India vs South Africa 2nd T20 Highlights: ಮತ್ತೆ ಎಡವಿದ ಭಾರತ; 2ನೇ ಟಿ20ಯಲ್ಲೂ ಆಫ್ರಿಕಾಗೆ ಸುಲಭ ಜಯ

| Updated By: ಪೃಥ್ವಿಶಂಕರ

Updated on: Jun 12, 2022 | 10:43 PM

IND Vs SA 2nd T20 Match Live Updates: ಸರಣಿಯ ಮೊದಲ ಪಂದ್ಯ ದೆಹಲಿಯಲ್ಲಿ ನಡೆದಿದ್ದು, ಪ್ರವಾಸಿ ತಂಡ ದಕ್ಷಿಣ ಆಫ್ರಿಕಾ ಏಳು ವಿಕೆಟ್‌ಗಳಿಂದ ರಿಷಬ್ ಪಂತ್ ನೇತೃತ್ವದ ಭಾರತ ತಂಡವನ್ನು ಸೋಲಿಸಿ 1-0 ಮುನ್ನಡೆ ಸಾಧಿಸಿದೆ.

India vs South Africa 2nd T20 Highlights: ಮತ್ತೆ ಎಡವಿದ ಭಾರತ; 2ನೇ ಟಿ20ಯಲ್ಲೂ ಆಫ್ರಿಕಾಗೆ ಸುಲಭ ಜಯ
IND vs SA

ಇಂದು ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟಿ20 ಪಂದ್ಯದಲ್ಲೂ ಟೀಂ ಇಂಡಿಯಾ ಕಥೆ ಕಟಕ್‌ನಲ್ಲಿಯೂ ಬದಲಾಗಲಿಲ್ಲ. ವರ್ಷದ ಆರಂಭದಲ್ಲಿ ನಡೆದ ಟೆಸ್ಟ್‌ನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟಿ20 ವರೆಗೆ ಭಾರತ ತಂಡದ ಅಂಕಿಅಂಶ ಮತ್ತಷ್ಟು ಹದಗೆಟ್ಟಿದ್ದು, ಏಳನೇ ಯತ್ನದಲ್ಲೂ ತಂಡ ವಿಫಲವಾಯಿತು. ಜೂನ್ 12 ರಂದು ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಭಾರತವನ್ನು ದಕ್ಷಿಣ ಆಫ್ರಿಕಾ 4 ವಿಕೆಟ್‌ಗಳಿಂದ ಸೋಲಿಸಿತು ಮತ್ತು ಇದರೊಂದಿಗೆ 2-0 ಮುನ್ನಡೆ ಸಾಧಿಸುವ ಮೂಲಕ ಟೀಂ ಇಂಡಿಯಾದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

LIVE NEWS & UPDATES

The liveblog has ended.
  • 12 Jun 2022 10:33 PM (IST)

    ಭುವಿಗೆ 4ನೇ ವಿಕೆಟ್

    18ನೇ ಓವರ್‌ನ ಕೊನೆಯ ಎಸೆತದಲ್ಲಿ ಕೇವಲ ಒಂದು ರನ್ ಗಳಿಸಿದ್ದ ಪಾರ್ನೆಲ್ ಅವರನ್ನು ಭುವನೇಶ್ವರ್ ಕುಮಾರ್ ಬೌಲ್ಡ್ ಮಾಡಿದರು. ಭಾರತಕ್ಕೆ ಈಗ ಮರಳುವುದು ಅಸಾಧ್ಯ. ಮುಂದಿನ ಓವರ್‌ನ ಎರಡನೇ ಎಸೆತದಲ್ಲಿ ಎರಡು ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ಗುರಿ ಮುಟ್ಟಿತು.

  • 12 Jun 2022 10:21 PM (IST)

    ಚಹಾಲ್ ದುಬಾರಿ ಓವರ್

    16ನೇ ಓವರ್‌ನಲ್ಲಿ ಚಹಾಲ್ 23 ರನ್ ನೀಡಿದರು. ಓವರ್‌ನ ಎರಡನೇ ಎಸೆತದಲ್ಲಿ, ಮಿಲ್ಲರ್ ಲಾಂಗ್ ಆನ್‌ನಲ್ಲಿ 91 ಮೀಟರ್ ಉದ್ದದ ಸಿಕ್ಸರ್ ಬಾರಿಸಿದರು. ಅದೇ ಸಮಯದಲ್ಲಿ, ಓವರ್‌ನ ನಾಲ್ಕನೇ ಎಸೆತದಲ್ಲಿ ಕ್ಲಾಸನ್ ಲಾಂಗ್ ಆನ್‌ನಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದರು. ಓವರ್‌ನ ಕೊನೆಯ ಎಸೆತದಲ್ಲಿ ಕ್ಲಾಸೆನ್ ಓವರ್‌ನ ಮೂರನೇ ಸಿಕ್ಸರ್ ಬಾರಿಸಿದರು.


  • 12 Jun 2022 10:15 PM (IST)

    ಅವೇಶ್ ಖಾನ್​ಗೆ ಬೌಂಡರಿ

    ಅವೇಶ್ ಖಾನ್ 15ನೇ ಓವರ್​ನಲ್ಲಿ ಏಳು ರನ್ ನೀಡಿದರು. ಓವರ್‌ನ ಐದನೇ ಎಸೆತದಲ್ಲಿ ಕ್ಲಾಸೆನ್ ಪುಲ್ ಮತ್ತು ಮಿಡ್ ವಿಕೆಟ್‌ನಲ್ಲಿ ಬೌಂಡರಿ ಬಾರಿಸಿದರು. ದಕ್ಷಿಣ ಆಫ್ರಿಕಾ 31 ಎಸೆತಗಳಲ್ಲಿ 35 ರನ್ ಗಳಿಸಿದೆ. ಈ ಪಂದ್ಯದಲ್ಲಿ ಭಾರತಕ್ಕೆ ಪುನರಾಗಮನದ ಹಾದಿಗಳು ಈಗ ಮುಚ್ಚಿಹೋಗಿವೆ

  • 12 Jun 2022 10:11 PM (IST)

    ಕ್ಲಾಸೆನ್ ಅರ್ಧಶತಕ

    14ನೇ ಓವರ್‌ನ ಮೂರನೇ ಎಸೆತದಲ್ಲಿ ಕ್ಲಾಸೆನ್ ಒಂದು ರನ್ ಕದ್ದು ಅರ್ಧಶತಕ ಪೂರೈಸಿದರು. ಇದು ಕ್ಲಾಸೆನ್ ಅವರ ನಾಲ್ಕನೇ ಟಿ20 ಅರ್ಧಶತಕವಾಗಿದೆ. ತಂಡದ ಗೆಲುವಿನಲ್ಲಿ ಅವರ ಇನ್ನಿಂಗ್ಸ್ ಬಹಳ ಮುಖ್ಯವಾಗಲಿದೆ. ಓವರ್‌ನ ಐದನೇ ಎಸೆತದಲ್ಲಿ ಕ್ಲಾಸೆನ್ ಲಾಂಗ್ ಆನ್‌ನಲ್ಲಿ ಸಿಕ್ಸರ್ ಬಾರಿಸಿದರು. ಹಾರ್ದಿಕ್ ಅವರ ಈ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಖಾತೆಗೆ 10 ರನ್‌ಗಳು ಬಂದವು.

  • 12 Jun 2022 10:11 PM (IST)

    ಬವುಮಾ ಔಟ್

    ಬವುಮಾ ಅವರು 13ನೇ ಓವರ್ ಅನ್ನು ಬೌಂಡರಿಯಿಂದ ಆರಂಭಿಸಿದರು ಮತ್ತು ನಂತರ ಅವರು ಮುಂದಿನ ಎಸೆತದಲ್ಲಿ ಬೌಲ್ಡ್ ಆದರು. ಅವರು 30 ಎಸೆತಗಳಲ್ಲಿ 35 ರನ್ ಗಳಿಸಿದ ನಂತರ ಮರಳಿದರು.

  • 12 Jun 2022 10:10 PM (IST)

    ಕ್ಲಾಸೆನ್ ಮತ್ತು ಬವುಮಾ ನಡುವೆ ಅರ್ಧಶತಕದ ಜೊತೆಯಾಟ

    12ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಎಸೆದರು. ಓವರ್‌ನ ಎರಡನೇ ಎಸೆತವು ಕವರ್‌ನಲ್ಲಿ ಬೌಂಡರಿಗೆ ಹೊಯಿತು. ಮುಂದಿನ ಎಸೆತದಲ್ಲಿ ಕ್ಲಾಸೆನ್ ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. ಇದಲ್ಲದೇ ನಾಲ್ಕನೇ ಎಸೆತದಲ್ಲಿ ಬೌಂಡರಿ ಬಂತು. ಕ್ಲಾಸೆನ್ ಮತ್ತು ಬವುಮಾ ನಡುವಿನ ಅರ್ಧಶತಕದ ಜೊತೆಯಾಟ ಪೂರ್ಣಗೊಂಡಿದೆ.

  • 12 Jun 2022 09:48 PM (IST)

    ಕ್ಲಾಸೆನ್ ಫೋರ್

    10ನೇ ಓವರ್‌ನ ಮೊದಲ ಎಸೆತದಲ್ಲಿ ಕ್ಲಾಸೆನ್ ಡೀಪ್ ಮಿಡ್ ವಿಕೆಟ್‌ನಲ್ಲಿ ಬೌಂಡರಿ ಬಾರಿಸಿದರು. ಇದಾದ ನಂತರ ಆ ಓವರ್‌ನಲ್ಲಿ ಕೇವಲ ನಾಲ್ಕು ರನ್‌ಗಳು ಬಂದವು. ಬವುಮಾ ಮತ್ತು ಕ್ಲಾಸೆನ್ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ನಂತರ ಇನ್ನಿಂಗ್ಸ್ ಅನ್ನು ಕೈಗೆತ್ತಿಕೊಂಡರು.

  • 12 Jun 2022 09:42 PM (IST)

    ಕ್ಲಾಸೆನ್ ಎರಡು ಸಿಕ್ಸರ್

    ಮೊದಲ ಓವರ್‌ನಲ್ಲಿ ನಾಲ್ಕು ರನ್ ನೀಡಿದ ಯುಜ್ವೇಂದ್ರ ಚಹಾಲ್ 13 ರನ್ ನೀಡಿದರು. ಓವರ್‌ನ ಎರಡನೇ ಎಸೆತದಲ್ಲಿ ಕ್ಲಾಸೆನ್ ಕವರ್‌ನಲ್ಲಿ ಬೌಂಡರಿ ಬಾರಿಸಿದರು. ಓವರ್‌ನ ನಾಲ್ಕನೇ ಎಸೆತದಲ್ಲಿ ಸ್ಲಾಗ್ ಸ್ವೀಪ್ ಮಾಡಿ ಮಿಡ್ ವಿಕೆಟ್‌ನಲ್ಲಿ ಸಿಕ್ಸರ್ ಬಾರಿಸಿದರು.

  • 12 Jun 2022 09:42 PM (IST)

    ದಕ್ಷಿಣ ಆಫ್ರಿಕಾ ಒತ್ತಡದಲ್ಲಿದೆ

    ಏಳನೇ ಓವರ್‌ನಲ್ಲಿ ಯುಜ್ವೇಂದ್ರ ಚಹಾಲ್ ನಾಲ್ಕು ರನ್ ನೀಡಿದರು. ಆ ಓವರ್‌ನಲ್ಲಿ ಕೇವಲ ನಾಲ್ಕು ರನ್‌ಗಳು ಬಂದವು. ಹರ್ಷಲ್ ಪಟೇಲ್ ಕೂಡ 8ನೇ ಓವರ್ ನಲ್ಲಿ ರನ್ ಮಾತ್ರ ನೀಡಿದರು. ಭಾರತಕ್ಕೆ ಇಲ್ಲಿ ಇನ್ನೂ ಒಂದು ವಿಕೆಟ್ ಅಗತ್ಯವಿದೆ.

  • 12 Jun 2022 09:35 PM (IST)

    ದುಸೇನ್ ಔಟ್

    ಭುವನೇಶ್ವರ್ ಕುಮಾರ್ ತಮ್ಮ ಮೂರನೇ ಓವರ್‌ನಲ್ಲಿ ಭಾರತಕ್ಕೆ ಮೂರನೇ ಯಶಸ್ಸನ್ನು ನೀಡಿದರು. ಓವರ್‌ನ ಮೂರನೇ ಚೆಂಡು ದುಸ್ಸೇನ್ ಅವರ ಬ್ಯಾಟ್‌ನ ಅಂಚಿಗೆ ಬಡಿದು ಆಫ್-ಸ್ಟಂಪ್‌ಗೆ ಬಡಿಯಿತು. 7 ಎಸೆತಗಳಲ್ಲಿ 1 ರನ್ ಗಳಿಸಿ ಔಟಾದರು.

  • 12 Jun 2022 09:35 PM (IST)

    ಬವುಮಾ ಉತ್ತಮ ಬ್ಯಾಟಿಂಗ್

    ಅವೇಶ್ ಖಾನ್ ತಮ್ಮ ಎರಡನೇ ಓವರ್ನಲ್ಲಿ ಏಳು ರನ್ ಬಿಟ್ಟುಕೊಟ್ಟರು. ಓವರ್‌ನ ಎರಡನೇ ಎಸೆತದಲ್ಲಿ, ಬವುಮಾ ಚೆಂಡನ್ನು ಮಿಡ್-ವಿಕೆಟ್‌ನ ಮೇಲೆ ಆಡಿ ಫೋರ್‌ಗೆ ಫ್ಲಿಕ್ ಮಾಡಿದರು.

  • 12 Jun 2022 09:34 PM (IST)

    ಬವುಮಾ ಫೋರ್

    ನಾಲ್ಕನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ 8 ರನ್ ನೀಡಿದರು. ಓವರ್‌ನ ನಾಲ್ಕನೇ ಎಸೆತದಲ್ಲಿ ಹಾರ್ದಿಕ್ ವೇಗದ ಲಾಭ ಪಡೆದ ಬಾವುಮಾ ಅದನ್ನು ಸಿಕ್ಸರ್‌ಗೆ ಸ್ಕೂಪ್ ಮಾಡಿದರು.

  • 12 Jun 2022 09:16 PM (IST)

    ಪ್ರಿಟೋರಿಯಸ್ ಔಟ್

    ಭುವೇಶ್ವರ್ ಕುಮಾರ್ ತಮ್ಮ ಎರಡನೇ ಓವರ್​ನಲ್ಲಿ ತಂಡಕ್ಕೆ ಎರಡನೇ ಯಶಸ್ಸನ್ನು ನೀಡಿದರು. ಓವರ್‌ನ ಕೊನೆಯ ಎಸೆತದಲ್ಲಿ ಭುವನೇಶ್ವರ್ ಕುಮಾರ್ ತಂಡಕ್ಕೆ ಎರಡನೇ ಯಶಸ್ಸು ತಂದುಕೊಟ್ಟರು. ಪ್ರಿಟೋರಿಯಸ್ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಚೆಂಡನ್ನು ಆಡಿದರು ಮತ್ತು ಅವೇಶ್ ಖಾನ್ ಅದ್ಭುತ ಕ್ಯಾಚ್ ಪಡೆದರು. 5 ಎಸೆತಗಳಲ್ಲಿ ನಾಲ್ಕು ರನ್ ಗಳಿಸಿದ ನಂತರ ಪ್ರಿಟೋರಿಯಸ್‌ಗೆ ಮರಳಿದರು.

  • 12 Jun 2022 09:12 PM (IST)

    ಅವೇಶ್ ಖಾನ್ ಉತ್ತಮ ಓವರ್

    ಅವೇಶ್ ಖಾನ್ ಎರಡನೇ ಓವರ್‌ನಲ್ಲಿ ನಾಲ್ಕು ರನ್ ನೀಡಿದರು. ಓವರ್‌ನ ನಾಲ್ಕನೇ ಎಸೆತದಲ್ಲಿ ಬಾವುಮಾ ಚೆಂಡನ್ನು ಕಟ್ ಮಾಡಿ ಬೌಂಡರಿ ಹೊಡೆದರು. ಭಾರತೀಯ ಬೌಲರ್‌ಗಳು ಇಂದು ಉತ್ತಮ ಫಾರ್ಮ್‌ನಲ್ಲಿದ್ದಾರೆ.

  • 12 Jun 2022 09:09 PM (IST)

    ಹೆನ್ರಿಚ್ ಔಟ್

    ಮೊದಲ ಓವರ್‌ನಲ್ಲಿ ಹೆನ್ರಿಚ್ ಅವರನ್ನು ಭುವನೇಶ್ವರ್ ಕುಮಾರ್ ಔಟ್ ಮಾಡಿದರು. ಓವರ್‌ನ ಕೊನೆಯ ಎಸೆತವು ಹೆನ್ರಿಚ್ ಅವರ ಬ್ಯಾಟ್‌ನ ಅಂಚಿಗೆ ಬಡಿದು ನೇರವಾಗಿ ಆಫ್-ಸ್ಟಂಪ್‌ಗೆ ಹೋಯಿತು. ಅವರು 3 ಎಸೆತಗಳಲ್ಲಿ ನಾಲ್ಕು ರನ್ ಗಳಿಸಿದ ನಂತರ ಮರಳಿದರು.

  • 12 Jun 2022 08:55 PM (IST)

    148 ರನ್ ಗುರಿ

    ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಿ 148 ರನ್ ಗಳಿಸಿತ್ತು. ತಂಡದ ಪರ ಇಶಾನ್ ಕಿಶನ್ 21 ಎಸೆತಗಳಲ್ಲಿ 34 ರನ್ ಹಾಗೂ ಶ್ರೇಯಸ್ ಅಯ್ಯರ್ 40 ರನ್ ಗಳಿಸಿದರು. ದಿನೇಶ್ ಕಾರ್ತಿಕ್ ಕೊನೆಯ ಓವರ್‌ಗಳಲ್ಲಿ ರನ್ ಸೇರಿಸಿದರು.

  • 12 Jun 2022 08:52 PM (IST)

    ಕೊನೆಯ ಓವರ್‌ನಲ್ಲಿ 18 ರನ್

    ಕೊನೆಯ ಓವರ್‌ನಲ್ಲಿ ಪ್ರಿಟೋರಿಯಸ್ 18 ರನ್ ನೀಡಿದರು. ಓವರ್‌ನ ಮೊದಲ ಎಸೆತದಲ್ಲಿ, ಹರ್ಷಲ್ ಪಟೇಲ್ ಚೆಂಡನ್ನು ಮಿಡ್ ಆಫ್‌ನಲ್ಲಿ ಆಡಿದರು, ಅದು ಬೌಂಡರಿ ದಾಟಿತು. ಓವರ್‌ನ ನಾಲ್ಕನೇ ಎಸೆತದಲ್ಲಿ ಕಾರ್ತಿಕ್ ಮಿಡ್‌ನಲ್ಲಿ ಸಿಕ್ಸರ್ ಬಾರಿಸಿದರೆ, ಮುಂದಿನ ಎಸೆತದಲ್ಲಿ ಡೀಪ್ ಪಾಯಿಂಟ್‌ನಲ್ಲಿ ಸಿಕ್ಸರ್ ಬಾರಿಸಿದರು.

  • 12 Jun 2022 08:44 PM (IST)

    ಕಾರ್ತಿಕ್ ಎರಡು ಬೌಂಡರಿ

    19ನೇ ಓವರ್‌ನಲ್ಲಿ ಎನ್ರಿಕ್ ನಾರ್ಕಿಯಾ 12 ರನ್ ನೀಡಿದರು. ಓವರ್‌ನ ಐದನೇ ಎಸೆತದಲ್ಲಿ ಕಾರ್ತಿಕ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಬೌಂಡರಿ ಬಾರಿಸಿದರು. ಆ ಓವರ್‌ನ ಕೊನೆಯ ಎಸೆತದಲ್ಲಿ ಥರ್ಡ್ ಮ್ಯಾನ್‌ನಲ್ಲಿ ಮತ್ತೊಂದು ಬೌಂಡರಿ ಬಾರಿಸಿದರು.

  • 12 Jun 2022 08:42 PM (IST)

    24 ಎಸೆತಗಳ ಬಳಿಕ ಭಾರತದ ಖಾತೆಗೆ ಬೌಂಡರಿ

    ಕಗಿಸೊ ರಬಾಡ 18ನೇ ಓವರ್‌ನಲ್ಲಿ ಆರು ರನ್ ನೀಡಿದರು. ಹರ್ಷಲ್ ಪಟೇಲ್ ಓವರ್​ನ ಮೂರನೇ ಎಸೆತದಲ್ಲಿ ಫೋರ್ ಗಳಿಸಿದರು. 24 ಎಸೆತಗಳ ಬಳಿಕ ಭಾರತದ ಖಾತೆಗೆ ಬೌಂಡರಿ ಸೇರಿದೆ. ರಬಾಡ ಅವರ ಸ್ಪೆಲ್ ಕೂಡ ಕೊನೆಗೊಂಡಿತು. ಈ ಸ್ಪೆಲ್‌ನಲ್ಲಿ ಅವರು 15 ರನ್‌ಗಳಿಗೆ ಒಂದು ವಿಕೆಟ್ ಪಡೆದರು.

  • 12 Jun 2022 08:36 PM (IST)

    ಅಕ್ಷರ್ ಔಟ್

    17ನೇ ಓವರ್‌ನಲ್ಲಿ ಅಕ್ಸರ್ ಪಟೇಲ್ ಅವರನ್ನು ಔಟ್ ಮಾಡುವ ಮೂಲಕ ಎನ್ರಿಕ್ ನಾರ್ಕಿಯಾ ಭಾರತಕ್ಕೆ ಆರನೇ ಹೊಡೆತ ನೀಡಿದರು. ಓವರ್‌ನ ಕೊನೆಯ ಎಸೆತದಲ್ಲಿ ಅಕ್ಷರ್ ಫ್ಲಿಕ್ ಮಾಡಲು ಪ್ರಯತ್ನಿಸಿದರು. ಚೆಂಡು ಬ್ಯಾಟ್ ಮತ್ತು ಪ್ಯಾಡ್ ನಡುವಿನಿಂದ ಹೋಗಿ ಸ್ಟಂಪ್‌ಗೆ ಬಡಿಯಿತು. 11 ಎಸೆತಗಳಲ್ಲಿ 10 ರನ್ ಗಳಿಸಿದ ನಂತರ ಅಕ್ಷರ್ ವಾಪಸಾದರು.

  • 12 Jun 2022 08:31 PM (IST)

    ಕಾರ್ತಿಕ್ ಸ್ವಲ್ಪದರಲ್ಲೇ ಬಚಾವ್

    16ನೇ ಓವರ್​ನಲ್ಲಿ ರಬಾಡ 5 ರನ್ ನೀಡಿದರು. ಓವರ್‌ನ ಮೂರನೇ ಬಾಲ್‌ನಲ್ಲಿ ಕಾರ್ತಿಕ್ ಚೆಂಡನ್ನು ಮಿಡ್‌ನಲ್ಲಿ ಆಡಿದರು ಆದರೆ ಚೆಂಡು ಗಾಳಿಯಲ್ಲಿ ಹೋಯಿತು. ಆದರೆ ಯಾವುದೇ ಫೀಲ್ಡರ್‌ ಕೈಗೆ ಚೆಂಡು ಹೋಗಲಿಲ್ಲ.

  • 12 Jun 2022 08:22 PM (IST)

    ಪರ್ನೆಲ್ ಸ್ಪೆಲ್ ಅಂತ್ಯ

    15ನೇ ಓವರ್‌ನಲ್ಲಿ ಪರ್ನೆಲ್ 5 ರನ್ ನೀಡಿದರು. ಓವರ್‌ನ ಐದನೇ ಎಸೆತ ವೈಡ್ ಆಗಿತ್ತು. ಪಾರ್ನೆಲ್ ಅವರ ಸ್ಪೆಲ್ ಪೂರ್ಣಗೊಂಡಿದೆ. ನಾಲ್ಕು ಓವರ್​ಗಳಲ್ಲಿ 23 ರನ್ ನೀಡಿ ಒಂದು ವಿಕೆಟ್ ಪಡೆದರು.

  • 12 Jun 2022 08:19 PM (IST)

    ಅಯ್ಯರ್ ಔಟ್

    14ನೇ ಓವರ್‌ನಲ್ಲಿ ಪ್ರಿಟೋರಿಯಸ್ 7 ರನ್ ನೀಡಿದರು. ಆ ಓವರ್‌ನ ಎರಡನೇ ಎಸೆತದಲ್ಲಿ ಅಕ್ಷರ್ ಬೌಂಡರಿ ಬಾರಿಸಿದರು. ಐದನೇ ಎಸೆತದಲ್ಲಿ, ಚೆಂಡು ಅಯ್ಯರ್ ಅವರ ಬ್ಯಾಟ್‌ನ ಅಂಚಿಗೆ ಬಡಿಯಿತು ಕ್ಲಾಸೆನ್‌ ಸ್ಟಂಪ್‌ನ ಹಿಂದೆ ಕ್ಯಾಚ್ ಪಡೆದರು. ಅವರು 35 ಎಸೆತಗಳಲ್ಲಿ 40 ರನ್ ಗಳಿಸಿದ ನಂತರ ಮರಳಿದರು. ಅವರು ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು.

  • 12 Jun 2022 08:14 PM (IST)

    ಹಾರ್ದಿಕ್ ಪಾಂಡ್ಯ ಔಟ್

    13ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಪಾರ್ನೆಲ್ ಔಟ್ ಮಾಡಿದರು. ಪಾಂಡ್ಯ ಓವರ್‌ನ ನಾಲ್ಕನೇ ಎಸೆತದಲ್ಲಿ ಹಾರ್ಡಿ ಬೌನ್ಸ್‌ನಿಂದ ತಪ್ಪಿಸಿಕೊಂಡರು. ಕಟ್ ಆಡಲು ಪ್ರಯತ್ನಿಸುತ್ತಿದ್ದರೂ ಬೌಲ್ಡ್ ಆದರು. ಅವರು 12 ಎಸೆತಗಳಲ್ಲಿ 9 ರನ್ ಗಳಿಸಿದ ನಂತರ ಮರಳಿದರು.

  • 12 Jun 2022 08:14 PM (IST)

    ಅಯ್ಯರ್ ಅಮೋಘ ಸಿಕ್ಸರ್

    ಕೇಶವ್ ಮಹಾರಾಜ್ 12ನೇ ಓವರ್​ನಲ್ಲಿ ಒಂಬತ್ತು ರನ್ ಬಿಟ್ಟುಕೊಟ್ಟರು. ಓವರ್‌ನ ಮೊದಲ ಎಸೆತದಲ್ಲಿ ಅಯ್ಯರಗ ಲಾಂಗ್ ಆಫ್‌ನಲ್ಲಿ ಸಿಕ್ಸರ್ ಬಾರಿಸಿದರು.

  • 12 Jun 2022 08:08 PM (IST)

    ರಿಷಬ್ ಪಂತ್ ಔಟ್

    ಕೇಶವ್ ಮಹಾರಾಜ್ 10ನೇ ಓವರ್‌ನಲ್ಲಿ 3 ರನ್ ನೀಡಿ ಪಂತ್ ಪ್ರಮುಖ ವಿಕೆಟ್ ಪಡೆದರು. ಪಂತ್ ಭಾರಿಸಲು ಪ್ರಯತ್ನಿಸುತ್ತಿದ್ದರು ಆದರೆ ಸ್ವೀಪ್ ಕವರ್ ಮೇಲೆ ಚೆಂಡನ್ನು ಆಡಿದರು. ವ್ಯಾನ್ ಡೆರ್ ದುಸೇನ್ ಕ್ಯಾಚ್ ಪಡೆದರು. ಏಳು ಎಸೆತಗಳಲ್ಲಿ 5 ರನ್ ಗಳಿಸಿದ್ದ ಅವರು ಕ್ಯಾಚ್ ನೀಡಿದರು.

  • 12 Jun 2022 07:56 PM (IST)

    ಶಮ್ಸಿ ದುಬಾರಿ ಓವರ್

    ತಬ್ರೇಜ್ ಶಮ್ಸಿ 9ನೇ ಓವರ್‌ನಲ್ಲಿ 14 ರನ್ ನೀಡಿದರು. ಓವರ್‌ನ ಐದನೇ ಎಸೆತದಲ್ಲಿ ಅಯ್ಯರ್ ಡೀಪ್ ಮಿಡ್ ವಿಕೆಟ್‌ನಲ್ಲಿ ಬೌಂಡರಿ ಬಾರಿಸಿದರು. ಮುಂದಿನ ಎಸೆತದಲ್ಲಿ ಅಯ್ಯರ್ ಮತ್ತೊಂದು ಸಿಕ್ಸರ್ ಬಾರಿಸಿದರು.

  • 12 Jun 2022 07:55 PM (IST)

    ಪ್ರಿಟೋರಿಯಸ್‌ ಉತ್ತಮ ಓವರ್

    8ನೇ ಓವರ್‌ನಲ್ಲಿ ಪ್ರಿಟೋರಿಯಸ್ ನಾಲ್ಕು ರನ್ ನೀಡಿದರು. ಆ ಓವರ್‌ನಲ್ಲಿ ಕೇವಲ ನಾಲ್ಕು ರನ್ ಮಾತ್ರ ನೀಡಲಾಯಿತು.

  • 12 Jun 2022 07:43 PM (IST)

    ಇಶಾನ್ ಕಿಶನ್ ಔಟ್

    ಏಳನೇ ಓವರ್‌ನಲ್ಲಿ ಇಶಾನ್ ಕಿಶನ್ ಅವರನ್ನು ಔಟ್ ಮಾಡುವ ಮೂಲಕ ನಾರ್ಖಿಯಾ ತಂಡಕ್ಕೆ ಉತ್ತಮ ಯಶಸ್ಸು ತಂದುಕೊಟ್ಟರು. ಓವರ್‌ನ ನಾಲ್ಕನೇ ಎಸೆತದಲ್ಲಿ, ಇಶಾನ್ ಡೀಪ್ ಸ್ಕ್ವೇರ್‌ನಲ್ಲಿ ಚೆಂಡನ್ನು ಎಳೆದು ಆಡಿದರು, ವ್ಯಾನ್ ಡೆರ್ ದುಸೇನ್ ಈ ಸಮಯದಲ್ಲಿ ಯಾವುದೇ ತಪ್ಪು ಮಾಡಲಿಲ್ಲ ಮತ್ತು ಕ್ಯಾಚ್ ಪಡೆದರು, ಇಶಾನ್ 21 ಎಸೆತಗಳಲ್ಲಿ 34 ರನ್ ಗಳಿಸಿ ಹಿಂತಿರುಗಿದರು. ಅವರ ಇನ್ನಿಂಗ್ಸ್‌ನಲ್ಲಿ ಅವರು 2 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಹೊಡೆದರು.

  • 12 Jun 2022 07:42 PM (IST)

    ಇಶಾನ್ ಕ್ಯಾಚ್ ಬಿಟ್ಟ ಪಾರ್ನೆಲ್

    ಆರನೇ ಓವರ್‌ನಲ್ಲಿ ಪ್ರಿಟೋರಿಯಸ್ 11 ರನ್ ನೀಡಿದರು. ಓವರ್‌ನ ಮೊದಲ ಎಸೆತದಲ್ಲಿ ಇಶಾನ್ ಕಿಶನ್ ಲಾಂಗ್ ಆನ್‌ನಲ್ಲಿ ಸಿಕ್ಸರ್ ಬಾರಿಸಿದರು. ಈ ಇನ್ನಿಂಗ್ಸ್‌ನಲ್ಲಿ ಇದು ಅವರ ಮೂರನೇ ಸಿಕ್ಸರ್ ಆಗಿತ್ತು. ಓವರ್‌ನ ಐದನೇ ಎಸೆತದಲ್ಲಿ ಪಾರ್ನೆಲ್ ಅವರ ಕ್ಯಾಚ್ ಅನ್ನು ಮಿಡ್ ಆನ್‌ನಲ್ಲಿ ಕೈಬಿಟ್ಟರು.

  • 12 Jun 2022 07:31 PM (IST)

    ಇಶಾನ್ ಕಿಶನ್ ಅದ್ಭುತ ಬೌಂಡರಿ

    ಐದನೇ ಓವರ್​ನಲ್ಲೂ ಇಶಾನ್ ಕಿಶನ್ ಪ್ರದರ್ಶನ ಮುಂದುವರಿದಿತ್ತು. ಓವರ್‌ನ ಮೂರನೇ ಎಸೆತದಲ್ಲಿ ಇಶಾನ್ ಕಿಶನ್ ಡೀಪ್ ಸ್ಕ್ವೇರ್ನಲ್ಲಿ ಬೌಂಡರಿ ಬಾರಿಸಿದರು. ವೇಗದ ಬೌಲರ್ ಪಾರ್ನೆಲ್ ಅವರಿಂದ ಈ ಓವರ್‌ನಲ್ಲಿ ಆರು ರನ್ ಬಂದವು.

  • 12 Jun 2022 07:30 PM (IST)

    ನಾರ್ಖಿಯಾ ದುಬಾರಿ

    ನಾಲ್ಕನೇ ಓವರ್‌ನಲ್ಲಿ ಎನ್ರಿಕ್ ನಾರ್ಕಿಯಾ 13 ರನ್ ನೀಡಿದರು. ಈ ಓವರ್‌ನಲ್ಲಿ ಇಶಾನ್ ಕಿಶನ್ ಎರಡು ಸಿಕ್ಸರ್ ಬಾರಿಸಿದರು. ಇಶಾನ್ ಕಿಶನ್ ಓವರ್ ನ ಎರಡನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಓವರ್‌ನ ನಾಲ್ಕನೇ ಎಸೆತದಲ್ಲಿ ಅವರು ಡೀಪ್ ಸ್ಕ್ವೇರ್‌ನಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದರು.

  • 12 Jun 2022 07:23 PM (IST)

    ಕಗಿಸೊ ರಬಾಡ ಉತ್ತಮ ಓವರ್

    ಮೂರನೇ ಓವರ್‌ನಲ್ಲಿ ಕಗಿಸೊ ರಬಾಡ ಕೇವಲ ಒಂದು ರನ್ ನೀಡಿದರು. ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ರಬಾಡ ವಿರುದ್ಧ ಯಾವುದೇ ರಿಸ್ಕ್ ತೆಗೆದುಕೊಳ್ಳಲಿಲ್ಲ.

  • 12 Jun 2022 07:19 PM (IST)

    ಅಯ್ಯರ್ ಫೋರ್

    ವೇಯ್ನ್ ಪರ್ನೆಲ್ ಎರಡನೇ ಓವರ್ ಬೌಲ್ ಮಾಡಿದರು. ಶ್ರೇಯಸ್ ಅಯ್ಯರ್ ಓವರ್‌ನ ಮೂರನೇ ಎಸೆತದಲ್ಲಿ ಎಕ್ಸ್​​ಟ್ರಾ ಕವರ್‌ಗಳಲ್ಲಿ ಬೌಂಡರಿ ಬಾರಿಸಿದರು. ಮುಂದಿನ ಎಸೆತದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಮೂರು ರನ್ ಗಳಿಸಿದರು. ಈ ಓವರ್‌ನಲ್ಲಿ 8 ರನ್‌ಗಳು ಬಂದವು.

  • 12 Jun 2022 07:09 PM (IST)

    ಗಾಯಕ್ವಾಡ್ ಔಟ್

    ಮೊದಲ ಓವರ್‌ನಲ್ಲಿಯೇ ಭಾರತಕ್ಕೆ ದೊಡ್ಡ ಪೆಟ್ಟು ಬಿದ್ದಿತು. ಓವರ್‌ನ ಐದನೇ ಎಸೆತದಲ್ಲಿ ಗಾಯಕ್‌ವಾಡ್ ಕೇಶವ್ ಮಹಾರಾಜ್‌ಗೆ ಕ್ಯಾಚ್ ನೀಡಿದರು. ನಾಲ್ಕು ಎಸೆತಗಳಲ್ಲಿ 1 ರನ್ ಗಳಿಸಿ ಔಟಾದರು.

  • 12 Jun 2022 07:05 PM (IST)

    ಭಾರತದ ಬ್ಯಾಟಿಂಗ್ ಆರಂಭ

    ಇಶಾನ್ ಕಿಶನ್ ಮತ್ತು ರಿತುರಾಜ್ ಗಾಯಕ್ವಾಡ್ ಭಾರತದ ಪರ ಬ್ಯಾಟಿಂಗ್ ಮಾಡಲು ಬಂದಿದ್ದಾರೆ. ಮತ್ತೊಂದೆಡೆ ರಬಾಡ ದಕ್ಷಿಣ ಆಫ್ರಿಕಾ ಪರ ಬೌಲಿಂಗ್ ಆರಂಭಿಸಿದ್ದಾರೆ.

  • 12 Jun 2022 06:55 PM (IST)

    ಭಾರತದ ಪ್ಲೇಯಿಂಗ್ XI

    ರಿಷಬ್ ಪಂತ್ (ನಾಯಕ), ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್ ಮತ್ತು ಅವೇಶ್ ಖಾನ್

  • 12 Jun 2022 06:46 PM (IST)

    ದಕ್ಷಿಣ ಆಫ್ರಿಕಾದ ಪ್ಲೇಯಿಂಗ್ XI

    ದಕ್ಷಿಣ ಆಫ್ರಿಕಾದ ಆಟಗಾರರ XI ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಕ್ವಿಂಟನ್ ಡಿ ಕಾಕ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು, ಸ್ಟಬ್ಸ್‌ಗೆ ಅವಕಾಶ ಸಿಕ್ಕಿಲ್ಲ. ಹೆನ್ರಿಚ್ ಕ್ಲಾಸೆನ್ ಮತ್ತು ರೀಜಾ ಹೆಂಡ್ರಿಕ್ಸ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

    ಟೆಂಬಾ ಬವುಮಾ (ನಾಯಕ), ಹೆನ್ರಿಕ್ ಕ್ಲಾಸೆನ್, ರಾಸಿ ವ್ಯಾನ್ ಡೆರ್ ದುಸೆನ್, ಡೇವಿಡ್ ಮಿಲ್ಲರ್, ರೀಜಾ ಹೆಂಡ್ರಿಕ್ಸ್, ವೇಯ್ನ್ ಪೆರ್ನೆಲ್, ಡ್ವೇನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ತಬರಿಜ್ ಶಮ್ಸಿ, ಕಗಿಸೊ ರಬಾಡ, ಅನ್ರಿಕ್ ನೋಕಿಯಾ

  • 12 Jun 2022 06:35 PM (IST)

    ಟಾಸ್ ಗೆದ್ದ ದಕ್ಷಿಣ ಆಫ್ರಿಕಾ

    ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • 12 Jun 2022 06:27 PM (IST)

    ಭಾರತಕ್ಕೆ ಗೆಲುವು ಅಗತ್ಯ

    ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಏಳು ವಿಕೆಟ್‌ಗಳಿಂದ ಆತಿಥೇಯ ಭಾರತವನ್ನು ಸೋಲಿಸಿತು. ಇದರೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Published On - 6:24 pm, Sun, 12 June 22

Follow us on