ಈ ತಂಡದಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯನಾಗಿ ರಿಷಭ್ ಪಂತ್ ಕಾಣಿಸಿಕೊಂಡಿದ್ದಾರೆ. 2022 ರಲ್ಲಿ 12 ಟೆಸ್ಟ್ ಇನಿಂಗ್ಸ್ ಆಡಿರುವ ಪಂತ್ 90.90 ಸರಾಸರಿಯಲ್ಲಿ ಒಟ್ಟು 680 ರನ್ ಕಲೆಹಾಕಿದ್ದರು. ಈ ವೇಳೆ 23 ಸಿಕ್ಸ್, 23 ಕ್ಯಾಚ್ ಹಾಗೂ 6 ಸ್ಟಂಪಿಂಗ್ಗಳನ್ನು ಕೂಡ ಮಾಡಿದ್ದರು. ಹೀಗಾಗಿಯೇ ಐಸಿಸಿ ಟೆಸ್ಟ್ ತಂಡದಲ್ಲಿ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ಗೆ ಸ್ಥಾನ ನೀಡಲಾಗಿದೆ. ಹಾಗಿದ್ರೆ ಐಸಿಸಿ 2022ರ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡ ಆಟಗಾರರು ಯಾರೆಲ್ಲಾ ನೋಡೋಣ...