IND vs NZ 2nd T20I Highlights: ಕಿವೀಸ್ ವಿರುದ್ಧ ಭಾರತಕ್ಕೆ 65 ರನ್‌ಗಳ ಭಾರಿ ಜಯ
IND vs NZ 2nd T20I Highlights: 10 ದಿನಗಳ ಟಿ20 ವಿಶ್ವಕಪ್ ನಿರಾಸೆಯ ನಂತರ, ಅಂತಿಮವಾಗಿ ಭಾರತ ತಂಡ ಮತ್ತೆ ಮೈದಾನಕ್ಕೆ ಬಂದು ಅಮೋಘ ಗೆಲುವಿನೊಂದಿಗೆ ಹೊಸ ಯುಗವನ್ನು ಪ್ರಾರಂಭಿಸಿದೆ.
10 ದಿನಗಳ ಟಿ20 ವಿಶ್ವಕಪ್ ನಿರಾಸೆಯ ನಂತರ, ಅಂತಿಮವಾಗಿ ಭಾರತ ತಂಡ ಮತ್ತೆ ಮೈದಾನಕ್ಕೆ ಬಂದು ಅಮೋಘ ಗೆಲುವಿನೊಂದಿಗೆ ಹೊಸ ಯುಗವನ್ನು ಪ್ರಾರಂಭಿಸಿದೆ. ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 65 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ವರ್ಷವಿಡೀ ವಿಶ್ವದ ವಿವಿಧ ಮೈದಾನಗಳಲ್ಲಿ ಬೌಲರ್ಗಳನ್ನು ಧ್ವಂಸ ಮಾಡುತ್ತಿದ್ದ ಸೂರ್ಯಕುಮಾರ್ ಯಾದವ್ ತಮ್ಮ ಮೊದಲ ನ್ಯೂಜಿಲೆಂಡ್ ಪ್ರವಾಸದಲ್ಲೂ ಅದೇ ರೀತಿ ಅಮೋಘ ಶತಕ ಬಾರಿಸುವ ಮೂಲಕ ತಂಡದ ಗೆಲುವಿಗೆ ಅಡಿಪಾಯ ಹಾಕಿದರು. ಯುಜ್ವೇಂದ್ರ ಚಹಾಲ್ ಮತ್ತು ದೀಪಕ್ ಹೂಡಾ ಅವರ ಸ್ಪಿನ್ ಈ ಅಡಿಪಾಯದ ಮೇಲೆ ಯಶಸ್ವಿ ಕಟ್ಟಡವನ್ನು ನಿರ್ಮಿಸಿತು.
LIVE NEWS & UPDATES
-
ಕಿವೀಸ್ ಇನ್ನಿಂಗ್ಸ್ ಮುಗಿಸಿದ ಹೂಡಾ
19ನೇ ಓವರ್ ಎಸೆದ ದೀಪಕ್ ಹೂಡಾ ಈ ಓವರ್ನ ಎರಡನೇ ಎಸೆತದಲ್ಲಿ ಇಶ್ ಸೋಧಿಯನ್ನು ಔಟ್ ಮಾಡಿದರು. ಮುಂದಿನ ಎಸೆತದಲ್ಲಿ ಸೌಥಿ ವಿಕೆಟ್‌ಕೀಪರ್ ಪಂತ್‌ಗೆ ಕ್ಯಾಚಿತ್ತು ಔಟಾದರು. ನಾಲ್ಕನೇ ಎಸೆತದಲ್ಲಿ ದೀಪಕ್ ಹೂಡಾ ಹ್ಯಾಟ್ರಿಕ್ ಅವಕಾಶ ಕಳೆದುಕೊಂಡರು. ಆದರೆ, ಐದನೇ ಎಸೆತದಲ್ಲಿ ಮಿಲ್ನೆ ಅವರನ್ನು ಔಟ್ ಮಾಡುವ ಮೂಲಕ ನಾಲ್ಕನೇ ವಿಕೆಟ್ ತಮ್ಮ ಖಾತೆಗೆ ಹಾಕಿಕೊಂಡರು. ಮಿಲ್ನೆ ಅವರು ಲಾಂಗ್ ಆಫ್‌ನಲ್ಲಿ ಅರ್ಷದೀಪ್ ಸಿಂಗ್ ಅವರಿಗೆ ಕ್ಯಾಚ್ ನೀಡಿದರು.
-
ಕೇನ್ ವಿಲಿಯಮ್ಸನ್ ಔಟ್
18ನೇ ಓವರ್‌ನ ಮೊದಲ ಎಸೆತದಲ್ಲಿ ಕೇನ್ ವಿಲಿಯಮ್ಸನ್ ಡೀಪ್ ಸ್ಕ್ವೇರ್ ಲೆಗ್ ಮೇಲೆ ಸಿಕ್ಸರ್ ಬಾರಿಸಿದರು. ಜೊತೆಗೆ ವಿಲಿಯಮ್ಸನ್ 48 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಓವರ್‌ನ ಐದನೇ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ತಮ್ಮ ಇನ್ನಿಂಗ್ಸ್ ಮುಗಿಸಿದರು.
-
ಜೇಮ್ಸ್ ನೀಶಮ್ ಕೂಡ ಔಟ್
14ನೇ ಓವರ್ ನಲ್ಲಿ ಜೇಮ್ಸ್ ನೀಶಮ್ ಕೂಡ ಚಾಹಲ್ಗೆ ಬಲಿಯಾದರು. ಓವರ್‌ನ ಮೂರನೇ ಎಸೆತದಲ್ಲಿ, ನೀಶಮ್ ಲಾಂಗ್ ಆನ್‌ನಲ್ಲಿ ಆಡಲು ಬಯಸಿದ್ದರು ಆದರೆ ಇಶಾನ್ ಕಿಶನ್ ಕ್ಯಾಚ್ ಹಿಡಿಯುವ ಮೂಲಕ ಅವರ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. ನೀಶಮ್ ಖಾತೆ ತೆರೆಯಲು ವಿಫಲರಾದರು
ಮಿಚೆಲ್ ಔಟ್
13ನೇ ಓವರ್‌ನಲ್ಲಿ ಮಿಚೆಲ್ ಅವರನ್ನು ಔಟ್ ಮಾಡುವ ಮೂಲಕ ದೀಪಕ್ ಹೂಡಾ ತಂಡಕ್ಕೆ ಉತ್ತಮ ಯಶಸ್ಸು ತಂದುಕೊಟ್ಟರು. ಓವರ್‌ನ ಐದನೇ ಎಸೆತದಲ್ಲಿ, ಮಿಚೆಲ್ ಲಾಂಗ್ ಆನ್‌ನಲ್ಲಿ ಚೆಂಡನ್ನು ಆಡಿದರು ಆದರೆ ಶ್ರೇಯಸ್ ಅಯ್ಯರ್ ಕ್ಯಾಚ್ ಪಡೆದರು. ಮಿಚೆಲ್ 11 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿದರು.
ಫಿಲಿಪ್ಸ್ ಔಟ್
ಒಂಬತ್ತನೇ ಓವರ್‌ನಲ್ಲಿ ಸುಂದರ್ ಏಳು ರನ್ ಗಳಿಸಿದರು. ಚಾಹಲ್ ತನ್ನ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ತಿಂದರು. ಆದರೆ ಮೂರನೇ ಎಸೆತದಲ್ಲಿ ಫಿಲಿಪ್ಸ್ ಅವರನ್ನು ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು. 6 ಎಸೆತಗಳಲ್ಲಿ 12 ರನ್ ಗಳಿಸಿದ ನಂತರ ಫಿಲಿಪ್ಸ್ ಮರಳಬೇಕಾಯಿತು. ಅವರು ಇನ್ನಿಂಗ್ಸ್‌ನಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು.
ಕಾನ್ವೇ ಔಟ್
ವಾಷಿಂಗ್ಟನ್ ಸುಂದರ್ ಒಂಬತ್ತನೇ ಓವರ್‌ನ ಮೊದಲ ಎಸೆತದಲ್ಲಿ ಕಾನ್ವೇ ಅವರನ್ನು ಔಟ್ ಮಾಡಿದರು. ಕಾನ್ವೇ ಚೆಂಡನ್ನು ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ಗೆ ಆಡಿದರು, ಅಲ್ಲಿ ಅರ್ಷದೀಪ್ ಸಿಂಗ್ ಕ್ಯಾಚ್ ಪಡೆದರು. ಕಾನ್ವೆ 22 ಎಸೆತಗಳಲ್ಲಿ 25 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು.
ಸುಂದರ್ ಕಾಸ್ಟ್ಲಿ ಓವರ್
ಪವರ್‌ಪ್ಲೇ ನಂತರ ಮೊದಲ ಓವರ್ ವಾಷಿಂಗ್ಟನ್ ಸುಂದರ್‌ಗೆ ನೀಡಲಾಯಿತು. ಆ ಓವರ್‌ನ ಮೊದಲ ಎಸೆತದಲ್ಲಿ ಕಾನ್ವೆ ಬ್ಯಾಕ್‌ವರ್ಡ್ ಪಾಯಿಂಟ್ ಕಡೆ ಬೌಂಡರಿ ಬಾರಿಸಿದರು. ವಿಲಿಯಮ್ಸನ್ ನಾಲ್ಕನೇ ಎಸೆತದಲ್ಲಿ ಮೊದಲ ಬೌಂಡರಿ ಬಾರಿಸಿದರು. ಮುಂದಿನ ಎಸೆತದಲ್ಲಿ ಎಕ್ಸ್‌ಟ್ರಾ ಕವರ್ ಮೇಲೆ ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ಸುಂದರ್ 17 ರನ್ ನೀಡಿದರು.
ಪವರ್‌ಪ್ಲೇ ಅಂತ್ಯ
ಸಿರಾಜ್ ಖಾನ್ ಅವರ ಓವರ್ ಅನ್ನು ಕಾನ್ವೇ ಫೋರ್‌ನೊಂದಿಗೆ ಪ್ರಾರಂಭಿಸಿದರು. ಈ ಓವರ್‌ನಲ್ಲಿ ಸಿರಾಜ್ ಏಳು ರನ್ ನೀಡಿದರು. ಪವರ್‌ಪ್ಲೇಯಲ್ಲಿ ಭಾರತ 42 ರನ್ ಗಳಿಸಿದರೆ, ಕಿವೀಸ್ ತಂಡ 32 ರನ್ ಗಳಿಸಿದೆ. ಜೊತೆಗೆ ಒಂದು ವಿಕೆಟ್ ಕೂಡ ಕಳೆದುಕೊಂಡಿದೆ
ಭುವಿಗೆ ಬೌಂಡರಿ
ಐದನೇ ಓವರ್‌ನಲ್ಲಿ ಭುವನೇಶ್ವರ್ ಬೌಂಡರಿ ತಿಂದರು. ಓವರ್‌ನ ನಾಲ್ಕನೇ ಎಸೆತದಲ್ಲಿ ಕಾನ್ವೆ ಫ್ಲಿಕ್ ಮಾಡಿ ಮಿಡ್-ವಿಕೆಟ್ ಮೇಲೆ ಬೌಂಡರಿ ಬಾರಿಸಿದರು. ಗುರಿ ದೊಡ್ಡದಿರುವುದರಿಂದ ಕಿವೀಸ್ ರನ್‌ಗಳ ವೇಗವನ್ನು ಹೆಚ್ಚಿಸಬೇಕಿದೆ.
ಸಿರಾಜ್ ಉತ್ತಮ ಓವರ್
ಮೊಹಮ್ಮದ್ ಸಿರಾಜ್ ನಾಲ್ಕನೇ ಓವರ್ ಬೌಲ್ ಮಾಡಿ ಮೂರು ರನ್ ನೀಡಿದರು. ಭಾರತ ಉತ್ತಮ ಆರಂಭ ಪಡೆದಿದೆ.
ಭುವಿ ಉತ್ತಮ ಓವರ್
ಭುವಿಯಿಂದ ಮತ್ತೊಂದು ಉತ್ತಮ ಓವರ್. ಮೂರನೇ ಓವರ್‌ನಲ್ಲಿ ಅವರು ಕೇವಲ ಎರಡು ರನ್ ನೀಡಿದರು. ಪವರ್‌ಪ್ಲೇಯಲ್ಲಿ ವಿಕೆಟ್‌ಗಳನ್ನು ಪಡೆಯುವ ಮೂಲಕ ನ್ಯೂಜಿಲೆಂಡ್ ಮೇಲೆ ಒತ್ತಡ ಹೇರಬಹುದು. ಅದೇ ಸಮಯದಲ್ಲಿ, ಕಿವೀಸ್ ತಂಡಕ್ಕೆ ಇಲ್ಲಿ ಉತ್ತಮ ಜೊತೆಯಾಟದ ಅಗತ್ಯವಿದೆ.
ಅರ್ಷದೀಪ್ ದುಬಾರಿ
ಅರ್ಷದೀಪ್ ಸಿಂಗ್ ಎರಡನೇ ಓವರ್ ಎಸೆದರು. ಓವರ್‌ನ ನಾಲ್ಕನೇ ಎಸೆತದಲ್ಲಿ ನಾಯಕ ಕೇನ್ ವಿಲಿಯಮ್ಸನ್ ಫ್ಲಿಕ್ ಮಾಡಿ ಮಿಡ್ ವಿಕೆಟ್‌ಗೆ ಬೌಂಡರಿ ಬಾರಿಸಿದರು ಅರ್ಷದೀಪ್ ಸಿಂಗ್ ಅವರ ಓವರ್‌ನಲ್ಲಿ 10 ರನ್ ಬಂದವು.
ಅಲೆನ್ ಔಟ್
ನ್ಯೂಜಿಲೆಂಡ್ ಇನ್ನಿಂಗ್ಸ್ ಆರಂಭಗೊಂಡಿದ್ದು, ಆರಂಭವಾದ ಕೂಡಲೇ ಆರಂಭಿಕರ ವಿಕೆಟ್ ಕಳೆದುಕೊಂಡಿತು. ಭುವನೇಶ್ವರ್ ಕುಮಾರ್ ಅವರ ಎರಡನೇ ಎಸೆತದಲ್ಲಿ ಅಲೆನ್ ಔಟಾದರು.
192 ರನ್ ಗುರಿ
ಮೊದಲು ಬ್ಯಾಟ್ ಮಾಡಿದ ಭಾರತ 191 ರನ್ ಗಳಿಸಿತ್ತು. ಸೂರ್ಯಕುಮಾರ್ ಯಾದವ್ ಭಾರತದ ಪರ ಗರಿಷ್ಠ 111 ರನ್ ಗಳಿಸಿದರು.ತಮ್ಮ ಇನ್ನಿಂಗ್ಸ್‌ನಲ್ಲಿ 11 ಬೌಂಡರಿಗಳು ಮತ್ತು ಏಳು ಸಿಕ್ಸರ್‌ಗಳನ್ನು ಬಾರಿಸಿದರು. ಇವರನ್ನು ಬಿಟ್ಟರೆ ಇಶಾನ್ ಕಿಶನ್ 36 ರನ್ ಗಳಿಸಿದರು. ಉಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ಪರ ಟಿಮ್ ಸೌಥಿ ಮೂರು, ಫರ್ಗುಸನ್ ಎರಡು ಹಾಗೂ ಸೋಧಿ ಒಂದು ವಿಕೆಟ್ ಪಡೆದರು.
ಸೂರ್ಯಕುಮಾರ್ ಶತಕ
ಸೌಥಿಯ ನಂತರ, ಫರ್ಗುಸನ್ ಸೂರ್ಯಕುಮಾರ್ಗೆ ಬಲಿಯಾದರು. ಓವರ್‌ನ ಮೂರನೇ ಎಸೆತದಲ್ಲಿ ಸೂರ್ಯಕುಮಾರ್ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಫೋರ್ ಹೊಡೆದರು. ಮುಂದಿನ ಎಸೆತದಲ್ಲಿ ಕವರ್ಸ್ ಮೇಲೆ ಬೌಂಡರಿ ಬಾರಿಸುವ ಮೂಲಕ ತಮ್ಮ ಶತಕವನ್ನು ಗಳಿಸಿದರು. ಅವರು ಇಲ್ಲಿಗೆ ನಿಲ್ಲದೆ ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿದರು ಮತ್ತು ಕೊನೆಯ ಎಸೆತದಲ್ಲಿ ಡೀಪ್ ಬ್ಯಾಕ್‌ವರ್ಡ್ ಪಾಯಿಂಟ್ ಮೇಲೆ ಸಿಕ್ಸರ್ ಬಾರಿಸಿದರು.
ಸೂರ್ಯಕುಮಾರ್ ಯಾದವ್ ಬಿರುಗಾಳಿ
ಸೂರ್ಯಕುಮಾರ್ ಯಾದವ್ 18ನೇ ಓವರ್‌ನಲ್ಲಿ 18 ರನ್ ನೀಡಿದರು. ಓವರ್‌ನ ಎರಡನೇ ಎಸೆತದಲ್ಲಿ ಯಾದವ್ ಲಾಂಗ್ ಆಫ್ನಲ್ಲಿ ಸಿಕ್ಸರ್ ಬಾರಿಸಿದರು. ಮತ್ತೊಂದೆಡೆ, ಐದನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದರು.
ಸೂರ್ಯಕುಮಾರ್ ಅಬ್ಬರ
ಟಿಮ್ ಸೌಥಿ ಅವರ 17ನೇ ಓವರ್‌ನಲ್ಲಿ ಸೂರ್ಯಕುಮಾರ್ ರನ್ ಲೂಟಿ ಮಾಡಿದರು. ಓವರ್‌ನ ಮೊದಲ ಎಸೆತದಲ್ಲಿ ಸೂರ್ಯಕುಮಾರ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. ಮತ್ತು ಮುಂದಿನ ಚೆಂಡಿನಲ್ಲಿ, ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನ ಮೇಲೆ ಬೌಂಡರಿ ಹೊಡೆದರು. ಓವರ್‌ನ ನಾಲ್ಕನೇ ಎಸೆತದಲ್ಲಿ ಅವರು ಮತ್ತೊಮ್ಮೆ ಕಟ್ ಮಾಡಿ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಬೌಂಡರಿ ಹೊಡೆದರು.
ಸೂರ್ಯಕುಮಾರ್ ಅರ್ಧಶತಕ
16ನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್, ಮಿಚೆಲ್ ಸ್ಯಾಂಟ್ನರ್ ಎಸೆತದಲ್ಲಿ ಲಾಂಗ್‌ನಲ್ಲಿ ಚೆಂಡನ್ನು ಆಡಿ ಸಿಂಗಲ್‌ನೊಂದಿಗೆ ಅರ್ಧಶತಕ ಪೂರೈಸಿದರು. ಅವರು 32 ಎಸೆತಗಳಲ್ಲಿ 50 ರನ್ ಗಳಿಸಿದರು. ಅದೇ ಸಮಯದಲ್ಲಿ, ಸ್ಯಾಂಟ್ನರ್ ಅವರ ಓವರ್‌ನ ಐದನೇ ಎಸೆತದಲ್ಲಿ, ಸೂರ್ಯ ಎಕ್ಸ್‌ಟ್ರಾ ಕವರ್‌ನಲ್ಲಿ ಸಿಕ್ಸರ್ ಬಾರಿಸಿದರು.
ಸೂರ್ಯ ಬೌಂಡರಿ
ಇಶ್ ಸೋಧಿ 14ನೇ ಓವರ್‌ನಲ್ಲಿ ಆರು ರನ್ ನೀಡಿದರು. ಓವರ್‌ನ ಮೂರನೇ ಎಸೆತದಲ್ಲಿ, ಎಕ್ಸ್‌ಟ್ರಾ ಕವರ್‌ನಲ್ಲಿ ಚೆಂಡನ್ನು ಆಡಿ ಬೌಂಡರಿ ಬಾರಿಸಿದರು. ಉಳಿದ 6 ಓವರ್ಗಳಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಗರಿಷ್ಠ ರನ್ ಸೇರಿಸಲು ಯತ್ನಿಸಬೇಕಿದೆ.
ಶ್ರೇಯಸ್ ಅಯ್ಯರ್ ಹಿಟ್ ವಿಕೆಟ್
13ನೇ ಓವರ್‌ನಲ್ಲಿ ಸೂರ್ಯಕುಮಾರ್ ಅದ್ಭುತ ಆರಂಭ ನೀಡಿದರು. ಮೊದಲ ಎಸೆತದಲ್ಲಿ, ಅವರು ಮಿಡ್-ಆಫ್ ಮೇಲೆ ಬೌಂಡರಿ ಬಾರಿಸಿದರೆ, ಮುಂದಿನ ಎಸೆತದಲ್ಲಿ ಅವರು ಫೈನ್ ಲೆಗ್ ಮೇಲೆ ಸಿಕ್ಸರ್ ಬಾರಿಸಿದರು. ಆದರೆ, ನಾಲ್ಕನೇ ಎಸೆತದಲ್ಲಿ ಶ್ರೇಯಸ್ ಅಯ್ಯರ್ ಹಿಟ್ ವಿಕೆಟ್ ಆದರು. ಸೂರ್ಯ 9 ಎಸೆತಗಳಲ್ಲಿ 13 ರನ್ ಗಳಿಸಿ ಔಟಾದರು.
ಇಶ್ ಸೋಧಿ ದುಬಾರಿ
ಇಶ್ ಸೋಧಿ ಅವರ ದುಬಾರಿ ಓವರ್‌ನಲ್ಲಿ ಅವರು 15 ರನ್ ಬಿಟ್ಟುಕೊಟ್ಟರು. ಓವರ್‌ನ ಮೊದಲ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಎಕ್ಸ್‌ಟ್ರಾ ಕವರ್‌ನಲ್ಲಿ ಬೌಂಡರಿ ಬಾರಿಸಿದರು. ನಾಲ್ಕನೇ ಎಸೆತದಲ್ಲಿ ಶ್ರೇಯಸ್ ಅಯ್ಯರ್ ಲಾಂಗ್ ಆಫ್ನಲ್ಲಿ ಸಿಕ್ಸರ್ ಬಾರಿಸಿದರು.
ಸ್ಯಾಂಟ್ನರ್ಗೆ ಬೌಂಡರಿ
11ನೇ ಓವರ್‌ನಲ್ಲಿ ಸ್ಯಾಂಟ್ನರ್ ಏಳು ರನ್ ನೀಡಿದರು. ಓವರ್‌ನ ಮೊದಲ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ವಿಶೇಷ ಶೈಲಿಯಲ್ಲಿ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಫೋರ್ ಹೊಡೆದರು.
ಇಶಾನ್ ಕಿಶನ್ ಔಟ್
10ನೇ ಓವರ್‌ನಲ್ಲಿ ಇಶ್ ಸೋಧಿ ಅಂತಿಮವಾಗಿ ಇಶಾನ್ ಕಿಶನ್ರನ್ನು ಬಲಿಪಶು ಮಾಡಿದರು. ಇಶಾನ್ ಕಟ್ ಶಾಟ್ ಆಡಲು ಪ್ರಯತ್ನಿಸಿದರು, ಚೆಂಡು ಶಾರ್ಟ್ ಥರ್ಡ್ ಮ್ಯಾನ್ ಕಡೆಗೆ ಹೋಯಿತು ಮತ್ತು ಸೌದಿ ಉತ್ತಮ ಕ್ಯಾಚ್ ಪಡೆದರು. ಇಶಾನ್ 31 ಎಸೆತಗಳಲ್ಲಿ 36 ರನ್ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸಹ ಹೊಡೆದರು.
ಸೂರ್ಯ ಸಿಕ್ಸರ್
ಮಿಚೆಲ್ ಸ್ಯಾಂಟ್ನರ್ ಒಂಬತ್ತನೇ ಓವರ್‌ನಲ್ಲಿ 10 ರನ್ ನೀಡಿದರು. ಅವರ ಓವರ್ ಚೆನ್ನಾಗಿ ಸಾಗುತ್ತಿತ್ತು ಆದರೆ ಕೊನೆಯ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಸಿಕ್ಸರ್ ಬಾರಿಸುವ ಮೂಲಕ ಸ್ಯಾಂಟ್ನರ್ ಅವರ ಶ್ರಮವನ್ನು ನಿಷ್ಪ್ರಯೋಜಕಗೊಳಿಸಿದರು. ಸೂರ್ಯ ಡೀಪ್ ಬ್ಯಾಕ್‌ವರ್ಡ್ ಪಾಯಿಂಟ್ ಮೇಲೆ ಸಿಕ್ಸರ್ ಬಾರಿಸಿದರು.
ಇಶಾನ್ ಬಚಾವ್
ಮಳೆಯ ನಂತರ ಆಟ ಆರಂಭವಾಗಿದೆ. ನೀಶಮ್ ಅವರ ಓವರ್‌ನ ಉಳಿದ ಎಸೆತಗಳಲ್ಲಿ ಕೇವಲ ಎರಡು ರನ್‌ಗಳು ಬಂದವು. ಮುಂದಿನ ಓವರ್‌ನ ಮೊದಲ ಎಸೆತದಲ್ಲಿಯೇ ಇಶಾನ್ ಕಿಶನ್‌ಗೆ ಎಲ್‌ಬಿಡಬ್ಲ್ಯೂ ಔಟ್ ನೀಡಲಾಯಿತು. ಆದರೆ ಇಶಾನ್ ರಿವ್ಯೂ ತೆಗೆದುಕೊಳ್ಳುತ್ತಾರೆ. ಚೆಂಡು ಬ್ಯಾಟ್‌ಗೆ ತಾಗದಿದ್ದರೂ ಆಫ್ ಸ್ಟಂಪ್‌ನ ಮೇಲೆ ಚೆಂಡು ಹೊರ ಹೊಗುತ್ತಿದ್ದು ರಿವ್ಯೂವ್ನಲ್ಲಿ ಕಂಡುಬಂತು.
ಕಿಶನ್ ಸತತ 2 ಬೌಂಡರಿ
ಇಶಾನ್ ಕಿಶನ್ ಜೇಮ್ಸ್ ನೀಶಮ್ ಓವರನ್ನು ಸತತ ಎರಡು ಬೌಂಡರಿಗಳೊಂದಿಗೆ ಆರಂಭಿಸಿದರು. ಮೊದಲ ಎಸೆತದಲ್ಲಿ ಸ್ವೀಪ್ ಕವರ್ ಮೂಲಕ ಬೌಡರಿ ಬಾರಿಸಿದರೆ, ಮುಂದಿನ ಎಸೆತದಲ್ಲಿ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್‌ಗೆ ಬೌಂಡರಿ ಎಳೆದರು.
ಪಂತ್ ಪೆವಿಲಿಯನ್ಗೆ
ಫರ್ಗುಸನ್ ಆರನೇ ಓವರ್‌ನ ಮೊದಲ ಎಸೆತದಲ್ಲಿ ಪಂತ್ ಅವರನ್ನು ಔಟ್ ಮಾಡುವ ಮೂಲಕ ತಂಡಕ್ಕೆ ಮೊದಲ ಯಶಸ್ಸನ್ನು ನೀಡಿದರು. ಪಂತ್ ಎಳೆಯುವ ಮೂಲಕ ಚೆಂಡನ್ನು ಆಡಿದರು, ಟಿಮ್ ಸೌಥಿ ಶಾರ್ಟ್ ಥರ್ಡ್ ಮ್ಯಾನ್‌ನಲ್ಲಿ ರನ್ನಿಂಗ್ ಕ್ಯಾಚ್ ಪಡೆದರು. ಪಂತ್ 13 ಎಸೆತಗಳಲ್ಲಿ 6 ರನ್ ಗಳಿಸಲಷ್ಟೇ ಶಕ್ತರಾದರು.
ಇಶಾನ್ ಅದ್ಭುತ ಸಿಕ್ಸರ್
ಫರ್ಗುಸನ್ ತನ್ನ ಮೊದಲ ಓವರ್ ಎಸೆದರು. ಓವರ್‌ನ ಮೊದಲ ಎಸೆತದಲ್ಲಿ ಇಶಾನ್ ಕಿಶನ್ ಫ್ಲಿಕ್ ಮಾಡಿ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಸಿಕ್ಸರ್ ಬಾರಿಸಿದರು.
ಟಿಮ್ ಸೌಥಿಗೆ ಬೌಂಡರಿ
ಮೂರನೇ ಓವರ್‌ನಲ್ಲಿ ಟಿಮ್ ಸೌದಿ ಏಳು ರನ್ ನೀಡಿದರು. ಇಶಾನ್ ಕಿಶನ್ ಬೌಂಡರಿ ಮೂಲಕ ಓವರ್ ಆರಂಭಿಸಿದರು. ಕಾನ್ವೇ ಡೈವಿಂಗ್ ಮೂಲಕ ಚೆಂಡನ್ನು ನಿಲ್ಲಿಸಲು ಪ್ರಯತ್ನಿಸಿದರು ಆದರೆ ಅವರು ವಿಫಲರಾದರು. ಈ ಎರಡೂ ಆಟಗಾರರಿಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.
ಒಂದೇ ಓವರ್‌ನಲ್ಲಿ 3 ವೈಡ್
ಎರಡನೇ ಓವರ್‌ನಲ್ಲಿ ಆಡಮ್ ಮಿಲಮ್ 8 ರನ್ ನೀಡಿದರು. ಇದು ಅವರ ಮೊದಲ ಓವರ್ ಆಗಿತ್ತು. ಈ ಒಂದು ಓವರ್‌ನಲ್ಲಿ ಅವರು ಮೂರು ವೈಡ್ ಬಾಲ್‌ಗಳನ್ನು ಎಸೆದರು. ನ್ಯೂಜಿಲೆಂಡ್ ಇದುವರೆಗೆ 8 ಹೆಚ್ಚುವರಿ ರನ್ ನೀಡಿದೆ
ಪಂತ್ ಬೌಂಡರಿ
ಮೊದಲ ಓವರ್ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಪಂತ್ ತಮ್ಮ ಖಾತೆ ತೆರೆದಿದ್ದಾರೆ.
ಭಾರತದ ಬ್ಯಾಟಿಂಗ್ ಆರಂಭ
ಭಾರತದ ಬ್ಯಾಟಿಂಗ್ ಆರಂಭವಾಗಿದ್ದು, ಇಶಾನ್ ಕಿಶನ್ ಹಾಗೂ ರಿಷಭ್ ಪಂತ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಟೀಮ್ ಸೌಥಿ ಬೌಲಿಂಗ್ ಆರಂಭಿಸಿದ್ದಾರೆ.
ನ್ಯೂಜಿಲೆಂಡ್ ಆಡುವ XI
ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಡೆವೊನ್ ಕಾನ್ವೆ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಆಡಮ್ ಮಿಲ್ನೆ, ಲಾಕಿ ಫರ್ಗುಸನ್.
ಟೀಂ ಇಂಡಿಯಾ
ಇಶಾನ್ ಕಿಶನ್, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ (ನಾಯಕ), ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್
2ND T20I. India XI: I Kishan, R Pant (wk), S Yadav, S Iyer, D Hooda, H Pandya (c), W Sundar, Y Chahal, A Singh, B Kumar, M Siraj. https://t.co/mIKkpCMN8R #NZvIND
— BCCI (@BCCI) November 20, 2022
ಟಾಸ್ ಗೆದ್ದ ನ್ಯೂಜಿಲೆಂಡ್
ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - Nov 20,2022 11:39 AM