India vs New zealand: ರಾಹುಲ್ ದ್ರಾವಿಡ್-ರೋಹಿತ್ ಶರ್ಮಾ ಶುಭಾರಂಭ
ಟೀಮ್ ಇಂಡಿಯಾ ವಿರುದ್ದ ಟಿ20 ಕ್ರಿಕೆಟ್ನಲ್ಲಿ ಪಾರುಪತ್ಯ ಮೆರೆಯುತ್ತಾ ಬಂದಿರುವ ನ್ಯೂಜಿಲೆಂಡ್ ತಂಡವನ್ನು ಈ ಬಾರಿ ಸೋಲಿಸಿ ಭಾರತ ಗೆಲುವಿನ ಸಂಖ್ಯೆಯನ್ನು 9ಕ್ಕೇರಿಸಿದೆ. ಉಭಯ ತಂಡಗಳು ಇದುವರೆಗೆ 18 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಉಭಯ ತಂಡಗಳು ಈಗ 9 ಗೆಲುವುಗಳನ್ನು ದಾಖಲಿಸಿ ಸಮಬಲ ಹೊಂದಿದೆ.
ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ದ ಮೊದಲ ಟಿ20 ಪಂದ್ಯದಲ್ಲಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ನಾಯಕನಾಗಿ ರೋಹಿತ್ ಶರ್ಮಾ ಹಾಗೂ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರು ಶುಭಾರಂಭ ಮಾಡಿದ್ದಾರೆ. ಟಿ20 ವಿಶ್ವಕಪ್ ಸೋಲಿನ ಬಳಿಕ ಆಡುತ್ತಿರುವ ಮೊದಲ ಪಂದ್ಯದಲ್ಲೇ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿತ್ತು. ಏಕೆಂದರೆ ಟೀಮ್ ಇಂಡಿಯಾ ಈ ಹಿಂದೆ ನ್ಯೂಜಿಲೆಂಡ್ ವಿರುದ್ದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೋಲನುಭವಿಸಿತ್ತು. ಆ ಬಳಿಕ ಉಭಯ ತಂಡಗಳು ಟಿ20 ವಿಶ್ವಕಪ್ನಲ್ಲಿ ಮುಖಾಮುಖಿಯಾಗಿತ್ತು. ಭಾರತದ ಪಾಲಿಗೆ ನಿರ್ಣಾಯಕವಾಗಿದ್ದ ಆ ಪಂದ್ಯದಲ್ಲೂ ನ್ಯೂಜಿಲೆಂಡ್ ಭಾರತ ತಂಡವನ್ನು ಹೀನಾಯವಾಗಿ ಸೋಲಿಸಿತ್ತು.
ಅಷ್ಟೇ ಅಲ್ಲದೆ ಟಿ20 ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡಿ ರನ್ನರ್ ಅಪ್ ತಂಡವಾಗಿ ಹೊರಹೊಮ್ಮಿತು. ಈ ಎಲ್ಲಾ ಕಾರಣಗಳಿಂದಾಗಿ ಭಾರತ-ನ್ಯೂಜಿಲೆಂಡ್ ನಡುವಣ ಮೊದಲ ಮುಖಾಮುಖಿ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಮೊದಲ ಪಂದ್ಯದಲ್ಲೇ ಸೋಲುಣಿಸುವ ಮೂಲಕ ರೋಹಿತ್ ಶರ್ಮಾ ಶುಭಾರಂಭ ಮಾಡಿದೆ.
ಇನ್ನು ಟೀಮ್ ಇಂಡಿಯಾ ವಿರುದ್ದ ಟಿ20 ಕ್ರಿಕೆಟ್ನಲ್ಲಿ ಪಾರುಪತ್ಯ ಮೆರೆಯುತ್ತಾ ಬಂದಿರುವ ನ್ಯೂಜಿಲೆಂಡ್ ತಂಡವನ್ನು ಈ ಬಾರಿ ಸೋಲಿಸಿ ಭಾರತ ಗೆಲುವಿನ ಸಂಖ್ಯೆಯನ್ನು 9ಕ್ಕೇರಿಸಿದೆ. ಉಭಯ ತಂಡಗಳು ಇದುವರೆಗೆ 18 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಉಭಯ ತಂಡಗಳು ಈಗ 9 ಗೆಲುವುಗಳನ್ನು ದಾಖಲಿಸಿ ಸಮಬಲ ಹೊಂದಿದೆ. ಹೀಗಾಗಿ ಈ ಸರಣಿಯ ಮೂಲಕ ಯಾರು ಬಲಿಷ್ಠ ಎಂಬುದು ಕೂಡ ನಿರ್ಧಾರವಾಗಲಿದೆ. ಅಷ್ಟೇ ರಾಹುಲ್ ದ್ರಾವಿಡ್ ಕೂಡ ಟೀಮ್ ಇಂಡಿಯಾದ ಪೂರ್ಣ ಪ್ರಮಾಣದ ಕೋಚ್ ಆಗಿ ಮೊದಲ ಪಂದ್ಯದಲ್ಲೇ ಗೆಲುವು ನೋಡಿದ್ದಾರೆ. ಹೀಗಾಗಿ ರಾಹುಲ್ ದ್ರಾವಿಡ್- ರೋಹಿತ್ ಶರ್ಮಾ ಜೋಡಿ ಮುಂದಿನ ದಿನಗಳಲ್ಲೂ ಕಮಾಲ್ ಮಾಡುವ ನಿರೀಕ್ಷೆ ಹೆಚ್ಚಾಗಿದೆ.
ಏಕೆಂದರೆ ಮುಂದಿನ ವರ್ಷವೇ ಟಿ20 ವಿಶ್ವಕಪ್ ನಡೆಯಲಿದ್ದು, ಇದಕ್ಕಾಗಿ ಈಗಲೇ ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟುವ ಜವಾಬ್ದಾರಿ ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾ ಮೇಲಿದೆ. ಹೀಗಾಗಿ ಮೊದಲ ಸರಣಿಯಲ್ಲೇ ಬಲಿಷ್ಠ ನ್ಯೂಜಿಲೆಂಡ್ಗೆ ಸೋಲುಣಿಸಿ ಶುಭಾರಂಭ ಮಾಡುವ ಇರಾದೆಯಲ್ಲಿದ್ದಾರೆ ಕೋಚ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ.
ಇದನ್ನೂ ಓದಿ: Mahindra Roxor: ಮಹೀಂದ್ರಾ ರೋಕ್ಸರ್: ಜಬರ್ದಸ್ತ್ ಎಸ್ಯುವಿ ಬಿಡುಗಡೆ
ಇದನ್ನೂ ಓದಿ: 18 GB RAM, 1000 GB ಸ್ಟೋರೇಜ್: ದಾಖಲೆ ನಿರ್ಮಿಸಲಿದೆ ಹೊಸ ಸ್ಮಾರ್ಟ್ಫೋನ್
ಇದನ್ನೂ ಓದಿ: IPL 2022: ರಾಜಸ್ಥಾನ್ ರಾಯಲ್ಸ್ ತಂಡದಿಂದ ಪ್ರಮುಖ ಆಟಗಾರ ಔಟ್: ಬೇರೆ ತಂಡಕ್ಕೆ ನಾಯಕ?
Published On - 10:44 pm, Wed, 17 November 21