IND vs SL: ಲಂಕಾ ವಿರುದ್ಧದ ಟಿ20 ಸರಣಿಯಿಂದ ಟೀಂ ಇಂಡಿಯಾದ ಸ್ಟಾರ್ ಆಲ್​ರೌಂಡರ್ ಔಟ್..!

Deepak Chahar: ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ದೀಪಕ್ ಚಹಾರ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಇದರಿಂದಾಗಿ ಅವರು ತಮ್ಮ ಓವರ್ ಅನ್ನು ಮುಗಿಸಲು ಸಹ ಸಾಧ್ಯವಾಗಲಿಲ್ಲ. ಆಗ ದೀಪಕ್ ಚಹಾರ್ ಪಂದ್ಯದಿಂದ ಹೊರಗುಳಿದಿದ್ದರು.

IND vs SL: ಲಂಕಾ ವಿರುದ್ಧದ ಟಿ20 ಸರಣಿಯಿಂದ ಟೀಂ ಇಂಡಿಯಾದ ಸ್ಟಾರ್ ಆಲ್​ರೌಂಡರ್ ಔಟ್..!
ದೀಪಕ್ ಚಹಾರ್
Edited By:

Updated on: Feb 22, 2022 | 8:35 PM

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಟೀಂ ಇಂಡಿಯಾ (Team India)ಗೆ ಹಿನ್ನಡೆಯಾಗಿದೆ . ಟೀಂ ಇಂಡಿಯಾ ವೇಗಿ ದೀಪಕ್ ಚಹಾರ್ (Deepak Chahar) ಗಾಯಗೊಂಡಿರುವ ಕಾರಣ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ದೀಪಕ್ ಗಾಯಗೊಂಡಿದ್ದರು. ಬಲತೊಡೆಯ ನೋವಿನಿಂದಾಗಿ ದೀಪಕ್ ಚಹಾರ್ ಶ್ರೀಲಂಕಾ ಸರಣಿಯಿಂದ ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾ ಬಯೋ ಬಬಲ್ (Bio-Bubble) ತೊರೆದಿದ್ದಾರೆ ಎಂದು ವರದಿಯಾಗಿದೆ. ದೀಪಕ್ ಚಾಹರ್ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (National Cricket Academy)ಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಅವರು 5-6 ವಾರಗಳ ಕಾಲ ಪುನರ್ವಸತಿಯಲ್ಲಿರುತ್ತಾರೆ ಎಂದು ವರದಿಯಾಗಿದೆ.

ಗಾಯವಾಗಿದ್ದು ಯಾವಾಗ?

ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ದೀಪಕ್ ಚಹಾರ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಇದರಿಂದಾಗಿ ಅವರು ತಮ್ಮ ಓವರ್ ಅನ್ನು ಮುಗಿಸಲು ಸಹ ಸಾಧ್ಯವಾಗಲಿಲ್ಲ. ಆಗ ದೀಪಕ್ ಚಹಾರ್ ಪಂದ್ಯದಿಂದ ಹೊರಗುಳಿದಿದ್ದರು. ಅವರ ಬದಲಿಗೆ ಓವರ್​ನಲ್ಲಿ ಉಳಿದ ಒಂದು ಎಸೆತವನ್ನು ವೆಂಕಟೇಶ್ ಅಯ್ಯರ್ ಹಾಕಿದ್ದರು. ಆ ಒಂದು ಎಸೆತಕ್ಕೆ ಪೊವೆಲ್ ಭರ್ಜರಿ ಸಿಕ್ಸರ್ ಬಾರಿಸಿದ್ದರು. ಆ ಪಂದ್ಯದಲ್ಲಿ ಚಹಾರ್ ಪ್ರಮುಖ 2 ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ್ದರು.

ಗಾಯದಿಂದ ಚೇತರಿಸಿಕೊಂಡ ಬಳಿಕ ಅವರು ಐಪಿಎಲ್‌ನಲ್ಲಿ ನೇರವಾಗಿ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಇತ್ತೀಚೆಗೆ ನಡೆದ ಮೆಗಾ ಹರಾಜಿನಲ್ಲಿ ದೀಪಕ್ ಚಹಾರ್ ಅವರನ್ನು 14 ಕೋಟಿ ರೂ.ಗೆ ಖರೀದಿಸಿತು. ದೀಪಕ್ ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು.

ಟಿ20 ಸರಣಿಗೆ ಟೀಂ ಇಂಡಿಯಾ:

ರೋಹಿತ್ ಶರ್ಮಾ (ನಾಯಕ), ರಿತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರವೀಂದ್ರ ಜಡೇಜಾ, ಯುಜುವೇಂದ್ರ ಚಹಾಲ್, ರವಿಹಂ ಬಿಷ್ಣೋಯ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್

ಭಾರತ vs ಶ್ರೀಲಂಕಾ ವೇಳಾಪಟ್ಟಿ..

ಫೆಬ್ರವರಿ 24 – ಮೊದಲ ಟಿ20, ಲಕ್ನೋ

ಫೆ. 26 – 2ನೇ ಟಿ20, ಧರ್ಮಶಾಲಾ

ಫೆ.27 – 3ನೇ ಟಿ20, ಧರ್ಮಶಾಲಾ

ಮಾರ್ಚ್ 4-8 – ಮೊದಲ ಟೆಸ್ಟ್, ಮೊಹಾಲಿ

ಮಾರ್ಚ್ 12-16 – 2ನೇ ಟೆಸ್ಟ್, ಬೆಂಗಳೂರು (ಹಗಲು-ರಾತ್ರಿ)

ಇದನ್ನೂ ಓದಿ:KL Rahul: ಹೃದಯವಂತ ರಾಹುಲ್! 11 ವರ್ಷದ ಬಾಲಕನ ಜೀವ ಉಳಿಸಲು 31 ಲಕ್ಷ ರೂ. ದೇಣಿಗೆ ನೀಡಿದ ಕನ್ನಡಿಗ