India vs Sri lanka 2023: ಬಾಂಗ್ಲಾದೇಶ್ ತಂಡವನ್ನು 2-0 ಅಂತರದಿಂದ ಮಣಿಸುವ ಮೂಲಕ ಟೀಮ್ ಇಂಡಿಯಾ (Team India) ಟೆಸ್ಟ್ ಸರಣಿ ಗೆದ್ದುಕೊಂಡಿದೆ. ಈ ಭರ್ಜರಿ ಗೆಲುವಿನೊಂದಿಗೆ ಟೀಮ್ ಇಂಡಿಯಾದ 2022ರ ವೇಳಾಪಟ್ಟಿ ಪೂರ್ಣಗೊಂಡಿದೆ. ಇನ್ನು ಭಾರತ ತಂಡವು ಹೊಸ ವರ್ಷದಲ್ಲಿ ಹೊಸ ಸರಣಿಯೊಂದಿಗೆ ಅಭಿಯಾನ ಆರಂಭಿಸಲಿದೆ. ಅದು ಕೂಡ ಜನವರಿ ತಿಂಗಳ ಮೊದಲ ವಾರದಲ್ಲೇ ಎಂಬುದು ವಿಶೇಷ. ಜನವರಿ 3 ರಿಂದ ಭಾರತ-ಶ್ರೀಲಂಕಾ (India vs Sri Lanka) ನಡುವಣ ಸರಣಿ ಶುರುವಾಗಲಿದ್ದು, ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ. ಭಾರತದಲ್ಲಿ ನಡೆಯಲಿರುವ ಈ ಸಿರೀಸ್ನಲ್ಲಿ ಮೊದಲು ಟಿ20 ಪಂದ್ಯಗಳನ್ನು ಆಡಲಿದ್ದು, ಇದಾದ ಬಳಿಕ ಏಕದಿನ ಸರಣಿ ನಡೆಯಲಿದೆ.
ಮುಂಬರುವ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಪಾಲಿಗೆ ಎಲ್ಲಾ ಪಂದ್ಯಗಳು ತುಂಬಾ ಮಹತ್ವದ್ದು. ಏಕೆಂದರೆ 2023ರ ಏಕದಿನ ವಿಶ್ವಕಪ್ ಭಾರತದಲ್ಲೇ ನಡೆಯಲಿದ್ದು, ಅದಕ್ಕೂ ಮುನ್ನ ಬಲಿಷ್ಠ ತಂಡವನ್ನು ಕಟ್ಟುವ ಇರಾದೆಯಲ್ಲಿದೆ ಬಿಸಿಸಿಐ. ಹೀಗಾಗಿ ಕಳಪೆ ಫಾರ್ಮ್ನಲ್ಲಿರುವ ಕೆಲ ಆಟಗಾರರು ಲಂಕಾ ವಿರುದ್ಧದ ಸರಣಿಗೂ ಮುನ್ನ ತಂಡದಿಂದ ಹೊರಬೀಳಬಹುದು.
ಅದರಲ್ಲೂ ಬಾಂಗ್ಲಾದೇಶ್ ವಿರುದ್ದ ಕಳಪೆ ಪ್ರದರ್ಶನ ನೀಡಿದ್ದ ಶಿಖರ್ ಧವನ್, ಕೆಎಲ್ ರಾಹುಲ್ ಸೇರಿದಂತೆ ಕೆಲ ಪ್ರಮುಖ ಆಟಗಾರರು ತಂಡದಿಂದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿಯೇ ಶ್ರೀಲಂಕಾ ವಿರುದ್ಧದ ಸರಣಿಯು ಮುಂಬರುವ ವಿಶ್ವಕಪ್ಗೆ ಟೀಮ್ ಇಂಡಿಯಾದ ಮುನ್ನುಡಿ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತ-ಶ್ರೀಲಂಕಾ ಸರಣಿಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ:
ಟಿ20 ಸರಣಿ ವೇಳಾಪಟ್ಟಿ:-
ಇದನ್ನೂ ಓದಿ: IPL 2023: RCB ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…
ಏಕದಿನ ಸರಣಿ ವೇಳಾಪಟ್ಟಿ:-