IND vs NZ 2nd T20I: ಭಾರತ-ನ್ಯೂಜಿಲೆಂಡ್ ಎರಡನೇ ಟಿ20: ಎಷ್ಟು ಗಂಟೆಗೆ, ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

|

Updated on: Jan 28, 2023 | 5:11 PM

India vs New Zealand 2nd T20I: ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 0-1 ಅಂತರದ ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾಕ್ಕೆ ಮುಂದಿನ ಎರಡೂ ಪಂದ್ಯ ಬಹುಮುಖ್ಯವಾಗಿದೆ. ಹಾಗಾದರೆ ದ್ವಿತೀಯ ಟಿ20 ಯಾವಾಗ?, ಎಲ್ಲಿ ನಡೆಯಲಿದೆ? ಎಂಬುದನ್ನು ನೋಡೋಣ.

IND vs NZ 2nd T20I: ಭಾರತ-ನ್ಯೂಜಿಲೆಂಡ್ ಎರಡನೇ ಟಿ20: ಎಷ್ಟು ಗಂಟೆಗೆ, ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?
IND vs NZ 2nd T20
Follow us on

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ವೈಫಲ್ಯ ಅನುಭವಿಸಿ ಸೋಲುಂಡ ಭಾರತ (India vs New Zealand) ಇದೀಗ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ಪ್ರಥಮ ಟಿ20 ಯಲ್ಲಿ ಟೀಮ್ ಇಂಡಿಯಾ ಆರಂಭದಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿತಾದರೂ ಡೆತ್ ಓವರ್​ನಲ್ಲಿ ಸುರಿದ ರನ್ ಮಳೆ ತಂಡಕ್ಕೆ ಹಿನ್ನಡೆಯಾಯಿತು. ಡೇರಿಲ್ ಮಿಚೆಲ್ ಭಾರತಕ್ಕೆ ಕಂಟಕವಾಗಿ ಪರಿಣಮಿಸಿದರು. 177 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತದ ಆರಂಭ ಕೂಡ ಕಳಪೆ ಆಗಿತ್ತು. ಸೂರ್ಯಕುಮಾರ್, ವಾಷಿಂಗ್ಟನ್ ಸುಂದರ್ (Washington Sunder) ಹೋರಾಟಕ್ಕೂ ಫಲ ಸಿಗಲಿಲ್ಲ. ಇದೀಗ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 0-1 ಅಂತರದ ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾಕ್ಕೆ (Team India) ಮುಂದಿನ ಎರಡೂ ಪಂದ್ಯ ಬಹುಮುಖ್ಯವಾಗಿದೆ. ಹಾಗಾದರೆ ದ್ವಿತೀಯ ಟಿ20 ಯಾವಾಗ?, ಎಲ್ಲಿ ನಡೆಯಲಿದೆ? ಎಂಬುದನ್ನು ನೋಡೋಣ.

ಭಾರತ vs ನ್ಯೂಜಿಲೆಂಡ್ ಎರಡನೇ ಟಿ20 ಪಂದ್ಯ ಯಾವಾಗ ನಡೆಯಲಿದೆ?

ಈ ಪಂದ್ಯವು ಭಾನುವಾರ, ಜನವರಿ 29 ರಂದು ನಡೆಯಲಿದೆ.

ಇದನ್ನೂ ಓದಿ
IND vs NZ 2nd T20I: ಭಾರತ- ನ್ಯೂಜಿಲೆಂಡ್ ಎರಡನೇ ಟಿ20 ಪಂದ್ಯ ಯಾವಾಗ?, ಎಲ್ಲಿ ನಡೆಯಲಿದೆ?
IND vs NZ 1st T20I: ಭಾರತ-ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯದ ಕೆಲ ರೋಚಕ ಕ್ಷಣಗಳು
MS Dhoni: ರಾಂಚಿ ಮೈದಾನದಲ್ಲಿ ಮೊಳಗಿದ ಧೋನಿ ಕೂಗು: ಬಾಲ್ಕನಿಯಲ್ಲಿದ್ದ ಎಂಎಸ್​ಡಿ ಏನು ಮಾಡಿದ್ರು ನೋಡಿ
Hardik Pandya: ತಂಡದ ಸೋಲಿಗೆ ಅಚ್ಚರಿಯ ಕಾರಣ ತಿಳಿಸಿದ ಹಾರ್ದಿಕ್ ಪಾಂಡ್ಯ: ಏನಂದ್ರು ನೋಡಿ

ದ್ವಿತೀಯ ಟಿ20 ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟಿ20 ಪಂದ್ಯವು ಲಕ್ನೋದ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.

ಈ ಪಂದ್ಯವು ಎಷ್ಟು ಗಂಟೆಗೆ ಶುರುವಾಗಲಿದೆ?

ಭಾರತ vs ನ್ಯೂಜಿಲೆಂಡ್ ಎರಡನೇ ಟಿ20 ಪಂದ್ಯವು ಸಂಜೆ 07:00 ಗಂಟೆಗೆ ಪ್ರಾರಂಭವಾಗುತ್ತದೆ.

ಯಾವ ಚಾನೆಲ್​ನಲ್ಲಿ ನೇರಪ್ರಸಾರ ವೀಕ್ಷಿಸಬಹುದು?

ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಬಹುತೇಕ ಚಾನೆಲ್‌ಗಳಲ್ಲಿ ಭಾರತ vs ನ್ಯೂಜಿಲೆಂಡ್ ದ್ವಿತೀಯ ಟಿ20 ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು. ಇನ್ನು ಡಿಸ್ನಿ ಹಾಟ್​ಸ್ಟಾರ್ ಆ್ಯಪ್​ನಲ್ಲೂ ಲೈವ್ ಸ್ಟ್ರೀಮ್ ಇರಲಿದೆ.

VIDEO: ಅತ್ಯದ್ಭುತ ಕ್ಯಾಚ್​ ಹಿಡಿದು ಎಲ್ಲರನ್ನು ದಂಗಾಗಿಸಿದ ವಾಷಿಂಗ್ಟನ್ ಸುಂದರ್

ದ್ವಿತೀಯ ಟಿ20ಗೆ ಬದಲಾವಣೆ?:

ಮೊದಲ ಟಿ20ಯಲ್ಲಿ ಸೋತ ಪರಿಣಾಮ ದ್ವಿತೀಯ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಖಚಿತ ಎಂದೇ ಹೇಳಬಹುದು. 4 ಓವರ್​ಗೆ ಬರೋಬ್ಬರಿ 51 ರನ್ ನೀಡಿ ಬೌಲಿಂಗ್ ಸಾಕಷ್ಟು ದುಬಾರಿ ಆಗಿದ್ದ ಅರ್ಶ್​ದೀಪ್ ಸಿಂಗ್ ಪ್ಲೇಯಿಂಗ್ ಇಲೆವೆನ್​ನಿಂದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಇವರ ಜಾಗಕ್ಕೆ ಹೊಸ ಮುಖ ಮುಖೇಶ್ ಕುಮಾರ್​ಗೆ ಮಣೆ ಹಾಕಬಹುದು. ಅಂತೆಯೆ ರಾಹುಲ್ ತ್ರಿಪಾಠಿ ಜಾಗಕ್ಕೆ ಪೃಥ್ವಿ ಶಾ ಬಂದರೆ ಅಚ್ಚರಿ ಪಡಬೇಕಿಲ್ಲ. ಕುಲ್ದೀಪ್ ಯಾದವ್ 4 ಓವರ್​ಗೆ ಕೇವಲ 20 ರನ್ ನೀಡಿ 1 ವಿಕೆಟ್ ಪಡೆದ ಕಾರಣ ಯುಜ್ವೇಂದ್ರ ಚಹಲ್ ಮತ್ತೊಮ್ಮೆ ಬೆಂಚ್ ಕಾಯಬೇಕಿದೆ.

ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅರ್ಶ್​ದೀಪ್​ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.

ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್​ವೆಲ್, ಮಾರ್ಕ್ ಚಾಪ್​ಮನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಡೇನ್ ಕ್ಲೀವರ್, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಬೆಂಜಮಿನ್ ಲಿಸ್ಟರ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರಿಪ್ಪನ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್ನರ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ