India vs England: ಪಂದ್ಯದ ಮಧ್ಯೆ ಅಂಪೈರ್ ಜೊತೆ ಮತ್ತೆ ವಾಗ್ವಾದಕ್ಕಿಳಿದ ವಿರಾಟ್ ಕೊಹ್ಲಿ: ಇಲ್ಲಿದೆ ಕಾರಣ
ಹಸೀಬ್ ಕ್ರೀಸ್ನಿಂದ ತುಂಬಾ ಹೊರಗೆ ಬಂದು ಶೂನಲ್ಲಿ ಸೈನ್ ಮಾಡಿದರು. ಆದರೆ, ಇದಕ್ಕೆ ಅಂಪೈರ್ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ. ಇದು ಬೌಲರ್ಗಳಿಗೆ ತೊಂದರೆ ಆಗುತ್ತದೆ ಎಂದು ಗಮನಿಸಿದ ಕೊಹ್ಲಿ ಅಂಪೈರ್ ಬಳಿ ವಾಗ್ವಾದಕ್ಕಿಳಿದರು.
ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (England) ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಮೊದಲ ದಿನವೇ 191 ರನ್ಗೆ ಸರ್ವಪತನ ಕಂಡಿರುವ ಕೊಹ್ಲಿ (Virat Kohli) ಬಳಗ ಪಂದ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕಿದೆ. ಇತ್ತ ಇಂಗ್ಲೆಂಡ್ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದೆ. ಇದರ ನಡುವೆ ಪಂದ್ಯದ ಮಧ್ಯೆ ನಾಯಕ ವಿರಾಟ್ ಕೊಹ್ಲಿ ಅಂಪೈರ್ ಬಳಿ ವಾಗ್ವಾದಕ್ಕಿಳಿದ ಘಟನೆ ನಡೆಯಿತು.
ಭಾರತ ಆಲೌಟ್ ಆಗಿ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಪರ ರಾರಿ ಬರ್ನ್ಸ್ ಹಾಗೂ ಹಸೀಬ್ ಹಮೀದ್ ಕಣಕ್ಕಿಳಿದರು. ಈ ಸಂದರ್ಭ ಹಸೀಬ್ ಕ್ರೀಸ್ನಿಂದ ತುಂಬಾ ಹೊರಗೆ ಬಂದು ಶೂನಲ್ಲಿ ಸೈನ್ ಮಾಡಿದರು. ಆದರೆ, ಇದಕ್ಕೆ ಅಂಪೈರ್ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ. ಇದು ಬೌಲರ್ಗಳಿಗೆ ತೊಂದರೆ ಆಗುತ್ತದೆ ಎಂದು ಗಮನಿಸಿದ ಕೊಹ್ಲಿ ಅಂಪೈರ್ ಬಳಿ ವಾಗ್ವಾದಕ್ಕಿಳಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Could land in trouble for taking guard this close to the danger area ?
Kohli was not impressed, what is your take on this? ⤵️
Tune into #SonyLIV now ? https://t.co/E4Ntw2hJX5 ??#ENGvsINDonSonyLIV #ENGvIND #HaseebHameed #Moment pic.twitter.com/8MBMmqUWKw
— SonyLIV (@SonyLIV) September 2, 2021
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ಭೋಜನ ವಿರಾಮಕ್ಕೂ ಮುನ್ನವೇ ತನ್ನ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ (11) ಮತ್ತು ಕೆ. ಎಲ್ ರಾಹುಲ್ (17) ಉತ್ತಮ ಆರಂಭಿಸುವಲ್ಲಿ ಎಡವಿದರು. ಚೇತೇಶ್ವರ್ ಪೂಜಾರ ಮತ್ತದೆ ತಪ್ಪೆಸಗಿ 4 ರನ್ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ ನಾಯಕ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ತಂಡಕ್ಕೆ ಕೊಂಚ ಆಸರೆಯಾದರು.
ಆದರೆ, 5ನೇ ಸ್ಥಾನದಲ್ಲಿ ಕಣಕ್ಕಿಳಿದ ಜಡೇಜಾ ಸಿಕ್ಕ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳಲಿಲ್ಲ. 34 ಎಸೆತಗಳಲ್ಲಿ 10 ರನ್ ಬಾರಿಸಿ ನಿರ್ಗಮಿಸಿದರು. ಕೊಹ್ಲಿಯ ಹೋರಾಟ ಅರ್ಧಶತಕಕ್ಕೆ ಅಂತ್ಯವಾಯಿತು. 96 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ 50 ರನ್ಗೆ ಔಟ್ ಆದರು. ಉಪ ನಾಯಕ ಅಜಿಂಕ್ಯಾ ರಹಾನೆ (14) ಹಾಗೂ ರಿಷಭ್ ಪಂತ್ (9) ಈ ಬಾರಿಕೂಡ ತಂಡಕ್ಕೆ ಆಸೆಯಾಗಲಿಲ್ಲ.
ಆದರೆ, ಶಾರ್ದೂಲ್ ಠಾಕೂರ್ ಯಾರೂ ಗ್ರಹಿಸದ ರೀತಿಯಲ್ಲಿ ಬ್ಯಾಟ್ ಬೀಸಿದರು. 36 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಿಡಿಸಿ 57 ರನ್ ಬಾರಿಸಿ ಉಮೇಶ್ ಯಾದವ್ (10) ಜೊತೆ ಅರ್ಧಶತಕದ ಜೊತೆಯಾಟ ಆಡಿದರು. ಅಂತಿಮವಾಗಿ ಭಾರತ 61.3 ಓವರ್ನಲ್ಲಿ 191 ರನ್ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 4 ವಿಕೆಟ್ ಕಿತ್ತರೆ, ರಾಬಿನ್ಸನ್ 3, ಜೇಮ್ಸ್ ಆಂಡರ್ಸನ್ ಹಾಗೂ ಓವರ್ಟನ್ ತಲಾ 1 ವಿಕೆಟ್ ಪಡೆದರು.
ಬಳಿಕ ತನ್ನ ಮೊದಲ ಇನ್ನಿಂಗ್ಸ್ ಶುರುಮಾಡಿದ ಇಂಗ್ಲೆಂಡ್ಗೆ ಆರಂಭದಲ್ಲೇ ಬುಮ್ರಾ ಶಾಕ್ ನೀಡಿದರು. ರಾರಿ ಬರ್ನ್ಸ್ 5 ರನ್ ಗಳಿಸಿ ಬೌಲ್ಡ್ ಆದರೆ, ಹಸೀಬ್ ಹಮೀದ್ ಸೊನ್ನೆ ಸುತ್ತಿದರು. ಉಮೇಶ್ ಯಾದವ್ ಇಂಗ್ಲೆಂಡ್ನ ಅತಿದೊಡ್ಡ ವಿಕೆಟ್ ಜೋ ರೂಟ್ (21) ಅವರನ್ನು ಔಟ್ ಮಾಡಿ ಬ್ರೇಕ್ ತಂದುಕೊಟ್ಟರು.
ಪರಿಣಾಮ ಇಂಗ್ಲೆಂಡ್ ಮೊದಲ ದಿನದಾಟದ ಅಂತ್ಯಕ್ಕೆ 17 ಓವರ್ನಲ್ಲಿ 3 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದೆ. 138 ರನ್ಗಳ ಹಿನ್ನಡೆಯಲ್ಲಿದೆ. ಡೇವಿಡ್ ಮಲನ್ 26 ಹಾಗೂ ಕ್ರ್ಯಾಗ್ ಓವರ್ಟನ್ 1 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಪರ ಬುಮ್ರಾ 2 ಹಾಗೂ ಉಮೇಶ್ ಯಾದವ್1 ವಿಕೆಟ್ ಪಡೆದಿದ್ದಾರೆ.
Tokyo Paralympics: ಪ್ಯಾರಾಲಿಂಪಿಕ್ಸ್ 2020ರಲ್ಲಿ ಎರಡನೇ ಪದಕ ಗೆದ್ದ ಚಿನ್ನದ ಹುಡುಗಿ ಅವನಿ: ಶೂಟಿಂಗ್ನಲ್ಲಿ ಕಂಚು
India vs England: ಹೊಸ ಪ್ರಯೋಗಕ್ಕಿಳಿದು ಕೈಸುಟ್ಟುಕೊಂಡ ಕೊಹ್ಲಿ: ಜಡೇಜಾಗೆ ಬಡ್ತಿ ನೀಡಲು ಕಾರಣವೇನು ಗೊತ್ತಾ?
(India vs England Virat Kohli argues with umpires again at The Oval Here is the reason)