AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: 65 ಓವರ್​ಗಳು, 2 ಸೆಷನ್: ಮುಂದುವರೆದ ಪೈಪೋಟಿ!

Sri Lanka vs India, 1st Test: ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 462 ರನ್ ಕಲೆಹಾಕಿದರೆ, ಶ್ರೀಲಂಕಾ 284 ರನ್​​ಗಳಿಸಿ ಆಲೌಟ್ ಆಗಿತ್ತು. ಇನ್ನು ದ್ವಿತೀಯ ಇನಿಂಗ್ಸ್​​ನಲ್ಲಿ ಭಾರತ ತಂಡ ಕೇವಲ 193 ರನ್​​ಗಳಿಗೆ ಸರ್ವಪತನ ಕಂಡಿದೆ. ಅದರಂತೆ ಮೊದಲ ಇನಿಂಗ್ಸ್​ ಹಿನ್ನಡೆಯೊಂದಿಗೆ 372 ರನ್​​ಗಳ ಗುರಿ ಪಡೆದಿರುವ ಶ್ರೀಲಂಕಾ ತನ್ನ ಹೋರಾಟ ಮುಂದುವರೆಸಿದೆ.

IND vs SL: 65 ಓವರ್​ಗಳು, 2 ಸೆಷನ್: ಮುಂದುವರೆದ ಪೈಪೋಟಿ!
Team IndiaImage Credit source: BCCI
ಝಾಹಿರ್ ಯೂಸುಫ್
|

Updated on:Aug 19, 2026 | 12:52 PM

Share

ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಇಂದು ಭಾರತ ತಂಡ ಐತಿಹಾಸಿಕ ಗೆಲುವಿನತ್ತ ಮುನ್ನುಗ್ಗುತ್ತಿದೆ. ಐದನೇ ದಿನದ ಭೋಜನ ವಿರಾಮದ ವೇಳೆಗೆ ಶ್ರೀಲಂಕಾ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಭಾರತ ನೀಡಿದ್ದ 372 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುತ್ತಿರುವ ಶ್ರೀಲಂಕಾ ತಂಡಕ್ಕೆ ಭಾರತದ ಬೌಲರ್‌ಗಳು ತೀವ್ರ ಆಘಾತ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಶ್ರೀಲಂಕಾ ಗೆಲುವಿಗೆ ಇನ್ನು 197 ರನ್‌ಗಳ ಅಗತ್ಯವಿದ್ದು, ಕೈಯಲ್ಲಿ ಕೇವಲ 4 ವಿಕೆಟ್‌ಗಳು ಮಾತ್ರ ಬಾಕಿ ಇವೆ.

ಪಂದ್ಯದಲ್ಲಿ ಇನ್ನೂ 2 ಸೆಷನ್‌ಗಳು ಮತ್ತು ಕನಿಷ್ಠ 65 ಓವರ್‌ಗಳು ಬಾಕಿದೆ. ಈ ಎರಡು ಸೆಷನ್​ಗಳ ಒಳಗೆ ಲಂಕಾ ಪಡೆ 197 ರನ್​ಗಳಿಸಬೇಕಿದೆ. ಇತ್ತ ಟೀಮ್ ಇಂಡಿಯಾ 4 ವಿಕೆಟ್ ಉರುಳಿಸಿದರೆ ಗೆಲುವು ತನ್ನದಾಗಿಸಿಕೊಳ್ಳಬಹುದು. ಹೀಗಾಗಿಯೇ ಇದೀಗ ಎಲ್ಲರ ಕಣ್ಣು ಗಾಲೆಯತ್ತ ನೆಟ್ಟಿದೆ.

  • ಬಾಕಿ ಇರುವ ಓವರ್‌ಗಳು: ಪಂದ್ಯದಲ್ಲಿ ಇನ್ನು ಕನಿಷ್ಠ 65 ಓವರ್‌ಗಳು ಬಾಕಿ ಇವೆ.
  • ಬೇಕಾಗಿರುವ ರನ್‌ಗಳು: ಶ್ರೀಲಂಕಾ ಗೆಲ್ಲಲು ಇನ್ನು 197 ರನ್‌ಗಳು ಬೇಕು
  • ಬೇಕಿರುವ ವಿಕೆಟ್​ಗಳು: ಭಾರತ ತಂಡದ ಗೆಲುವಿಗೆ 4 ವಿಕೆಟ್‌ಗಳ ಅಗತ್ಯವಿದೆ.
  • ಬಾಕಿ ಇರುವ ಸೆಷನ್‌ಗಳು: ಇಂದು 5ನೇ ದಿನವಾಗಿದ್ದು, ಇನ್ನು 2 ಸೆಷನ್‌ಗಳು (ಟೀ ಬ್ರೇಕ್ ಸೆಷನ್ ಮತ್ತು ಅಂತಿಮ ಸೆಷನ್) ಬಾಕಿ ಇವೆ.

ಕ್ರೀಸ್​ನಲ್ಲಿರುವವರು ಯಾರು?

  • ಸೋನಲ್ ದಿನುಶಾ: 65* ರನ್ (112 ಎಸೆತಗಳು)
  • ಕೇಶರ ನುವಾಂತ: 8* ರನ್ (27 ಎಸೆತಗಳು)

ಸೋನಲ್ ದಿನುಶಾ ಸದ್ಯ ಕ್ರೀಸ್‌ನಲ್ಲಿ ಭರ್ಜರಿ ಅರ್ಧಶತಕ ಬಾರಿಸಿ ಆಡುತ್ತಿರುವುದರಿಂದ, ಇದೀಗ ಶ್ರೀಲಂಕಾ ತಂಡ ಅವರನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿದೆ. ಅಂದರೆ ಸೋನಲ್ ದಿನುಶಾ ಕ್ರೀಸ್ ಕಚ್ಚಿ ನಿಂತು ಹೋರಾಟ ಮುಂದುವರಿಸಿದರೆ ಲಂಕಾ ಪಡೆಗೆ ಸೋಲಿನಿಂದ ಪಾರಾಗುವ ಅಥವಾ ಗೆಲುವಿನ ಹತ್ತಿರ ಸಾಗುವ ಆಸೆ ಚಿಗುರಬಹುದು.

ಇದನ್ನೂ ಓದಿ: ರಿಷಭ್ ಪಂತ್ ಆರ್ಭಟಕ್ಕೆ ಗಿಲ್ ದಾಖಲೆ ಉಡೀಸ್!

ಆದರೆ ಇತ್ತ ಟೀಮ್ ಇಂಡಿಯಾ ಪರ ಮಾನವ್ ಸುತಾರ್ ಮತ್ತು ರವೀಂದ್ರ ಜಡೇಜಾ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸುತ್ತಿದ್ದು, ಭಾರತೀಯ ಸ್ಪಿನ್ನರ್‌ಗಳ ಮ್ಯಾಜಿಕ್ ಎದುರು ಲಂಕಾದ ಉಳಿದ ಲೋವರ್ ಆರ್ಡರ್ ಬ್ಯಾಟರ್‌ಗಳು ಕ್ರೀಸ್ ಕಚ್ಚಿ ನಿಲ್ಲುವುದು ಕಷ್ಟಕರ ಎಂದೇ ಹೇಳಬಹುದು. ಹೀಗಾಗಿ ಈ ಮ್ಯಾಚ್​ನಲ್ಲಿ ಟೀಮ್ ಇಂಡಿಯಾದ ಗೆಲುವನ್ನು ಎದುರು ನೋಡಬಹುದು.

Published On - 12:51 pm, Wed, 19 August 26

Follow Us
ಕೆಆರ್​ಎಸ್​ನಿಂದ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸ್ತಿದ್ಯಾ ಸರ್ಕಾರ?
ಕೆಆರ್​ಎಸ್​ನಿಂದ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸ್ತಿದ್ಯಾ ಸರ್ಕಾರ?
ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಕುಮಾರ್ ಪುತ್ರಿಯ ಕಣ್ಣೀರಿನ ವಿಡಿಯೋ ವೈರಲ್
ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಕುಮಾರ್ ಪುತ್ರಿಯ ಕಣ್ಣೀರಿನ ವಿಡಿಯೋ ವೈರಲ್
ಚಿಕ್ಕಬಳ್ಳಾಪುರ: 2 ವರ್ಷದಲ್ಲಿ 30 ಮಂದಿಯನ್ನು ಬಲಿ ಪಡೆದ ಸಾವಿನ ಹೆದ್ದಾರಿ
ಚಿಕ್ಕಬಳ್ಳಾಪುರ: 2 ವರ್ಷದಲ್ಲಿ 30 ಮಂದಿಯನ್ನು ಬಲಿ ಪಡೆದ ಸಾವಿನ ಹೆದ್ದಾರಿ
ಬಿಗ್ ಬಾಸ್ ಅಗ್ನಿಪರೀಕ್ಷೆಯಿಂದ ಆಯ್ಕೆ ಆಗೋರು ಎಷ್ಟು? ಇಲ್ಲಿದೆ ವಿವರ
ಬಿಗ್ ಬಾಸ್ ಅಗ್ನಿಪರೀಕ್ಷೆಯಿಂದ ಆಯ್ಕೆ ಆಗೋರು ಎಷ್ಟು? ಇಲ್ಲಿದೆ ವಿವರ
ಸಾಹುಕಾರ್ ನಿವಾಸಗಳಲ್ಲಿ 22 ಗಂಟೆಯಿಂದ ನಡೆಯುತ್ತಿದೆ ಇಡಿ ಪರಿಶೀಲನೆ
ಸಾಹುಕಾರ್ ನಿವಾಸಗಳಲ್ಲಿ 22 ಗಂಟೆಯಿಂದ ನಡೆಯುತ್ತಿದೆ ಇಡಿ ಪರಿಶೀಲನೆ
ಬೆಳಗ್ಗೆ 7ರಿಂದಲೇ ಬಿಜೆಪಿ ಕಚೇರಿಯಲ್ಲಿ ಬಿ.ಸಿ ನಾಗೇಶ್ ಅಂತಿಮ ದರ್ಶನ
ಬೆಳಗ್ಗೆ 7ರಿಂದಲೇ ಬಿಜೆಪಿ ಕಚೇರಿಯಲ್ಲಿ ಬಿ.ಸಿ ನಾಗೇಶ್ ಅಂತಿಮ ದರ್ಶನ
ಶೀತಲ ಸಪ್ತಮಿ, ತುಳಸೀದಾಸ ಜಯಂತಿ: ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ
ಶೀತಲ ಸಪ್ತಮಿ, ತುಳಸೀದಾಸ ಜಯಂತಿ: ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ