
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ (IND vs SA Test) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 18 ಸದಸ್ಯರ ಬಲಿಷ್ಠ ಭಾರತ (Team India) ತಂಡವನ್ನು ಪ್ರಕಟ ಮಾಡಿದೆ. ಇದರ ನಡುವೆ ಅಚ್ಚರಿಯ ಬೆಳವಣಿಗೆಗಳು ಕೂಡ ನಡೆದಿವೆ. ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು (Virat Kohli) ಕೆಳಗಿಳಿಸಿ ರೋಹಿತ್ ಶರ್ಮಾ (Rohit Sharma) ಅವರಿಗೆ ಜವಾಬ್ದಾರಿ ನೀಡಲಾಗಿದೆ. ಉಪ ನಾಯಕನ ಪಟ್ಟ ಕೆಎಲ್ ರಾಹುಲ್ಗೆಂದು (KL Rahul) ಹೇಳಲಾಗಿದೆ. ಜೊತೆಗೆ ಭಾರತ ಟೆಸ್ಟ್ ತಂಡಕ್ಕೆ ಅಜಿಂಕ್ಯಾ ರಹಾನೆ (Ajinkya Rahane) ಬದಲು ರೋಹಿತ್ ಶರ್ಮಾ ಅವರನ್ನು ಉಪ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಆದರೆ, ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ (India vs South Africa) ಟೀಮ್ ಇಂಡಿಯಾ ಇನ್ನೂ ಪ್ರಕಟವಾಗಿಲ್ಲ. ಕೆಲವೇ ದಿನಗಳಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಈ ಬಗ್ಗೆ ಸಭೆ ನಡೆಸಿ ತಂಡವನ್ನು ಹೆರಿಸಲಿದೆ.
ಏಕದಿನ ಸರಣಿಯ ಆಯ್ಕೆ ಬಿಸಿಸಿಐಗೆ ಕಬ್ಬಿಣದ ಕಡಲೆಯಂತಾಗಿದೆ. ರುತುರಾಜ್ ಗಾಯಕ್ವಾಡ್, ಹರ್ಷಲ್ ಪಟೇಲ್ ಸೇರಿದಂತೆ ಅನೇಕ ಯುವ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ಕಾದುಕುಳಿತಿದ್ದಾರೆ. ಇದರ ನಡುವೆ ಐದು ತಿಂಗಳ ಬಳಿಕ ಶಿಖರ್ ಧವನ್ ಕೂಡ ತಂಡಕ್ಕೆ ಕಮ್ಬ್ಯಾಕ್ ಮಾಡುವ ಹುರುಪಿನಲ್ಲಿದ್ದಾರೆ. ಧವನ್ ಜುಲೈನಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕೊನೇಯದಾಗಿ ಕಣಕ್ಕಿಳಿದಿದ್ದರು. ಇದೀಗ ಮತ್ತೆ ಭಾರತ ಏಕದಿನ ತಂಡ ಸೇರಲಿದ್ದಾರೆ. ಹಾಗಾದ್ರೆ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತದ ಸಂಭಾವ್ಯ ಆಟಗಾರರ ಪಟ್ಟಿ ನೋಡುವುದಾದರೆ.
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ರಾಹುಲ್ ಚಹಾರ್.
ಇನ್ನು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಆಯೋಜನೆಯಾಗಿದ್ದ ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು ಕೋವಿಡ್ ಕಾರಣದಿಂದ ಕೈಬಿಡಲಾಗಿದೆ. ಆದರೆ, ರದ್ದಾಗಿಲ್ಲ, ಬದಲಾಗಿ ಮುಂದೂಡಿಕೆ ಆಗಿದೆ. ಮುಂದಿನ ವರ್ಷ ಸೂಕ್ತ ಸಮಯ ನೋಡಿ ಟಿ20 ಸರಣಿಯನ್ನ ಆಡಿಸಲಾಗುವುದು ಎಂದು ಕ್ರಿಕೆಟ್ ಸೌತ್ ಆಫ್ರಿಕಾ ಹೇಳಿದೆ. ಸೆಂಚೂರಿಯನ್, ಜೋಹಾನ್ಸ್ಬರ್ಗ್, ಕೇಪ್ಟೌನ್ ಮತ್ತು ಪಾರ್ಲ್ ನಗರಗಳಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಸರಣಿಗಳ ಪಂದ್ಯಗಳು ನಡೆಯಲಿವೆ.
ದಕ್ಷಿಣ ಆಫ್ರಿಕಾ ಮತ್ತು ಭಾರತ ಕ್ರಿಕೆಟ್ ಸರಣಿ ವೇಳಾಪಟ್ಟಿ:
ಟೆಸ್ಟ್ ಸರಣಿ:
1) ಡಿ. 26-30: ಸೂಪರ್ ಸ್ಪೋರ್ಟ್ ಪಾರ್ಕ್, ಸೆಂಚೂರಿಯನ್
2) ಜ. 3-7: ವಾಂಡರರ್ಸ್, ಜೋಹಾನ್ಸ್ಬರ್ಗ್
3) ಜ. 11-15: ನ್ಯೂಲ್ಯಾಂಡ್ಸ್, ಕೇಪ್ ಟೌನ್
ಏಕದಿನ ಸರಣಿ:
1) ಜ. 19: ಬೋಲ್ಯಾಂಡ್ ಪಾರ್ಕ್, ಪಾರ್ಲ್
2) ಜ. 21: ಬೋಲ್ಯಾಂಡ್ ಪಾರ್ಕ್, ಪಾರ್ಲ್
3) ಜ. 23: ನ್ಯೂಲೆಂಡ್ಸ್, ಕೇಪ್ ಟೌನ್
KL Rahul: ಭಾರತ ಏಕದಿನ ತಂಡಕ್ಕೆ ಉಪನಾಯಕ ಯಾರು ಗೊತ್ತೇ?: ಬಿಸಿಸಿಐಯಿಂದ ಮತ್ತೊಂದು ಶಾಕಿಂಗ್ ನಿರ್ಧಾರ
(India ODI squads for upcoming tour to South Africa Shikhar Dhawan may return)