IND vs WI 5th T20 Cricket Live Score: ಬೆಂಗಳೂರಿನಲ್ಲಿ ನಿಲ್ಲದ ಮಳೆ, ಟಾಸ್ ವಿಳಂಬ

India vs West Indies 5th T20 Cricket Match Live Scorecard: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5ನೇ ಟಿ20 ಪಂದ್ಯ ಆರಂಭವಾಗಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸರಣಿ 2-2 ರಿಂದ ಸಮಬಲಗೊಂಡಿರುವುದರಿಂದ ಇದೀಗ ನಿರ್ಣಾಯಕ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಆದಾಗ್ಯೂ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಿರುವುದರಿಂದ ಟಾಸ್ ನಡೆಯುವುದು ಕೊಂಚ ವಿಳಂಬವಾಗಬಹುದು.

IND vs WI 5th T20 Cricket Live Score: ಬೆಂಗಳೂರಿನಲ್ಲಿ ನಿಲ್ಲದ ಮಳೆ, ಟಾಸ್ ವಿಳಂಬ
ಭಾರತ Vs ವೆಸ್ಟ್ ಇಂಡೀಸ್

Updated on: Oct 17, 2026 | 7:18 PM

LIVE NEWS & UPDATES

  • 17 Oct 2026 07:18 PM (IST)

    IND vs WI 5th T20 Live: ಪಂದ್ಯದ ಕಟ್-ಆಫ್ ಸಮಯ ಎಷ್ಟು?

    ಪ್ರಸ್ತುತ ಮಳೆ ಮುಂದುವರಿದಿದ್ದು, ಪಂದ್ಯವು ಸರಿಯಾದ ಸಮಯಕ್ಕೆ ಪ್ರಾರಂಭವಾಗುವ ಸಾಧ್ಯತೆಯಿಲ್ಲ. ನಿಗದಿತ ಆರಂಭದ ಸಮಯಕ್ಕಿಂತ ಅರ್ಧ ಗಂಟೆಯ ನಂತರ, ಅಂದರೆ ಸಂಜೆ 7:30 ರಿಂದ ಓವರ್‌ಗಳನ್ನು ಕಡಿಮೆ ಮಾಡಲಾಗುವುದು.

    ಫಲಿತಾಂಶವನ್ನು ನಿರ್ಧರಿಸಲು ಕನಿಷ್ಠ ಐದು ಓವರ್‌ಗಳನ್ನು ಆಡಬೇಕು. ಆದಾಗ್ಯೂ, ಇದಕ್ಕೆ ಕಟ್-ಆಫ್ ಸಮಯ ರಾತ್ರಿ 9:41. ಇದರರ್ಥ ಪಂದ್ಯವು ಈ ಸಮಯದೊಳಗೆ ಪ್ರಾರಂಭವಾಗಬೇಕು. ಇದು ಸಾಧ್ಯವಾಗದಿದ್ದರೆ, ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ.

  • 17 Oct 2026 06:29 PM (IST)

    IND vs WI 5th T20 Live: ಟಾಸ್ ವಿಳಂಬ ಸಾಧ್ಯತೆ

    ಬೆಂಗಳೂರಿನಲ್ಲಿ ಮಳೆಯಾಗುತ್ತಿರುವುದರಿಂದ ಈ ಪಂದ್ಯ ಆರಂಭವಾಗುವುದು ವಿಳಂಬವಾಗಬಹುದು. ಇದರಿಂದ ಟಾಸ್ ಕೂಡ ನಿಗದಿತ ಸಮಯಕ್ಕೆ ನಡೆಯುವ ಸಾಧ್ಯತೆಗಳಿಲ್ಲ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5ನೇ ಟಿ20 ಪಂದ್ಯ ಆರಂಭವಾಗಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸರಣಿ 2-2 ರಿಂದ ಸಮಬಲಗೊಂಡಿರುವುದರಿಂದ ಇದೀಗ ನಿರ್ಣಾಯಕ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ನಾಯಕ ಶ್ರೇಯಸ್ ಅಯ್ಯರ್ ನಾಯಕತ್ವದ ಟೀಂ ಇಂಡಿಯಾ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದರೆ, ಇತ್ತ ವೆಸ್ಟ್ ಇಂಡೀಸ್‌ನ ದೀರ್ಘ ಕಾಯುವಿಕೆಯನ್ನು ಕೊನೆಗೊಳಿಸುವ ಅವಕಾಶ ಶೈ ಹೋಪ್‌ಗೆ ಇದೆ. ಆದಾಗ್ಯೂ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಿರುವುದರಿಂದ ಟಾಸ್ ನಡೆಯುವುದು ಕೊಂಚ ವಿಳಂಬವಾಗಬಹುದು.

Published On - 6:28 pm, Sat, 17 October 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us