IND vs SL: ಆಸ್ಟ್ರೇಲಿಯಾದ ವಿಶ್ವದಾಖಲೆಯನ್ನು ಪುಡಿಪುಡಿ ಮಾಡಿದ ಟೀಮ್ ಇಂಡಿಯಾ: ಧವನ್ ಪಡೆಯಿಂದ ಹೊಸ ಸಾಧನೆ

ಶ್ರೀಲಂಕಾ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ ವಶದಲ್ಲಿದ್ದ ವಿಶ್ವದಾಖಲೆಯನ್ನು ಅಳಿಸಿ ಹಾಕಿ ನೂತನ ಸಾಧನೆ ಮಾಡಿದೆ.

IND vs SL: ಆಸ್ಟ್ರೇಲಿಯಾದ ವಿಶ್ವದಾಖಲೆಯನ್ನು ಪುಡಿಪುಡಿ ಮಾಡಿದ ಟೀಮ್ ಇಂಡಿಯಾ: ಧವನ್ ಪಡೆಯಿಂದ ಹೊಸ ಸಾಧನೆ
Team India

ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾರಂತಹ ಪ್ರಮುಖ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ (India vs Sri lanka) ಪ್ರವಾಸದಲ್ಲಿದೆ. ಆದರೂ ಟೀಮ್ ಇಂಡಿಯಾ ಹೊಸ ದಾಖಲೆಯನ್ನು ಬರೆಯುವುದರಲ್ಲಿ ಹಿಂದೆ ಬಿದ್ದಿಲ್ಲ. ಯುವ ಆಟಗಾರರಿಂದಲೇ ಕೂಡಿರುವ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಈಗಾಗಲೇ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಇನ್ನೊಂದು ಪಂದ್ಯ ಗೆದ್ದರೆ ಕ್ಲೀಸ್​ಸ್ವೀಪ್ ಸಾಧನೆ ಮಾಡಲಿದೆ.

ಎರಡನೇ ಏಕದಿನ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ ವಶದಲ್ಲಿದ್ದ ವಿಶ್ವದಾಖಲೆಯನ್ನು ಅಳಿಸಿ ಹಾಕಿ ನೂತನ ಸಾಧನೆ ಮಾಡಿದೆ. 50 ಓವರ್​ಗಳ ಪಂದ್ಯದಲ್ಲಿ ಭಾರತಕ್ಕೆ ಇದು 93ನೇ ಜಯವಾಗಿದೆ. ಈ ಜಯದ ಮೂಲಕ ಭಾರತ ತಂಡ ಒಂದು ತಂಡದ ವಿರುದ್ಧ ಅತೀ ಹೆಚ್ಚು ಜಯ ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ ತಂಡವನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದೆ.

ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ವಿರುದ್ಧ 92 ಏಕದಿನ ಪಂದ್ಯಗಳನ್ನು ಗೆದ್ದ ಪಟ್ಟಿಯಲ್ಲಿದೆ. ಪಾಕಿಸ್ತಾನ ಲಂಕಾ ವಿರುದ್ಧ ಒಟ್ಟು 92 ಪಂದ್ಯಗಳನ್ನು ಗೆದ್ದಿದೆ. ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಲಂಕಾ ವಿರುದ್ಧ ಗೆದ್ದು 93ನೇ ಏಕದಿನ ಪಂದ್ಯ ಗೆದ್ದ ಸಾಧನೆ ಮಾಡಿದೆ. ಈ ಮೂಲಕ ಒಂದು ತಂಡದ ವಿರುದ್ಧ ಅತಿ ಹೆಚ್ಚು ಪಂದ್ಯವನ್ನು ಗೆದ್ದ ಭಾರತ ವಿಶ್ವ ದಾಖಲೆ ಬರೆದಿದೆ. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧವೂ ಭಾರತ 55 ಏಕದಿನ ಪಂದ್ಯ ಗೆದ್ದ ಸಾಧನೆ ಹೊಂದಿದೆ.

ಅಲ್ಲದೆ 2007 ರಿಂದ ಸತತವಾಗಿ ಲಂಕಾ ವಿರುದ್ಧ ಸರಣಿ ಜಯ ಸಾಧಿಸುತ್ತಾ ಬಂದಿರುವ ಭಾರತ ಈ ಸರಣಿಯನ್ನೂ ವಶಪಡಿಸಿಕೊಂಡಿದೆ. ಸತತವಾಗಿ ಶ್ರೀಲಂಕಾ ವಿರುದ್ಧ 9ನೇ ಸರಣಿ ಗೆದ್ದಂತಾಗಿದೆ.

ಸಾಕಷ್ಟು ಕುತೂಹಲ ಕೆರಳಿಸಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 275 ರನ್ ಬಾರಿಸಿತ್ತು. ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್(53) ಮತ್ತು ಕ್ರುನಾಲ್ ಪಾಂಡ್ಯ(35) ಕೊಂಚ ಆಸರೆಯಾದರು.

ಈ ಸಂದರ್ಭ ಸೋಲಿನ ಸುಳಿಗೆ ಸಿಲುಕಿದ್ದ ಭಾರತಕ್ಕೆ ದೀಪಕ್ ಚಹಾರ್ ಅಜೇಯ 69 ರನ್ ಸಿಡಿಸಿ ರೋಚಕ ಜಯ ತಂದಿಟ್ಟರು. 49.1 ಓವರ್​ನಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 277 ರನ್ ಗಳಿಸುವ ಮೂಲಕ 3 ವಿಕೆಟ್​ಗಳ ಜಯ ಸಾಧಿಸಿತು. ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿತು. ಅಂತಿಮ ಮೂರನೇ ಏಕದಿನ ಪಂದ್ಯ ಜುಲೈ 23 ರಂದು ನಡೆಯಲಿದೆ.

Virat Kohli’s Net Worth: ಗಳಿಕೆಯಲ್ಲಿ ಸಾಮ್ರಾಟನಾದ ವಿರಾಟ: ಕೊಹ್ಲಿಯ ಒಟ್ಟು ಗಳಿಕೆ ಎಷ್ಟು ಗೊತ್ತಾ?

Virat Kohli: ವಾವ್: ವಿರಾಟ್ ಕೊಹ್ಲಿಯಿಂದ ನೆಟ್​ನಲ್ಲಿ ಮನಮೋಹಕ ಹೊಡೆತ: ಭರ್ಜರಿ ಅಭ್ಯಾಸ

(India vs Sri lanka team india register historic feat with 2nd ODI win over Sri Lanka)

Click on your DTH Provider to Add TV9 Kannada