IND vs PAK Live Streaming: ಭಾರತ-ಪಾಕ್ ಪಂದ್ಯದ ಸಮಯ, ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ಇಲ್ಲಿದೆ ಮಾಹಿತಿ

| Updated By: Digi Tech Desk

Updated on: Oct 23, 2021 | 5:24 PM

India vs Pakistan LIVE, T20 World Cup 2021: ಅಮೆರಿಕಾ ಸಂಯುಕ್ತ, ಕೆನಡಾದಲ್ಲಿ ವಿಲೋ ಟಿವಿ ಮೂಲಕ ಈ ಪಂದ್ಯವನ್ನು ವೀಕ್ಷಿಸಬಹುದು. ಹಾಗೆಯೇ ಆಸ್ಟ್ರೇಲಿಯಾದಲ್ಲಿ ಫಾಕ್ಸ್ ಸ್ಪೋರ್ಟ್ಸ್, ನ್ಯೂಜಿಲ್ಯಾಂಡ್​ನಲ್ಲಿ ಸ್ಕೈ ಸ್ಪೋರ್ಟ್, ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಇತ್ತಿಸಲಾತ್ ಕ್ರಿಕ್ ಲೈಫ್​ ಚಾನೆಲ್​ ಮೂಲಕ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು.

IND vs PAK Live Streaming: ಭಾರತ-ಪಾಕ್ ಪಂದ್ಯದ ಸಮಯ, ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ಇಲ್ಲಿದೆ ಮಾಹಿತಿ
India-Pakistan
Follow us on

IND vs PAK Live Streaming: ಕ್ರಿಕೆಟ್ ಪ್ರೇಮಿಗಳ ಕಾತುರತೆಗೆ ತೆರೆಬೀಳಲು ಇನ್ನು ಒಂದು ದಿನ ಮಾತ್ರ ಉಳಿದಿದೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ್ (India vs Pakistan) ಮುಖಾಮುಖಿಯಾಗಲಿದೆ. ಈ ರೋಚಕ ಪಂದ್ಯವನ್ನು ವೀಕ್ಷಿಸಲು ಇಡೀ ವಿಶ್ವದ ಕ್ರಿಕೆಟ್​ ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಐಸಿಸಿ ವಿಶ್ವಕಪ್​​ನಲ್ಲಿ ಇದುವರೆಗೆ ಭಾರತದ ವಿರುದ್ದ ಗೆದ್ದ ಇತಿಹಾಸ ಪಾಕಿಸ್ತಾನಕ್ಕಿಲ್ಲ. ಇದಾಗ್ಯೂ ಈ ಬಾರಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಪಾಕ್ ನಾಯಕ ಬಾಬರ್ ಆಜಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಲಿಷ್ಠ ಪಡೆಯೊಂದಿಗೆ ಪಾಕ್​ಗೆ ಮತ್ತೊಂದು ಸೋಲುಣಿಸಲು ಸಜ್ಜಾಗಿ ನಿಂತಿದೆ. ಹೀಗಾಗಿಯೇ ಈ ಬಾರಿಯ ಪಂದ್ಯವು ಮತ್ತಷ್ಟು ರೋಚಕತೆಯಿಂದ ಕೂಡಿರಲಿದೆ.

ಹೀಗಾಗಿಯೇ ಈ ಪಂದ್ಯವನ್ನು ವೀಕ್ಷಿಸಲು ಹೆಚ್ಚಿನವರು ಕಾದು ಕುಳಿತಿದ್ದಾರೆ. ಈ ಪಂದ್ಯ ಆರಂಭವಾಗುವ ಸಮಯ ಹಾಗೂ ಯಾವ ಚಾನೆಲ್​ನಲ್ಲಿ ವೀಕ್ಷಿಸಬಹುದು, ಮೊಬೈಲ್​ನಲ್ಲಿ ಹೇಗೆ ನೋಡಬಹುದು ಎಂಬುದರ ಒಂದಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ.

ಈ ಪಂದ್ಯ ಯಾವಾಗ ನಡೆಯಲಿದೆ?
ಅಕ್ಟೋಬರ್ 24, 2021 ರಂದು ಈ ಪಂದ್ಯ ನಡೆಯಲಿದೆ.

ಪಂದ್ಯ ನಡೆಯುವ ಸ್ಥಳ ಯಾವುದು?
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್​ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?
ಸಂಜೆ 7.30 ಕ್ಕೆ ಆರಂಭವಾಗಲಿದೆ. ಟಾಸ್ ಪ್ರಕ್ರಿಯೆ ಸಂಜೆ 7 ಗಂಟೆಗೆ ನಡೆಯಲಿದೆ.

ಯಾವ ಟಿವಿ ಚಾನೆಲ್​ನಲ್ಲಿ ವೀಕ್ಷಿಸಬಹುದು?
ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಚಾನೆಲ್​ಗಳಲ್ಲಿ ಪಂದ್ಯ ಪ್ರಸಾರವಾಗಲಿದೆ.

ಆಫ್ರಿಕಾದಲ್ಲಿ ಸೂಪರ್‌ಸ್ಪೋರ್ಟ್ಸ್​ ನೆಟ್​ವರ್ಕ್​ನಲ್ಲಿ ಪ್ರಸಾರವಾಗಲಿದೆ. ಹಾಗೆಯೇ ಯುನೈಟೆಡ್ ಕಿಂಗ್‌ಡಮ್‌ನಲ್ಲಿ (UK) ಸ್ಕೈ ಸ್ಪೋರ್ಟ್ಸ್, ಕೆರಿಬಿಯನ್​ ದ್ವೀಪಗಳಲ್ಲಿ ESPN ಚಾನೆಲ್​ಗಳಲ್ಲಿ ಹಾಗೂ ಫ್ಲೋ ಸ್ಪೋರ್ಟ್ಸ್ ಅಪ್ಲಿಕೇಶನ್ ಲೈವ್ ಸ್ಟ್ರೀಮ್ ಇರಲಿದೆ.

ಇನ್ನು ಅಮೆರಿಕಾ ಸಂಯುಕ್ತ, ಕೆನಡಾದಲ್ಲಿ ವಿಲೋ ಟಿವಿ ಮೂಲಕ ಈ ಪಂದ್ಯವನ್ನು ವೀಕ್ಷಿಸಬಹುದು. ಹಾಗೆಯೇ ಆಸ್ಟ್ರೇಲಿಯಾದಲ್ಲಿ ಫಾಕ್ಸ್ ಸ್ಪೋರ್ಟ್ಸ್, ನ್ಯೂಜಿಲ್ಯಾಂಡ್​ನಲ್ಲಿ ಸ್ಕೈ ಸ್ಪೋರ್ಟ್, ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಇತ್ತಿಸಲಾತ್ ಕ್ರಿಕ್ ಲೈಫ್​ ಚಾನೆಲ್​ ಮೂಲಕ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು.

ಮೊಬೈಲ್ ಸ್ಟ್ರೀಮಿಂಗ್​ ಯಾವುದರಲ್ಲಿರಲಿದೆ?
ಭಾರತದಲ್ಲಿ ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿಯೂ ಲಭ್ಯವಿರುತ್ತದೆ.

ಉಭಯ ತಂಡಗಳು ಹೀಗಿವೆ:
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಇಶಾನ್ ಕಿಶನ್ , ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ

ಪಾಕಿಸ್ತಾನ್: ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಮೊಹಮ್ಮದ್ ರಿಜ್ವಾನ್, ಆಸಿಫ್ ಅಲಿ, ಫಖರ್ ಝಮಾನ್, ಶೊಯೇಬ್ ಮಲಿಕ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ಶಾಹೀನ್ ಅಫ್ರಿದಿ , ಹರಿಸ್ ರೌಫ್, ಹಸನ್ ಅಲಿ, ಇಮಾದ್ ವಾಸಿಂ, ಹೈದರ್ ಅಲಿ

ಇದನ್ನೂ ಓದಿ: India vs Pakistan, T20 World cup 2021: ಒಂದು ದಿನ ಮೊದಲೇ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ್

ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(India vs Pakistan, T20 World Cup 2021 Live Streaming: When and where to watch)

Published On - 5:06 pm, Sat, 23 October 21