ಐರ್ಲೆಂಡ್ ವಿರುದ್ಧದ 2 ಟಿ20 ಪಂದ್ಯಗಳ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಭಾರತವನ್ನು ಮುನ್ನಡೆಸಲಿದ್ದಾರೆ. ಈ ಮೂಲಕ ಹಾರ್ದಿಕ್ ಭಾರತದ 9ನೇ ಟಿ20 ನಾಯಕರಾಗಲಿದ್ದಾರೆ. ಇದಕ್ಕೂ ಮುನ್ನ ವೀರೇಂದ್ರ ಸೆಹ್ವಾಗ್, ಎಂಎಸ್ ಧೋನಿ, ಸುರೇಶ್ ರೈನಾ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ (Virender Sehwag, MS Dhoni, Suresh Raina, Ajinkya Rahane, Virat Kohli, Rohit Sharma, Shikhar Dhawan) ತಂಡವನ್ನು ಮುನ್ನಡೆಸಿದ್ದು, ರಿಷಬ್ ಪಂತ್ (Rishabh Pant) ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಇತ್ತೀಚೆಗೆ ಐಪಿಎಲ್ 2022 ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಂದಿನಿಂದ ಪಾಂಡ್ಯ ನಾಯಕತ್ವವನ್ನು ಇಡೀ ಕ್ರಿಕೆಟ್ ಜಗತ್ತೇ ಶ್ಲಾಘಿಸುತ್ತಿದೆ.
23 ವರ್ಷಗಳ ನಂತರ ಗುಜರಾತಿ ಆಟಗಾರನಿಗೆ ನಾಯಕತ್ವ
ಅಷ್ಟೇ ಅಲ್ಲ, 23 ವರ್ಷಗಳ ಬಳಿಕ ಗುಜರಾತ್‌ನ ಆಟಗಾರನೊಬ್ಬ ಭಾರತ ತಂಡದ ನಾಯಕತ್ವ ಪಡೆದಿದ್ದಾರೆ. 1998-1999ರಲ್ಲಿ ಗುಜರಾತ್‌ನ ಆಟಗಾರನೊಬ್ಬ ಕೊನೆಯ ಬಾರಿಗೆ ಭಾರತದ ನಾಯಕತ್ವ ವಹಿಸಿದ್ದರು. 1999 ರಲ್ಲಿ, ಅಜಯ್ ಜಡೇಜಾ ಭಾರತೀಯ ODI ತಂಡದ ನಾಯಕರಾದರು. ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ನಾಯಕತ್ವ ವಹಿಸಿರುವ ಗುಜರಾತ್‌ನ ಏಕೈಕ ಆಟಗಾರ ಇವರಾಗಿದ್ದಾರೆ. ಮತ್ತೊಂದೆಡೆ, ನಾವು ಟೆಸ್ಟ್ ಕ್ರಿಕೆಟ್ ಬಗ್ಗೆ ಮಾತನಾಡುವುದಾದರೆ, ಗುಜರಾತ್‌ನ ಗೋದ್ರಾದಲ್ಲಿ ಜನಿಸಿದ ನಾರಿ ಕಾಂಟ್ರಾಕ್ಟರ್ ಕೊನೆಯ ಬಾರಿಗೆ ಟೆಸ್ಟ್ ತಂಡದ ನಾಯಕರಾಗಿದ್ದರು. ಅವರನ್ನು 1960 ರ ದಶಕದಲ್ಲಿ ಭಾರತ ತಂಡದ ನಾಯಕರನ್ನಾಗಿ ಮಾಡಲಾಯಿತು. ಅವರಿಗಿಂತ ಮೊದಲು, 1959 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ದತ್ತಾ ಗಾಯಕ್ವಾಡ್ ಅವರು ಭಾರತೀಯ ಟೆಸ್ಟ್ ತಂಡವನ್ನು ಮುನ್ನಡೆಸಿದ್ದರು. ಅವರಿಗಿಂತ ಮೊದಲು, ವಿನೂ ಮಂಕಡ್ ಅವರು 1954 ರಿಂದ 1959 ರವರೆಗೆ ಭಾರತೀಯ ಟೆಸ್ಟ್ ತಂಡದ ನಾಯಕರಾಗಿದ್ದರು.
ಇದನ್ನೂ ಓದಿ:IND vs SA: ದುಬಾರಿ ಬೌಲರ್ಗೆ ಕೋಕ್, ಉಮ್ರಾನ್ಗೆ ಚಾನ್ಸ್? 4ನೇ ಟಿ20ಗೆ ಭಾರತದ ಸಂಭಾವ್ಯ XI
ಟಿ20 ಪಂದ್ಯಗಳಲ್ಲಿ ಭಾರತದ ನಾಯಕತ್ವ ವಹಿಸಿದವರ ವಿವರ ಹೀಗಿದೆ
– 2006ರಲ್ಲಿ ನಡೆದ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಭಾರತ ಟಿ20 ತಂಡದ ನಾಯಕರಾಗಿದ್ದರು.
– ಎಂಎಸ್ ಧೋನಿ 2007 ಮತ್ತು 2016 ರ ನಡುವೆ 72 ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಂಡಿದ್ದರು.
– ಸುರೇಶ್ ರೈನಾ ಅವರು 2010 ಮತ್ತು 2011 ರ ನಡುವೆ 3 ಪಂದ್ಯಗಳಲ್ಲಿ ಭಾರತ ಟಿ20 ತಂಡವನ್ನು ಮುನ್ನಡೆಸಿದ್ದರು.
– ಅಜಿಂಕ್ಯ ರಹಾನೆ 2015 ರಲ್ಲಿ 2 ಪಂದ್ಯಗಳಲ್ಲಿ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
– ವಿರಾಟ್ ಕೊಹ್ಲಿ 2017 ಮತ್ತು 2021 ರ ನಡುವೆ 50 ಪಂದ್ಯಗಳಲ್ಲಿ ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಮುನ್ನಡೆಸಿದರು.
– ರೋಹಿತ್ ಶರ್ಮಾ ಇದುವರೆಗೆ 28 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಅವರು ಭಾರತ ಟಿ20 ತಂಡದ ನಿಯಮಿತ ನಾಯಕರಾಗಿದ್ದಾರೆ. 2017ರಲ್ಲಿ ಮೊದಲ ಬಾರಿಗೆ ಟಿ20 ತಂಡದ ನಾಯಕರಾಗಿದ್ದರು.
– ಶಿಖರ್ ಧವನ್ 2021ರಲ್ಲಿ 3 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.
– ರಿಷಬ್ ಪಂತ್ 3 ಪಂದ್ಯಗಳಲ್ಲಿ ಭಾರತ ಟಿ20 ತಂಡದ ನಾಯಕತ್ವ ವಹಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಇನ್ನೂ 2 ಪಂದ್ಯಗಳು ಬಾಕಿ ಉಳಿದಿವೆ.