ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (KSCA) ಆಯೋಜಿಸುತ್ತಿರುವ ಹೊಸ ಟಿ20 ಲೀಗ್ ಮಹಾರಾಜ ಟ್ರೋಫಿ ನಾಳೆಯಿಂದ (ಆಗಸ್ಟ್ 7) ಶುರುವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿದ್ದು, ಅದರಂತೆ ಶಿವಮೊಗ್ಗ ಸ್ಟೈಕರ್ಸ್, ಹುಬ್ಬಳ್ಳಿ ಟೈಗರ್ಸ್, ಮಂಗಳೂರು ಯುನೈಟೆಡ್, ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್ ಮತ್ತು ಗುಲ್ಬಾರ್ಗ ಮಿಸ್ಟಿಕ್ಸ್ ತಂಡಗಳು ಮಹಾರಾಜ ಟ್ರೋಫಿಗಾಗಿ ಸೆಣಸಲಿದೆ.
ಈ ಆರು ತಂಡಗಳ ನಾಯಕರುಗಳು ಕೂಡ ಆಯ್ಕೆಯಾಗಿದ್ದು, ಇಲ್ಲಿ ಬೆಂಗಳೂರು ತಂಡದ ನಾಯಕನಾಗಿ ಮಯಾಂಕ್ ಅಗರ್ವಾಲ್ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಿದ್ರೆ ಯಾವ ತಂಡಕ್ಕೆ ಯಾರು ನಾಯಕ ಎಂಬುದನ್ನು ನೋಡೋಣ...
ಮಂಗಳೂರು ಯುನೈಟೆಡ್- ರವಿಕುಮಾರ್ ಸಮರ್ಥ್
ಗುಲ್ಬಾರ್ಗ ಮಿಸ್ಟಿಕ್ಸ್- ಮನೀಷ್ ಪಾಂಡೆ
ಗುಲ್ಬಾರ್ಗ ಮಿಸ್ಟಿಕ್ಸ್- ಮನೀಷ್ ಪಾಂಡೆ
ಹುಬ್ಬಳ್ಳಿ ಟೈಗರ್ಸ್- ಅಭಿಮನ್ಯು ಮಿಥುನ್
ಮೈಸೂರು ವಾರಿಯರ್ಸ್- ಕರುಣ್ ನಾಯರ್
ಶಿವಮೊಗ್ಗ ಸ್ಟ್ರೈಕರ್ಸ್- ಕೃಷ್ಣಪ್ಪ ಗೌತಮ್
ಈ ಟೂರ್ನಿಯು ಆಗಸ್ಟ್ 7 ರಿಂದ ಶುರುವಾಗಲಿದ್ದು, ಆಗಸ್ಟ್ 26ರ ವರೆಗೆ ನಡೆಯಲಿದೆ. ಮೊದಲ ಲೆಗ್ ಪಂದ್ಯಗಳು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆಯಲಿದೆ.
ಮೈಸೂರಿನಲ್ಲಿ ಒಟ್ಟು 18 ಪಂದ್ಯಗಳು ನಡೆಯಲಿದ್ದು, ಫೈನಲ್ ಸೇರಿದಂತೆ ಒಟ್ಟು 16 ಪಂದ್ಯಗಳು ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ.
Published On - 10:53 am, Sat, 6 August 22