Virat Kohli: ಎರಡನೇ ಟೆಸ್ಟ್ಗೂ ಮುನ್ನ ವಿರಾಟ್ ಕೊಹ್ಲಿ ಭರ್ಜರಿ ವರ್ಕೌಟ್: ರಶೀದ್ ಖಾನ್ ಫುಲ್ ಫಿದಾ
India vs England: ವಿರಾಟ್ ಕೊಹ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ಸಾಕಷ್ಟು ಕಮೆಂಟ್ಗಳು ಬಂದಿವೆ.
ಫಿಟ್ನೆಸ್ ವಿಚಾರದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನ ಮೀರಿಸುವರಿಲ್ಲ. ಆಗಾಗ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಇವರು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ಗೆ ಸಜ್ಜಾಗುತ್ತಿದ್ದಾರೆ. ನ್ಯಾಟಿಂಗ್ಹ್ಯಾಮ್ನಿಂದ ಲಂಡನ್ನ ಪ್ರಸಿದ್ಧ ಲಾರ್ಡ್ ಕ್ರೀಡಾಂಗಣಕ್ಕೆ ಬಂದಿಳಿದಿರುವ ಭಾರತ ಅದಾಗಲೆ ಅಭ್ಯಾಸ ಶುರುಮಾಡಿದೆ. ಇತ್ತ ಕೊಹ್ಲಿ ಭರ್ಜರಿ ವರ್ಕೌಟ್ನಲ್ಲಿ ತೊಡಗಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ಸಾಕಷ್ಟು ಕಮೆಂಟ್ಗಳು ಬಂದಿವೆ. ಈ ಪೈಕಿ ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್, ಐಪಿಎಲ್ನ ಸನ್ರೈಸರ್ಸ್ ತಂಡದ ಆಟಗಾರ ರಶೀದ್ ಖಾನ್ ಕೂಡ ಎಮೋಜಿಯನ್ನು ಹಾಕಿ ಕಮೆಂಟ್ ಮಾಡಿದ್ದು ಕೊಹ್ಲಿ ವರ್ಕೌಟ್ಗೆ ಫಿದಾ ಆಗಿದ್ದಾರೆ.
View this post on Instagram
ವಿರಾಟ್ ಕೊಹ್ಲಿಗೆ ಎರಡನೇ ಟೆಸ್ಟ್ ಮುಖ್ಯವಾಗಿದೆ. ಮೊದಲ ಟೆಸ್ಟ್ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದ ಕಿಂಗ್ ಕೊಹ್ಲಿ ಕಳಪೆ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಆಡಲೇಬೇಕಿದೆ. ಸಾಕಷ್ಟು ಕುತೂಹಲ ಕೆರಳಿಸಿದ್ದ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಯಾವುದೇ ಫಲಿತಾಂಶ ಕಾಣದೆ ಡ್ರಾನಲ್ಲಿ ಕೊನೆಗೊಳಿಸಬೇಕಾಗಿ ಬಂತು.
ಮೊದಲ ಟೆಸ್ಟ್ನ ಅಂತಿಮ ಐದನೇ ದಿನ ಬೆಂಬಿಡದೆ ಕಾಡಿದ ಮಳೆರಾಯ ಆಟಗಾರರನ್ನು ಮೈದಾನಕ್ಕಿಳಿಯಲು ಅವಕಾಶವನ್ನೇ ನೀಡಲಿಲ್ಲ. ಸುಲಭವಾಗಿ ಗೆಲುವು ಸಾಧಿಸಬಹುದಾಗಿದ್ದ ಟೀಮ್ ಇಂಡಿಯಾಕ್ಕೆ ನಿರಾಸೆಯಾಯಿತು.
ಆಗಸ್ಟ್ 12 ರಿಂದ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಹೀಗಾಗಿ ಇಂದು ಮತ್ತು ನಾಳೆ ಟೀಮ್ ಇಂಡಿಯಾ ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಳ್ಳಲಿದೆ. ಭಾರತ ತಂಡ ಲಂಡನ್ಗೆ ತೆರಳುತ್ತಿರುವ ಬಗ್ಗೆ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮೊಹಮ್ಮದ್ ಶಮಿ, ವೃದ್ಧಿಮಾನ್ ಸಾಹಾ, ಮೊಹಮ್ಮದ್ ಸಿರಾಜ್ ಸೇರಿದಂತೆ ತಂಡದ ಇತರೆ ಸಿಬ್ಬಂದಿಗಳು ಕಾಣಿಸುತ್ತಿದ್ದಾರೆ.
T20 World Cup: ಶಾಕಿಂಗ್: ಟಿ-20 ವಿಶ್ವಕಪ್ಗೆ ನ್ಯೂಜಿಲೆಂಡ್ ತಂಡ ಪ್ರಕಟ: ಈ ಸ್ಟಾರ್ ಆಟಗಾರನೇ ಇಲ್ಲ
IPL 2021: ಐಪಿಎಲ್ ತಯಾರಿ ಆರಂಭ: ಚೆನ್ನೈ ತಲುಪಿದ ಸಿಎಸ್ಕೆ ನಾಯಕ ಎಂ ಎಸ್ ಧೋನಿ
(India vs England Virat Kohli shares workout video in Instagram Afghanistan spinner Rashid Khan reacts)
Published On - 10:46 am, Tue, 10 August 21