ಏಷ್ಯಾಕಪ್ 2022 (Asia Cup 2022) ಗಾಗಿ ಎಲ್ಲಾ ತಂಡಗಳ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಪಂದ್ಯಾವಳಿಗಾಗಿ ಯುಎಇಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಲಾಗಿದೆ. ಇದೇ ವೇಳೆ ಪ್ರಶಸ್ತಿ ಗೆಲ್ಲಲು ಎಲ್ಲಾ ತಂಡಗಳು ಕಸರತ್ತು ನಡೆಸುತ್ತಿವೆ. ಟೀಂ ಇಂಡಿಯಾ ಕೂಡ ತನ್ನ ಚಾಂಪಿಯನ್ ಪಟ್ಟವನ್ನೂ ಹಾಗೇ ಉಳಿಸಿಕೊಳ್ಳಲು ಶತಾಯಗತಾಯ ಹೋರಾಡಲಿದೆ. ಹೀಗಾಗಿ ಸಮರಾಭ್ಯಾಸ ಶುರು ಮಾಡಿರುವ ಭಾರತ ತಂಡ ಏಷ್ಯಾಕಪ್‌ಗಾಗಿ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾ (Team India) ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಏಷ್ಯಾಕಪ್ ಜರ್ಸಿಯಲ್ಲಿರುವ ಟೀಂ ಇಂಡಿಯಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಭಾರತದೊಂದಿಗೆ ಪಾಕಿಸ್ತಾನ ತಂಡ ಕೂಡ ತನ್ನ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ.
ರವೀಂದ್ರ ಜಡೇಜಾ ಏಷ್ಯಾಕಪ್‌ನಲ್ಲಿ ಭಾರತ ತಂಡದ ಹೊಸ ಜೆರ್ಸಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ವಾಸ್ತವವಾಗಿ, ಐಸಿಸಿ, ಎಸಿಸಿಯ ಪ್ರತಿ ಪಂದ್ಯಾವಳಿಯಲ್ಲಿ ತಂಡಗಳು ಹೊಸ ಜೆರ್ಸಿಯಲ್ಲಿ ಕಂಡುಬರುತ್ತವೆ. ಈ ಜೆರ್ಸಿಗಳ ಮೇಲೆ ಟೂರ್ನಿಯ ಹೆಸರನ್ನೂ ಬರೆಯಲಾಗಿರುತ್ತದೆ. ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ತಮ್ಮ ಹೊಸ ಏಷ್ಯಾಕಪ್ ಜರ್ಸಿಯಲ್ಲಿ ಟೀಮ್ ಇಂಡಿಯಾದ ಫೋಟೋವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಭಾರತ ತಂಡದ ಜೆರ್ಸಿ ನೀಲಿ ಬಣ್ಣದಲ್ಲಿದ್ದರೆ, ತಂಡದ ಜರ್ಸಿಯು ಏಷ್ಯಾಕಪ್ 2022 ಲೋಗೋವನ್ನು ಸಹ ಹೊಂದಿದೆ. ಈ ಜೆರ್ಸಿಯಲ್ಲಿ ಮೂರು ನಕ್ಷತ್ರಗಳೂ ಇವೆ. ಭಾರತ ತಂಡ ಇದುವರೆಗೆ ಮೂರು ಬಾರಿ ವಿಶ್ವಕಪ್ ಗೆದ್ದಿರುವುದು ಗೊತ್ತೇ ಇದೆ. ಆದರೆ, ಜಡೇಜಾ ಹೊರತುಪಡಿಸಿ ಯಾವುದೇ ಆಟಗಾರರು ಹೊಸ ಜೆರ್ಸಿಯಲ್ಲಿ ಫೋಟೋ ಅಥವಾ ವೀಡಿಯೊವನ್ನು ಪೋಸ್ಟ್ ಮಾಡಿಲ್ಲ.
ಪಾಕಿಸ್ತಾನಕ್ಕೂ ಹೊಸ ಜೆರ್ಸಿ
ಭಾರತ ತಂಡದ ಜೊತೆಗೆ ಪಾಕಿಸ್ತಾನ ತಂಡ ಕೂಡ ತಮ್ಮ ಹೊಸ ಜೆರ್ಸಿ ಫೋಟೋಗಳನ್ನು ಹಂಚಿಕೊಂಡಿದೆ. ಏಷ್ಯಾಕಪ್‌ನಲ್ಲಿ ಆಡಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಹೊಸ ಜೆರ್ಸಿಯ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಹೊಸ ಜೆರ್ಸಿಯಲ್ಲಿ ನಾಯಕ ಬಾಬರ್ ಅಜಂ ಹಾಗೂ ತಂಡದ ಇತರೆ ಆಟಗಾರರು ಫೋಟೋ ಶೂಟ್‌ಗೆ ಬಂದಿದ್ದರು. ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮಹತ್ವದ ಪಂದ್ಯ ಆಗಸ್ಟ್ 28 ರಂದು ನಡೆಯಲಿದೆ. ಎರಡೂ ತಂಡಗಳು ಈ ಪಂದ್ಯಕ್ಕೆ ಸಂಪೂರ್ಣ ಸಜ್ಜಾಗಿವೆ.
Lights ? Camera ? BTS ?
The boys were at their candid best at the broadcast photoshoot for the #AsiaCup2022 ? #BackTheBoysInGreen pic.twitter.com/lSqbb834Qm
— Pakistan Cricket (@TheRealPCB) August 25, 2022
2 ಗ್ರೂಪ್ – 6 ತಂಡಗಳು:
ಈ ಬಾರಿಯ ಏಷ್ಯಾಕಪ್‌ನಲ್ಲಿ 6 ತಂಡಗಳು ಕಣಕ್ಕಿಳಿಯಲಿದೆ. ಈ ತಂಡಗಳನ್ನು ಎರಡು ಗ್ರೂಪ್ಗಳಾಗಿ ವಿಂಗಡಿಸಲಾಗಿದೆ.
ಗ್ರೂಪ್- A
ಭಾರತ
ಪಾಕಿಸ್ತಾನ್,
ಹಾಂಗ್ ಕಾಂಗ್
ಗ್ರೂಪ್- B
ಶ್ರೀಲಂಕಾ
ಅಫ್ಘಾನಿಸ್ತಾನ್
ಬಾಂಗ್ಲಾದೇಶ
Published On - 3:46 pm, Fri, 26 August 22