Virat Kohli: ಒಂದು ಪಂದ್ಯದ ಸೋಲು…ಹಲವು ಕೆಟ್ಟ ದಾಖಲೆ ಬರೆದ ಕ್ಯಾಪ್ಟನ್ ಕೊಹ್ಲಿ
India vs Pakistan: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಎರಡನೇ ಬಾರಿ ಸೀಮಿತ ಓವರ್ ಕ್ರಿಕೆಟ್ನಲ್ಲಿ 10 ವಿಕೆಟ್ಗಳ ಸೋಲು ಕಂಡಿದೆ. ಈ ಮೊದಲು ಜನವರಿ 2020ರಲ್ಲಿ ಆಸ್ಟ್ರೇಲಿಯಾ ವಿರುದ್ದ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್‌ಗಳಿಂದ ಸೋಲನುಭವಿಸಿತ್ತು.
ಟಿ20 ವಿಶ್ವಕಪ್ 2021ರ (T20 World Cup 2021) ಬಲಿಷ್ಠ ತಂಡ ಎನಿಸಿಕೊಂಡಿದ್ದ ಟೀಮ್ ಇಂಡಿಯಾ (Team India) ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ. ಅದರಲ್ಲೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ (Pakistan) ವಿರುದ್ದ ಹೀನಾಯ ಸೋಲನುಭವಿಸಿದೆ. ಈ ಮೂಲಕ 29 ವರ್ಷಗಳ ನಂತರ ಪಾಕಿಸ್ತಾನ ತಂಡ ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. 1992ರ ನಂತರ ಮೊದಲ ಬಾರಿಗೆ ನಾಯಕ ವಿರಾಟ್ ಕೊಹ್ಲಿ (Virat Kohli) ಹೆಸರಿನಲ್ಲಿ ಈ ಅನಗತ್ಯ ದಾಖಲೆ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಮೊಹಮ್ಮದ್ ಅಜರುದ್ದೀನ್ನಿಂದ ಶುರುವಾಗಿ ಮಹೇಂದ್ರ ಸಿಂಗ್ ಧೋನಿವರೆಗೆ ಯಾವ ನಾಯಕನೂ ಪಾಕ್ ವಿರುದ್ದ ಸೋಲನುಭವಿಸಿಲ್ಲ. ಆದರೆ ಕೊಹ್ಲಿ ತಮ್ಮ ನಾಯಕತ್ವದ ಕೊನೆಯ ಟೂರ್ನಿಯಲ್ಲೇ ಪಾಕ್ ವಿರುದ್ದ ಸೋಲುವ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ.
ಸೋತ ಮೊದಲ ನಾಯಕ: ಈ ಬಾರಿ ವಿಶ್ವಕಪ್‌ಗೂ ಮುನ್ನ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧ 12-0 ಮುನ್ನಡೆ ಸಾಧಿಸಿತ್ತು. ಏಕದಿನ ವಿಶ್ವಕಪ್‌ನಲ್ಲಿ ಪಾಕ್ ವಿರುದ್ದ ಭಾರತ ತಂಡ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಟಿ20 ವಿಶ್ವಕಪ್‌ನಲ್ಲಿ 5 ಜಯ ಸಾಧಿಸಿತ್ತು. ಆದರೆ ಈಗ 29 ವರ್ಷಗಳ ನಂತರ ಪಾಕ್ ತಂಡ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ವಿರುದ್ದ ಮೊದಲ ಗೆಲುವು ದಾಖಲಿಸಿದೆ. ಅತ್ತ ಗೆಲುವು ದಾಖಲಿಸಿದ ಮೊದಲ ನಾಯಕ ಬಾಬರ್ ಆಜಂ ಆದರೆ, ಇತ್ತ ಸೋಲು ಕಂಡು ಮೊದಲ ನಾಯಕ ಎಂಬ ಹಣೆಪಟ್ಟಿ ಕೊಹ್ಲಿ ಪಾಲಾಗಿದೆ.
10 ವಿಕೆಟ್ಗಳ ಹೀನಾಯ ಸೋಲು: ಟೀಮ್ ಇಂಡಿಯಾ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 10 ವಿಕೆಟ್‌ಗಳಿಂದ ಸೋಲನುಭವಿಸಿಲ್ಲ. ಈ ಮೊದಲು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು 9 ಕ್ಕೂ ಹೆಚ್ಚು ವಿಕೆಟ್‌ಗಳಿಂದ ಟೀಂ ಇಂಡಿಯಾವನ್ನು ಸೋಲಿಸಿತ್ತು. ಇದಾಗ್ಯೂ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ 10 ವಿಕೆಟ್ಗಳ ಹೀನಾಯ ಸೋಲು ಕಂಡಿಲ್ಲ. ಹಾಗೆಯೇ ಪಾಕ್ ವಿರುದ್ದ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಇದುವರೆಗೆ 10 ವಿಕೆಟ್‌ಗಳಿಂದ ಸೋತಿಲ್ಲ. 1997 ರಲ್ಲಿ ಪಾಕ್ ವಿರುದ್ದ 9 ವಿಕೆಟ್‌ಗಳಿಂದ ಸೋತಿದ್ದು ಇದುವರೆಗಿನ ಕೆಟ್ಟ ದಾಖಲೆಯಾಗಿತ್ತು. ಇದೀಗ 10 ವಿಕೆಟ್‌ಗಳಿಂದ ಪರಾಜಯಗೊಳ್ಳುವ ಮೂಲಕ ಟೀಮ್ ಇಂಡಿಯಾ ಕೆಟ್ಟ ದಾಖಲೆಯನ್ನು ಮೈಮೇಲೆ ಎಳೆದುಕೊಂಡಿದೆ.
ಎರಡು ಬಾರಿ ಹೀನಾಯ ಸೋಲು: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಎರಡನೇ ಬಾರಿ ಸೀಮಿತ ಓವರ್ ಕ್ರಿಕೆಟ್ನಲ್ಲಿ 10 ವಿಕೆಟ್ಗಳ ಸೋಲು ಕಂಡಿದೆ. ಈ ಮೊದಲು ಜನವರಿ 2020ರಲ್ಲಿ ಆಸ್ಟ್ರೇಲಿಯಾ ವಿರುದ್ದ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಇದೀಗ ಪಾಕ್ ವಿರುದ್ದ ಟಿ20 ವಿಶ್ವಕಪ್‌ನಲ್ಲಿ ಸೋಲುವ ಮೂಲಕ ಕೊಹ್ಲಿ 2 ಬಾರಿ 10 ವಿಕೆಟ್‌ಗಳಿಂದ ಸೋತ ಟೀಮ್ ಇಂಡಿಯಾ ನಾಯಕ ಎನಿಸಿಕೊಂಡಿದ್ದಾರೆ.
ಮೊದಲ ಪಂದ್ಯದಲ್ಲಿ ಸೋಲು: ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲೇ ಸೋಲನುಭವಿಸಿರುವುದು ಇದು ಎರಡನೇ ಬಾರಿ. ಈ ಹಿಂದೆ 2016 ರ ಟಿ20 ವಿಶ್ವಕಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲೇ ಪರಾಜಯಗೊಂಡಿತು. ಅಂದು ಆ ಪಂದ್ಯದಲ್ಲಿ ಭಾರತ ತಂಡವು ಕೇವಲ 79 ರನ್ಗೆ ಆಲೌಟ್ ಆಗಿತ್ತು. ಇದೀಗ ಪಾಕಿಸ್ತಾನ್ ವಿರುದ್ದ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಸೋತು ನಿರಾಸೆ ಮೂಡಿಸಿದೆ.
ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಮಂಡಿಯೂರಿದ್ದು ಯಾಕೆ ಗೊತ್ತಾ?
ಇದನ್ನೂ ಓದಿ: Virat Kohli: ಸೋತರೂ ಟಿ20 ವಿಶ್ವಕಪ್‌ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಇದನ್ನೂ ಓದಿ: T20 World Cup 2021: ಟಿ20 ರ್ಯಾಂಕಿಂಗ್ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?
(India vs Pakistan: Captain Virat Kohli registers unwanted records)