ಫಿಫಾ ಫುಟ್ಬಾಲ್ ವಿಶ್ವಕಪ್ (fifa world cup 2022 )ಆರಂಭಕ್ಕೆ ಇನ್ನು ಕೇವಲ ಒಂದೇ ದಿನ ಬಾಕಿ ಇದೆ. ಭಾನುವಾರ ಬಹುನಿರೀಕ್ಷಿತ ಕಾಲ್ಚೆಂಡಿನ ಮಹಾಸಮರಕ್ಕೆ ಚಾಲನೆ ದೊರೆಯಲಿದ್ದು ಕ್ಷಣಗಣನೇ ಆರಂಭವಾಗಿದೆ. ಇನ್ನು ಪ್ರಸಾರದ ಹಕ್ಕನ್ನು ವಯಾಕಾಮ್18 ಪಡೆದುಕೊಂಡಿದೆ. ಆದ್ರೆ, FIFA ವಿಶ್ವಕಪ್ 2022 ಅನ್ನು ಕಾನೂನುಬಾಹಿರವಾಗಿ ಪ್ರಸಾರ ಮಾಡಲು ಮುಂದಾಗಿದ್ದ 12,000 ಕ್ಕೂ ಹೆಚ್ಚು ವೆಬ್‌ಸೈಟ್‌ಗಳಿಗೆ ಮದ್ರಾಸ್ ಹೈಕೋರ್ಟ್ ಬ್ರೇಕ್ ಹಾಕಿದೆ.
FIFA World Cup 2022: ಫಿಫಾ ವಿಶ್ವಕಪ್ 2022 ಆರಂಭಕ್ಕೆ ಒಂದೇ ದಿನ ಬಾಕಿ: ಟಿಕೆಟ್ ದರ ಕೇಳಿದ್ರೆ ಶಾಕ್ ಆಗ್ತೀರಾ
ಫಿಫಾ ಫುಟ್ಬಾಲ್ ವಿಶ್ವಕಪ್ನನ್ನು ಕಾನೂನುಬಾಹಿರವಾಗಿ ಪ್ರಸಾರ ಮಾಡಲು ಮುಂದಾಗಿದ್ದ 12,000 ಕ್ಕೂ ಹೆಚ್ಚು ವೆಬ್‌ಸೈಟ್‌ಗಳ ವಿರುದ್ಧ ವಯಾಕಾಮ್18 ಮದ್ರಾಸ್ ಹೈಕೋರ್ಟ್ ಮೊರೆ ಹೋಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, 12,000 ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಫಿಫಾ ವಿಶ್ವಕಪ್ 2022 ಅನ್ನು ಕಾನೂನುಬಾಹಿರವಾಗಿ ಪ್ರಸಾರ ಮಾಡದಂತೆ ನಿರ್ಬಂಧಿಸಿದೆ. ಈವೆಂಟ್‌ನ ಹಕ್ಕು ಸ್ವಾಮ್ಯದ ಏಕೈಕ ಮಾಲೀಕತ್ವವನ್ನು ವಯಾಕಾಮ್ ಹೊಂದಿದೆ. ಈ ಹಿನ್ನೆಲೆಯಲ್ಲಿ ಕಾನೂನುಬಾಹಿರವಾಗಿ ಪ್ರಸಾರ ಮಾಡದಂತೆ ನ್ಯಾಯಮೂರ್ತಿ ಎಂ ಸುಂದರ್ ಅವರು ಇಂದು(ನ.19) ಮಧ್ಯಂತರ ಆದೇಶ ಹೊರಡಿಸಿದರು.
ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಫಿಫಾ ವಿಶ್ವಕಪ್ 2022 ಅನ್ನು ಪ್ರಸಾರ ಮಾಡುವ ವಿಶೇಷ ಹಕ್ಕು ತನಗಿದೆ ಎಂದು ವಯಾಕಾಮ್ 18 ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಿತ್ತು. ಟೆಲಿವಿಷನ್ ಹಕ್ಕುಗಳು, ಬ್ರಾಡ್‌ಬ್ಯಾಂಡ್, ಮೊಬೈಲ್ ಪ್ರಸಾರ ಹಕ್ಕುಗಳು ಮತ್ತು ರೇಡಿಯೊ ಸೇರಿದಂತೆ ಅಗತ್ಯವಿರುವ ಎಲ್ಲಾ ಪ್ರಸಾರ ಹಕ್ಕುಗಳನ್ನು ಹೊಂದಿದೆ ಎಂದು ವಯಾಕಾಮ್ ಫಿಫಾ ನೀಡಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಿತ್ತು. ಇದು ತನ್ನ ವಿಶೇಷ ಹಕ್ಕುಸ್ವಾಮ್ಯಗಳನ್ನು ಉಲ್ಲಂಘಿಸುತ್ತಿದೆ ಎಂದು ಸುಮಾರು 12,037 ವೆಬ್‌ಸೈಟ್‌ಗಳ ಪಟ್ಟಿಯನ್ನು ಸಹ ಕೋರ್ಟ್ಗೆ ನೀಡಿತ್ತು.
ಕ್ರಿಸ್ಟಿಯಾನೋ ರೊನಾಲ್ಡೊಗೆ ನಿಷೇಧ! ಫಿಫಾ ವಿಶ್ವಕಪ್‌ಗೂ ಮುನ್ನ ಕಾಲ್ಚೆಂಡಿನ ಚತುರನಿಗೆ ಬಿಗ್ ಶಾಕ್
ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು, ಮಧ್ಯಂತರ ತಡೆಯಾಜ್ಞೆ ನೀಡದಿದ್ದರೆ ವಯಾಕಾಮ್‌ಗೆ ಅನ್ಯಾಯವಾಗುತ್ತದೆ. ಆದ್ದರಿಂದ ಆ ವೆಬ್‌ಸೈಟ್‌ಗಳು, ಇಂಟರ್ನೆಟ್ ಸೇವಾ ಪೂರೈಕೆದಾರರು ಅಥವಾ ಯಾವುದೇ ಇತರ ವ್ಯಕ್ತಿ FIFA ವಿಶ್ವಕಪ್ ಕ್ರೀಡಾಕೂಟದ ಮೇಲೆ ವಯಾಕಾಮ್‌ನ ಹಕ್ಕು ಸ್ವಾಮ್ಯವನ್ನು ಉಲ್ಲಂಘಿಸದಂತೆ ಆದೇಶಿಸಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ