AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಅತ್ಯದ್ಭುತ ಕ್ಯಾಚ್​ ಹಿಡಿದು ಎಲ್ಲರನ್ನು ದಂಗಾಗಿಸಿದ ವಾಷಿಂಗ್ಟನ್ ಸುಂದರ್

Washington Sundar Catch: 5ನೇ ಓವರ್​ ಎಸೆದ ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಭರ್ಜರಿ ಹೊಡೆತ ಬಾರಿಸಲು ಯತ್ನಿಸಿದ ಫಿನ್ ಅಲೆನ್ (35) ಸೂರ್ಯಕುಮಾರ್ ಯಾದವ್​ಗೆ ಕ್ಯಾಚ್ ನೀಡಿದರು.

VIDEO: ಅತ್ಯದ್ಭುತ ಕ್ಯಾಚ್​ ಹಿಡಿದು ಎಲ್ಲರನ್ನು ದಂಗಾಗಿಸಿದ ವಾಷಿಂಗ್ಟನ್ ಸುಂದರ್
Washington Sundar Catch
TV9 Web
| Edited By: |

Updated on:Jan 27, 2023 | 9:04 PM

Share

India vs New Zealand 1st T20: ರಾಂಚಿಯಲ್ಲಿ ನಡೆದ ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಆಟಗಾರ ವಾಷಿಂಗ್ಟನ್ ಸುಂದರ್ (Washington Sundar Catch) ಅತ್ಯದ್ಭುತ ಕ್ಯಾಚ್ ಹಿಡಿದು ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ಡೆವೊನ್ ಕಾನ್ವೆ ಹಾಗೂ ಫಿನ್ ಅಲೆನ್ ಸ್ಪೋಟಕ ಆರಂಭ ಒದಗಿಸಿದ್ದರು. ಕೇವಲ 4 ಓವರ್​ಗಳಲ್ಲಿ 40 ರನ್​ ಚಚ್ಚಿದ ನ್ಯೂಜಿಲೆಂಡ್ ಆರಂಭಿಕರು ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದ್ದರು. ಆದರೆ ಈ ವೇಳೆ ಟೀಮ್ ಇಂಡಿಯಾ ನಾಯಕ ಮಾಡಿದ ಬೌಲಿಂಗ್ ಬದಲಾವಣೆ ಫಲ ನೀಡಿತು.

5ನೇ ಓವರ್​ ಎಸೆದ ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಭರ್ಜರಿ ಹೊಡೆತ ಬಾರಿಸಲು ಯತ್ನಿಸಿದ ಫಿನ್ ಅಲೆನ್ (35) ಸೂರ್ಯಕುಮಾರ್ ಯಾದವ್​ಗೆ ಕ್ಯಾಚ್ ನೀಡಿದರು. ಆ ಬಳಿಕ ಬಂದ ಮಾರ್ಕ್ ಚಾಪ್​ಮನ್​ರನ್ನು ಇಕ್ಕಟಿಗೆ ಸಿಲುಕಿಸುವಲ್ಲಿ ವಾಷಿಂಗ್ಟನ್ ಸುಂದರ್ ಯಶಸ್ವಿಯಾಗಿದ್ದರು. ಬೌನ್ಸಿ ಸ್ಪಿನ್ ಮೋಡಿ ಮಾಡಿದ್ದ ಸುಂದರ್ 6ನೇ ಎಸೆತದಲ್ಲಿ ಚಾಪ್​ಮನ್​ರನ್ನು ಬಲೆಗೆ ಬೀಳಿಸಿದರು. ಅದು ಕೂಡ ಅತ್ಯುತ್ತಮ ಕ್ಯಾಚ್ ಮೂಲಕ ಎಂಬುದೇ ವಿಶೇಷ.

ಇದನ್ನೂ ಓದಿ
Image
IPLನ ಒಂದು ಪಂದ್ಯಕ್ಕೆ 107 ಕೋಟಿ ರೂ: PSL ನ 1 ಪಂದ್ಯಕ್ಕೆ ಎಷ್ಟು ಗೊತ್ತಾ?
Image
ಟೀಮ್ ಇಂಡಿಯಾ ಪರ ಅತೀ ಹೆಚ್ಚು ಬಾರಿ 150 ಕ್ಕೂ ಅಧಿಕ ರನ್ ಬಾರಿಸಿದ್ದು ಯಾರು ಗೊತ್ತಾ?
Image
Team India: ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
Image
Virat Kohli: ಕಿಂಗ್ ಕೊಹ್ಲಿಯ ಅಬ್ಬರಕ್ಕೆ ಸಚಿನ್ ದಾಖಲೆ ಉಡೀಸ್

ಸುಂದರ್​ 6ನೇ ಎಸೆತವನ್ನು ವಿಕೆಟ್​ನತ್ತ ಒಳ ನುಗ್ಗುವಂತೆ ಎಸೆದಿದ್ದರು. ಇದನ್ನು ಚಾಪ್​ಮನ್ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದ್ದರು. ಆದರೆ ಚೆಂಡು ಬೌಲರ್​ನ ಬಲ ಭಾಗದತ್ತ ಚಿಮ್ಮಿತು. ಕ್ಷಣಾರ್ಧದಲ್ಲೇ ಅತ್ಯದ್ಭುತ  ಡೈವ್ ಮಾಡುವ ಮೂಲಕ ವಾಷಿಂಗ್ಟನ್ ಸುಂದರ್ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದರು.

ಇದೀಗ ಈ ಅದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಸುಂದರ್ ಅವರ ಫೀಲ್ಡಿಂಗ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಇನ್ನು ಈ ಪಂದ್ಯದಲ್ಲಿ ನಾಲ್ಕು ಓವರ್ ಬೌಲಿಂಗ್ ಮಾಡಿದ್ದ ವಾಷಿಂಗ್ಟನ್ ಸುಂದರ್ ಕೇವಲ 22 ರನ್​ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದರು.

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಶುಭ್​ಮನ್ ಗಿಲ್, ಇಶಾನ್ ಕಿಶನ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಕುಲ್ದೀಪ್ ಯಾದವ್

ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಫಿನ್ ಅಲೆನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್​ಮನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್(ನಾಯಕ), ಮೈಕೆಲ್ ಬ್ರೇಸ್​ವೆಲ್, ಜಾಕೋಬ್ ಡಫಿ, ಇಶ್ ಸೋಧಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.

Published On - 8:40 pm, Fri, 27 January 23

ಕಾಡಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಎತ್ತಲು ಯತ್ನಿಸಿದ ಆನೆ
ಕಾಡಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಎತ್ತಲು ಯತ್ನಿಸಿದ ಆನೆ
ಐತಿಹಾಸಿಕ ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಇಂಟ್ರೆಸ್ಟಿಂಗ್ ಮಾಹಿತಿ
ಐತಿಹಾಸಿಕ ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಇಂಟ್ರೆಸ್ಟಿಂಗ್ ಮಾಹಿತಿ
ಮದುವೆ ಮಾಡಿಸಿ ಎಂದು ವಿದ್ಯುತ್ ತಂತಿ ಹಿಡಿದು ನೇತಾಡಿದ 15 ವರ್ಷದ ಬಾಲಕ
ಮದುವೆ ಮಾಡಿಸಿ ಎಂದು ವಿದ್ಯುತ್ ತಂತಿ ಹಿಡಿದು ನೇತಾಡಿದ 15 ವರ್ಷದ ಬಾಲಕ
ಕೇಂದ್ರವೇ ಮೆಟ್ರೋ ದರ ಏರಿಸಿದ್ದಾದ್ರೆ ರಾಜ್ಯ ಇವತ್ತೇ ಪತ್ರ ಬರೆಯಲಿ
ಕೇಂದ್ರವೇ ಮೆಟ್ರೋ ದರ ಏರಿಸಿದ್ದಾದ್ರೆ ರಾಜ್ಯ ಇವತ್ತೇ ಪತ್ರ ಬರೆಯಲಿ
ಬಿರಿಯಾನಿ ಕೊಟ್ಟು ಸಿನಿಮಾ ತೋರಿಸ್ತಿದ್ದಾರೆ: ನಿರ್ಮಾಪಕರ ಟೀಕಿಸಿದ ಕೆ ಮಂಜು
ಬಿರಿಯಾನಿ ಕೊಟ್ಟು ಸಿನಿಮಾ ತೋರಿಸ್ತಿದ್ದಾರೆ: ನಿರ್ಮಾಪಕರ ಟೀಕಿಸಿದ ಕೆ ಮಂಜು
ಚಂದ್ರಚೂಡ್ ವಿವಾದ: ಸುದೀಪ್ ಬಗ್ಗೆ ಮಾತನಾಡಿದ್ದಕ್ಕೆ ಕೆ. ಮಂಜು ಸ್ಪಷ್ಟನೆ
ಚಂದ್ರಚೂಡ್ ವಿವಾದ: ಸುದೀಪ್ ಬಗ್ಗೆ ಮಾತನಾಡಿದ್ದಕ್ಕೆ ಕೆ. ಮಂಜು ಸ್ಪಷ್ಟನೆ
ರಸ್ತೆಗಳು ಮಾತ್ರವಲ್ಲ,ಮನಷ್ಯರು ತಿರುಗಾಡುವ ಫುಟ್​​​ಬಾತ್​​ಗಳು ಸರಿ ಇಲ್ಲ
ರಸ್ತೆಗಳು ಮಾತ್ರವಲ್ಲ,ಮನಷ್ಯರು ತಿರುಗಾಡುವ ಫುಟ್​​​ಬಾತ್​​ಗಳು ಸರಿ ಇಲ್ಲ
ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್​​ ಇಟ್ಟಿದ್ದ ಯುವಕನ ಬಂಧನ
ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್​​ ಇಟ್ಟಿದ್ದ ಯುವಕನ ಬಂಧನ
ಪ್ರೀತಿಗೆ ಒಪ್ಪಿಲ್ಲವೆಂದು ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ
ಪ್ರೀತಿಗೆ ಒಪ್ಪಿಲ್ಲವೆಂದು ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ
ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ
ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ