IND vs SL: ಭಾರತ- ಲಂಕಾ ಪಂದ್ಯಕ್ಕೆ ಹಾವುಗಳ ಕಾಟ..! ಎನ್‌ಜಿಒ ಮೊರೆ ಹೋದ ಎಸಿಎ
IND vs SL: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯದಲ್ಲಿ ಹಾವೊಂದು ಮೈದಾನಕ್ಕೆ ಬಂದಿತ್ತು, ಇದರಿಂದಾಗಿ ಪಂದ್ಯ ಕೆಲಕಾಲ ಸ್ಥಗಿತಗೊಂಡಿತ್ತು. ಇದನ್ನು ತಪ್ಪಿಸಲು ಸರ್ಕಾರೇತರ ಸಂಸ್ಥೆಯೊಂದರ ನೆರವು ಪಡೆಯಲು ಎಸಿಎ ನಿರ್ಧರಿಸಿದೆ.
ಟೀಂ ಇಂಡಿಯಾ ಪ್ರಸ್ತುತ ಶ್ರೀಲಂಕಾ (Team India and Sri Lanka ) ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದ್ದು, ಅದರ ಮೂರನೇ ಮತ್ತು ಕೊನೆಯ ಪಂದ್ಯ ಶನಿವಾರ ನಡೆಯಲಿದೆ. ಈ ಪಂದ್ಯದ ನಂತರ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಈ ಸರಣಿಯು ಗುವಾಹಟಿಯಲ್ಲಿ ಆರಂಭವಾಗಲಿದೆ. ಕೆಲ ತಿಂಗಳುಗಳ ಹಿಂದೆ ಇದೇ ಮೈದಾನದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa) ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಪಂದ್ಯ ನಡೆಯುವ ವೇಳೆ ಹಾವು ಮೈದಾನಕ್ಕೆ ಎಂಟ್ರಿಕೊಟ್ಟಿದ್ದರಿಂದ ಆಟ ಕೆಲಕಾಲ ಸ್ಥಗಿತಗೊಂಡಿತ್ತು. ಇದಲ್ಲದೇ ಈ ಮೈದಾನದಲ್ಲಿ ನಡೆದ ಪಂದ್ಯವೊಂದರಲ್ಲಿ ಲೈಟಿಂಗ್ ಸಮಸ್ಯೆಯೂ ಎದುರಾಗಿತ್ತು. ಈಗ ಈ ಎರಡೂ ಸಮಸ್ಯೆಯನ್ನು ಎದುರಿಸಲು ಅಸ್ಸಾಂ ಕ್ರಿಕೆಟ್ ಸಂಸ್ಥೆ (ಎಸಿಎ) ಸಿದ್ಧತೆ ನಡೆಸಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜನವರಿ 10 ರಂದು ಗುವಾಹಟಿಯಲ್ಲಿ ನಡೆಯಲಿದೆ. ಇದಕ್ಕೂ ಮೊದಲು 2022ರ ಅಕ್ಟೋಬರ್ 2ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಈ ಮೈದಾನದಲ್ಲಿ ಟಿ20 ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಅನಿರೀಕ್ಷಿತವಾಗಿ ಮೈದಾನಕ್ಕೆ ಎಂಟ್ರಿಕೊಟ್ಟಿದ್ದ ಹಾವು ಉಭಯ ತಂಡಗಳ ಆಟಗಾರರಿಗೆ ಆತಂಕ ಹುಟ್ಟುಹಾಕಿತ್ತು.
ಟಿ20 ಕ್ರಿಕೆಟ್ನಲ್ಲಿ ಒಂದೇ ಒಂದು ನೋ ಬಾಲ್ ಎಸೆಯದ ಟೀಂ ಇಂಡಿಯಾ ಬೌಲರ್ ಯಾರು ಗೊತ್ತಾ?
ಫ್ಲಡ್ ಲೈಟ್ ಟವರ್‌ಗಳಲ್ಲಿ ಒಟ್ಟಿಗೆ ಸಮಸ್ಯೆ
ಹೀಗಾಗಿ ಕಳೆದ ಬಾರಿಯಂತೆ ಈ ಬಾರಿ ಪಂದ್ಯಕ್ಕೆ ಯಾವುದೇ ಅಡ್ಡಿಯಾಗದಂತೆ ಎಸಿಎ ಸಿದ್ಧತೆ ನಡೆಸಿದೆ. ಹಾವುಗಳು ಮೈದಾನಕ್ಕೆ ಬರದಂತೆ ತಡೆಯಲು ಎನ್‌ಜಿಒ ನೆರವು ಪಡೆಯಲು ಎಸಿಎ ನಿರ್ಧರಿಸಿದೆ. ಅಲ್ಲದೆ ಕಳೆದ ಬಾರಿ ನಡೆದ ಪಂದ್ಯದಲ್ಲಿ ವಿದ್ಯುತ್ ಕಡಿತದಿಂದ ಸಮಸ್ಯೆ ಉಂಟಾಗಿತ್ತು. ಈ ಬಗ್ಗೆ ಮಾತನಾಡಿರುವ ತರಂಗ್ ಗೊಗೊಯ್, ‘ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಪಂದ್ಯದಲ್ಲಿ, ಫ್ಲಡ್ ಲೈಟ್ ಟವರ್‌ಗಳಲ್ಲಿ ಒಟ್ಟಿಗೆ ಸಮಸ್ಯೆ ಕಂಡು ಬಂದಿತ್ತು. ಹೀಗಾಗಿ ಈ ಪಂದ್ಯಕ್ಕೆ ಆ ಸಮಸ್ಯೆ ಎದುರಾಗಬಾರದೆಂದು ಎಲ್ಲಾ ಫ್ಲಡ್ ಲೈಟ್ಗಳಲ್ಲಿ ಎಲ್ ಇಡಿ ಬಲ್ಬ್ ಅಳವಡಿಸುವ ಕೆಲಸವನ್ನು ಬಹಳ ಹಿಂದೆಯೇ ಆರಂಭಿಸಿದ್ದೇವೆ. ಆದರೆ ಅವುಗಳನ್ನು ಅಳವಡಿಸಲು ತಿಂಗಳಿಗೂ ಹೆಚ್ಚು ಸಮಯ ಬೇಕಾಗಬಹುದು. ಹೀಗಾಗಿ ಜನವರಿ 10 ರಂದು ನಡೆಯಲಿರುವ ಪಂದ್ಯದಲ್ಲಿ ಈಗಿರುವ ಫ್ಲಡ್‌ಲೈಟ್‌ಗಳನ್ನು ಮಾತ್ರ ಬಳಸಲಾಗುವುದು. ಹಾಗೆಯೇ ಭಾರತ-ದಕ್ಷಿಣ ಆಫ್ರಿಕಾ ನಡುವಣ ಪಂದ್ಯದಲ್ಲಿ ನಡೆದದ್ದು ಮತ್ತೆ ನಡೆಯದಂತೆ ಇಡೀ ಕ್ರೀಡಾಂಗಣದಲ್ಲಿ ಟವರ್‌ಗಳ ಹೊರತಾಗಿ ವೈರಿಂಗ್ ಮತ್ತಿತರ ತಾಂತ್ರಿಕ ವಿಷಯಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ’ ಎಂದಿದ್ದಾರೆ.
ಎನ್‌ಜಿಒ ಸಹಾಯವನ್ನು ತೆಗೆದುಕೊಳ್ಳಲಾಗಿದೆ
ಇನ್ನು ಹಾವುಗಳ ಕಾಟ ತಪ್ಪಿಸುವುದರ ಬಗ್ಗೆ ಮಾತನಾಡಿದ ಗೊಗೊಯ್, ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯದಲ್ಲಿ ಹಾವೊಂದು ಮೈದಾನಕ್ಕೆ ಬಂದಿತ್ತು, ಇದರಿಂದಾಗಿ ಪಂದ್ಯ ಕೆಲಕಾಲ ಸ್ಥಗಿತಗೊಂಡಿತ್ತು. ಇದನ್ನು ತಪ್ಪಿಸಲು ಸರ್ಕಾರೇತರ ಸಂಸ್ಥೆಯೊಂದರ ನೆರವು ಪಡೆಯಲು ಎಸಿಎ ನಿರ್ಧರಿಸಿದೆ. ಹೀಗಾಗಿ ಹಾವುಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುವ ಎನ್‌ಜಿಒ ಸಹಾಯವನ್ನು ತೆಗೆದುಕೊಳ್ಳಲಾಗಿದೆ. ಇವುಗಳ ಸಹಾಯದಿಂದ ಮೈದಾನದಲ್ಲಿ ರಾಸಾಯನಿಕಗಳನ್ನು ಸಿಂಪಡಿಸಲಾಗಿದೆ. ಅಲ್ಲದೆ, ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು. ಮೈದಾನ ಮಾತ್ರವಲ್ಲದೆ ಸ್ಟ್ಯಾಂಡ್‌ಗಳಿಗೂ ಹಾವುಗಳು ಬರದಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Fri, 6 January 23