India vs West Indies 4th T20 Live Streaming: ಭಾರತಕ್ಕೆ ಸರಣಿ ಗೆಲ್ಲುವ ಅವಕಾಶ; ಪಂದ್ಯ ಆರಂಭ ಎಷ್ಟು ಗಂಟೆಗೆ?

India vs West Indies 4th T20 Live Streaming: ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ 23 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿರುವುದು ಮುಖಾಮುಖಿ ವರದಿ ನೋಡಿದರೆ ಗೊತ್ತಾಗುತ್ತದೆ. ಇದರಲ್ಲಿ ಭಾರತ 15 ಪಂದ್ಯಗಳನ್ನು ಗೆದ್ದಿದ್ದರೆ ಕೆರಿಬಿಯನ್ 7 ಪಂದ್ಯಗಳನ್ನು ಗೆದ್ದಿದೆ. 1 ಪಂದ್ಯ ಇತ್ಯರ್ಥವಾಗಿಲ್ಲ.

India vs West Indies 4th T20 Live Streaming: ಭಾರತಕ್ಕೆ ಸರಣಿ ಗೆಲ್ಲುವ ಅವಕಾಶ; ಪಂದ್ಯ ಆರಂಭ ಎಷ್ಟು ಗಂಟೆಗೆ?
Updated By: ಪೃಥ್ವಿಶಂಕರ

Updated on: Aug 06, 2022 | 7:05 AM

ಭಾರತ vs ವೆಸ್ಟ್ ಇಂಡೀಸ್ ( India vs West Indies) 5 ಪಂದ್ಯಗಳ ಟಿ20 (T20) ಸರಣಿಯು ಪ್ರಸ್ತುತ 2-1 ರಲ್ಲಿ ನಿಂತಿದೆ. ವೀಸಾ ಸಮಸ್ಯೆಗಳ ನಂತರ ಎರಡೂ ತಂಡಗಳು ಮಿಯಾಮಿ ತಲುಪಿದವು. ಉಭಯ ತಂಡಗಳು ಇಂದು ಅಭ್ಯಾಸ ನಡೆಸಲಿವೆ. ನಾಳೆ ಶನಿವಾರ ಭಾರತಕ್ಕೆ ಸರಣಿ ಕೈವಶ ಮಾಡಿಕೊಳ್ಳುವ ಅವಕಾಶವಿದೆ. ಆದರೆ, ನಿಕೋಲಸ್ ಪೂರನ್ (Nicholas Pooran) ಬಳಗಕ್ಕೆ ಸರಣಿ ಸಮಬಲಗೊಳಿಸುವ ಅವಕಾಶವಿದೆ. ಮೂರನೇ ಟಿ20 ಪಂದ್ಯದ ವೇಳೆ ಭಾರತದ ಇನ್ನಿಂಗ್ಸ್ ವೇಳೆ ಬೆನ್ನು ಸೆಳೆತದಿಂದಾಗಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಮೈದಾನದಿಂದ ನಿರ್ಗಮಿಸಿದ್ದರು. ಇದರಿಂದಾಗಿ ಅವರು ಸರಣಿಯ ನಾಲ್ಕನೇ ಪಂದ್ಯಕ್ಕೆ ಲಭ್ಯರಾಗುತ್ತಾರೆಯೇ ಎಂಬ ಅನುಮಾನ ಮೂಡಿದೆ. ಆದರೆ, ಮುಂದಿನ ಪಂದ್ಯಕ್ಕೂ ಮುನ್ನ ಚೇತರಿಸಿಕೊಳ್ಳಬಹುದು ಎಂದು ಮೂರನೇ ಪಂದ್ಯದ ಕೊನೆಯಲ್ಲಿ ರೋಹಿತ್ ಹೇಳಿದ್ದಾರೆ. ಈ ಬಾರಿ ನಾಲ್ಕನೇ ಪಂದ್ಯದಲ್ಲಿ ರೋಹಿತ್ ಲಭ್ಯರಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಶನಿವಾರ ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ಪಾರ್ಕ್ ಸ್ಟೇಡಿಯಂನಲ್ಲಿ ಯಾವ ತಂಡ ಆಡಲಿದೆ ಎಂಬುದರ ಬಗ್ಗೆ ವಿಶೇಷ ಗಮನ ನೀಡಲಾಗುತ್ತದೆ.

ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ 23 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿರುವುದು ಮುಖಾಮುಖಿ ವರದಿ ನೋಡಿದರೆ ಗೊತ್ತಾಗುತ್ತದೆ. ಇದರಲ್ಲಿ ಭಾರತ 15 ಪಂದ್ಯಗಳನ್ನು ಗೆದ್ದಿದ್ದರೆ ಕೆರಿಬಿಯನ್ 7 ಪಂದ್ಯಗಳನ್ನು ಗೆದ್ದಿದೆ. 1 ಪಂದ್ಯ ಇತ್ಯರ್ಥವಾಗಿಲ್ಲ.

ಭಾರತ vs ವೆಸ್ಟ್ ಇಂಡೀಸ್ ನಾಲ್ಕನೇ T20 ಪಂದ್ಯ ಯಾವಾಗ ನಡೆಯಲಿದೆ?

ಇದನ್ನೂ ಓದಿ
CWG 2022: ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಪದಕ ಖಚಿತ; ಫೈನಲ್‌ಗೆ ಲಗ್ಗೆ ಇಟ್ಟ ಅನ್ಶು ಮಲಿಕ್
ಐಪಿಎಲ್ ಫ್ರಾಂಚೈಸಿಗಳ ಮಾಸ್ಟರ್​ ಪ್ಲಾನ್​; ಬಿಬಿಲ್​ ತೊರೆಯಲು ಮುಂದಾದ15 ಆಸೀಸ್ ಆಟಗಾರರು!
IND vs WI: ಸಂಜು ಇನ್, ಶ್ರೇಯಸ್ ಔಟ್! ರೋಹಿತ್ ಬಗ್ಗೆ ಸಸ್ಪೆನ್ಸ್; 4ನೇ ಟಿ20 ಪಂದ್ಯಕ್ಕೆ ಹೀಗಿರಲಿದೆ ಟೀಂ ಇಂಡಿಯಾ

ಭಾರತ vs ವೆಸ್ಟ್ ಇಂಡೀಸ್ ನಡುವಿನ ನಾಲ್ಕನೇ T20 ಪಂದ್ಯ ನಾಳೆ ಶನಿವಾರ (ಆಗಸ್ಟ್ 6) ನಡೆಯಲಿದೆ.

ಭಾರತ vs ವೆಸ್ಟ್ ಇಂಡೀಸ್ 4 ನೇ T20 ಪಂದ್ಯ ಎಲ್ಲಿ ನಡೆಯಲಿದೆ?

ಭಾರತ vs ವೆಸ್ಟ್ ಇಂಡೀಸ್ 4 ನೇ T20I ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ vs ವೆಸ್ಟ್ ಇಂಡೀಸ್ 4 ನೇ T20 ಪಂದ್ಯ ಯಾವಾಗ ಆರಂಭವಾಗುತ್ತದೆ?

ಭಾರತ vs ವೆಸ್ಟ್ ಇಂಡೀಸ್ 4 ನೇ T20 ಪಂದ್ಯ IST ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಪಂದ್ಯಕ್ಕೂ ಮುನ್ನ 7:30ಕ್ಕೆ ಟಾಸ್ ನಡೆಯಲಿದೆ.

ಭಾರತ vs ವೆಸ್ಟ್ ಇಂಡೀಸ್ 4 ನೇ T20 ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬೇಕು?

ಭಾರತ vs ವೆಸ್ಟ್ ಇಂಡೀಸ್ ಸರಣಿಯ ಪ್ರಸಾರ ಹಕ್ಕುಗಳನ್ನು ಫ್ಯಾನ್‌ಕೋಡ್ ಖರೀದಿಸಿದೆ. ಪರಿಣಾಮವಾಗಿ, ನಾಲ್ಕನೇ ಟಿ20 ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ವೆಬ್‌ಸೈಟ್ ಮತ್ತು ಫ್ಯಾನ್‌ಕೋಡ್ ಎಂಬ ಅಪ್ಲಿಕೇಶನ್‌ನಲ್ಲಿ ನೋಡಬಹುದು. ಆದಾಗ್ಯೂ, ಭಾರತ vs ವೆಸ್ಟ್ ಇಂಡೀಸ್ ಪಂದ್ಯವನ್ನು ಫ್ಯಾನ್‌ಕೋಡ್‌ನಲ್ಲಿ ವೀಕ್ಷಿಸಲು, ವೀಕ್ಷಕರು ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಲ್ಲದೆ, ಭಾರತ vs ವೆಸ್ಟ್ ಇಂಡೀಸ್ ಪಂದ್ಯವನ್ನು ಟಿವಿಯಲ್ಲಿ ಡಿಡಿ ಸ್ಪೋರ್ಟ್ಸ್ 1.0 ನಲ್ಲಿ ಲೈವ್ ವೀಕ್ಷಿಸಬಹುದು.

ಭಾರತ ಸಂಭಾವ್ಯ XI: ರೋಹಿತ್ ಶರ್ಮಾ/ಇಶಾನ್ ಕಿಶನ್/ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಅಬೇಶ್ ಖಾನ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್

ವೆಸ್ಟ್ ಇಂಡೀಸ್ ಸಂಭಾವ್ಯ XI: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್, ಜೇಸನ್ ಹೋಲ್ಡರ್, ಓಡಿನ್ ಸ್ಮಿತ್, ಡೆವೊನ್ ಥಾಮಸ್, ಅಕೀಲ್ ಹುಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್

ಇನ್ನಷ್ಟು ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ