Virat Kohli: ‘ನಯಾ ಶೇರ್’ ರ್‍ಯಾಪ್ ಸಾಂಗ್​ನಲ್ಲಿ ಕಿಂಗ್ ಕೊಹ್ಲಿ ಡಾನ್ಸ್! ಟೀಸರ್ ಬಿಡುಗಡೆ ಮಾಡಿದ ಆರ್​ಸಿಬಿ

Virat Kohli: ಲಂಕಾ ವಿರುದ್ಧದ ಏಕದಿನ ಸರಣಿಗೆ ತಂಡಕ್ಕೆ ಮರಳಲಿರುವ ವಿರಾಟ್ ಅದಕ್ಕೂ ಮುನ್ನ ಆರ್​ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅದೆನೆಂದರೆ ಸೀಸನ್​ ಆರಂಭಕ್ಕೂ ಮುನ್ನ ಆರ್​ಸಿಬಿ ಮಾಡಿರುವ ರ್‍ಯಾಪ್ ಸಾಂಗ್​ನಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದಾರೆ.

Virat Kohli: ‘ನಯಾ ಶೇರ್’ ರ್‍ಯಾಪ್ ಸಾಂಗ್​ನಲ್ಲಿ ಕಿಂಗ್ ಕೊಹ್ಲಿ ಡಾನ್ಸ್! ಟೀಸರ್ ಬಿಡುಗಡೆ ಮಾಡಿದ ಆರ್​ಸಿಬಿ
ರ್‍ಯಾಪ್ ಸಾಂಗ್​ನಲ್ಲಿ ಕಿಂಗ್ ಕೊಹ್ಲಿ ಡಾನ್ಸ್Image Credit source: ZEE news
Follow us
TV9 Web
| Updated By: ಪೃಥ್ವಿಶಂಕರ

Updated on:Jan 06, 2023 | 5:43 PM

ಪ್ರಸ್ತುತ ಟೀಂ ಇಂಡಿಯಾದಿಂದ ವಿಶ್ರಾಂತಿ ಪಡೆದಿರುವ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ತಮ್ಮ ಮಡದಿ ಹಾಗೂ ಮಗಳೊಂದಿಗೆ ಜಾಲಿ ಮೂಡ್​ನಲ್ಲಿದ್ದಾರೆ. ಬಳಿಕ ಲಂಕಾ ವಿರುದ್ಧದ ಏಕದಿನ ಸರಣಿಗೆ (Team India and Sri Lanka) ತಂಡಕ್ಕೆ ಮರಳಲಿರುವ ವಿರಾಟ್ ಅದಕ್ಕೂ ಮುನ್ನ ಆರ್​ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅದೆನೆಂದರೆ ಸೀಸನ್​ ಆರಂಭಕ್ಕೂ ಮುನ್ನ ಆರ್​ಸಿಬಿ (RCB) ಮಾಡಿರುವ ರ್‍ಯಾಪ್ ಸಾಂಗ್​ನಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಕೊಹ್ಲಿ ಆಕ್ರಮಣಕಾರಿ ವರ್ತನೆಗೆ ಹೆಸರು ವಾಸಿಯಾಗಿದ್ದಾರೆ. ಆದರೆ ಆಟದಲ್ಲಿ ಈ ವರ್ತನೆ ತೋರುವ ಕೊಹ್ಲಿ ಆಟದಿಂದ ಹೊರಕ್ಕೆ ತುಂಬಾ ವಿನೋದಮಯ ವ್ಯಕ್ತಿ ಎಂಬುದು ಅವರ ನಿಕಟವರ್ತಿಗಳ ಮಾತಾಗಿದೆ. ಇದೀಗ ರ್‍ಯಾಪ್​ ಸಾಂಗ್​ನಲ್ಲಿ ಹೆಜ್ಜೆ ಹಾಕಿರುವ ಕೊಹ್ಲಿ ಆರ್​ಸಿಬಿ ಅಭಿಮಾನಿಗಳಿಗೆ ಐಪಿಎಲ್ ಆರಂಭಕ್ಕೂ ಮುನ್ನ ರಸದೌತಣ ನೀಡಿದ್ದಾರೆ.

ಕೊಹ್ಲಿಗೆ ಕ್ರಿಕೆಟ್ ಹೊರತುಪಡಿಸಿದರೆ ಸಂಗೀತವೆಂದರೆ ಬಲು ಅಚ್ಚುಮೆಚ್ಚು. ಅದರಲ್ಲೂ ಕೊಹ್ಲಿಗೆ ಪಂಜಾಬಿ ಹಾಡುಗಳೆಂದರು ತುಂಬಾ ಇಷ್ಟ. ಹಾಗೆಯೇ ರ್‍ಯಾಪ್​ ಸಾಂಗ್​ಗಳೆಂದರು ಕೊಹ್ಲಿಗೆ ತುಂಬಾ ಇಷ್ಟ. ಇದ್ಕಕೆ ಉದಾಹರಣೆ ಎಂಬಂತೆ ಕೊಹ್ಲಿ ಸೋಶಿಯಲ್ ಮೀಡಿಯಾದಲ್ಲಿ ದೇಶದ ಅನೇಕ ದೊಡ್ಡ ರ್‍ಯಾಪರ್​ಗಳನ್ನು ಫಾಲೋ ಮಾಡುವುದನ್ನು ನಾವು ಗಮನಿಸಬಹುದು. ಅಲ್ಲದೆ ರ್‍ಯಾಪ್ ರಿಯಾಲಿಟಿ ಶೋನ ಅನೇಕ ರ್ಯಾಪ್​ರಗಳನ್ನು ಹೊಗಳಿ ಮಾತನಾಡಿರುವ ವಿಡಿಯೋಗಳನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಬಹುದಾಗಿದೆ. ಇದೀಗ ಈ ಸ್ಟಾರ್ ಕ್ರಿಕೆಟಿಗ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗಾಗಿ ಮಾಡಿರುವ ರ್ಯಾಪ್​ ಸಾಂಗ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ICC Test rankings: ಟೆಸ್ಟ್ ರ‍್ಯಾಂಕಿಂಗ್​ನಲ್ಲಿ ಅಶ್ವಿನ್​- ಅಯ್ಯರ್​ಗೆ ಭರ್ಜರಿ ಮುಂಬಡ್ತಿ; ಜಾರಿದ ಪೂಜಾರ- ಕೊಹ್ಲಿ!

ಆರ್​ಸಿಬಿ ರ್‍ಯಾಪ್​ ಸಾಂಗ್​ನ ಟೀಸರ್ ಬಿಡುಗಡೆ

2023ರ ಐಪಿಎಲ್ ಸೀಸನ್ ಪ್ರಾರಂಭವಾಗುವ ಮೊದಲು, ಆರ್​ಸಿಬಿ ಹೊಸ ಹಾಡೊಂದನ್ನು ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ. ಭಾರತದ ಪ್ರಸಿದ್ಧ ರ್‍ಯಾಪರ್​ ಡಿವೈನ್ ಮತ್ತು ಗಾಯಕಿ ಜೊನಿತಾ ಗಾಂಧಿ ಈ ಸಾಂಗ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಈ ರ್‍ಯಾಪ್ ಸಾಂಗ್​ನ ಟೀಸರ್‌ ಅನ್ನು ಆರ್‌ಸಿಬಿ ಬಿಡುಗಡೆ ಮಾಡಿದ್ದು, ಈ ಟೀಸರ್​ನಲ್ಲಿ ಕೊಹ್ಲಿ ಕೂಡ ಡ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ಈ ಟೀಸರ್ ಅನ್ನು ಅಭಿಮಾನಿಗಳು ಕೂಡ ತುಂಬಾ ಇಷ್ಟಪಟ್ಟಿದ್ದು, ಇದೀಗ ಪೂರ್ಣ ಹಾಡಿನ ಬಿಡುಗಡೆಗಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.

ಈ ಹಾಡಿನ ಚಿತ್ರೀಕರಣ ತುಂಬಾ ಖುಷಿ ಕೊಟ್ಟಿದೆ- ಕೊಹ್ಲಿ

ಟೀಸರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಮೈದಾನದಲ್ಲಿ ಅಥವಾ ಮೈದಾನದ ಹೊರಗೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಹೆಚ್ಚು ಯೋಚಿಸದ ಕೆಲವು ಆಟಗಾರರಲ್ಲಿ ನಾನು ಕೂಡ ಒಬ್ಬ. ನಾನು ಯಾವಾಗಲೂ ಇರುವುದೇ ಹೀಗೆ. ಅಷ್ಟಕ್ಕೂ ಪಶ್ಚಿಮ ದಿಲ್ಲಿಯಿಂದ ಬಂದ ನಾನು ಇಂತಹ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳದೇ ಹೋಗಿದ್ದರೆ ಇವತ್ತಿನ ಈ ಸ್ಥಿತಿಗೆ ತಲುಪುತ್ತಿರಲಿಲ್ಲ ಎಂದಿದ್ದಾರೆ. ಜೊತೆಗೆ ಈ ರ್ಯಾಪ್​ ಸಾಂಗ್ ಬಗ್ಗೆ ಮಾತನಾಡಿರುವ ಕೊಹ್ಲಿ, ಈ ಹಾಡಿನ ಚಿತ್ರೀಕರಣ ತುಂಬಾ ಖುಷಿ ಕೊಟ್ಟಿದೆ ಎಂತಲೂ ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Fri, 6 January 23

ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ