IND vs ENG: ಲಾರ್ಡ್ಸ್‌ ಮೈದಾನದಲ್ಲಿ ಕನ್ನಡಿಗನ ಪರಾಕ್ರಮ! 2ನೇ ಟೆಸ್ಟ್​ನಲ್ಲಿ ಶತಕ ಸಿಡಿಸಿ ಭಾರತಕ್ಕೆ ನೆರವಾದ ರಾಹುಲ್

KL Rahul: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಟೆಸ್ಟ್​ನಲ್ಲಿ ಕೆಎಲ್ ರಾಹುಲ್ ಶತಕ ಗಳಿಸಿದ್ದಾರೆ. ಅವರು 212 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ ಶತಕ ಪೂರೈಸಿದರು.

IND vs ENG: ಲಾರ್ಡ್ಸ್‌ ಮೈದಾನದಲ್ಲಿ ಕನ್ನಡಿಗನ ಪರಾಕ್ರಮ! 2ನೇ ಟೆಸ್ಟ್​ನಲ್ಲಿ ಶತಕ ಸಿಡಿಸಿ ಭಾರತಕ್ಕೆ ನೆರವಾದ ರಾಹುಲ್
ಕೆ ಎಲ್ ರಾಹುಲ್ ಶತಕ
Follow us
TV9 Web
| Updated By: ಪೃಥ್ವಿಶಂಕರ

Updated on:Aug 12, 2021 | 11:16 PM

ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಟೆಸ್ಟ್​ನಲ್ಲಿ ಕೆಎಲ್ ರಾಹುಲ್ ಶತಕ ಗಳಿಸಿದ್ದಾರೆ. ಅವರು 212 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ ಶತಕ ಪೂರೈಸಿದರು. ಕೆಎಲ್ ರಾಹುಲ್ ಬೌಂಡರಿ ಬಾರಿಸುವ ಮೂಲಕ 100 ರನ್​ಗಳ ಗಡಿ ಪೂರೈಸಿದರು. ಅವರು ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದರು. ಇದು ಕೆಎಲ್ ರಾಹುಲ್ ಅವರ ಟೆಸ್ಟ್ ವೃತ್ತಿಜೀವನದ ಆರನೇ ಶತಕವಾಗಿದ್ದು, ಇಂಗ್ಲೆಂಡ್ ನಲ್ಲಿ ಅವರು ಎರಡನೇ ಬಾರಿಗೆ 100 ರನ್ ಗಡಿ ದಾಟಿದರು. ಕೆಎಲ್ ರಾಹುಲ್ ಇಂಗ್ಲೆಂಡ್‌ನಲ್ಲಿ ಒಂದಕ್ಕಿಂತ ಹೆಚ್ಚು ಟೆಸ್ಟ್ ಶತಕ ಗಳಿಸಿದ ಐದನೇ ಭಾರತೀಯ ಆರಂಭಿಕ ಆಟಗಾರ. ಅವರನ್ನು ಹೊರತುಪಡಿಸಿ, ಸುನೀಲ್ ಗವಾಸ್ಕರ್, ವಿಜಯ್ ಮರ್ಚೆಂಟ್, ರಾಹುಲ್ ದ್ರಾವಿಡ್ ಮತ್ತು ರವಿ ಶಾಸ್ತ್ರಿ ಹೆಸರುಗಳು ಈ ಪಟ್ಟಿಯಲ್ಲಿ ಬರುತ್ತವೆ.

ಕೆಎಲ್ ರಾಹುಲ್ ಸುಮಾರು ಎರಡು ವರ್ಷಗಳ ಕಾಲ ಟೆಸ್ಟ್ ಮಾದರಿಯಲ್ಲಿ ಟೀಂ ಇಂಡಿಯಾದಿಂದ ಹೊರಗಿದ್ದರು. 2019 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. ಅವರು ಈ ಇಂಗ್ಲೆಂಡ್ ಪ್ರವಾಸದಿಂದಲೇ ಪುನರಾಗಮನ ಮಾಡಿದರು. ಈಗ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಅವರು ಅರ್ಧ ಶತಕ ಮತ್ತು ಈಗ ಶತಕ ಗಳಿಸಿದ್ದಾರೆ. ಕುತೂಹಲಕಾರಿಯಾಗಿ, ಇಂಗ್ಲೆಂಡ್ ವಿರುದ್ಧದ ಸರಣಿಗೆ ಮುಂಚೆಯೇ, ಕೆಎಲ್ ರಾಹುಲ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಶುಬ್ಮನ್ ಗಿಲ್ ಗಾಯಗೊಂಡ ನಂತರ, ಅವರನ್ನು ತಂಡಕ್ಕೆ ತೆಗೆದುಕೊಳ್ಳುವ ಬಗ್ಗೆ ಮಾತುಕತೆ ನಡೆಯಿತು. ಆದರೆ ಆಗಲೂ ಕೂಡ ಮಧ್ಯಮ ಕ್ರಮಾಂಕದಲ್ಲಿ ಅವರಿಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿತ್ತು ಏಕೆಂದರೆ ಭಾರತವು ರೋಹಿತ್ ಶರ್ಮಾ ಹೊರತಾಗಿ ಮಯಾಂಕ್ ಅಗರ್ವಾಲ್ ಅವರನ್ನು ಹೊಂದಿತ್ತು. ಆದರೆ ಮೊದಲ ಟೆಸ್ಟ್ ಗೂ ಮುನ್ನವೇ ಮಯಾಂಕ್ ತಲೆಗೆ ಪೆಟ್ಟಾಯಿತು. ಇದು ರಾಹುಲ್‌ಗೆ ತೆರೆಯುವ ಅವಕಾಶವನ್ನು ನೀಡಿತು.

ಶತಕ ಗಳಿಸುವುದರೊಂದಿಗೆ ಲಾರ್ಡ್ಸ್ ಮೈದಾನದ ಗೌರವ ಮಂಡಳಿಯಲ್ಲಿ ಕೆಎಲ್ ರಾಹುಲ್ ಅವರ ಹೆಸರನ್ನು ನೋಂದಾಯಿಸಲಾಗಿದೆ. ಅವರು ಲಾರ್ಡ್ಸ್‌ನಲ್ಲಿ ಶತಕ ಬಾರಿಸಿದ ಭಾರತದ ಒಂಬತ್ತನೇ ಬ್ಯಾಟ್ಸ್‌ಮನ್. ಅವರಿಗಿಂತ ಮೊದಲು ವಿನೂ ಮಂಕಡ್ (1952), ದಿಲೀಪ್ ವೆಂಗಸರ್ಕರ್ (1979, 1982, 1986), ಗುಂಡಪ್ಪ ವಿಶ್ವನಾಥ್ (1979), ರವಿ ಶಾಸ್ತ್ರಿ (1990), ಸೌರವ್ ಗಂಗೂಲಿ (1996), ಅಜಿತ್ ಅಗರ್ಕರ್ (2002), ರಾಹುಲ್ ದ್ರಾವಿಡ್ (2011) ಮತ್ತು ಅಜಿಂಕ್ಯ ರಹಾನೆ (2014) ಲಾರ್ಡ್ಸ್ ನಲ್ಲಿ ಭಾರತದ ಪರ ಶತಕ ಗಳಿಸಿದ್ದಾರೆ. ಈ ಮೈದಾನದಲ್ಲಿ ಮೂರು ಬಾರಿ ಶತಕ ಬಾರಿಸಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ವೆಂಗ್‌ಸರ್ಕರ್.

Published On - 11:02 pm, Thu, 12 August 21