
ಏಕದಿನ ವಿಶ್ವಕಪ್ನ 45ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ (61) ಹಾಗೂ ಶುಭ್ಮನ್ ಗಿಲ್ (51) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಆ ಬಳಿಕ ಬಂದ ವಿರಾಟ್ ಕೊಹ್ಲಿ (51) ಕೂಡ ಅರ್ಧಶತಕದ ಕೊಡುಗೆ ನೀಡಿದರು. ಇದಾದ ಬಳಿಕ ಜೊತೆಗೂಡಿದ ಶ್ರೇಯಸ್ ಅಯ್ಯರ್ (128) ಹಾಗೂ ಕೆಎಲ್ ರಾಹುಲ್ (102) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 50 ಓವರ್ಗಳಲ್ಲಿ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು 410 ರನ್ ಕಲೆಹಾಕಿತು.
ಈ ಬೃಹತ್ ಗುರಿಯನ್ನು ಬೆನ್ನತ್ತಿದ ನೆದರ್ಲೆಂಡ್ಸ್ ತಂಡವು 47.5 ಓವರ್ಗಳಲ್ಲಿ 250 ರನ್ಗಳಿಸಿ ಸರ್ವಪತನ ಕಂಡಿದೆ. ಈ ಮೂಲಕ ಟೀಮ್ ಇಂಡಿಯಾ 160 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಈ ಬಾರಿಯ ವಿಶ್ವಕಪ್ನಲ್ಲಿ ಲೀಗ್ ಹಂತದಲ್ಲಿ ಆಡಿದ 9 ಪಂದ್ಯಗಳಲ್ಲೂ ಜಯ ಸಾಧಿಸಿದ ಏಕೈಕ ತಂಡವಾಗಿ ಟೀಮ್ ಇಂಡಿಯಾ ಹೊರಹೊಮ್ಮಿದೆ.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್.
ನೆದರ್ಲೆಂಡ್ಸ್ (ಪ್ಲೇಯಿಂಗ್ XI): ವೆಸ್ಲಿ ಬ್ಯಾರೆಸಿ, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಸೈಬ್ರಾಂಡ್ ಎಂಗಲ್ಬ್ರೆಕ್ಟ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಬಾಸ್ ಡಿ ಲೀಡೆ, ತೇಜ ನಿಡಮನೂರು, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್ತ್, ಪಾಲ್ ವ್ಯಾನ್ ಮೀಕೆರೆನ್.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ರೋಹಿತ್ ಶರ್ಮಾ ಎಸೆದ 48ನೇ ಓವರ್ನ 5ನೇ ಎಸೆತದಲ್ಲಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ ತೇಜ ನಿಡಮನೂರು (54).
47.5 ಓವರ್ಗಳಲ್ಲಿ 250 ರನ್ಗಳಿಗೆ ಆಲೌಟ್ ಆದ ನೆದರ್ಲೆಂಡ್ಸ್ ತಂಡ.
ನೆದರ್ಲೆಂಡ್ಸ್ ವಿರುದ್ಧ 160 ರನ್ಗಳ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ.
ಜಸ್ಪ್ರೀತ್ ಬುಮ್ರಾ ಎಸೆದ 47ನೇ ಓವರ್ನ ಮೊದಲ ಎಸೆತದಲ್ಲೇ ಆರ್ಯನ್ ದತ್ ಕ್ಲೀನ್ ಬೌಲ್ಡ್.
11 ಎಸೆತಗಳಲ್ಲಿ 5 ರನ್ಗಳಿಸಿ ವಿಕೆಟ್ ಒಪ್ಪಿಸಿದ ಆರ್ಯನ್ ದತ್.
ಕ್ರೀಸ್ನಲ್ಲಿ ವ್ಯಾನ್ ಮೀಕೆರೆನ್ ಹಾಗೂ ತೇಜ ನಿಡಮನೂರು ಬ್ಯಾಟಿಂಗ್.
ರವೀಂದ್ರ ಜಡೇಜಾ ಎಸೆದ 44ನೇ ಓವರ್ನ 4ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ರೋಲೋಫ್ ವ್ಯಾನ್ ಡೆರ್ ಮೆರ್ವೆ.
ಟೀಮ್ ಇಂಡಿಯಾಗೆ 8ನೇ ಯಶಸ್ಸು ತಂದುಕೊಟ್ಟ ಜಡೇಜಾ.
ಕ್ರೀಸ್ನಲ್ಲಿ ಆರ್ಯನ್ ದತ್ ಹಾಗೂ ತೇಜ ನಿಡಮನೂರು ಬ್ಯಾಟಿಂಗ್.
ಕುಲ್ದೀಪ್ ಯಾದವ್ ಎಸೆದ 43ನೇ ಓವರ್ನ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದ ಲೋಗನ್ ವ್ಯಾನ್ ಬೀಕ್.
15 ಎಸೆತಗಳಲ್ಲಿ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ವ್ಯಾನ್ ಬೀಕ್.
ಕ್ರೀಸ್ನಲ್ಲಿ ರೋಲೋಫ್ ವ್ಯಾನ್ ಡೆರ್ ಮೆರ್ವೆ ಹಾಗೂ ತೇಜ ನಿಡಮನೂರು ಬ್ಯಾಟಿಂಗ್.
ಮೊಹಮ್ಮದ್ ಶಮಿ ಎಸೆದ 40ನೇ ಓವರ್ನ 3ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಲೋಗನ್ ವ್ಯಾನ್ ಬೀಕ್.
40 ಓವರ್ಗಳ ಮುಕ್ತಾಯದ ವೇಳೆಗೆ ನೆದರ್ಲೆಂಡ್ಸ್ ತಂಡದ ಸ್ಕೋರ್ 190 ರನ್ಗಳು.
ಕ್ರೀಸ್ನಲ್ಲಿ ಲೋಗನ್ ವ್ಯಾನ್ ಬೀಕ್ ಹಾಗೂ ತೇಜ ನಿಡಮನೂರು ಬ್ಯಾಟಿಂಗ್.
ಮೊಹಮ್ಮದ್ ಶಮಿ ಎಸೆದ 38ನೇ ಓವರ್ನ 3ನೇ ಎಸೆತದಲ್ಲಿ ಬೌಲ್ಡ್ ಆದ ಸೈಬ್ರಾಂಡ್ ಎಂಗಲ್ಬ್ರೆಕ್ಟ್.
80 ಎಸೆತಗಳಲ್ಲಿ 45 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸೈಬ್ರಾಂಡ್ ಎಂಗಲ್ಬ್ರೆಕ್ಟ್.
ಕ್ರೀಸ್ನಲ್ಲಿ ಲೋಗನ್ ವ್ಯಾನ್ ಬೀಕ್ ಹಾಗೂ ತೇಜ ನಿಡಮನೂರು ಬ್ಯಾಟಿಂಗ್.
ಸೂರ್ಯಕುಮಾರ್ ಯಾದವ್ ಎಸೆದ 35ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ತೇಜ ನಿಡಮನೂರು.
35 ಓವರ್ಗಳ ಮುಕ್ತಾಯದ ವೇಳೆಗೆ ನೆದರ್ಲೆಂಡ್ಸ್ ತಂಡದ ಸ್ಕೋರ್ 162 ರನ್ಗಳು.
ಕ್ರೀಸ್ನಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಟ್ ಹಾಗೂ ತೇಜ ನಿಡಮನೂರು ಬ್ಯಾಟಿಂಗ್.
ಜಸ್ಪ್ರೀತ್ ಬುಮ್ರಾ ಎಸೆದ 32ನೇ ಓವರ್ನ ಕೊನೆಯ ಎಸೆತದಲ್ಲಿ ಬಾಸ್ ಡಿ ಲೀಡೆ ಕ್ಲೀನ್ ಬೌಲ್ಡ್.
21 ಎಸೆತಗಳಲ್ಲಿ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಬಾಸ್ ಡಿ ಲೀಡೆ.
ಕ್ರೀಸ್ನಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಟ್ ಹಾಗೂ ತೇಜ ನಿಡಮನೂರು ಬ್ಯಾಟಿಂಗ್.
30 ಓವರ್ಗಳ ಮುಕ್ತಾಯದ ವೇಳೆಗೆ ನೆದರ್ಲೆಂಡ್ಸ್ ತಂಡದ ಸ್ಕೋರ್ 136 ರನ್ಗಳು.
4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಟೀಮ್ ಇಂಡಿಯಾ ಬೌಲರ್ಗಳು.
20 ಓವರ್ಗಳಲ್ಲಿ ನೆದರ್ಲೆಂಡ್ಸ್ ತಂಡಕ್ಕೆ ಗೆಲ್ಲಲು 275 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಟ್ ಹಾಗೂ ಬಾಸ್ ಡಿ ಲೀಡೆ ಬ್ಯಾಟಿಂಗ್.
29ನೇ ಓವರ್ ಬೌಲಿಂಗ್ ಮಾಡಿದ ಶುಭ್ಮನ್ ಗಿಲ್.
ಈ ಓವರ್ನ ನಾಲ್ಕನೇ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಫೋರ್ ಬಾರಿಸಿದ ಬಾಸ್ ಡಿ ಲೀಡೆ.
ಕ್ರೀಸ್ನಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಟ್ ಹಾಗೂ ಬಾಸ್ ಡಿ ಲೀಡೆ ಬ್ಯಾಟಿಂಗ್.
ವಿರಾಟ್ ಕೊಹ್ಲಿ ಎಸೆದ 25ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ ಹಿಡಿದ ಅತ್ಯುತ್ತಮ ಕ್ಯಾಚ್ಗೆ ಬಲಿಯಾದ ಸ್ಕಾಟ್ ಎಡ್ವರ್ಡ್ಸ್.
30 ಎಸೆತಗಳಲ್ಲಿ 17 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ನೆದರ್ಲೆಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್.
23ನೇ ಓವರ್ ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ.
ಕೊಹ್ಲಿ ಎಸೆದ 23ನೇ ಓವರ್ನ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದ ಸೈಬ್ರಾಂಡ್.
ಮೊದಲ ಓವರ್ನಲ್ಲಿ 7 ರನ್ ನೀಡಿದ ವಿರಾಟ್ ಕೊಹ್ಲಿ.
ಕ್ರೀಸ್ನಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಟ್ ಹಾಗೂ ಸ್ಕಾಟ್ ಎಡ್ವರ್ಡ್ಸ್ ಬ್ಯಾಟಿಂಗ್.
20 ಓವರ್ಗಳ ಮುಕ್ತಾಯದ ವೇಳೆಗೆ 86 ರನ್ ಕಲೆಹಾಕಿದ ನೆದರ್ಲೆಂಡ್ಸ್.
3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಟೀಮ್ ಇಂಡಿಯಾ ಬೌಲರ್ಗಳು.
ಕ್ರೀಸ್ನಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಟ್ ಹಾಗೂ ಸ್ಕಾಟ್ ಎಡ್ವರ್ಡ್ಸ್ ಬ್ಯಾಟಿಂಗ್.
30 ಓವರ್ಗಳಲ್ಲಿ ನೆದರ್ಲೆಂಡ್ಸ್ ತಂಡಕ್ಕೆ 325 ರನ್ಗಳ ಅವಶ್ಯಕತೆ.
ರವೀಂದ್ರ ಜಡೇಜಾ ಎಸೆದ 16ನೇ ಓವರ್ನ ಮೊದಲ ಎಸೆತದಲ್ಲಿ ಮ್ಯಾಕ್ಸ್ ಓಡೌಡ್ ಕ್ಲೀನ್ ಬೌಲ್ಡ್.
42 ಎಸೆತಗಳಲ್ಲಿ 30 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮ್ಯಾಕ್ಸ್ ಓಡೌಡ್.
ಕ್ರೀಸ್ನಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಟ್ ಹಾಗೂ ಸ್ಕಾಟ್ ಎಡ್ವರ್ಡ್ಸ್ ಬ್ಯಾಟಿಂಗ್.
15 ಓವರ್ಗಳ ಮುಕ್ತಾಯದ ವೇಳೆಗೆ 72 ರನ್ ಕಲೆಹಾಕಿದ ನೆದರ್ಲೆಂಡ್ಸ್ ತಂಡ.
2 ವಿಕೆಟ್ ಮಾತ್ರ ಕಬಳಿಸುವಲ್ಲಿ ಯಶಸ್ವಿಯಾಗಿರುವ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಟ್ ಹಾಗೂ ಮ್ಯಾಕ್ಸ್ ಓಡೌಡ್ ಬ್ಯಾಟಿಂಗ್.
ನೆದರ್ಲೆಂಡ್ಸ್ ತಂಡಕ್ಕೆ 411 ರನ್ಗಳ ಗುರಿ ನೀಡಿರುವ ಟೀಮ್ ಇಂಡಿಯಾ.
ಕುಲ್ದೀಪ್ ಯಾದವ್ ಎಸೆದ 13ನೇ ಓವರ್ನ ಮೊದಲ ಎಸೆತದಲ್ಲೇ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದ ಕಾಲಿನ್ ಅಕರ್ಮನ್.
32 ಎಸೆತಗಳಲ್ಲಿ 35 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕಾಲಿನ್ ಅಕರ್ಮನ್.
ಕ್ರೀಸ್ನಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಟ್ ಹಾಗೂ ಮ್ಯಾಕ್ಸ್ ಓಡೌಡ್ ಬ್ಯಾಟಿಂಗ್.
ಮೊಹಮ್ಮದ್ ಶಮಿ ಎಸೆದ 10ನೇ ಓವರ್ನ ಮೊದಲ ಎಸೆತದಲ್ಲೇ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಮ್ಯಾಕ್ಸ್ ಓಡೌಡ್.
5ನೇ ಎಸೆತದಲ್ಲಿ ಮ್ಯಾಕ್ಸ್ ಓಡೌಡ್ ಬ್ಯಾಟ್ನಿಂದ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್.
10 ಓವರ್ಗಳ ಮುಕ್ತಾಯದ ವೇಳೆಗೆ ನೆದರ್ಲೆಂಡ್ಸ್ ತಂಡದ ಸ್ಕೋರ್ 62 ರನ್ಗಳು.
ಮೊಹಮ್ಮದ್ ಸಿರಾಜ್ ಎಸೆದ 9ನೇ ಓವರ್ನ ಮೊದಲ ಎಸೆತದಲ್ಲೇ ಸ್ಟ್ರೈಟ್ ಡ್ರೈವ್ ಫೋರ್ ಬಾರಿಸಿದ ಕಾಲಿನ್ ಅಕರ್ಮನ್.
ಈ ಫೋರ್ನೊಂದಿಗೆ ಅರ್ಧಶತಕ ಪೂರೈಸಿದ ನೆದರ್ಲೆಂಡ್ಸ್ ತಂಡ.
ಕ್ರೀಸ್ನಲ್ಲಿ ಕಾಲಿನ್ ಅಕರ್ಮನ್ ಹಾಗೂ ಮ್ಯಾಕ್ಸ್ ಓಡೌಡ್ ಬ್ಯಾಟಿಂಗ್.
ಮೊಹಮ್ಮದ್ ಸಿರಾಜ್ ಎಸೆದ 6ನೇ ಓವರ್ನಲ್ಲಿ ಮೂರು ಫೋರ್ಗಳನ್ನು ಬಾರಿಸಿದ ಕಾಲಿನ್ ಅಕರ್ಮನ್.
6 ಓವರ್ಗಳ ಮುಕ್ತಾಯದ ವೇಳೆಗೆ 29 ರನ್ ಕಲೆಹಾಕಿದ ನೆದರ್ಲೆಂಡ್ಸ್.
ಕ್ರೀಸ್ ನಲ್ಲಿ ಕಾಲಿನ್ ಅಕರ್ಮನ್ ಹಾಗೂ ಮ್ಯಾಕ್ಸ್ ಓಡೌಡ್ ಬ್ಯಾಟಿಂಗ್.
ಮೊಹಮ್ಮದ್ ಸಿರಾಜ್ ಎಸೆದ 2ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ಗೆ ಕ್ಯಾಚ್ ನೀಡಿದ ವೆಸ್ಲಿ ಬ್ಯಾರೆಸಿ (4).
ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟ ಸಿರಾಜ್.
ಕ್ರೀಸ್ನಲ್ಲಿ ಕಾಲಿನ್ ಅಕರ್ಮನ್ ಹಾಗೂ ಮ್ಯಾಕ್ಸ್ ಓಡೌಡ್ ಬ್ಯಾಟಿಂಗ್.
ಮೊದಲ ಓವರ್ನಲ್ಲಿ ಕೇವಲ 5 ರನ್ ನೀಡಿದ ಜಸ್ಪ್ರೀತ್ ಬುಮ್ರಾ.
ಕ್ರೀಸ್ನಲ್ಲಿ ವೆಸ್ಲಿ ಬ್ಯಾರೆಸಿ ಹಾಗೂ ಮ್ಯಾಕ್ಸ್ ಓಡೌಡ್ ಬ್ಯಾಟಿಂಗ್.
ನೆದರ್ಲೆಂಡ್ಸ್ ತಂಡಕ್ಕೆ 411 ರನ್ಗಳ ಕಠಿಣ ಗುರಿ ನೀಡಿರುವ ಟೀಮ್ ಇಂಡಿಯಾ.
50 ಓವರ್ಗಳಲ್ಲಿ 410 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಟೀಮ್ ಇಂಡಿಯಾ ಪರ ಶ್ರೇಯಸ್ ಅಯ್ಯರ್ (128) ಹಾಗೂ ಕೆಎಲ್ ರಾಹುಲ್ (102) ಗರಿಷ್ಠ ಸ್ಕೋರರ್.
ನೆದರ್ಲೆಂಡ್ಸ್ ತಂಡಕ್ಕೆ 411 ರನ್ ಗಳ ಕಠಿಣ ಗುರಿ ನೀಡಿದ ಟೀಮ್ ಇಂಡಿಯಾ.
ಬಾಸ್ ಡಿ ಲೀಡೆ ಎಸೆದ ಕೊನೆಯ ಓವರ್ನ ಮೊದಲೆರಡು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಕೆಎಲ್ ರಾಹುಲ್.
ಈ ಸಿಕ್ಸ್ಗಳೊಂದಿಗೆ ಕೇವಲ 62 ಎಸೆತಗಳಲ್ಲಿ ಶತಕ ಪೂರೈಸಿದ ಕೆಎಲ್ ರಾಹುಲ್.
ಇದು ಏಕದಿನ ವಿಶ್ವಕಪ್ನಲ್ಲಿ ರಾಹುಲ್ ಅವರ 2ನೇ ಶತಕ.
ಲೋಗನ್ ವ್ಯಾನ್ ಬೀಕ್ ಎಸೆದ 49ನೇ ಓವರ್ನ ಮೂರು ಸಿಕ್ಸ್ ಹಾಗೂ ಒಂದು ಫೋರ್ ಸಿಡಿಸಿ ಅಬ್ಬರಿಸಿದ ಶ್ರೇಯಸ್ ಅಯ್ಯರ್.
ಒಂದೇ ಓವರ್ನಲ್ಲಿ 25 ರನ್ ಚಚ್ಚಿದ ಶ್ರೇಯಸ್ ಅಯ್ಯರ್.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
84 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಶತಕ ಪೂರೈಸಿದ ಶ್ರೇಯಸ್ ಅಯ್ಯರ್.
ಕೊನೆಯ 4 ಓವರ್ಗಳು ಬಾಕಿ…ಬೃಹತ್ ಮೊತ್ತದತ್ತ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
45 ಓವರ್ಗಳಲ್ಲಿ 337 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕೊನೆಯ 5 ಓವರ್ಗಳಲ್ಲಿ ಬೃಹತ್ ಮೊತ್ತ ಪೇರಿಸುವ ಇರಾದೆಯಲ್ಲಿ ಭಾರತೀಯ ಬ್ಯಾಟರ್ಗಳು.
97 ರನ್ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿರುವ ಶ್ರೇಯಸ್ ಅಯ್ಯರ್.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
ಬಾಸ್ ಡಿ ಲೀಡೆ ಎಸೆದ 42ನೇ ಓವರ್ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಫೋರ್ ಬಾರಿಸಿದ ಶ್ರೇಯಸ್ ಅಯ್ಯರ್.
ಈ ಫೋರ್ನೊಂದಿಗೆ ತ್ರಿಶತಕ ದಾಟಿದ ಟೀಮ್ ಇಂಡಿಯಾ ಸ್ಕೋರ್.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ( ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
ಪೌಲ್ ವ್ಯಾನ್ ಮೀಕೆರೆನ್ ಎಸೆದ 40ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಭರ್ಜರಿ ಸಿಕ್ಸರ್ ಬಾರಿಸಿದ ಶ್ರೇಯಸ್ ಅಯ್ಯರ್.
40 ಓವರ್ಗಳ ಮುಕ್ತಾಯದ ವೇಳೆಗೆ 284 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ (73) ಹಾಗೂ ಕೆಎಲ್ ರಾಹುಲ್ (37) ಬ್ಯಾಟಿಂಗ್.
ರೋಲೋಫ್ ವ್ಯಾನ್ ಡೆರ್ ಮೆರ್ವೆ ಎಸೆದ 39ನೇ ಓವರ್ನ ಮೊದಲ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಕೆಎಲ್ ರಾಹುಲ್.
ಕ್ರೀಸ್ ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
ಬಾಸ್ ಡಿ ಲೀಡೆ ಎಸೆದ 36ನೇ ಓವರ್ನ 4ನೇ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಫೋರ್ ಬಾರಿಸಿದ ಶ್ರೇಯಸ್ ಅಯ್ಯರ್.
ಈ ಫೋರ್ನೊಂದಿಗೆ 250 ರನ್ ಪೂರೈಸಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
35 ಓವರ್ಗಳಲ್ಲಿ 244 ರನ್ ಕಲೆಹಾಕಿದ ಟೀಮ್ ಇಂಡಿಯಾ.
3 ವಿಕೆಟ್ ಕಬಳಿಸಲಷ್ಟೇ ಶಕ್ತರಾದ ನೆದರ್ಲೆಂಡ್ಸ್ ಬೌಲರ್ಗಳು.
ಅರ್ಧಶತಕದೊಂದಿಗೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ಶ್ರೇಯಸ್ ಅಯ್ಯರ್.
ಕೆಎಲ್ ರಾಹುಲ್ ಕಡೆಯಿಂದ ಅಯ್ಯರ್ಗೆ ಉತ್ತಮ ಸಾಥ್.
ಶುಭ್ಮನ್ ಗಿಲ್ (51), ರೋಹಿತ್ ಶರ್ಮಾ (61) ಹಾಗೂ ವಿರಾಟ್ ಕೊಹ್ಲಿ (51) ಔಟ್.
30 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 211 ರನ್ಗಳು.
3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ನೆದರ್ಲೆಂಡ್ಸ್ ಬೌಲರ್ಗಳು.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
ಶುಭ್ಮನ್ ಗಿಲ್ (51), ರೋಹಿತ್ ಶರ್ಮಾ (61) ಹಾಗೂ ವಿರಾಟ್ ಕೊಹ್ಲಿ (51) ಔಟ್.
ರೋಲೋಫ್ ವ್ಯಾನ್ ಡೆರ್ ಮೆರ್ವೆ ಎಸೆದ 29ನೇ ಓವರ್ನ 4ನೇ ಎಸೆತದಲ್ಲಿ ಬೌಲ್ಡ್ ಆದ ವಿರಾಟ್ ಕೊಹ್ಲಿ.
56 ಎಸೆತಗಳಲ್ಲಿ 51 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
53 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ.
ಇದು ಕಿಂಗ್ ಕೊಹ್ಲಿಯ 71ನೇ ಏಕದಿನ ಅರ್ಧಶತಕ.
28 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾದ ಸ್ಕೋರ್ 198 ರನ್ಗಳು.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
25 ಓವರ್ಗಳಲ್ಲಿ 178 ರನ್ ಬಾರಿಸಿದ ಟೀಮ್ ಇಂಡಿಯಾ ಬ್ಯಾಟರ್ಗಳು.
ಕೇವಲ 2 ವಿಕೆಟ್ ಕಬಳಿಸುವಲ್ಲಿ ಮಾತ್ರ ಯಶಸ್ವಿಯಾಗಿರುವ ನೆದರ್ಲೆಂಡ್ಸ್.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
ಶುಭ್ಮನ್ ಗಿಲ್ (51) ಹಾಗೂ ರೋಹಿತ್ ಶರ್ಮಾ (61) ಔಟ್.
ಲೋಗನ್ ವ್ಯಾನ್ ಬೀಕ್ ಎಸೆದ 22ನೇ ಓವರ್ನ 3ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ವಿರಾಟ್ ಕೊಹ್ಲಿ.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
20 ಓವರ್ಗಳ ಮುಕ್ತಾಯದ ವೇಳೆಗೆ 140 ರನ್ ಕಲೆಹಾಕಿದ ಟೀಮ್ ಇಂಡಿಯಾ.
2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ನೆದರ್ಲೆಂಡ್ಸ್ ತಂಡ.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
ಶುಭ್ಮನ್ ಗಿಲ್ (51) ಹಾಗೂ ರೋಹಿತ್ ಶರ್ಮಾ (61) ಔಟ್.
ಬಾಸ್ ಡಿ ಲೀಡೆ ಎಸೆದ 18ನೇ ಓವರ್ನ 4ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ರೋಹಿತ್ ಶರ್ಮಾ.
54 ಎಸೆತಗಳಲ್ಲಿ 61 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಹಿಟ್ಮ್ಯಾನ್.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
ಸ್ಪಿನ್ನರ್ ರೋಲೋಫ್ ವ್ಯಾನ್ ಡೆರ್ ಮೆರ್ವೆ ಎಸೆದ 15ನೇ ಓವರ್ನ 2ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಸ್ವೀಪ್ ಶಾಟ್ ಸಿಕ್ಸ್ ಬಾರಿಸಿದ ರೋಹಿತ್ ಶರ್ಮಾ.
15 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 119 ರನ್ಗಳು.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
ಪೌಲ್ ವ್ಯಾನ್ ಮೀಕೆರೆನ್ ಎಸೆದ 14ನೇ ಓವರ್ನ ಕೊನೆಯ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಫೋರ್ ಬಾರಿಸಿದ ರೋಹಿತ್ ಶರ್ಮಾ.
ಈ ಫೋರ್ನೊಂದಿಗೆ 44 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
30 ಎಸೆತಗಳಲ್ಲಿ 3 ಫೋರ್ ಹಾಗೂ 4 ಭರ್ಜರಿ ಸಿಕ್ಸ್ ಗಳೊಂದಿಗೆ ಅರ್ಧಶತಕ ಪೂರೈಸಿದ ಶುಭ್ಮನ್ ಗಿಲ್.
ಅರ್ಧಶತಕದ ಬೆನ್ನಲ್ಲೇ ವ್ಯಾನ್ ಮೀಕೆರೆನ್ ಎಸೆತದಲ್ಲಿ ಲೆಗ್ ಸೈಡ್ ಬೌಂಡರಿ ಲೈನ್ನಲ್ಲಿ ಕ್ಯಾಚ್ ಔಟ್ ಆದ ಗಿಲ್.
32 ಎಸೆತಗಳಲ್ಲಿ 51 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶುಭ್ಮನ್ ಗಿಲ್.
ಪೌಲ್ ವ್ಯಾನ್ ಮೀಕೆರೆನ್ ಎಸೆದ 10ನೇ ಓವರ್ನ ಮೊದಲ ಎಸೆತದಲ್ಲೇ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶುಭ್ಮನ್ ಗಿಲ್.
10 ಓವರ್ಗಳ ಮುಕ್ತಾಯದ ವೇಳೆಗೆ 91 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ (42) ಹಾಗೂ ಶುಭ್ಮನ್ ಗಿಲ್ (47) ಬ್ಯಾಟಿಂಗ್.
ಪೌಲ್ ವ್ಯಾನ್ ಮೀಕೆರೆನ್ ಎಸೆದ 8ನೇ ಓವರ್ನ ಕೊನೆಯ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಶುಭ್ಮನ್ ಗಿಲ್. ಇದು ಗಿಲ್ ಇನಿಂಗ್ಸ್ನ ಮೂರನೇ ಸಿಕ್ಸ್.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
ಕಾಲಿನ್ ಅಕರ್ಮನ್ ಎಸೆದ 7ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ರೋಹಿತ್ ಶರ್ಮಾ.
4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಹಿಟ್ಮ್ಯಾನ್.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
ಲೋಗನ್ ವ್ಯಾನ್ ಬೀಕ್ ಎಸೆದ 6ನೇ ಓವರ್ನಲ್ಲಿ 2 ಫೋರ್ ಹಾಗೂ 1 ಭರ್ಜರಿ ಸಿಕ್ಸ್ ಸಿಡಿಸಿದ ಶುಭ್ಮನ್ ಗಿಲ್.
ಒಂದೇ ಓವರ್ನಲ್ಲಿ 16 ರನ್ ಚಚ್ಚಿದ ಗಿಲ್.
ಕೇವಲ 6 ಓವರ್ಗಳಲ್ಲಿ ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
ಆರ್ಯನ್ ದತ್ ಎಸೆದ 3ನೇ ಓವರ್ನ ಮೊದಲ ಎಸೆತದಲ್ಲೇ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ರೋಹಿತ್ ಶರ್ಮಾ.
ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಶುಭ್ಮನ್ ಗಿಲ್.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
ಮೊದಲ ಎರಡು ಓವರ್ಗಳಲ್ಲಿ 15 ರನ್ ಕಲೆಹಾಕಿದ ಟೀಮ್ ಇಂಡಿಯಾದ ಆರಂಭಿಕರು.
ಕ್ರೀಸ್ ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಟೀಮ್ ಇಂಡಿಯಾ.
ಆರ್ಯನ್ ದತ್ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲೇ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ರೋಹಿತ್ ಶರ್ಮಾ.
3ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಹಿಟ್ಮ್ಯಾನ್ ಬ್ಯಾಟ್ನಿಂದ ಮತ್ತೊಂದು ಫೋರ್.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
ಮೈಸೂರು: ರಾಜ್ಯಾದ್ಯಂತ ಬರದಿಂದ ಅನ್ನದಾತರು ಕಂಗಾಲಾಗಿದ್ದೇವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ಇದೆ. ನಮಗೆ ಗ್ಯಾರಂಟಿ ಬೇಡ ದಯಮಾಡಿ ಪರಿಹಾರ ಕೊಡಿ ಎಂದು ಅನ್ನದಾತರ ಸರ್ಕಾರಕ್ಕೆ ಮನವಿ ಮಾಡಿದರು. ಬಸ್ ಉಚಿತ ನೀಡಿದ್ದೀರಿ, ಪುರುಷರಿಗೆ ಸೀಟು ಸಿಗುತ್ತಿಲ್ಲ. ವಿದ್ಯುತ್ ಉಚಿತ ಅಂತೀರಾ ದಿನಕ್ಕೆ ಕೇವಲ 3 ಗಂಟೆ ಕರೆಂಟ್ ಇರುತ್ತದೆ. ಪರಿಹಾರ ಕೊಡಿ ಎಂದರೆ ಕೇಂದ್ರದ ಕಡೆ ತೋರಿಸುತ್ತೀರಿ. ಕೇಂದ್ರ ನಿಮ್ಮ ಕಡೆ ತೋರಿಸುತ್ತಿದೆ. ಇದರಿಂದ ಅನ್ನದಾನ ಪರಿಸ್ಥಿತಿ ಬಿಗಡಾಯಿಸಿದೆ. ಒಬ್ಬರಿಗೆ ಪರಿಹಾರ ಕೊಟ್ಟರೆ, ನೂರು ಜನರಿಗೆ ಕೊಟ್ಟಿಲ್ಲ. ಬರದಲ್ಲೂ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಅಳಲು ತೋಡಿಕೊಂಡರು.
ನೆದರ್ಲೆಂಡ್ಸ್ (ಪ್ಲೇಯಿಂಗ್ XI): ವೆಸ್ಲಿ ಬ್ಯಾರೆಸಿ, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಸೈಬ್ರಾಂಡ್ ಎಂಗಲ್ಬ್ರೆಕ್ಟ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಬಾಸ್ ಡಿ ಲೀಡೆ, ತೇಜ ನಿಡಮನೂರು, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್ತ್, ಪಾಲ್ ವ್ಯಾನ್ ಮೀಕೆರೆನ್.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Published On - 1:33 pm, Sun, 12 November 23