KL Rahul: ಹೃದಯವಂತ ರಾಹುಲ್! 11 ವರ್ಷದ ಬಾಲಕನ ಜೀವ ಉಳಿಸಲು 31 ಲಕ್ಷ ರೂ. ದೇಣಿಗೆ ನೀಡಿದ ಕನ್ನಡಿಗ
KL Rahul: ವಾಸ್ತವವಾಗಿ ಕೆಎಲ್ ರಾಹುಲ್ ಅಪರೂಪದ ಕಾಯಿಲೆಯೊಂದಿಗೆ ಹೋರಾಡುತ್ತಿರುವ 11 ವರ್ಷದ ಮಗುವಿಗೆ ಸಹಾಯ ಮಾಡಿದ್ದಾರೆ. ಮಗುವಿನ ಜೀವ ಉಳಿಸಲು ಕೆಎಲ್ ರಾಹುಲ್ 31 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಟೀಂ ಇಂಡಿಯಾ (Team India)ದ ಆರಂಭಿಕ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ (KL Rahul)ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಆದರೆ ಇದೀಗ ಮೈದಾನದ ಹೊರಗೆ ಇಂತಹ ಕೆಲಸ ಮಾಡಿದ್ದು, ಬಳಿಕ ಎಲ್ಲರೂ ಅವರಿಗೆ ಸೆಲ್ಯೂಟ್ ಹೊಡೆಯುತ್ತಿದ್ದಾರೆ. ವಾಸ್ತವವಾಗಿ ಕೆಎಲ್ ರಾಹುಲ್ ಅಪರೂಪದ ಕಾಯಿಲೆಯೊಂದಿಗೆ ಹೋರಾಡುತ್ತಿರುವ 11 ವರ್ಷದ ಮಗುವಿಗೆ ಸಹಾಯ ಮಾಡಿದ್ದಾರೆ. ಮಗುವಿನ ಜೀವ ಉಳಿಸಲು ಕೆಎಲ್ ರಾಹುಲ್ 31 ಲಕ್ಷ ರೂಪಾಯಿ ದೇಣಿಗೆ (donated) ನೀಡಿದ್ದಾರೆ. 11 ವರ್ಷದ ಬಾಲಕನ ಹೆಸರು ವರದ್ ನಲ್ವಾಡೆ, ಅವನಿಗೆ ತುರ್ತಾಗಿ ಮೂಳೆ ಮಜ್ಜೆಯ ಕಸಿ ಮಾಡಬೇಕಾಗಿದೆ. ಮಗುವಿನ ಪೋಷಕರು ಎನ್‌ಜಿಒ ಮೂಲಕ ಹಣ ಸಂಗ್ರಹಿಸುವ ಅಭಿಯಾನವನ್ನು ಪ್ರಾರಂಭಿಸಿದರು. ಈ ವಿಷಯ ತಿಳಿದ ಕೆಎಲ್ ರಾಹುಲ್ ಆ ಮಗುವಿಗೆ ಸಹಾಯ ಮಾಡಿದ್ದಾರೆ.
ವರದ್ ಮಧ್ಯಮ ವರ್ಗದ ಕುಟುಂಬದ ಮಗು. ತಂದೆಯ ಪಿಎಫ್ ಹಣವೂ ಅವರ ಅನಾರೋಗ್ಯಕ್ಕೆ ಖರ್ಚಾಗಿದೆ. ಐದನೇ ತರಗತಿಯಲ್ಲಿ ಓದುತ್ತಿರುವ ವರದ್ ಅವರನ್ನು ಮುಂಬೈನ ಜಸ್ಲೋಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪ್ಲ್ಯಾಸ್ಟಿಕ್ ಅನೀಮಿಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಈ ಖಾಯಿಲೆಯಿಂದಾಗಿ ಸಾಮಾನ್ಯ ಜ್ವರ ಬಂದರೂ ಚೇತರಿಸಿಕೊಳ್ಳಲು ತಿಂಗಳುಗಳೇ ಬೇಕಾಗುತ್ತಿತ್ತು. ವರದ್ ಅವರ ಚಿಕಿತ್ಸೆಗೆ ಅಸ್ಥಿಮಜ್ಜೆ ಕಸಿ ಒಂದೇ ಮಾರ್ಗವಾಗಿದ್ದು, ಕೆಎಲ್ ರಾಹುಲ್ ಈ ಚಿಕಿತ್ಸೆಗೆ ಹಣ ನೀಡಿದ್ದಾರೆ.
ಮಗುವಿನ ಜೀವ ಉಳಿಸಿದ ಕೆಎಲ್ ರಾಹುಲ್
ದೇಣಿಗೆ ಕುರಿತು ಮಾತನಾಡಿದ ಕೆಎಲ್ ರಾಹುಲ್, ‘ನನಗೆ ವರದ್ ಬಗ್ಗೆ ತಿಳಿದಾಗ, ನನ್ನ ತಂಡ ಗಿವ್ ಇಂಡಿಯಾ ಎನ್‌ಜಿಒ ಸಂಸ್ಥೆಯನ್ನು ಸಂಪರ್ಕಿಸಿದೇವು. ಇದರಿಂದ ನಾವು ಅವರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯವಾಯಿತು. ಈಗ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿರುವುದು ಸಂತಸ ತಂದಿದೆ. ವರದ್ ಶೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದು ಅವರ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸಲಿದ್ದಾರೆ ಎಂದು ಭಾವಿಸುತ್ತೇವೆ. ನನ್ನ ಕೊಡುಗೆಯು ಹೆಚ್ಚು ಹೆಚ್ಚು ಜನರು ಮುಂದೆ ಬಂದು ಅಗತ್ಯವಿರುವವರಿಗೆ ಸಹಾಯ ಮಾಡಲು ಪ್ರೇರೇಪಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಕೆಎಲ್ ರಾಹುಲ್ ಸಹಾಯಕ್ಕೆ ವರದ್ ತಾಯಿ ಧನ್ಯವಾದ ಹೇಳಿದ್ದಾರೆ. ಕೆ.ಎಲ್.ರಾಹುಲಿ ಅವರ ಸಹಾಯವಿಲ್ಲದಿದ್ದರೆ ಇಷ್ಟು ದಿನದಲ್ಲಿ ಮಗನ ಅಸ್ಥಿಮಜ್ಜೆ ಕಸಿ ಅಸಾಧ್ಯವಾಗುತ್ತಿತ್ತು ಎಂದು ವರದ್ ಅವರ ತಾಯಿ ಹೇಳಿದರು. ತನ್ನ ಮಗನನ್ನು ರಕ್ಷಿಸಲು ಭಾರತೀಯ ಕ್ರಿಕೆಟಿಗನೊಬ್ಬ ಬರುತ್ತಾನೆ ಎಂದು ನಾನು ಕನಸು ಕಂಡಿರಲಿಲ್ಲ ಎಂದು ವರದ್ ತಾಯಿ ಹೇಳಿದ್ದಾರೆ.
ಈ ಸಮಯದಲ್ಲಿ ಕೆಎಲ್ ರಾಹುಲ್ ಅವರು ಕ್ರಿಕೆಟ್ ಕ್ಷೇತ್ರದಿಂದ ದೂರವಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ನಂತರ ಶ್ರೀಲಂಕಾ ಟಿ20 ಸರಣಿಯಲ್ಲೂ ಟೀಂ ಇಂಡಿಯಾ ಅವರಿಗೆ ವಿಶ್ರಾಂತಿ ನೀಡಿದೆ. ಜೊತೆಗೆ ಕೆಎಲ್ ರಾಹುಲ್ ಟೆಸ್ಟ್ ಸರಣಿಯಲ್ಲೂ ಆಡುತ್ತಿಲ್ಲ.
ಇದನ್ನೂ ಓದಿ:IND vs SL: ಬುಮ್ರಾ, ಜಡ್ಡುಗೆ ಸ್ಥಾನ ಖಚಿತ.. ಯಾರಿಗೆ ಕೋಕ್? ಮೊದಲ ಟಿ20ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ 11
Published On - 7:46 pm, Tue, 22 February 22