India vs New Zealand: ಇಂದು ಭಾರತ- ನ್ಯೂಜಿಲೆಂಡ್ ದ್ವಿತೀಯ ಟಿ20: ಶುಭಾರಂಭ ಮಾಡುತ್ತಾ ಹಾರ್ದಿಕ್ ಪಡೆ

IND vs NZ 2nd T20I: ಟೀಮ್ ಇಂಡಿಯಾ ಪರ ಓಪನರ್​ಗಳಾಗಿ ಯಾರು ಆಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ರಿಷಬ್‌ ಪಂತ್‌, ಇಶಾನ್‌ ಕಿಶನ್‌ ಮತ್ತು ಶುಭ್‌ಮನ್‌ ಗಿಲ್‌ ಎಂಬ ಮೂರು ಆಯ್ಕೆಗಳಿವೆ. ಸಂಜು ಸ್ಯಾಮ್ಸನ್‌ ಮಿಂಚಬೇಕಾದ ಒತ್ತಡದಲ್ಲಿದ್ದಾರೆ.

India vs New Zealand: ಇಂದು ಭಾರತ- ನ್ಯೂಜಿಲೆಂಡ್ ದ್ವಿತೀಯ ಟಿ20: ಶುಭಾರಂಭ ಮಾಡುತ್ತಾ ಹಾರ್ದಿಕ್ ಪಡೆ
IND vs NZ 2nd T20I
Updated By: Vinay Bhat

Updated on: Nov 20, 2022 | 7:52 AM

ಮೌಂಟ್ ಮೌಂಗನು (Mount Maunganui) ಬೇ ಓವಲ್ ಮೈದಾನದಲ್ಲಿ ಇಂದು ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವೆ ಎರಡನೇ ಟಿ20 ಪಂದ್ಯ ಆಯೋಜಿಸಲಾಗಿದೆ. ಮೂರು ಪಂದ್ಯಗಳ ಟಿ20 ಸರಣಿ ಪೈಕಿ ಮೊದಲ ಕದನ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿತ್ತು. ವೆಲ್ಲಿಂಗ್ಟನ್​ನಲ್ಲಿ (Wellington) ಎಡೆಬಿಡದೆ ಮಳೆ ಸುರಿದು ಮೈದಾನದಲ್ಲಿ ಹೆಜ್ಜೆ ಇಡಲೂ ಸಾಧ್ಯವಾಗಲಿಲ್ಲ. ಬಳಿಕ ಒಂದೂ ಎಸೆತವಿಲ್ಲದೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಹೀಗಾಗಿ ದ್ವಿತೀಯ ಟಿ20 ಪಂದ್ಯದ ಮೇಲೆ ಉಭಯ ತಂಡಗಳು ಕಣ್ಣಿಟ್ಟಿದೆ. ಉಳಿದಿರುವುದು ಎರಡು ಪಂದ್ಯ ಆಗಿರುವುದರಿಂದ ಸರಣಿ ವಶಪಡಿಸಿಕೊಳ್ಳ ಬೇಕಾದಲ್ಲಿ ಒಂದು ತಂಡ ಈ ಎರಡೂ ಮ್ಯಾಚ್ ಗೆಲ್ಲಲೇ ಬೇಕು.

ಟೀಮ್ ಇಂಡಿಯಾ ಪರ ಓಪನರ್​ಗಳಾಗಿ ಯಾರು ಆಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ರಿಷಬ್‌ ಪಂತ್‌, ಇಶಾನ್‌ ಕಿಶನ್‌ ಮತ್ತು ಶುಭ್‌ಮನ್‌ ಗಿಲ್‌ ಎಂಬ ಮೂರು ಆಯ್ಕೆಗಳಿವೆ. ಸಂಜು ಸ್ಯಾಮ್ಸನ್‌ ಮಿಂಚಬೇಕಾದ ಒತ್ತಡದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್, ಹಾರ್ದಿಕ್, ಶ್ರೇಯಸ್ ಅಯ್ಯರ್ಮ ದೀಪಕ್ ಹೂಡ ನಂತರದ ಸ್ಥಾನದಲ್ಲಿದ್ದಾರೆ. ಆಲ್ರೌಂಡರ್ ಜಾಗಕ್ಕೆ ವಾಷಿಂಗ್ಟನ್ ಸುಂದರ್ ಆಯ್ಕೆ ಕೂಡ ಇದೆ.

ಟೀಮ್ ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್‌ ಕುಮಾರ್‌ ಮತ್ತು ಅರ್ಷದೀಪ್‌ ಸಿಂಗ್‌ ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸುವ ನಿರೀಕ್ಷೆಯಿದೆ. ಹರ್ಷಲ್‌ ಪಟೇಲ್‌ ಮತ್ತು ಮೊಹಮ್ಮದ್‌ ಸಿರಾಜ್‌ ಪೈಕಿ ಯಾರಿಗೆ ಸ್ಥಾನ ಎಂಬುದು ನೋಡಬೇಕಿದೆ. ಅಂತೆಯೆ ಟಿ20 ವಿಶ್ವಕಪ್​ನಲ್ಲಿ ಒಂದೂ ಪಂದ್ಯವನ್ನು ಆಡದ ಯುಜ್ವೇಂದ್ರ ಚಹಲ್ ಇಂದು ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ
FIFA World Cup 2022: ಕಾನೂನುಬಾಹಿರವಾಗಿ ಪ್ರಸಾರ ಮಾಡಲು ಮುಂದಾಗಿದ್ದ 12,000ಕ್ಕೂ ಹೆಚ್ಚು ವೆಬ್‌ಸೈಟ್‌ಗಳಿಗೆ ಕೋರ್ಟ್ ಬ್ರೇಕ್
ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ; ತೂಕ ಇಳಿಸಲು ಮುಂದಾದ ರೋಹಿತ್ ಶರ್ಮಾ; ಫೋಟೋ ನೋಡಿ
Asian Cup: ಏಷ್ಯನ್ ಕಪ್​ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಮನಿಕಾ ಬಾತ್ರಾ..!
AUS vs ENG: ವಿಶ್ವ ವಿಜೇತರಿಗೆ ಸರಣಿ ಸೋಲಿನ ಮುಖಭಂಗ..! ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ

ನ್ಯೂಜಿಲೆಂಡ್ ತಂಡ ಸ್ಟಾರ್ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಮತ್ತು ಸ್ಟಾರ್ ಬೌಲರ್ ಟ್ರೆಂಟ್ ಬೌಲ್ಟ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ಕೇನ್‌ ವಿಲಿಯಮ್ಸನ್‌ ನಾಯಕತ್ವ ತಂಡದಕ್ಕಿದ್ದು, ಫಿನ್‌ ಅಲೆನ್‌, ಡೆವೊನ್‌ ಕಾನ್ವೆ, ಗ್ಲೆನ್ ಫಿಲಿಪ್ಸ್, ಡ್ಯಾರಿ ಮಿಚೆಲ್​ರಂತಹ ಅಪಾಯಕಾರಿ ಬ್ಯಾಟರ್​ಗಳಿದ್ದಾರೆ. ಟಿಮ್ ಸೌಥೀ, ಮಿಚೆಲ್ ಸ್ಯಾಂಟನರ್, ಆ್ಯಡಂ ಮಿಲ್ನೆ, ಲೂಕಿ ಫರ್ಗುಸನ್​ರಂತಹ ಘಾತಕ ಬೌಲರ್ ಕೂಡ ಇದ್ದಾರೆ.

ಉಭಯ ತಂಡಗಳು:

ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ (ಉಪನಾಯಕ/ ವಿಕೆಟ್‌ಕೀಪರ್‌), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್‌), ವಾಷಿಂಗ್ಟನ್‌ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್.

ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಲಾಕಿ ಫರ್ಗುಸನ್, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಬ್ಲೇರ್ ಟಿಕ್ನರ್.

Published On - 7:52 am, Sun, 20 November 22