India vs New Zealand: ಸಂಜು ಸ್ಯಾಮ್ಸನ್ಗೆ ಇಂದೂ ಅವಕಾಶವಿಲ್ಲ: 3ನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
India Playing XI vs NZ 3rd T20I: ಹಿರಿಯ ಆಟಗಾರರ ಅನುಪಸ್ಥಿತಿಯಲ್ಲೂ ಯಂಗ್ ಇಂಡಿಯಾ ದ್ವಿತೀಯ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿತ್ತು. ಇದೀಗ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ50 ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬುದನ್ನು ನೋಡೋಣ.
ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದ್ದ ಭಾರತ ಇದೀಗ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇಂದು ನೆಪಯರ್ನ ಮಕ್ಲೆನ್ ಪಾರ್ಕ್ನಲ್ಲಿ ಇಂಡೋ-ಕಿವೀಸ್ (India vs New Zealand) ನಡುವೆ ಹೈವೋಲ್ಟೇಜ್ ಕದನ ನಡೆಯಲಿದೆ. ಇದರಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ. ಅದೇ ನ್ಯೂಜಿಲೆಂಡ್ ಗೆದ್ದರೆ ಸಮಬಲ ಆಗಲಿದೆ. ಮಳೆಬಂದು ಕನಿಷ್ಠ ಪಂದ್ಯ ರದ್ದಾದರು ಟ್ರೋಫಿ ಹಾರ್ದಿಕ್ ಪಡೆಯ ಕೈವಶ ಆಗಲಿದೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲೂ ಯಂಗ್ ಇಂಡಿಯಾ ದ್ವಿತೀಯ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿತ್ತು. ಸೂರ್ಯಕುಮಾರ್ ಯಾದವ್ (Suryakumar Yadav) ಬ್ಯಾಟಿಂಗ್ನಲ್ಲಿ, ದೀಪಕ್ ಹೂಡ ಬೌಲಿಂಗ್ನಲ್ಲಿ ಮಿಂಚಿದ್ದರು. ಇದೀಗ ತೃತೀಯ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ (India Playing XI) ಹೇಗಿರಲಿದೆ ಎಂಬುದನ್ನು ನೋಡೋಣ.
ಭಾರತ ಪರ ಓಪನರ್ಗಳಾಗಿ ಇಶಾನ್ ಕಿಶನ್ ಹಾಗೂ ರಿಷಭ್ ಪಂತ್ ಅವರೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಕಳೆದ ಪಂದ್ಯದಲ್ಲಿ ಕಿಶನ್ ಆಡಿ ಭರವಸೆ ಮೂಡಿಸಿದ್ದರೆ, ಪಂತ್ 13 ಎಸೆತಗಳಲ್ಲಿ 6 ರನ್ ಗಳಿಸಿ ವೈಫಲ್ಯ ಅನುಭವಿಸಿದ್ದರು. ಹೀಗಿದ್ದರೂ ಪಂತ್ಗೆ ಮತ್ತೊಂದು ಅವಕಾಶ ಸಿಗುವ ಸಂಭವವಿದೆ. ಸೂರ್ಯಕುಮಾರ್ ಯಾದವ್ ಯಾವುದೇ ಕ್ರಮಾಂಕದಲ್ಲಿ ಬೇಕಾದರು ಬ್ಯಾಟ್ ಬೀಸುವ ಸಾಮರ್ಥ್ಯ ಹೊಂದಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಸದ್ಯ 3ನೇ ಸ್ಥಾನದಲ್ಲಿ ಆಡುತ್ತಿದ್ದಾರೆ. ಶ್ರೇಯಸ್ ಅಯ್ಯರ್ಗೆ ಸ್ಥಾನವಿದೆ. ನಾಯಕ ಹಾರ್ದಿಕ್ ಪಾಂಡ್ಯ ನಂತರದ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರಲಿದ್ದಾರೆ.
ದೀಪಕ್ ಹೂಡ ಬ್ಯಾಟಿಂಗ್ನಲ್ಲಿ ಮಿಂಚಿಲ್ಲವಾದರು ಕಳೆದ ಪಂದ್ಯದಲ್ಲಿ ಬೌಲಿಂಗ್ ಮೂಲಕ ಕಮಾಲ್ ಮಾಡಿರುವ ಕಾರಣ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಇವರು ಕೇವಲ 2.5 ಓವರ್ ಬೌಲಿಂಗ್ ಮಾಡಿ 10 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದ್ದರು. ವಾಷಿಂಗ್ಟನ್ ಸುಂದರ್ ಇನ್ನಷ್ಟೆ ಮ್ಯಾಜಿಕ್ ಮಾಡಬೇಕಿದೆ. ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಹೊಸ ಚೆಂಡಿನೊಂದಿಗೆ ಉತ್ತಮ ದಾಳಿ ನಡೆಸುತ್ತಿದ್ದಾರೆ. ಯುಜ್ವೇಂದ್ರ ಚಹಲ್ ಸ್ಪಿನ್ ವರ್ಕ್ ಆಗುತ್ತಿದೆ.
ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆಯನ್ನಷ್ಟೆ ನಿರೀಕ್ಷಿಸಲಾಗಿದೆ. ಮೊಹಮ್ಮದ್ ಸಿರಾಜ್ ಬದಲು ಉಮ್ರಾನ್ ಮಲಿಕ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುವ ಸಂಭವವಿದೆ. ಇದರ ನಡುವೆ ನಾಯಕ ಹಾರ್ದಿಕ್ ಪಾಂಡ್ಯ ಪತ್ರಿಕಾಗೋಷ್ಠಿಯಲ್ಲಿ, ತಂಡದಲ್ಲಿರುವ ಎಲ್ಲ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಜೊತೆಗೆ ನೆಪಿಯರ್ನ ಪರಿಸ್ಥಿತಿ ನೋಡಿ ಆಟಗಾರರನ್ನು ಆಯ್ಕೆ ಮಾಡುತ್ತೇವೆ ಎಂಬ ಮಾತು ಕೂಡ ಆಡಿದ್ದಾರೆ. ತಂಡದ ಬ್ಯಾಟಿಂಗ್ ವಿಭಾಗ ಯಶಸ್ಸು ಕಂಡ ಕಾರಣ ಈ ವಿಭಾಗದಲ್ಲಿ ಬದಲಾವಣೆ ಅನುಮಾನ. ಹೀಗಾಗಿ ಸಂಜು ಸ್ಯಾಮ್ಸನ್ ಪುನಃ ಬೆಂಚ್ ಕಾಯಬೇಕಿದೆ.
ಭಾರತ ಸಂಭಾವ್ಯ ಪ್ಲೇಯಿಂಗ್ XI:
ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ (ಉಪನಾಯಕ/ ವಿಕೆಟ್‌ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡ, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್.
ಇತ್ತ ನ್ಯೂಜಿಲೆಂಡ್ ತಂಡದ ಪರ ಬದಲಾವಣೆ ಅನಿವಾರ್ಯವಾಗಿದೆ. ಗೆಲ್ಲಲೇ ಬೇಕಾದ ಪಂದ್ಯ ಆಗಿರುವುದರಿಂದ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಬೇಕಿದೆ. ಅಲ್ಲದೆ ನಾಯಕ ಕೇನ್ ವಿಲಿಯಮ್ಸನ್ ಅಲಭ್ಯತೆ ಹೊಡೆತ ಬಿದ್ದಿದೆ. ಪೂರ್ವ ನಿಯೋಜಿತ ವೈದ್ಯಕೀಯ ತಪಾಸಣೆ ಇರುವ ಕಾರಣ ತೃತೀಯ ಟಿ20 ಯಲ್ಲಿ ಕೇನ್ ಕಣಕ್ಕಿಳಿಯುತ್ತಿಲ್ಲ. ಇವರ ಬದಲು ಆಕ್ಲೆಂಡ್ ಏಸಸ್ ಬ್ಯಾಟ್ಸ್‌ಮನ್ ಮಾರ್ಕ್ ಚಾಪ್‌ಮನ್ ಆಯ್ಕೆ ಆಗಿದ್ದಾರೆಯಾದರೂ ಅವಕಾಶ ಸಿಗುವುದು ಅನುಮಾನ. ಕೇನ್ ಅಲಭ್ಯತೆಯಲ್ಲಿ ನ್ಯೂಜಿಲೆಂಡ್ ತಂಡವನ್ನು ಟಿಮ್ ಸೌಥೀ ನಾಯಕನಾಗಿ ಮುನ್ನಡೆಸುತ್ತಿದ್ದಾರೆ.
ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್ XI:
ಟಿಮ್ ಸೌಥೀ (ನಾಯಕ), ಫಿನ್ ಅಲೆನ್, ಡೆವೊನ್ ಕಾನ್ವೇ, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್ / ಮೈಕೆಲ್ ಬ್ರೇಸ್ವೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಇಶ್ ಸೋಧಿ, ಲಾಕಿ ಫರ್ಗುಸನ್.
Published On - 8:32 am, Tue, 22 November 22