AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ: ಟೀಂ ಇಂಡಿಯಾ ಬೌಲರ್​ಗಳ ಅಬ್ಬರ; 62 ರನ್​ಗಳಿಗೆ ಮಂಡಿಯೂರಿದ ಕಿವೀಸ್

IND vs NZ: ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ 325 ರನ್‌ಗಳಿಗೆ ಉತ್ತರವಾಗಿ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 62 ರನ್‌ಗಳಿಗೆ ಕುಸಿಯಿತು.

IND vs NZ: ಟೀಂ ಇಂಡಿಯಾ ಬೌಲರ್​ಗಳ ಅಬ್ಬರ; 62 ರನ್​ಗಳಿಗೆ ಮಂಡಿಯೂರಿದ ಕಿವೀಸ್
ಭಾರತ ತಂಡ
TV9 Web
| Updated By: ಪೃಥ್ವಿಶಂಕರ|

Updated on:Dec 04, 2021 | 3:53 PM

Share

ಮುಂಬೈನ ವಾಂಖೆಡೆ ಮೈದಾನದಲ್ಲಿ (India vs New Zealand, 2nd Test) ಭಾರತೀಯ ಬೌಲರ್‌ಗಳು ವಿಧ್ವಂಸಕ ಕೃತ್ಯ ಎಸಗಿದ್ದು, ವಿಶ್ವ ನಂ.1 ಟೆಸ್ಟ್ ತಂಡ ನ್ಯೂಜಿಲೆಂಡ್ ಹೇಳ ಹೆಸರಿಲ್ಲದ್ದಾಂಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ 325 ರನ್‌ಗಳಿಗೆ ಉತ್ತರವಾಗಿ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 62 ರನ್‌ಗಳಿಗೆ ಕುಸಿಯಿತು. ಈಗ ಭಾರತದಲ್ಲಿ ಅತಿ ಕಡಿಮೆ ಟೆಸ್ಟ್ ಸ್ಕೋರ್‌ನ ಅನಗತ್ಯ ದಾಖಲೆಯು ನ್ಯೂಜಿಲೆಂಡ್‌ನ ಹೆಸರಾಗಿದೆ. 1987 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದೆಹಲಿ ಟೆಸ್ಟ್‌ನಲ್ಲಿ ಭಾರತ ತಂಡವು 75 ರನ್‌ಗಳಿಗೆ ಆಲೌಟ್ ಆಗಿತ್ತು, ಇದು ಭಾರತದ ನೆಲದಲ್ಲಿ ಅತ್ಯಂತ ಕಡಿಮೆ ಟೆಸ್ಟ್ ಸ್ಕೋರ್ ಆಗಿತ್ತು.

ಮುಂಬೈನಲ್ಲಿ ಭಾರತದ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು. ನ್ಯೂಜಿಲೆಂಡ್‌ನ ಅಗ್ರ 3 ಬ್ಯಾಟ್ಸ್‌ಮನ್‌ಗಳನ್ನು ಮೊಹಮ್ಮದ್ ಸಿರಾಜ್ ಬಲಿ ಪಡೆದರು. ಸಿರಾಜ್ ಟಾಮ್ ಲ್ಯಾಥಮ್, ವಿಲ್ ಯಂಗ್ ಮತ್ತು ರಾಸ್ ಟೇಲರ್ ಅವರ ಪ್ರಮುಖ ವಿಕೆಟ್‌ಗಳನ್ನು ಪಡೆದರು. ಇದಾದ ನಂತರ ಆರ್ ಅಶ್ವಿನ್, ಜಯಂತ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರ ಸ್ಪಿನ್ ತ್ರಿವಳಿ ಕೆಲಸ ಮಾಡಿದರು. ವಿಧ್ವಂಸಕ ಬೌಲಿಂಗ್ ಮಾಡಿದ ಅಶ್ವಿನ್ ಕೇವಲ 8 ರನ್ ನೀಡಿ 4 ವಿಕೆಟ್ ಪಡೆದರು. ಅಕ್ಷರ್ ಪಟೇಲ್ 2 ಮತ್ತು ಜಯಂತ್ ಯಾದವ್ ಒಂದು ವಿಕೆಟ್ ಪಡೆದರು.

ಲ್ಯಾಥಮ್-ಯಂಗ್ ದಿಗ್ಭ್ರಮೆಗೊಂಡರು ಕಾನ್ಪುರ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕದ ಜೊತೆಯಾಟವಾಡಿದ ವಿಲ್ ಯಂಗ್ ಮತ್ತು ಟಾಮ್ ಲ್ಯಾಥಮ್ ಮುಂಬೈನಲ್ಲಿ ಅಬ್ಬರಿಸಲಾಗಲಿಲ್ಲ. ನಾಲ್ಕನೇ ಓವರ್​ನಲ್ಲಿ ಮೊಹಮ್ಮದ್ ಸಿರಾಜ್ ಅವರ ವೇಗದ ಎಸೆತದಲ್ಲಿ ವಿಲ್ ಯಂಗ್ ಕೊಹ್ಲಿ ಕೈಗೆ ಕ್ಯಾಚ್ ನೀಡಿದರು. ಸಿರಾಜ್ ಎಸೆದ ಅದೇ ಓವರ್‌ನ ಕೊನೆಯ ಎಸೆತದಲ್ಲಿ ಲ್ಯಾಥಮ್ ಕೂಡ ಶ್ರೇಯಸ್ ಅಯ್ಯರ್‌ಗೆ ಕ್ಯಾಚ್ ನೀಡಿದರು.

ಇದಾದ ನಂತರ ಕ್ರೀಸ್‌ಗೆ ಬಂದ ರಾಸ್ ಟೇಲರ್ ಆಟವೂ ಎರಡು ಎಸೆತಗಳ ನಂತರ ಮುಗಿಯಿತು. ಸಿರಾಜ್ ಅತ್ಯುತ್ತಮ ಎಸೆತದಲ್ಲಿ ಟೇಲರ್ ಅವರನ್ನು ಬೌಲ್ಡ್ ಮಾಡಿದರು. 9ನೇ ಓವರ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು ಅಕ್ಸರ್ ಪಟೇಲ್‌ಗೆ ಚೆಂಡನ್ನು ನೀಡಿದರು. ಈ ಸ್ಪಿನ್ನರ್ ಡಾರೆಲ್ ಮಿಚೆಲ್ ಅವರನ್ನು ಕೇವಲ 8 ರನ್‌ಗಳಿಗೆ ಔಟ್ ಮಾಡಿದರು. ಇದಾದ ಬಳಿಕ ಹೆನ್ರಿ ನಿಕೋಲ್ಸ್ ಮತ್ತು ರಚಿನ್ ರವೀಂದ್ರ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ ನ್ಯೂಜಿಲೆಂಡ್ ಬ್ಯಾಟಿಂಗ್ ಬೆನ್ನೇಲಬು ಮುರಿದರು. ನ್ಯೂಜಿಲೆಂಡ್ ಕೇವಲ 38 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. 20ನೇ ಓವರ್‌ನಲ್ಲಿ ಟಾಮ್ ಬ್ಲಂಡೆಲ್ ಮತ್ತು ಟಿಮ್ ಸೌಥಿ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ ನ್ಯೂಜಿಲೆಂಡ್‌ನ ಎಲ್ಲಾ ಭರವಸೆಗಳನ್ನು ನಿಲ್ಲಿಸಿದರು. ಕೈಲ್ ಜೇಮ್ಸನ್ ಹೇಗೋ 17 ರನ್ ಗಳಿಸಿದರು. ಆದರೆ 28 ನೇ ಓವರ್‌ನಲ್ಲಿ ಅವರ ಜೊತೆಗಾರ ವಿಲಿಯಂ ಸೋಮರ್‌ವಿಲ್ಲೆ ಮತ್ತು ನಂತರ ಸ್ವತಃ ಜೇಮ್ಸನ್ ಔಟಾದರು. ಇದರ ಫಲಿತಾಂಶವು ಭಾರತದ ವಿರುದ್ಧ ನ್ಯೂಜಿಲೆಂಡ್‌ನ ಅತ್ಯಂತ ಕಡಿಮೆ ಟೆಸ್ಟ್ ಸ್ಕೋರ್ ಆಗಿದೆ ಮತ್ತು ಇದು ಯಾವುದೇ ಏಷ್ಯನ್ ತಂಡದ ವಿರುದ್ಧ ಅವರ ಕಡಿಮೆ ಟೆಸ್ಟ್ ಸ್ಕೋರ್ ಆಗಿದೆ.

Published On - 3:51 pm, Sat, 4 December 21

ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ