KL Rahul: ಕೆ. ಎಲ್ ರಾಹುಲ್ ಶತಕಕ್ಕೆ ದಾಖಲೆಗಳು ಪುಡಿಪುಡಿ: ಕನ್ನಡಿಗನಿಂದ ವಿಶೇಷ ಸಾಧನೆ

| Updated By: Vinay Bhat

Updated on: Aug 13, 2021 | 7:59 AM

India vs England: ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಶತಕ ಸಾಧಿಸಿದ ಮೂರನೇ ಕನ್ನಡಿಗ ಕೆ. ಎಲ್ ರಾಹುಲ್ ಆಗಿದ್ದಾರೆ. ಇದಕ್ಕೂ ಮುನ್ನ ಜಿ. ವಿಶ್ವನಾಥ್ ಹಾಗೂ ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ್ದರು.

KL Rahul: ಕೆ. ಎಲ್ ರಾಹುಲ್ ಶತಕಕ್ಕೆ ದಾಖಲೆಗಳು ಪುಡಿಪುಡಿ: ಕನ್ನಡಿಗನಿಂದ ವಿಶೇಷ ಸಾಧನೆ
KL Rahul
Follow us on

ಮಳೆಯ ಕಾಟದ ನಡುವೆ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ (England) ವಿರುದ್ಧದ ಎರಡನೇ ಟೆಸ್ಟ್​ನ ಮೊದಲ ದಿನದಾಟ ಟೀಮ್ ಇಂಡಿಯಾ (Team India) ಮೇಲುಗೈ ಸಾಧಿಸಿತು. ಕೆ. ಎಲ್ ರಾಹುಲ್ (KL Rahul) ಅಮೋಘ ಶತಕ ಸಿಡಿಸಿ ಮಿಂಚಿದರೆ, ರೋಹಿತ್ ಶರ್ಮಾ (Rohit Sharma) ಅರ್ಧಶತಕದ ನೆರವಿನಿಂದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 276 ರನ್ ಬಾರಿಸಿದೆ. ಈ ಮೂಲಕ ಬೃಹತ್ ಮೊತ್ತ ಕಲೆಹಾಕುವ ಸೂಚನೆ ನೀಡಿದೆ. ಅಜೇಯ ಶತಕ ಸಿಡಿಸಿ ರಾಹುಲ್ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ರಾಹುಲ್ ಟೆಸ್ಟ್ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ವಿದೇಶದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಓಪನರ್ ಎಂಬ ದಾಖಲೆಯನ್ನು ರಾಹುಲ್ ಮಾಡಿದ್ದಾರೆ. ಇದಕ್ಕೂ ಮುನ್ನ ರಾಹುಲ್ ಅವರೇ 2018 ರಲ್ಲಿ ಓವಲ್ ಮೈದಾನದಲ್ಲಿ ಈ ಸಾಧನೆ ಮಾಡಿದ್ದರು. ತನ್ನ ಆರನೇ ಶತಕ ಪೂರೈಸಿರುವ ಕನ್ನಡಿಗ ಏಷ್ಯಾದ ಹೊರಗಡೆ 4 ಶತಕ ಬಾರಿಸಿದ್ದಾರೆ. ಈ ಮೂಲಕ ಓಪನರ್​ಗಳ ಸಾಲಿನಲ್ಲಿ ವಿರೇಂದ್ರ ಸೆಹ್ವಾಗ್ ಜೊತೆ ಸ್ಥಾನ ಹಂಚಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಶತಕ ಸಾಧಿಸಿದ ಮೂರನೇ ಕನ್ನಡಿಗ ಕೆ. ಎಲ್ ರಾಹುಲ್ ಆಗಿದ್ದಾರೆ. ಇದಕ್ಕೂ ಮುನ್ನ ಜಿ. ವಿಶ್ವನಾಥ್ ಹಾಗೂ ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ್ದರು. ಜೊತೆಗೆ ಒಟ್ಟಾರೆಯಾಗಿ ಲಾರ್ಡ್ಸ್ ಮೈದಾನದಲ್ಲಿ ಶತಕ ಸಿಡಿಸಿದ 10ನೇ ಭಾರತೀಯ ಎನಿಸಿಕೊಂಡರು. ಅಲ್ಲದೇ 2014ರಲ್ಲಿ ಅಜಿಂಕ್ಯಾ ರಹಾನೆ ನಂತರ ಶತಕ ಗಳಿಸಿದ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.

ಭರ್ಜರಿ ಫಾರ್ಮ್​ನಲ್ಲಿರುವ ರಾಹುಲ್ ಮೊದಲ ಟೆಸ್ಟ್​ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. 214 ಎಸೆತಗಳಲ್ಲಿ 84 ರನ್ ಗಳಿಸಿದ್ದರು. ಸದ್ಯ ಎರಡನೇ ಟೆಸ್ಟ್​ನ ಮೊದಲ ದಿನವೇ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ. 248 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ ಅಜೇಯ 127 ರನ್ ಗಳಿಸಿದ್ದಾರೆ.

ಟಾಸ್ ಸೋತು ಮೊದಲ ಇನ್ನಿಂಗ್ಸ್​ ಆರಂಭಿಸಿದ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆ. ಎಲ್ ರಾಹುಲ್ 126 ರನ್​ಗಳ ಜೊತೆಯಾಟ ಆಡಿದರು. ಇದರೊಂದಿಗೆ, 2011 ರ ನಂತರ ಮೊದಲ ಬಾರಿಗೆ, ಭಾರತದ ಆರಂಭಿಕ ಜೋಡಿ ಏಷ್ಯಾದ ಹೊರಗೆ ಶತಕದ ಪಾಲುದಾರಿಕೆಯನ್ನು ಮಾಡಿತು. ರೋಹಿತ್ 145 ಎಸೆತಗಳಲ್ಲಿ 83 ರನ್​ಗೆ ಔಟ್ ಆದರೆ, ಚೇತೇಶ್ವರ್ ಪೂಜಾರ ಬಂದ ಬೆನ್ನಲ್ಲೆ 9 ರನ್​ಗೆ ನಿರ್ಗಮಿಸಿದರು

ನಾಯಕ ವಿರಾಟ್ ಕೊಹ್ಲಿ 103 ಎಸೆತಗಳಲ್ಲಿ 42 ರನ್​ಗೆ ಔಟ್ ಆಗುವ ಮೂಲಕ ಅರ್ಧಶತಕ ವಂಚಿತರಾದರು. ಮೊದಲನೇ ದಿನದಾಟದ ಅಂತ್ಯಕ್ಕೆ ಭಾರತ 90 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿತು. ರಾಹುಲ್ 127 ಹಾಗೂ ಅಜಿಂಕ್ಯಾ ರಹಾನೆ 1 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

IND vs ENG: ಲಾರ್ಡ್ಸ್‌ ಮೈದಾನದಲ್ಲಿ ಕನ್ನಡಿಗನ ಪರಾಕ್ರಮ! 2ನೇ ಟೆಸ್ಟ್​ನಲ್ಲಿ ಶತಕ ಸಿಡಿಸಿ ಭಾರತಕ್ಕೆ ನೆರವಾದ ರಾಹುಲ್

Rohit Sharma: ರೋಹಿತ್ ಶರ್ಮಾ ಔಟಾಗಲು ಮಂಜ್ರೇಕರ್ ಕಾರಣ: ನೆಟ್ಟಿಗರಿಂದ ಆಕ್ರೋಶ..!