India vs South Africa 3rd: ದಕ್ಷಿಣ ಆಫ್ರಿಕಾ ಉತ್ತಮ ಬ್ಯಾಟಿಂಗ್: ಸೋಲಿನ ಸುಳಿಯಲ್ಲಿ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Jan 13, 2022 | 11:51 PM

213 ರನ್​ಗಳ ಟಾರ್ಗೆಟ್ ಪಡೆದ ದಕ್ಷಿಣ ಆಫ್ರಿಕಾ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 23 ರನ್ ಆಗಿದ್ದ ವೇಳೆ ಶಮಿ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು.

India vs South Africa 3rd: ದಕ್ಷಿಣ ಆಫ್ರಿಕಾ ಉತ್ತಮ ಬ್ಯಾಟಿಂಗ್: ಸೋಲಿನ ಸುಳಿಯಲ್ಲಿ ಟೀಮ್ ಇಂಡಿಯಾ
Team India
Follow us on

ಕೇಪ್​ಟೌನ್​ನಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಣ 3ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಸೌತ್ ಆಫ್ರಿಕಾ ತಂಡವು ಸಂಪೂರ್ಣ ಮೇಲುಗೈ ಸಾಧಿಸಿದೆ. 2 ವಿಕೆಟ್ ನಷ್ಟದೊಂದಿಗೆ 57 ರನ್​ಗಳಿಸಿದ್ದ ಟೀಮ್ ಇಂಡಿಯಾ ಮೂರನೇ ದಿನದಾಟ ಆರಂಭದಲ್ಲೇ ವಿಕೆಟ್ ಒಪ್ಪಿಸಿತು. ಅದರಂತೆ ಕೇವಲ 9 ರನ್​ನೊಂದಿಗೆ ಚೇತೇಶ್ವರ ಪೂಜಾರಾ ಹೊರನಡೆದರು. ಇದರ ಬೆನ್ನಲ್ಲೇ ಕೇವಲ 1 ರನ್​ ಗಳಿಸಿಕ ವಿಕೆಟ್ ಕೈಚೆಲ್ಲುವ ಮೂಲಕ ಅಜಿಂಕ್ಯ ರಹಾನೆ ಮತ್ತೊಮ್ಮೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದರು. ಇದಾಗ್ಯೂ ಮತ್ತೊಂದೆಡೆ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಜೊತೆಗೂಡಿ ತಂಡಕ್ಕೆ ಆಸರೆಯಾದರು.

ಇದಾಗ್ಯೂ 29 ರನ್​ಗಳಿಸಿದ್ದ ವಿರಾಟ್ ಕೊಹ್ಲಿ ನಿರ್ಗಮಿಸುವುದರೊಂದಿಗೆ ತಂಡದ ಸಂಪೂರ್ಣ ಹೊರೆ ರಿಷಭ್ ಪಂತ್ ಹೆಗಲೇರಿತು. ಆದರೆ ಅತ್ತ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಪಂತ್ ದಕ್ಷಿಣ ಆಫ್ರಿಕಾ ಬೌಲರುಗಳ ವಿರುದ್ದ ತಿರುಗಿಬಿದ್ದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೆ ಮತ್ತೊಂದೆಡೆ ಪಂತ್ ರನ್​ ಪೇರಿಸುತ್ತಾ ಸಾಗಿದರು. ಪರಿಣಾಮ 133 ಎಸೆತಗಳಲ್ಲಿ ರಿಷಭ್ ಪಂತ್ ಶತಕ ಪೂರೈಸಿದರು. ಈ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಶತಕ ಬಾರಿಸಿದ ಏಷ್ಯಾದ ಮೊದಲ ವಿಕೆಟ್ ಕೀಪರ್​ ಎಂಬ ದಾಖಲೆಯನ್ನು ರಿಷಭ್ ಬರೆದರು. ಇದರೊಂದಿಗೆ ಟೀಮ್ ಇಂಡಿಯಾ ಪರ ದಕ್ಷಿಣ ಆಫ್ರಿಕಾದಲ್ಲಿ ಸೆಂಚುರಿ ಸಿಡಿಸಿದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ಪಂತ್ ಪಾಲಾಯಿತು. ರಿಷಭ್ ಪಂತ್ ಶತಕದ ಬೆನ್ನಲ್ಲೇ ಜಸ್​ಪ್ರೀತ್ ಬುಮ್ರಾ ವಿಕೆಟ್ ಒಪ್ಪಿಸಿದರು. ಅಂತಿಮ ರಿಷಭ್ ಪಂತ್ ಅಜೇಯರಾಗಿ ಉಳಿದರೂ ಟೀಮ್ ಇಂಡಿಯಾದ 2ನೇ ಇನಿಂಗ್ಸ್​ 198 ರನ್​ಗೆ ಅಂತ್ಯ ಕಂಡಿತು.

ಇತ್ತ 213 ರನ್​ಗಳ ಟಾರ್ಗೆಟ್ ಪಡೆದ ದಕ್ಷಿಣ ಆಫ್ರಿಕಾ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 23 ರನ್ ಆಗಿದ್ದ ವೇಳೆ ಶಮಿ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದಾಗ್ಯೂ ನಾಯಕ ಡೀನ್ ಎಲ್ಗರ್ (30) ಜೊತೆಗೂಡಿದ ಕೀಗನ್ ಪೀಟರ್ಸನ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಇನ್ನು 3ನೇ ದಿನದಾಟದ ಅಂತಿಮ ಓವರ್​ನಲ್ಲಿ ಡೀನ್ ಎಲ್ಗರ್ ವಿಕೆಟ್ ಪಡೆಯುವಲ್ಲಿ ಜಸ್​ಪ್ರೀತ್ ಬುಮ್ರಾ ಯಶಸ್ವಿಯಾದರು. 3ನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 2 ವಿಕೆಟ್ ಕಳೆದುಕೊಂಡರು 101 ರನ್​ಗಳಿಸಿದೆ. ಕ್ರೀಸ್​ನಲ್ಲಿ 48 ರನ್ ಬಾರಿಸಿರುವ ಕೀಗನ್ ಪೀಟರ್ಸನ್ ಇದ್ದು, ಇನ್ನೆರಡು ದಿನದಾಟದಲ್ಲಿ ದಕ್ಷಿಣ ಆಫ್ರಿಕಾಗೆ ಗೆಲ್ಲಲು 111 ರನ್​ಗಳ ಅವಶ್ಯಕತೆಯಿದೆ. ಇತ್ತ ಟೀಮ್ ಇಂಡಿಯಾ ಜಯ ಸಾಧಿಸಬೇಕಿದ್ರೆ 8 ವಿಕೆಟ್​ಗಳನ್ನು ಪಡೆಯಲೇಬೇಕು.

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(India vs South Africa Highlights, 3rd Test, Day 3)

Published On - 10:47 pm, Thu, 13 January 22