ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾ 38 ರನ್ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಇದರ ನಡುವೆ ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಟಾಸ್ ಆದ ಬಳಿಕ ಇನ್ನಿಂಗ್ಸ್ ಆರಂಭಿಸುವ ಮುನ್ನ ಉಭಯ ತಂಡಗಳ ಆಟಗಾರರು ರಾಷ್ಟ್ರಗೀತೆ ಹಾಡಿ ಗೌರವ ಸೂಚಿಸಲಾಗುತ್ತದೆ. ಈ ವೇಳೆ ಶ್ರೀಲಂಕಾದ ರಾಷ್ಟ್ರಗೀತೆ ಪ್ರಸಾರವಾದಾಗ ಹಾರ್ದಿಕ್ ಪಾಂಡ್ಯ ಅವರು ಕೂಡ ಲಂಕಾ ಆಟಗಾರರ ಜೊತೆ ಧ್ವನಿಗೂಡಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Is it just me that saw @hardikpandya7 singing the SL national anthem, then? #SLvInd pic.twitter.com/TuALbiRFu4
— Pranith (@Pranith16) July 25, 2021
ನೆಟ್ಟಿಗರು ಹಾರ್ದಿಕ್ ಅವರ ಈ ನಡೆಯನ್ನು ಮೆಚ್ಚಿಕೊಂಡಿದ್ದಾರೆ. ದೇಶ ದೇಶಗಳ ಬಗ್ಗೆ ಪ್ರೀತಿ, ಗೌರವ ಇರಬೇಕು ಎಂದಿರುವ ಫ್ಯಾನ್ಸ್ ಪಾಂಡ್ಯ ನಡೆಗೆ ಸಲಾಂ ಎಂದಿದ್ದಾರೆ.
First time I’ve seen a player singing the opponents anthem, nice gesture by @hardikpandya7 #SLvINDOnlyOnSonyTen #SLvsINDonSonyLIV #INDvSL ??? ??
— Udara Gunasinghe ?? (@UdiUdz) July 25, 2021
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು. ಬಳಿಕ ನಾಯಕ ಶಿಖರ್ ಧವನ್ (46) ಹಾಗೂ ಸಂಜು ಸ್ಯಾಮ್ಸನ್ (27) ಕೊಂಚ ರನ್ ಕಲೆಹಾಕಿದರು. ನಂತರದಲ್ಲಿ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಲಂಕಾ ಬೌಲರ್ಗಳ ಬೆವರಿಳಿಸಿದರು.
ಕೇವಲ 34 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಬಾರಿಸಿದ ಸೂರ್ಯಕುಮಾರ್ 50 ರನ್ಗೆ ಔಟ್ ಆದರು. ಹಾರ್ದಿಕ್ ಪಾಂಡ್ಯ 10 ಹಾಗೂ ಇಶಾನ್ ಕಿಶನ್ ಅಜೇಯ 20 ರನ್ ಬಾರಿಸಿದರು. ಭಾರತ ನಿಗದಿತ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು.
ಸವಾಲಿನ ಗುರಿ ಬೆನ್ನಟ್ಟಿದ ಶ್ರೀಲಂಕಾ ಉತ್ತಮ ಆರಂಭ ಪಡೆದುಕೊಂಡಿತಾದರೂ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡಿತು. ಭುವನೇಶ್ವರ್ ಕುಮಾರ್ ಬೌಲಿಂಗ್ ದಾಳಿಗೆ ಲಂಕಾ ಆಲೌಟ್ ಆಗಬೇಕಾಯಿತು. ಲಂಕಾ ಪರ ಚರಿತ್ ಅಸಲಂಕಾ 26 ಎಸೆತಗಳಲ್ಲಿ 3 ಬೌಂಡರಿ ಸಿಕ್ಸರ್ ಸಿಡಿಸಿ 44 ರನ್ ಬಾರಿಸಿದರೆ, ಆವಿಶ್ಕಾ ಫೆರ್ನಾಂಡೊ 26 ರನ್ ಗಳಿಸಿದರು.
ಅಂತಿಮವಾಗಿ ಶ್ರೀಲಂಕಾ 18.3 ಓವರ್ನಲ್ಲಿ ಕೇವಲ 126 ರನ್ಗೆ ಸರ್ವಪತನ ಕಂಡಿತು. ಭಾರತ ಪರ ಭುವನೇಶ್ವರ್ ಕುಮಾರ್ 4 ಹಾಗೂ ದೀಪಕ್ ಚಹಾರ್ 2 ವಿಕೆಟ್ ಕಿತ್ತರು. ಎರಡನೇ ಟಿ-20 ಪಂದ್ಯ ಮಂಗಳವಾರ ಜುಲೈ 27 ರಂದು ನಡೆಯಲಿದೆ.
Bhuvneshwar Kumar: ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಭುವನೇಶ್ವರ್ ಆಯ್ಕೆಯಾಗದಿರಲು ಇದುವೇ ಅಸಲಿ ಕಾರಣ
IPL 2021 RCB Schedule: ಕೊಹ್ಲಿ ಪಡೆಯ ಎದುರಾಳಿಗಳು ಯಾರು? ಇಲ್ಲಿದೆ RCBಯ ಸಂಪೂರ್ಣ ವೇಳಾಪಟ್ಟಿ
(India vs Sri lanka Hardik Pandya singing Sri Lankan national anthem during 1st T20I Video Viral)