ಭಾರತ ಮತ್ತು ಐರ್ಲೆಂಡ್ (India and Ireland) ನಡುವಿನ ಎರಡು ಪಂದ್ಯಗಳ ಟಿ20 ಸರಣಿ ಆರಂಭವಾಗಿದೆ. ಜೂನ್ 26 ರ ಭಾನುವಾರದಂದು, ಸರಣಿಯ ಮೊದಲ ಪಂದ್ಯವು ಡಬ್ಲಿನ್‌ನ ಮಲಾಹೈಡ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೂಲಕ ಹಾರ್ದಿಕ್ ಪಾಂಡ್ಯ (Hardik Pandya) ಭಾರತ ತಂಡದ ನಾಯಕನಾಗಿ ಚೊಚ್ಚಲ ಬಾರಿಗೆ ಫೀಲ್ಡಿಗಿಳಿದಿದ್ದಾರೆ. ಟೀಂ ಇಂಡಿಯಾ (Team India ) ನಾಯಕ ಹಾರ್ದಿಕ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಈ ಪಂದ್ಯದ ಜೊತೆಗೆ ಉಮ್ರಾನ್ ಮಲಿಕ್ ಕೂಡ ಟೀಂ ಇಂಡಿಯಾ ಪರ ಅಂತರಾಷ್ಟ್ರೀಯ ಪದಾರ್ಪಣೆ ಮಾಡುತ್ತಿದ್ದಾರೆ. ಈ ಪಂದ್ಯದಲ್ಲಿ ಮಳೆಯಾಗುವ ಸಾಧ್ಯತೆಯನ್ನು ಕಂಡು ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
ಹೆಚ್ಚಿನ ಹಿರಿಯ ಆಟಗಾರರಿಲ್ಲದೆ ಈ ಸರಣಿಗೆ ಬರುತ್ತಿರುವ ಟೀಮ್ ಇಂಡಿಯಾ ತನ್ನ ಯುವ ತಂಡದ ಮೇಲೆ ಅವಲಂಬಿತವಾಗಿದೆ. ಜೊತೆಗೆ ಟೀಮ್ ಇಂಡಿಯಾ ಪರ ಉಮ್ರಾನ್ ಮಲಿಕ್ ಅವರ ಬಹುನಿರೀಕ್ಷಿತ ಚೊಚ್ಚಲ ಪಂದ್ಯವೂ ಈ ಪಂದ್ಯದೊಂದಿಗೆ ನಡೆಯುತ್ತಿದೆ. ಐಪಿಎಲ್ 2022 ರಲ್ಲಿ, ಉಮ್ರಾನ್ ಮಲಿಕ್ ತಮ್ಮ ವೇಗದಿಂದ ಎಲ್ಲರನ್ನು ಅಚ್ಚರಿಸಿಗೊಳಿಸಿದ್ದರು. ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ ಉಮ್ರಾನ್ 22 ವಿಕೆಟ್‌ಗಳನ್ನು ಪಡೆದರು. ಇದರೊಂದಿಗೆ ಟೀಮ್ ಇಂಡಿಯಾಗೆ ಎಂಟ್ರಿ ಪಡೆದಿದ್ದರು. ಆದರೆ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಆಡಲು ಅವಕಾಶ ಸಿಗಲಿಲ್ಲ. ಈಗ ಈ ಪಂದ್ಯದಲ್ಲಿ ಬಹುತೇಕರ ಕಣ್ಣು ಅವರ ಮೇಲಿರಲಿದೆ.
A look at our Playing XI for the first T20I against Ireland.#TeamIndia #IREvIND pic.twitter.com/J2Ep1MtQ35
— BCCI (@BCCI) June 26, 2022
ನಾವು ಭಾರತ ತಂಡದ ಆಡುವ XI ಬಗ್ಗೆ ಮಾತನಾಡಿದರೆ, ಕೆಲವು ಆಟಗಾರರು ಆಡುವ XI ಗೆ ಮರಳಿದ್ದಾರೆ. ಫೆಬ್ರವರಿ ನಂತರ ಮೊದಲ ಬಾರಿಗೆ ಸೂರ್ಯಕುಮಾರ್ ಯಾದವ್ ಆಡುವ XI ನ ಭಾಗವಾಗಿದ್ದಾರೆ. ಗಾಯದಿಂದ ಚೇತರಿಸಿಕೊಂಡಿದ್ದ ಸೂರ್ಯ ಐಪಿಎಲ್ ಆಡಿದ್ದರು. ಆದರೆ ಮತ್ತೆ ಇಂಜುರಿಗೊಳಗಾದರು, ಹೀಗಾಗಿ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡಲಿಲ್ಲ. ಇದೇ ವೇಳೆ ದೀಪಕ್ ಹೂಡಾ ಅವರಿಗೂ ಅವಕಾಶ ನೀಡಲಾಗಿದೆ. ಉತ್ತಮ ಫಾರ್ಮ್‌ನಲ್ಲಿದ್ದರೂ ಕಳೆದ ಸರಣಿಯಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. ಅದೇ ಹೊತ್ತಿಗೆ ಈ ಪಂದ್ಯದಲ್ಲಿ ಹರ್ಷಲ್ ಪಟೇಲ್ ಬದಲಿಗೆ ಉಮ್ರಾನ್ಗೆ ಅವಕಾಶ ಸಿಕ್ಕಿದ್ದು, ಸ್ಪಿನ್ ವಿಭಾಗ ಯುಜುವೇಂದ್ರ ಚಹಾಲ್ ಕೈಯಲ್ಲಿದೆ.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರಿತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್ ಮತ್ತು ಉಮ್ರಾನ್ ಮಲಿಕ್.
ಐರ್ಲೆಂಡ್ ತಂಡ: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಪಾಲ್ ಸ್ಟಿರ್ಲಿಂಗ್, ಗರೆಥ್ ಡೆಲಾನಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಆಂಡಿ ಮೆಕ್‌ಬ್ರೈನ್, ಕ್ರೇಗ್ ಯಂಗ್, ಜೋಶ್ ಲಿಟಲ್, ಕಾನರ್ ಓಲ್ಫರ್ಟ್
Published On - 8:51 pm, Sun, 26 June 22