IND vs SA: ಕೇಪ್ಟೌನ್ನಲ್ಲಿ ವಿರಾಟ್ ಅರ್ಧಶತಕ! 5-6 ವರ್ಷಗಳಲ್ಲಿ ಕೊಹ್ಲಿಯ ಅತ್ಯಂತ ಕಠಿಣ ಇನ್ನಿಂಗ್ಸ್ ಎಂದ ಗವಾಸ್ಕರ್
Virat Kohli: ಕಾಮೆಂಟರಿ ವೇಳೆ ಸುನಿಲ್ ಗವಾಸ್ಕರ್, 'ಕಳೆದ 5-6 ವರ್ಷಗಳಲ್ಲಿ ವಿರಾಟ್ ಕೊಹ್ಲಿಗೆ ಇದು ಅತ್ಯಂತ ಕಠಿಣ 40 ರನ್ಗಳಾಗಿವೆ' ಎಂದು ಹೇಳಿದರು. ವಿರಾಟ್ ಕೊಹ್ಲಿ ಅರ್ಧಶತಕ ಗಳಿಸಲು 158 ಎಸೆತಗಳನ್ನು ಆಡಿದರು.
ಬಹಳ ದಿನಗಳಿಂದ ತನ್ನ ಬ್ಯಾಟ್ ಮೂಲಕ ಮೌನವಾಗಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊನೆಗೂ ತಮ್ಮ ಬ್ಯಾಟನ್ನು ಆಕಾಶದತ್ತ ತೋರಿದ್ದಾರೆ. ಕೇಪ್ ಟೌನ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ನಾಯಕ ಕೊಹ್ಲಿ ಅರ್ಧಶತಕ ಬಾರಿಸಿದ್ದಾರೆ. ಸೆಂಚುರಿಯನ್ ಟೆಸ್ಟ್‌ನಲ್ಲಿ, ಉತ್ತಮ ಆರಂಭದ ನಂತರ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರು ಆದರೆ ಕೇಪ್ ಟೌನ್‌ನಲ್ಲಿ ಇದಕ್ಕೆ ಅವಕಾಶ ನೀಡಲಿಲ್ಲ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 28 ನೇ ಅರ್ಧಶತಕ ಸಿಡಿಸಿದ್ದಾರೆ.
ವಿರಾಟ್ ಕೊಹ್ಲಿಯ ಈ ಇನ್ನಿಂಗ್ಸ್ ತುಂಬಾ ವಿಶೇಷವಾಗಿದೆ ಏಕೆಂದರೆ ಅವರ ತಂತ್ರವನ್ನು ನಿರಂತರವಾಗಿ ಪ್ರಶ್ನಿಸಲಾಗುತ್ತಿದೆ. ಮೊದಲ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಆಫ್ ಸ್ಟಂಪ್‌ನ ಹೊರಗಿನ ಎಸೆತಗಳಲ್ಲಿ ಔಟಾದರು. ವಿರಾಟ್ ಸೆಂಚುರಿಯನ್ ನಲ್ಲಿ 8 ಮತ್ತು 10ನೇ ಸ್ಟಂಪ್ ನ ಎಸೆತಗಳಲ್ಲಿ ಶಾಟ್ ಆಡುತ್ತಾ ವಿಕೆಟ್ ಕಳೆದುಕೊಂಡರು. ಇದಾದ ನಂತರ ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ಇಂಜುರಿ ಆಗಿದ್ದರಿಂದ ವಿರಾಟ್ ಎರಡನೇ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದರೆ ಕೇಪ್ ಟೌನ್ ನಲ್ಲಿ ವಿರಾಟ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ವಿರಾಟ್ ಕೊಹ್ಲಿ ಆಫ್-ಸ್ಟಂಪ್ ಹೊರಗೆ ಬಂದ ಚೆಂಡುಗಳನ್ನು ಆಡುವ ಮನಸ್ಸೆ ಮಾಡಲಿಲ್ಲ.
ವಿರಾಟ್ ಕೊಹ್ಲಿಯ 5-6 ವರ್ಷಗಳ ಕಠಿಣ ಇನ್ನಿಂಗ್ಸ್ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದಾಗ ಟೀಂ ಇಂಡಿಯಾ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡಿತ್ತು. ಕೊಹ್ಲಿ ಕ್ರೀಸ್‌ಗೆ ಬಂದ ನಂತರ ರನ್ ಗಳಿಸಲು ಸಮಯ ತೆಗೆದುಕೊಂಡರು ಮತ್ತು ಅವಕಾಶ ಸಿಕ್ಕ ತಕ್ಷಣ ಕವರ್ ಡ್ರೈವ್ ಆಡಿದರು. ವಿರಾಟ್ ಕೊಹ್ಲಿ ಕವರ್ ಡ್ರೈವ್ ಶಾಟ್‌ನಲ್ಲಿಯೇ ಮೊದಲ 2 ಬೌಂಡರಿಗಳನ್ನು ಪಡೆದರು. ವಿರಾಟ್ ಕೊಹ್ಲಿ ಚೇತೇಶ್ವರ ಪೂಜಾರ ಅವರೊಂದಿಗೆ 132 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರು. ಆದರೆ, ಭೋಜನ ವಿರಾಮದ ನಂತರ ಚೇತೇಶ್ವರ ಪೂಜಾರ ಔಟಾದರು ಮತ್ತು ರಹಾನೆ ಕೂಡ ಕೇವಲ 9 ರನ್ ಗಳಿಸಿ ಔಟಾದರು. ಇದಾದ ಬಳಿಕ ನಾಯಕ ಕೊಹ್ಲಿ ಪಂತ್ ಜೊತೆಗೂಡಿ ತಂಡದ ಸ್ಕೋರ್ ಅನ್ನು 150ಕ್ಕೆ ಕೊಂಡೊಯ್ದರು.
ವಿರಾಟ್ ಕೊಹ್ಲಿಯ ಇನ್ನಿಂಗ್ಸ್ ನೋಡಿದ ಸುನಿಲ್ ಗವಾಸ್ಕರ್ ಇದು ಅವರ ಕಠಿಣ ಇನ್ನಿಂಗ್ಸ್ ಎಂದಿದ್ದಾರೆ. ಕಾಮೆಂಟರಿ ವೇಳೆ ಸುನಿಲ್ ಗವಾಸ್ಕರ್, ‘ಕಳೆದ 5-6 ವರ್ಷಗಳಲ್ಲಿ ವಿರಾಟ್ ಕೊಹ್ಲಿಗೆ ಇದು ಅತ್ಯಂತ ಕಠಿಣ 40 ರನ್ಗಳಾಗಿವೆ’ ಎಂದು ಹೇಳಿದರು. ವಿರಾಟ್ ಕೊಹ್ಲಿ ಅರ್ಧಶತಕ ಗಳಿಸಲು 158 ಎಸೆತಗಳನ್ನು ಆಡಿದರು. ಇದು ಟೀಂ ಇಂಡಿಯಾ ನಾಯಕನ ಬ್ಯಾಟಿಂಗ್‌ನಲ್ಲಿ ಅಪರೂಪವಾಗಿ ಕಂಡುಬರುತ್ತದೆ. ವಿರಾಟ್ ಸಾಮಾನ್ಯವಾಗಿ ಕ್ರೀಸ್‌ನಲ್ಲಿ ನಿಂತ ನಂತರ 50 ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುತ್ತಾರೆ ಆದರೆ ಕೊಹ್ಲಿ ಕೇಪ್ ಟೌನ್‌ನಲ್ಲಿನ ಪರಿಸ್ಥಿತಿಗಳನ್ನು ಮತ್ತು ಬೌಲರ್‌ಗಳ ಉತ್ತಮ ಲೈನ್ ಅನ್ನು ಗೌರವಿಸಿದರು ಮತ್ತು ಕೊನೆಯಲ್ಲಿ ತಮ್ಮ ಅರ್ಧಶತಕವನ್ನು ಬಾರಿಸಿದರು.