AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: 2ನೇ ಟೆಸ್ಟ್​ಗೂ ಇಲ್ಲ ಅಶ್ವಿನ್: ವಿರಾಟ್ ಕೊಹ್ಲಿ ನೀಡಿದ ಕಾರಣ ಇಲ್ಲಿದೆ ನೋಡಿ

R. Ashwin: ಹ್ಯಾಮ್​ಸ್ಟ್ರಿಂಗ್ ಇಂಜರಿಗೆ ತುತ್ತಾದ ಪರಿಣಾಮ ಎರಡನೇ ಟೆಸ್ಟ್​ಗೆ ಶಾರ್ದೂಲ್ ಠಾಕೂರ್ ಲಭ್ಯರಿಲ್ಲ ಎಂಬ ಮಾತನ್ನು ಕೊಹ್ಲಿ ಪಂದ್ಯ ಆರಂಭಕ್ಕೂ ಮುನ್ನ ಹೇಳಿದ್ದರು. ಹೀಗಾಗಿ ಅಶ್ವಿನ್ ಕಣಕ್ಕಿಳಿಯುವುದು ಖಚಿತ ಎಂದೇ ನಂಬಲಾಗಿತ್ತು. ಆದರೆ,

India vs England: 2ನೇ ಟೆಸ್ಟ್​ಗೂ ಇಲ್ಲ ಅಶ್ವಿನ್: ವಿರಾಟ್ ಕೊಹ್ಲಿ ನೀಡಿದ ಕಾರಣ ಇಲ್ಲಿದೆ ನೋಡಿ
Virat Kohli and R Ashwin
TV9 Web
| Updated By: Vinay Bhat|

Updated on: Aug 13, 2021 | 9:16 AM

Share

ಇಲ್ಲಿನ ಇತಿಹಾಸ ಪ್ರಸಿದ್ಧ ಲಾರ್ಡ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (England) ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ (India) ಬೃಹತ್ ಮೊತ್ತದತ್ತ ಚಿತ್ತ ನೆಟ್ಟಿದೆ. ಕೆ. ಎಲ್ ರಾಹುಲ್ (KL Rahul) ಅಮೋಘ ಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 3 ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿದೆ. ಅಚ್ಚರಿ ಎಂದರೆ ಎರಡನೇ ಟೆಸ್ಟ್​ಗೂ ರವಿಚಂದ್ರನ್ ಅಶ್ವಿನ್ (R. Ashwin)  ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಆದರೆ, ಅಶ್ವಿನ್​ರನ್ನು ಕೈಬಿಟ್ಟಿದ್ದು ಏಕೆ ಎಂಬುದಕ್ಕೆ ನಾಯಕ ವಿರಾಟ್ ಕೊಹ್ಲಿ ಕಾರಣ ತಿಳಿಸಿದ್ದಾರೆ.

ಹ್ಯಾಮ್​ಸ್ಟ್ರಿಂಗ್ ಇಂಜರಿಗೆ ತುತ್ತಾದ ಪರಿಣಾಮ ಎರಡನೇ ಟೆಸ್ಟ್​ಗೆ ಶಾರ್ದೂಲ್ ಠಾಕೂರ್ ಲಭ್ಯರಿಲ್ಲ ಎಂಬ ಮಾತನ್ನು ಕೊಹ್ಲಿ ಪಂದ್ಯ ಆರಂಭಕ್ಕೂ ಮುನ್ನ ಹೇಳಿದ್ದರು. ಹೀಗಾಗಿ ಅಶ್ವಿನ್ ಕಣಕ್ಕಿಳಿಯುವುದು ಖಚಿತ ಎಂದೇ ನಂಬಲಾಗಿತ್ತು. ಆದರೆ, ಟಾಸ್ ವೇಳೆ ವಿರಾಟ್ ಕೊಹ್ಲಿ ಠಾಕೂರ್ ಜಾಗಕ್ಕೆ ಇಶಾಂತ್ ಶರ್ಮಾ ಹೆಸರು ಹೇಳಿದ್ದು ಅಚ್ಚರಿಗೆ ಕಾರಣವಾಗಿತ್ತು.

ಈ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ, “ಪಂದ್ಯ ಆರಂಭಕ್ಕೂ ಮುನ್ನ ನಾವು 12 ಆಟಗಾರರನ್ನು ಆಯ್ಕೆ ಮಾಡಿದ್ದೇವೆ. ಇದರಲ್ಲಿ ಖಚಿತವಾಗಿ ಆರ್‌ ಅಶ್ವಿನ್‌ ಕೂಡ ಸ್ಥಾನ ಪಡೆದಿದ್ದರು. ಆದರೆ, ಇಲ್ಲಿನ ಪಿಚ್‌ ನೋಡಿದ ಬಳಿಕ ಹೆಚ್ಚುವರಿ ವೇಗಿ ಇಲ್ಲಿನ ಪರಿಸ್ಥಿತಿಗಳಿಗೆ ಅಗತ್ಯ ಎಂದು ಅನಿಸಿತು. ಈ ಹಿನ್ನೆಲೆಯಲ್ಲಿ ಇಶಾಂತ್‌ ಶರ್ಮಾ ಅವರನ್ನು ಅಶ್ವಿನ್‌ ಬದಲು ಕರೆ ತರಲಾಯಿತು,” ಎಂದು ಹೇಳಿದ್ದಾರೆ.

2014ರ ಜುಲೈ ತಿಂಗಳಿನಲ್ಲಿ ಲಾರ್ಡ್ಸ್ ಅಂಗಳದಲ್ಲಿ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ 74 ರನ್ ನೀಡಿ 7 ವಿಕೆಟ್ ಪಡೆದುಕೊಳ್ಳುವುದರ ಮೂಲಕ ಇಶಾಂತ್ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಲಾರ್ಡ್ಸ್ ಅಂಗಳದಲ್ಲಿ ಅತ್ಯುತ್ತಮ ಆಟವನ್ನಾಡಿರುವ ಅನುಭವವನ್ನು ಹೊಂದಿರುವಂತಹ ಶರ್ಮಾಗೆ ಅವಕಾಶ ನೀಡಲಾಗಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಅಲ್ಲದೆ ಲಾರ್ಡ್ಸ್ ಕ್ರೀಡಾಂಗಣದ ಪಿಚ್ ಬೌನ್ಸಿ ಪಿಚ್ ಆಗಿರುವ ಕಾರಣ ಇಲ್ಲಿ ಸ್ಪಿನ್ ಬೌಲರ್‌ಗಳಿಗಿಂತ ವೇಗದ ಬೌಲರ್‌ಗಳಿಗೆ ಹೆಚ್ಚಿನ ವಿಕೆಟ್‍ಗಳು ಬೀಳುತ್ತವೆ. ಹೀಗಾಗಿ ರವಿಚಂದ್ರನ್ ಅಶ್ವಿನ್ ಬದಲಾಗಿ ಇಶಾಂತ್ ಶರ್ಮಾಗೆ ಅವಕಾಶ ನೀಡಲಾಗಿದೆ ಎಂದು ಕೂಡ ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯ ಮೊದಲನೇ ದಿನದಾಟದ ಅಂತ್ಯಕ್ಕೆ ಭಾರತ 90 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿದೆ. ಕೆ ಎಲ್ ರಾಹುಲ್ 127 ಹಾಗೂ ಅಜಿಂಕ್ಯಾ ರಹಾನೆ 1 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

KL Rahul: ಕೆ. ಎಲ್ ರಾಹುಲ್ ಶತಕಕ್ಕೆ ದಾಖಲೆಗಳು ಪುಡಿಪುಡಿ: ಕನ್ನಡಿಗನಿಂದ ವಿಶೇಷ ಸಾಧನೆ

IND vs ENG: ಲಾರ್ಡ್ಸ್‌ ಮೈದಾನದಲ್ಲಿ ಕನ್ನಡಿಗನ ಪರಾಕ್ರಮ! 2ನೇ ಟೆಸ್ಟ್​ನಲ್ಲಿ ಶತಕ ಸಿಡಿಸಿ ಭಾರತಕ್ಕೆ ನೆರವಾದ ರಾಹುಲ್

(India vs England Virat Kohli explains why R Ashwin not in 2nd Test and Why Shardul Thakur was replaced by Ishant Sharma)

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ