IND vs NZ: ದಾಖಲೆ ವೀರ ಎಜಾಜ್ ಪಟೇಲ್​ಗೆ ಕ್ರಿಕೆಟ್ ದಂತಕಥೆಗಳಿಂದ ಅಭಿನಂದನೆಯ ಮಹಾಪೂರ

IND vs NZ: ಟ್ವಿಟರ್​ನಲ್ಲಿ ಅಜಾಜ್ ಬೌಲಿಂಗ್ ಕೊಂಡಾಡಿದ ಕುಂಬ್ಳೆ, 10 ವಿಕೆಟ್ ಕ್ಲಬ್​ಗೆ ಸುಸ್ವಾಗತ. ಅದ್ಭುತ ಬೌಲಿಂಗ್ ಮಾಡಿದ್ದೀಯಾ ಎಂದು ಹೊಗಳಿದರು.

IND vs NZ: ದಾಖಲೆ ವೀರ ಎಜಾಜ್ ಪಟೇಲ್​ಗೆ ಕ್ರಿಕೆಟ್ ದಂತಕಥೆಗಳಿಂದ ಅಭಿನಂದನೆಯ ಮಹಾಪೂರ
ಕಿವೀಸ್ ತಂಡ
Edited By:

Updated on: Dec 04, 2021 | 3:33 PM

ಭಾರತ ವಿರುದ್ಧದ ಮುಂಬೈ ಟೆಸ್ಟ್ ಪಂದ್ಯದಲ್ಲಿ ಅಜಾಜ್ ಪಟೇಲ್ ತಮ್ಮ ಬೌಲಿಂಗ್ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಕಿವೀಸ್ ಬೌಲರ್ 144 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇನ್ನಿಂಗ್ಸ್‌ನಲ್ಲಿ 10ಕ್ಕೆ 10 ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. 1996ರಲ್ಲಿ ಪೋಷಕರೊಂದಿಗೆ ನ್ಯೂಜಿಲೆಂಡ್‌ಗೆ ತೆರಳಿದ ಪಟೇಲ್ ಭಾರತದ ಮೊದಲ ಇನಿಂಗ್ಸ್‌ನಲ್ಲಿ 47.5 ಓವರ್‌ಗಳಲ್ಲಿ 119 ರನ್‌ಗಳಿಗೆ ಹತ್ತು ವಿಕೆಟ್‌ಗಳನ್ನು ಕಬಳಿಸಿದರು. ಅವರು ಇಂಗ್ಲೆಂಡ್‌ನ ಜಿಮ್ ಲೇಕರ್ ಮತ್ತು ಭಾರತದ ಅನಿಲ್ ಕುಂಬ್ಳೆಯಂತಹ ದಿಗ್ಗಜರನ್ನು ಸರಿಗಟ್ಟಿದರು.

ಲೇಕರ್ 1956 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಈ ಸಾಧನೆ ಮಾಡಿದರು. 51.2 ಓವರ್​ಗಳಲ್ಲಿ 53 ರನ್ ನೀಡಿ ಹತ್ತು ವಿಕೆಟ್ ಪಡೆದರು. ಅದೇ ಸಮಯದಲ್ಲಿ, ಫೆಬ್ರವರಿ 1999 ರಲ್ಲಿ ದೆಹಲಿಯಲ್ಲಿ ಪಾಕಿಸ್ತಾನದ ವಿರುದ್ಧ 26.3 ಓವರ್‌ಗಳಲ್ಲಿ 74 ರನ್‌ಗಳಿಗೆ ಕುಂಬ್ಳೆ ಹತ್ತು ವಿಕೆಟ್‌ಗಳನ್ನು ಪಡೆದರು. ಎಜಾಜ್ ಅವರು ಶನಿವಾರದಂದು ಈ ವಿಶೇಷ ಕ್ಲಬ್‌ನ ಭಾಗವಾದರು. ಎಜಾಜ್ ಸಾಧನೆಯನ್ನು ಕುಂಬ್ಳೆ ಸಹ ಸ್ವಾಗತಿಸಿದರು.

ಎಜಾಜ್ ಅವರನ್ನು ಅಭಿನಂದಿಸುವವರ ಮಹಾಪೂರವೇ ಹರಿದು ಬಂದಿತ್ತು
ಎಜಾಜ್ ಮೊದಲು 10 ವಿಕೆಟ್ ಪಡೆದ ಅನುಭವಿ ಅನಿಲ್ ಕುಂಬ್ಳೆ ಕಿವೀಸ್ ಬೌಲರ್ ಅನ್ನು ವಿಶೇಷ ಕ್ಲಬ್‌ಗೆ ಸ್ವಾಗತಿಸಿದರು.
ಟ್ವಿಟರ್​ನಲ್ಲಿ ಅಜಾಜ್ ಬೌಲಿಂಗ್ ಕೊಂಡಾಡಿದ ಕುಂಬ್ಳೆ, 10 ವಿಕೆಟ್ ಕ್ಲಬ್​ಗೆ ಸುಸ್ವಾಗತ. ಅದ್ಭುತ ಬೌಲಿಂಗ್ ಮಾಡಿದ್ದೀಯಾ ಎಂದು ಹೊಗಳಿದರು.

ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಕಠಿಣ ವಿಷಯವೆಂದರೆ ಇಡೀ ತಂಡವನ್ನು ನಿಮ್ಮ ಬಲಿಪಶು ಮಾಡುವುದು. ವೆಲ್ ಡನ್ ಯಂಗ್ ಮ್ಯಾನ್ ಎಜಾಜ್ ಪಟೇಲ್’ಎಂದಿದ್ದಾರೆ.