ್ಲಿದ್ದಾರೆ. ಸೂರ್ಯಕುಮಾರ್ ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸರಣಿಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದ್ದರು.
ಟೀಮ್ ಇಂಡಿಯಾದ ಉಪ ನಾಯಕ ಅಜಿಂಕ್ಯಾ ರಹಾನೆ ಕೂಡ ಮಂಡಿರಜ್ಜು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಇವರು ಮೊದಲ ಟೆಸ್ಟ್ನಲ್ಲಿ ಕಣಕ್ಕಿಳಿಯುವುದು ಅನುಮಾನ. ಇವರ ಜಾಗದಲ್ಲಿ ಸೂರ್ಯಕುಮಾರ್ ಆಡುವ ಸಾಧ್ಯತೆ ಇದೆ. ಒಪನರ್ ಆಗಿ ರೋಹಿತ್ ಶರ್ಮಾ ಜೊತೆ ಮಯಾಂಕ್ ಅಗರ್ವಾಲ್ ಅಥವಾ ಪೃಥ್ವಿ ಶಾ ಆಡಿಸಬಹುದು ಎಂದು ಹೇಳಲಾಗಿದೆ.
IND vs SL: ಲಂಕಾ ನಾಯಕನಿಗೂ ಕ್ರಿಕೆಟ್ ಟಿಪ್ಸ್ ನೀಡಿವ ದ್ರಾವಿಡ್: ಕನ್ನಡಿಗನ ನಡೆಗೆ ನೆಟ್ಟಿಗರ ಸಲಾಂ
Tokyo Olympics 2020: ಹಾಕಿಯಲ್ಲಿ ಭಾರತ ಶುಭಾರಂಭ: ನ್ಯೂಜಿಲೆಂಡ್ ವಿರುದ್ಧ ರೋಚಕ ಜಯ
(Prithvi Shaw Suryakumar Yadav Jayanth Yadav likely to join Indian team in England)
Published On - 10:02 am, Sat, 24 July 21