AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನಲ್ಲಿ ಬರೋಬ್ಬರಿ 30 ಕೋಟಿಯ ಹೊಸ ಮನೆ ಖರೀದಿಸಿದ ಹಾರ್ದಿಕ್-ಕ್ರುನಾಲ್: ಹೇಗಿದೆ ಗೊತ್ತಾ?

Hardik Pandya new house: ಟೀಮ್ ಇಂಡಿಯಾದ ಪ್ರಮುಖ ಸ್ಟಾರ್ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕ್ರುನಾಲ್ ಪಾಂಡ್ಯ ಸಹೋದರರು ಮುಂಬೈನಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿಗೆ ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ.

TV9 Web
| Edited By: |

Updated on:Aug 13, 2021 | 10:19 AM

Share
ಕ್ರಿಕೆಟ್ ಅಂದ್ರೆನೇ ಒಂದುರೀತಿಯ ಮಾಯಾ ಜಗತ್ತು. ಕತ್ತಲು ಕಳೆದು ಬೆಳಗಾಗುವಷ್ಟರಲ್ಲಿ ಸ್ಟಾರ್ ಆಟಗಾರ ಎಂಬ ಪಟ್ಟ ಸಿಕ್ಕಿಬಿಡುತ್ತದೆ. ಒಂದು ಪಂದ್ಯದಲ್ಲಿ ಮಿಂಚಿದರೆ ಅವರ ಲಕ್ ಬದಲಾಗಿ ಬಿಡುತ್ತದೆ. ಸ್ಟಾರ್ ಆಟಗಾರರಂತು ಎಲ್ಲದರಲ್ಲೂ ದುಬಾರಿ. ಹಾಕೋ ಬಟ್ಟೆ, ತಿನ್ನುವ ಊಟ, ವಾಸಿಸೋಕೆ ಮನೆ ಎಲ್ಲವೂ ಕಾಸ್ಟ್ಲಿ.

1 / 7
ಕ್ರಿಕೆಟ್ ಲೋಕದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡಿರುವವರು ಒಬ್ಬರಿಗಿಂತ ಮತ್ತೊಬ್ಬರು ದುಬಾರಿ ಜೀವನ ಸಾಗಿಸುವುದು ಸಾಮಾನ್ಯವಾಗಿದೆ. ಸ್ವಂತ ಮನೆಗಳು ಇದ್ದರೂ ಪ್ರತಿಷ್ಠಿತ ಅಪಾರ್ಟ್ಮೆಂಟ್ಗಳಲ್ಲಿ ಫ್ಲ್ಯಾಟ್ ಖರೀದಿ ಮಾಡುವ ಆಟಗಾರರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದೀಗ ಈ ಸಾಲಿಗೆ ಪಾಂಡ್ಯ ಬ್ರದರ್ಸ್ ಎಂದೇ ಖ್ಯಾತಿ ಪಡೆದಿರುವ ಹಾರ್ದಿಕ್ ಹಾಗೂ ಕ್ರುನಾಲ್ ಕೂಡ ಸೇರಿದ್ದಾರೆ.

2 / 7
ಹೌದು, ಟೀಮ್ ಇಂಡಿಯಾದ ಪ್ರಮುಖ ಸ್ಟಾರ್ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕ್ರುನಾಲ್ ಪಾಂಡ್ಯ ಸಹೋದರರು ಮುಂಬೈನಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿಗೆ ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ.

3 / 7
ಮುಂಬೈನ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ಬಾಂದ್ರಾ ಉಪನಗರದಲ್ಲಿ ಪಾಂಡ್ಯ ಸಹೋದರರು ಮನೆ ಖರೀದಿಸಿದ್ದಾರೆ. ಈ ಮನೆಯಲ್ಲಿ ಹೈಟೆಕ್ ಸೌಕರ್ಯವಿದೆ. ವಿಶೇಷ ಎಂದರೆ ಬಾಲಿವುಡ್​ನ ಸ್ಟಾರ್​​ಗಳಾದ ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಕೂಡ ಇವರ ನೆರೆಮನೆಯವರಾಗಿದ್ದಾರೆ.

4 / 7
ಮುಂಬೈ ನಗರ ಹಾಗೂ ಅರೆಬಿಯನ್ ಸಮುದ್ರದ ವಿಹಂಗಮ ನೋಟವನ್ನು ಈ ಪಾಂಡ್ಯ ಬ್ರದರ್ಸ್ ಮನೆಯಿಂದ ನೋಡಬಹುದು. ಮನೆಯ ಆವರಣದಲ್ಲಿ ಸಾಹಸಿಕ ಕ್ರೀಡೆಯಾದ ರಾಕ್ ಕ್ಲೈಬಿಂಗ್, ಡೆಕ್ ಖಾಸಗಿ ಚಿತ್ರಮಂದಿರ, ಸ್ಕೈ ಲಾಂಜ್, ಈಜುಕೊಳ ಒಳಗೊಂಡಿದೆ. ಜತೆಗೆ ಗೇಮ್ ರೂಮ್, ಜಿಮ್, ಪೊಡೀಯಂ ಹಾಗೂ ಸ್ಪಾ ಒಳಗೊಂಡಿದೆ.

5 / 7
ಹಾರ್ದಿಕ್ ಪಾಂಡ್ಯ ಮತ್ತು ಕ್ರುನಾಲ್ ಪಾಂಡ್ಯ ಇತ್ತೀಚೆಗಷ್ಟೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಶಿಖರ್ ಧವನ್ ಸಾರಥ್ಯದ ಭಾರತ ನಿಗದಿತ ಓವರ್ಗಳ ತಂಡದ ಸದಸ್ಯರಾಗಿದ್ದರು. ಆದರೆ, ಇಲ್ಲಿ ಕ್ರುನಾಲ್ ಪಾಂಡ್ಯಗೆ ಕೋವಿಡ್-19 ಕಾಣಿಸಿಕೊಂತ್ತು.

6 / 7
ಸದ್ಯ ಗುಣಮುಖರಾಗಿ ಭಾರತಕ್ಕೆ ಹಿಂತಿರುಗಿದ ಬೆನ್ನಲ್ಲೆ ದೊಡ್ಡ ಮೊತ್ತದ ಹೊಸ ಮನೆ ಖರೀದಿಸಿ ಸುದ್ದಿಯಲ್ಲಿದ್ದಾರೆ. ಇವರಿಬ್ಬರು ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾರೆ.

7 / 7

Published On - 10:14 am, Fri, 13 August 21

TV9 Web
TV9 Web

TV9 Kannada

Read More
Follow Us
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು

ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ

ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ

ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ

ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ

ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು

ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು

ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ

ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ