Virat Kohli: ರೋಹಿತ್ ಪಕ್ಕಾ ಔಟ್, ಡಿಆರ್‌ಎಸ್ ತಗೋ ಎಂದ ಕಿಂಗ್ ಕೊಹ್ಲಿ: ಆಮೇಲೆನಾಯ್ತು?

| Updated By: ಝಾಹಿರ್ ಯೂಸುಫ್

Updated on: Feb 06, 2022 | 9:57 PM

India vs West Indies 1st ODI: ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ತನ್ನ ಐತಿಹಾಸಿಕ (1000ನೇ ಏಕದಿನ ಪಂದ್ಯ) ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿದೆ.

Virat Kohli: ರೋಹಿತ್ ಪಕ್ಕಾ ಔಟ್, ಡಿಆರ್‌ಎಸ್ ತಗೋ ಎಂದ ಕಿಂಗ್ ಕೊಹ್ಲಿ: ಆಮೇಲೆನಾಯ್ತು?
Rohit sharma-Virat Kohli
Follow us on

ಟೀಮ್ ಇಂಡಿಯಾ ನಾಯಕತ್ವದಿಂದ ಕೆಳಗಿಳಿದ ಬಳಿಕ ವಿರಾಟ್ ಕೊಹ್ಲಿ ತಂಡದಲ್ಲಿ ಹೇಗಿರಲಿದ್ದಾರೆ ಎಂಬ ಪ್ರಶ್ನೆಗಳು ಹಲವರಲ್ಲಿತ್ತು. ಅದರಲ್ಲೂ ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿಯಲ್ಲಿ ಕೊಹ್ಲಿಯ ಪಾತ್ರವೇನು ಎಂಬ ಬಗ್ಗೆ ಕೂಡ ಚರ್ಚೆಗಳು ನಡೆದಿದ್ದವು. ಈ ಎಲ್ಲಾ ಪ್ರಶ್ನೆಗಳಿಗೆ ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಉತ್ತರ ನೀಡಿದ್ದಾರೆ. ತಂಡದಲ್ಲಿ ಮಾಜಿ ನಾಯಕನಾಗಿ ಕಾಣಿಸಿಕೊಂಡ ಕೊಹ್ಲಿ ಈ ಎಂದಿನಂತೆ ಅದೇ ಜೋಶ್​ನಲ್ಲಿ ಕಾಣಿಸಿಕೊಂಡರು. ಅದರಲ್ಲೂ ಡಿಆರ್‌ಎಸ್ ನಿರ್ಧಾರಗಳಲ್ಲಿ ನಾಯಕ ರೋಹಿತ್ ಶರ್ಮಾಗೆ ಉತ್ತಮ ಸಾಥ್ ನೀಡಿದರು. ಕೊಹ್ಲಿಯ ಖಚಿತತೆಯಿಂದ ಟೀಮ್ ಇಂಡಿಯಾಗೆ ವಿಕೆಟ್ ಸಿಕ್ಕಿರುವುದು ವಿಶೇಷ.

ಪಂದ್ಯದ 22 ನೇ ಓವರ್‌ನಲ್ಲಿ ಯುಜ್ವೇಂದ್ರ ಚಹಾಲ್ ಅವರು ಶಮರ ಬ್ರೂಕ್ಸ್ ಅವರಿಗೆ ಚೆಂಡೆಸೆದರು. ಚೆಂಡು ಬ್ಯಾಟ್​ ಬದಿಯಿಂದ ವಿಕೆಟ್ ಕೀಪರ್ ಕೈ ಸೇರಿತು. ಬಲವಾದ ಮನವಿ ಮಾಡಿದರೂ ಅಂಪೈರ್ ನಾಟೌಟ್ ಎಂದರು. ಇತ್ತ ಕೀಪರ್ ರಿಷಭ್ ಪಂತ್ ಜೊತೆ ಚಹಾಲ್ ಚರ್ಚಿಸಿದರು. ಇದೇ ವೇಳೆ ರೋಹಿತ್ ಶರ್ಮಾ ಕೂಡ ಬೌಲರ್ ಹಾಗೂ ಕೀಪರ್​ ಜೊತೆ ಔಟ್ ಎಂದು ಖಚಿತತೆ ಇದ್ದರೆ ಮಾತ್ರ ಡಿಆರ್‌ಎಸ್ ಮೊರೆ ಹೋಗೋಣ ಎಂದರು. ಇದರಿಂದ ಪಂತ್ ಹಾಗೂ ಚಹಲ್ ಸಂದಿಗ್ಧತೆಗೆ ಸಿಲುಕಿದರು. ಆದರೆ ಇದೇ ವೇಳೆ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಅವರಿಗೆ ಖಚಿತತೆ ನೀಡಿದರು. ಪಕ್ಕಾ ಔಟ್, ನಾನು ಕೇಳಿಸಿಕೊಂಡಿದ್ದೀನಿ, ಡಿಆರ್‌ಎಸ್ ತೆಗೆದುಕೊಳ್ಳುವಂತೆ ಕೊಹ್ಲಿ ಹಿಟ್​ಮ್ಯಾನ್​ನ ಮನವೊಲಿಸಿದರು.

ವಿರಾಟ್ ಕೊಹ್ಲಿ ಮಾತುಗಳ ಮೇಲೆ ನಂಬಿಕೆಯಿರಿಸಿ ರೋಹಿತ್ ಶರ್ಮಾ ಡಿಆರ್​ಎಸ್​ ಮೊರೆ ಹೋದರು. ಮೂರನೇ ಅಂಪೈರ್ ಪರಿಶೀಲಿಸಿದಾಗ ಚೆಂಡು ಬ್ರೂಕ್ಸ್​ ಬ್ಯಾಟ್​ಗೆ ತಾಗಿರುವುದು ಸ್ಪಷ್ಟವಾಗಿತ್ತು. ಅದರಂತೆ ಟೀಮ್ ಇಂಡಿಯಾಗೆ ಪ್ರಮುಖ ವಿಕೆಟ್ ಲಭಿಸಿತು. ಇದೀಗ ಈ ವಿಕೆಟ್​ಗಾಗಿ ಈ ಟೀಮ್ ಇಂಡಿಯಾ ಆಟಗಾರರನ ನಡುವಣ ಚರ್ಚೆಯ ವಿಡಿಯೋ ವೈರಲ್ ಆಗಿದೆ. ಅದರಲ್ಲೂ ಕೊಹ್ಲಿಯ ಮಾತಿನಂತೆ ರೋಹಿತ್ ಶರ್ಮಾಗೆ ಡಿಆರ್‌ಎಸ್ ಮೊರೆ ಹೋಗಿರುವುದು ಈ ವಿಡಿಯೋದಲ್ಲಿ ಕಾಣಬಹುದು. ಇದೀಗ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಡುವಣ ಈ ಸಂಭಾಷಣೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾಯಕ ಹಾಗೂ ಮಾಜಿ ನಾಯಕನ ನಡುವಣ ಈ ಹೊಂದಾಣಿಕೆಯ ಬಗ್ಗೆ ಟೀಮ್ ಇಂಡಿಯಾ ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆಗಳು ವ್ಯಕ್ತಪಡಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ತನ್ನ ಐತಿಹಾಸಿಕ (1000ನೇ ಏಕದಿನ ಪಂದ್ಯ) ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ವೆಸ್ಟ್ ಇಂಡೀಸ್ ತಂಡವನ್ನು 176 ರನ್​ಗೆ ಟೀಮ್ ಇಂಡಿಯಾ ಆಲೌಟ್ ಮಾಡಿತ್ತು. ಅಲ್ಲದೆ 28 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ ಟೀಮ್ ಇಂಡಿಯಾ 6 ವಿಕೆಟ್​ಗಳ ಜಯ ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

ಇದನ್ನೂ ಓದಿ: Yuzvendra Chahal: ವಿಕೆಟ್​ಗಳ ಶತಕ ಪೂರೈಸಿದ ಚಹಾಲ್

ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!

(India vs West Indies 1st ODI virat kohli convince rohit sharma to take drs video viral)

Published On - 8:51 pm, Sun, 6 February 22