ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ 6 ರನ್‌ಗಳ ಜಯ ಸಾಧಿಸಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 19 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 119 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಸುಲಭವಾಗಿ ಗೆಲ್ಲುವಂತೆ ತೊರುತ್ತಿತ್ತು. ಅದರಂತೆ ತಂಡಕ್ಕೆ ಉತ್ತಮ ಆರಂಭ ಕೂಡ ಸಿಕ್ಕಿತ್ತು. ಆದರೆ ಆ ನಂತರ ಟೀಂ ಇಂಡಿಯಾದ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿ ಪಾಕಿಸ್ತಾನವನ್ನು 20 ಓವರ್‌ಗಳಲ್ಲಿ 113 ರನ್‌ಗಳಿಗೆ ಸೀಮಿತಗೊಳಿಸಿದರು.
ರೋಚಕ ಪಂದ್ಯದಲ್ಲಿ ಭಾರತ ಆರು ರನ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 19 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಪಾಕಿಸ್ತಾನ ತಂಡ ಒಂದು ಹಂತದಲ್ಲಿ 14ನೇ ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 80 ರನ್ ಕಲೆಹಾಕಿತ್ತು. ಆದರೆ ರಿಜ್ವಾನ್-ಶಾದಾಬ್ ಔಟಾದ ಬಳಿಕ ತಂಡ ತತ್ತರಿಸಿ, 6 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಪಾಕಿಸ್ತಾನಕ್ಕೆ ಆರು ಎಸೆತಗಳಲ್ಲಿ 18 ರನ್‌ಗಳ ಅಗತ್ಯವಿದೆ. 19ನೇ ಓವರ್‌ನ ಕೊನೆಯ ಎಸೆತದಲ್ಲಿ ಇಫ್ತಿಕರ್ ಕ್ಯಾಚಿತ್ತು ಔಟಾದರು. ಅರ್ಷದೀಪ್ ಕೊನೆಯ ಓವರ್ ಬೌಲಿಂಗ್ ಮಾಡುತ್ತಿದ್ದಾರೆ.
ಪಾಕಿಸ್ತಾನಕ್ಕೆ ಎರಡು ಓವರ್‌ಗಳಲ್ಲಿ 21 ರನ್‌ಗಳ ಅಗತ್ಯವಿದೆ. ಸದ್ಯ ಇಮಾದ್ ವಾಸಿಂ ಮತ್ತು ಇಫ್ತಿಕರ್ ಅಹ್ಮದ್ ಕ್ರೀಸ್‌ನಲ್ಲಿದ್ದಾರೆ. ಬುಮ್ರಾ 19ನೇ ಓವರ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಪಾಕಿಸ್ತಾನದ ಸ್ಕೋರ್ 18 ಓವರ್‌ಗಳಲ್ಲಿ ಐದು ವಿಕೆಟ್‌ಗೆ 100 ರನ್ ಆಗಿದೆ.
ಪಾಕಿಸ್ತಾನ ಐದನೇ ವಿಕೆಟ್ ಕಳೆದುಕೊಂಡಿದೆ. 17ನೇ ಓವರ್‌ನಲ್ಲಿ ಶಾದಾಬ್ ಖಾನ್ ಕ್ಯಾಚ್ ನೀಡಿ ಔಟಾದರು. ಸದ್ಯ ಇಫ್ತಿಕರ್ ಅಹ್ಮದ್ ಮತ್ತು ಇಮಾದ್ ವಾಸಿಂ ಕ್ರೀಸ್‌ನಲ್ಲಿದ್ದಾರೆ.
15ನೇ ಓವರ್‌ನ ಮೊದಲ ಎಸೆತದಲ್ಲಿ ರಿಜ್ವಾನ್ ಅವರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು. 44 ಎಸೆತಗಳಲ್ಲಿ 31 ರನ್ ಗಳಿಸಿ ರಿಜ್ವಾನ್ ಔಟಾದರು. ಸದ್ಯ ಶಾದಾಬ್ ಖಾನ್ ಮತ್ತು ಇಮಾದ್ ವಾಸಿಂ ಕ್ರೀಸ್‌ನಲ್ಲಿದ್ದಾರೆ.
ಪಾಕಿಸ್ತಾನ ತನ್ನ ಮೂರನೇ ವಿಕೆಟ್ ಕಳೆದುಕೊಂಡಿದ್ದು, ಫಖರ್ ಜಮಾನ್ ಕ್ಯಾಚ್ ನೀಡಿ ಔಟಾದರು. ಸದ್ಯ ಇಮಾದ್ ವಾಸಿಂ ಮತ್ತು ಮೊಹಮ್ಮದ್ ರಿಜ್ವಾನ್ ಕ್ರೀಸ್‌ನಲ್ಲಿದ್ದಾರೆ.
11ನೇ ಓವರ್‌ನಲ್ಲಿ ಪಾಕಿಸ್ತಾನ ಎರಡನೇ ವಿಕೆಟ್ ಕಳೆದುಕೊಂಡಿತು. ಅಕ್ಷರ್ ಪಟೇಲ್, ಉಸ್ಮಾನ್ ಖಾನ್ ಅವರನ್ನು ಎಲ್ಬಿಡಬ್ಲ್ಯೂ ಮಾಡಿದರು. ಸದ್ಯ ಫಖರ್ ಜಮಾನ್ ಮತ್ತು ರಿಜ್ವಾನ್ ಕ್ರೀಸ್‌ನಲ್ಲಿದ್ದಾರೆ. 11 ಓವರ್‌ಗಳ ನಂತರ ಪಾಕಿಸ್ತಾನದ ಸ್ಕೋರ್ ಎರಡು ವಿಕೆಟ್‌ಗೆ 66 ರನ್ ಆಗಿದೆ.
ಪಾಕಿಸ್ತಾನ 10 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 57 ರನ್ ಗಳಿಸಿದೆ. ಸದ್ಯ ರಿಜ್ವಾನ್ 27 ರನ್ ಹಾಗೂ ಉಸ್ಮಾನ್ 13 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಪಾಕಿಸ್ತಾನಕ್ಕೆ ಈಗ 60 ಎಸೆತಗಳಲ್ಲಿ 63 ರನ್ ಅಗತ್ಯವಿದೆ.
ಪವರ್‌ಪ್ಲೇ ಮುಗಿದಿದೆ. ಆರು ಓವರ್‌ಗಳಲ್ಲಿ ಪಾಕಿಸ್ತಾನ ಒಂದು ವಿಕೆಟ್ ಕಳೆದುಕೊಂಡು 35 ರನ್ ಗಳಿಸಿದೆ. ಸದ್ಯ ಉಸ್ಮಾನ್ ಖಾನ್ ಮತ್ತು ಮೊಹಮ್ಮದ್ ರಿಜ್ವಾನ್ ಕ್ರೀಸ್‌ನಲ್ಲಿದ್ದಾರೆ.
ಐದನೇ ಓವರ್‌ನಲ್ಲಿ ಬುಮ್ರಾ , ಬಾಬರ್ ಅಜಮ್ ವಿಕೆಟ್ ಪಡೆದರು. ಸದ್ಯ ಉಸ್ಮಾನ್ ಖಾನ್ ಮತ್ತು ರಿಜ್ವಾನ್ ಕ್ರೀಸ್‌ನಲ್ಲಿದ್ದಾರೆ. ರಿಜ್ವಾನ್ ನೀಡಿದ ಸುಲಭ ಕ್ಯಾಚ್ ಅನ್ನು ಶಿವಂ ದುಬೆ ಕೈಬಿಟ್ಟಿದ್ದರು. ಆಗ ರಿಜ್ವಾನ್ ಏಳು ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
ಪಾಕಿಸ್ತಾನದ ಇನ್ನಿಂಗ್ಸ್ ಆರಂಭವಾಗಿದೆ. ಮೊದಲ ಓವರ್‌ನಲ್ಲಿ ಒಂಬತ್ತು ರನ್‌ಗಳು ಬಂದವು. ಭಾರತದ ಪರ ಅರ್ಷದೀಪ್ ಸಿಂಗ್ ಮೊದಲ ಓವರ್ ಬೌಲ್ ಮಾಡಿದರು. ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.
ಭಾರತ ತಂಡ 19 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟ್ ಆಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ಅಗ್ರ ಕ್ರಮಾಂಕ, ಮಧ್ಯಮ ಕ್ರಮಾಂಕ ಎಲ್ಲವೂ ವಿಫಲವಾಯಿತು. ಹೀಗಾಗಿ ತಂಡ 119 ರನ್‌ಗಳಿಗೆ ಆಲೌಟ್ ಆಯಿತು.
18ನೇ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ಹ್ಯಾರಿಸ್ ರೌಫ್ ಭಾರತದ ಎರಡು ವಿಕೆಟ್ ಉರುಳಿಸಿದರು. ಅವರು ಓವರ್‌ನ ನಾಲ್ಕನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯರನ್ನು ಇದಾದ ನಂತರದ ಎಸೆತದಲ್ಲಿಯೇ ಜಸ್ಪ್ರೀತ್ ಬುಮ್ರಾ ಅವರನ್ನು ಪೆವಿಲಿಯನ್ಗಟ್ಟಿದರು. 18 ಓವರ್‌ಗಳ ನಂತರ ಭಾರತದ ಸ್ಕೋರ್ ಒಂಬತ್ತು ವಿಕೆಟ್‌ಗೆ 113 ರನ್ ಆಗಿದೆ. ಸದ್ಯ ಸಿರಾಜ್ ಮತ್ತು ಅರ್ಷದೀಪ್ ಕ್ರೀಸ್‌ನಲ್ಲಿದ್ದಾರೆ.
17 ಓವರ್‌ಗಳಲ್ಲಿ ಭಾರತ 7 ವಿಕೆಟ್ ಕಳೆದುಕೊಂಡು 106 ರನ್ ಗಳಿಸಿದೆ. ಸದ್ಯ ಅರ್ಷದೀಪ್ ಸಿಂಗ್ ಒಂಬತ್ತು ರನ್ ಹಾಗೂ ಹಾರ್ದಿಕ್ ಪಾಂಡ್ಯ 1 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಭಾರತ 15ನೇ ಓವರ್‌ನಲ್ಲಿ ಏಳನೇ ವಿಕೆಟ್ ಕಳೆದುಕೊಂಡಿದೆ. ಮೊಹಮ್ಮದ್ ಅಮೀರ್ ಈ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಪಂತ್ 31 ಎಸೆತಗಳಲ್ಲಿ ಆರು ಬೌಂಡರಿಗಳ ನೆರವಿನಿಂದ 42 ರನ್ ಗಳಿಸಿದರೆ, ಜಡೇಜಾ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಸದ್ಯ ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ಕ್ರೀಸ್‌ನಲ್ಲಿದ್ದಾರೆ.
14ನೇ ಓವರ್‌ನಲ್ಲಿ ಭಾರತ ಐದನೇ ವಿಕೆಟ್ ಕಳೆದುಕೊಂಡಿತು. ಸೂರ್ಯಕುಮಾರ್ ಯಾದವ್ ನಂತರ ಶಿವಂ ದುಬೆ ಕೂಡ ಪೆವಿಲಿಯನ್‌ಗೆ ಮರಳಿದರು. ಸೂರ್ಯ ಏಳು ರನ್ ಗಳಿಸಿದರೆ, ಶಿವಂ ದುಬೆ ಒಂಬತ್ತು ಎಸೆತಗಳಲ್ಲಿ ಮೂರು ರನ್ ಗಳಿಸಿ ಔಟಾದರು. 14 ಓವರ್‌ಗಳ ನಂತರ ಭಾರತದ ಸ್ಕೋರ್ ಐದು ವಿಕೆಟ್‌ಗೆ 96 ರನ್
12ನೇ ಓವರ್‌ನಲ್ಲಿ 89 ರನ್‌ಗಳಿದ್ದಾಗ ಭಾರತ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ನಂಬರ್ ಒನ್ ಟಿ20 ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಕೇವಲ ಏಳು ರನ್ ಗಳಿಸಿ ಔಟಾದರು. ಸದ್ಯ ಶಿವಂ ದುಬೆ ಮತ್ತು ರಿಷಬ್ ಪಂತ್ ಕ್ರೀಸ್‌ನಲ್ಲಿದ್ದಾರೆ. 12 ಓವರ್‌ಗಳ ನಂತರ ಭಾರತದ ಸ್ಕೋರ್ ನಾಲ್ಕು ವಿಕೆಟ್‌ಗೆ 90 ರನ್ ಆಗಿದೆ.
10 ಓವರ್‌ಗಳಲ್ಲಿ ಭಾರತ ಮೂರು ವಿಕೆಟ್ ಕಳೆದುಕೊಂಡು 81 ರನ್ ಗಳಿಸಿದೆ. ಸದ್ಯ ಸೂರ್ಯಕುಮಾರ್ ಯಾದವ್ 5 ಹಾಗೂ ರಿಷಬ್ ಪಂತ್ 34 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಇಬ್ಬರ ನಡುವೆ 20+ ರನ್‌ಗಳ ಜೊತೆಯಾಟ ನಡೆದಿದೆ. ಇದಕ್ಕೂ ಮುನ್ನ ಪಂತ್ ಅಕ್ಷರ್ ಜೊತೆ 39 ರನ್ ಗಳ ಜೊತೆಯಾಟ ನೀಡಿದ್ದರು. ಭಾರತ ದೊಡ್ಡ ಮೊತ್ತ ಗಳಿಸಬೇಕಾದರೆ ಪಂತ್ ದೊಡ್ಡ ಇನ್ನಿಂಗ್ಸ್ ಆಡಬೇಕಾಗುತ್ತದೆ.
ಎಂಟನೇ ಓವರ್‌ನಲ್ಲಿ 58 ರನ್‌ಗಳಿದ್ದಾಗ ಭಾರತ ಮೂರನೇ ವಿಕೆಟ್ ಕಳೆದುಕೊಂಡಿದೆ. ನಸೀಮ್ ಶಾ ಅಕ್ಷರ್ ಪಟೇಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಕ್ಷರ್ 18 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 20 ರನ್ ಗಳಿಸಿ ಔಟಾದರು.
ಪವರ್‌ಪ್ಲೇ ಮುಗಿದಿದೆ. ಆರು ಓವರ್‌ಗಳ ನಂತರ ಭಾರತದ ಸ್ಕೋರ್ ಎರಡು ವಿಕೆಟ್‌ಗೆ 50 ರನ್ ಆಗಿದೆ. ಸದ್ಯ ರಿಷಭ್ ಪಂತ್ 15 ರನ್ ಹಾಗೂ ಅಕ್ಷರ್ ಪಟೇಲ್ 15 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಇಬ್ಬರ ನಡುವೆ 30+ ರನ್‌ಗಳ ಜೊತೆಯಾಟ ನಡೆದಿದೆ.
ಭಾರತದ ಇನ್ನಿಂಗ್ಸ್ನ 5 ಓವರ್ಗಳು ಮುಗಿದಿವೆ. ಈ 5 ಓವರ್‌ಗಳಲ್ಲಿ ಭಾರತ 2 ವಿಕೆಟ್ ಕಳೆದುಕೊಂಡು 38 ರನ್ ಕಲೆಹಾಕಿದೆ.
ನಾಯಕ ರೋಹಿತ್ ಶರ್ಮಾ ಕೂಡ ಪೆವಿಲಿಯನ್ ಸೇರಿಕೊಂಡಿದ್ದಾರೆ. ಮೂರನೇ ಓವರ್‌ನಲ್ಲಿ ಅಫ್ರಿದಿ ಬೌಲಿಂಗ್ನಲ್ಲಿ ರೋಹಿತ್ ಕ್ಯಾಚಿತ್ತು ಔಟಾದರು.
ಭಾರತ- 19/2
ಭಾರತದ ಮೊದಲ ವಿಕೆಟ್ ಪತನವಾಗಿದೆ. ಇನ್ನಿಂಗ್ಸ್ನ 2ನೇ ಓವರ್‌ನಲ್ಲಿ ಕೊಹ್ಲಿ ಕ್ಯಾಚಿತ್ತು ಔಟಾದರು. ಕೊಹ್ಲಿ ಈ ಪಂದ್ಯದಲ್ಲಿ ಕೇವಲ 4 ರನ್ ಬಾರಿಸಲಷ್ಟೇ ಶಕ್ತರಾದರು.
ಭಾರತ- 12/1
ಮಳೆಯಿಂದಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಆಟ ಸ್ಥಗಿತವಾಗಿದೆ. ಮಳೆ ಬೀಳುವ ಹೊತ್ತಿಗೆ ಬ್ಯಾಟಿಂಗ್ ಆಂಭಿಸಿದ್ದ ಭಾರತ ಮೊದಲ ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 8 ರನ್ ಬಾರಿಸಿದೆ.
ಭಾರತದ ಬ್ಯಾಟಿಂಗ್ ಆರಂಭವಾಗಿದ್ದು, ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ.
ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಆಝಂ (ನಾಯಕ), ಉಸ್ಮಾನ್ ಖಾನ್, ಫಖರ್ ಜಮಾನ್, ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಂ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಅಮೀರ್.
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ಭಾರತದ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ನಾಯಕ ಬಾಬರ್ ಆಝಂ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಮಳೆ ನಿಂತಿದ್ದು, ಟಾಸ್ 8 ಗಂಟೆಗೆ ನಡೆಯಲ್ಲಿದೆ. ಪಂದ್ಯ 8:30 ಕ್ಕೆ ಆರಂಭವಾಗಲಿದೆ.
ಸದ್ಯಕ್ಕೆ ಮಳೆ ನಿಂತಿದ್ದರೂ ಪಂದ್ಯವನ್ನು ತಕ್ಷಣ ಆರಂಭಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಅಂಪೈರ್ ಪ್ರಸ್ತುತ ಮೈದಾನವನ್ನು ಪರಿಶೀಲಿಸುತ್ತಿದ್ದಾರೆ.
ನಸ್ಸೌ ಕೌಂಟಿಯಲ್ಲಿ ಸಣ್ಣ ಮಳೆಯಿಂದಾಗಿ ಟಾಸ್ ಅನ್ನು ಮುಂದೂಡಲಾಗಿದೆ.
ನ್ಯೂಯಾರ್ಕ್‌ನಲ್ಲಿ ನಡೆಯಬೇಕಿದ್ದ ಭಾರತ-ಪಾಕಿಸ್ತಾನ ಪಂದ್ಯ ಮಳೆಯಿಂದಾಗಿ ರದ್ದಾದರೆ ಉಭಯ ತಂಡಗಳು ತಲಾ 1 ಅಂಕ ಗಳಿಸಲಿವೆ. ಆದರೆ, ಪಂದ್ಯ ನಡೆಯದಿರುವ ಸಾಧ್ಯತೆ ಕಡಿಮೆ. ಸಾಮಾನ್ಯವಾಗಿ 65 ನಿಮಿಷಗಳ ನಂತರ ಓವರ್‌ಗಳನ್ನು ಕಡಿತಗೊಳಿಸಲು ಪ್ರಾರಂಭಿಸಲಾಗುತ್ತದೆ.
ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದಾರೆ. ಇನ್ನು ರಾಷ್ಟ್ರಪತಿಗಳು ಸಹ ಮೋದಿಗೆ ಪ್ರಮಾಣವಚನ ಬೋಧಿಸಲು ಆಗಮಿಸಿದ್ದಾರೆ,
ಭಾರತ-ಪಾಕಿಸ್ತಾನ ಪಂದ್ಯ ವಿಳಂಬವಾಗುವ ಸಾಧ್ಯತೆ ಇದೆ. ನ್ಯೂಯಾರ್ಕ್‌ನ ಹಲವು ಪ್ರದೇಶಗಳಲ್ಲಿ ಮಳೆ ಪ್ರಾರಂಭವಾಗಿದೆ. ನಾಸೋ ಕೌಂಟಿಯಲ್ಲೂ ಮೋಡ ಕವಿದ ವಾತಾವರಣವಿದೆ.
3ನೇ ಬಾರಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನು ಕ್ಯಾಬಿನೆಟ್ ಸಚಿವರಾಗಿ ಮೊದಲಿಗೆ ರಾಜನಾಥ್ ಸಿಂಗ್, ನಂತರ ಅಮಿತ್ ಶಾ, ನಿತಿನ್ ಗಡ್ಕರಿ, ಜೆಪಿ ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನ್ಯೂಯಾರ್ಕ್‌ನ ನಸ್ಸೌ ಕೌಂಟಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಪಂದ್ಯಕ್ಕೂ ಮುನ್ನ ಮಳೆಯಾಗುವ ಸಾಧ್ಯತೆ ಇದೆ. ಇದೇ ವೇಳೆ ಭಾರತ-ಪಾಕ್ ಪಂದ್ಯ ವಿಳಂಬವಾಗುವುದು ಖಚಿತ.
ಈ ಬಾರಿ ಟಿ20 ವಿಶ್ವಕಪ್‌ನ ಪಿಚ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು 8ನೇ ಬಾರಿ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಆಡಿದ 7 ಪಂದ್ಯಗಳಲ್ಲಿ ಟೀಂ ಇಂಡಿಯಾ 6 ಬಾರಿ ಗೆದ್ದಿದ್ದರೆ, 2021ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಒಮ್ಮೆ ಮಾತ್ರ ಗೆದ್ದಿದೆ.
Published On - 6:21 pm, Sun, 9 June 24