AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: ಭಾರತದ ಸರಣಿ ಗೆಲುವಿನ ಕನಸಿಗೆ ಮಳೆ ಅಡ್ಡಿ? ಇಲ್ಲಿದೆ ಫ್ಲೋರಿಡಾದ ಹವಾಮಾನ ವರದಿ

India Vs West Indies, 5th T20I Weather Forecast: ಈ ಮೈದಾನದಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರೆಸಿರುವ ಭಾರತ, ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯವನ್ನು ಇದೇ ಮೈದಾನದಲ್ಲಿ 9 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಭಾರತವೇ ಗೆಲುವಿನ ಫೆವರೇಟ್ ಎನಿಸಿಕೊಂಡಿದೆ. ಆದರೆ ಈ ಸರಣಿ ನಿರ್ಧಾರಕ ಪಂದ್ಯದಲ್ಲಿ ಮಳೆ ನಿರ್ಣಾಯಕ ಪಾತ್ರವನ್ನು ವಹಿಸುವ ಸಾಧ್ಯತೆ ಇದೆ ಎಂದು ಹವಾಮಾನ ವರದಿಯಲ್ಲಿ ಹೇಳಲಾಗಿದೆ.

IND vs WI: ಭಾರತದ ಸರಣಿ ಗೆಲುವಿನ ಕನಸಿಗೆ ಮಳೆ ಅಡ್ಡಿ? ಇಲ್ಲಿದೆ ಫ್ಲೋರಿಡಾದ ಹವಾಮಾನ ವರದಿ
ಫ್ಲೋರಿಡಾದ ಹವಾಮಾನ ವರದಿ
ಪೃಥ್ವಿಶಂಕರ
|

Updated on: Aug 13, 2023 | 12:44 PM

Share

ಭಾರತ ಮತ್ತು ವೆಸ್ಟ್ ಇಂಡೀಸ್ (India and West Indies) 24 ಗಂಟೆಗಳಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗಲಿವೆ. ಟೀಂ ಇಂಡಿಯಾ (Team India) 13 ಆಗಸ್ಟ್ 2023 ರಂದು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಟಿ20 ಸರಣಿಯ ನಿರ್ಣಾಯಕ ಪಂದ್ಯವನ್ನು ಆಡಬೇಕಾಗಿದೆ. ವಾಸ್ತವವಾಗಿ, ಸರಣಿ 2-2 ರಿಂದ ಸಮಬಲಗೊಂಡಿರುವುದರಿಂದ ಎರಡೂ ತಂಡಗಳಿಗೆ ಗೆಲುವು ಅತ್ಯಗತ್ಯ. ಏಕೆಂದರೆ ಸರಣಿಯಲ್ಲಿ ಗೆಲ್ಲುವ ತಂಡ ಮಾತ್ರ ಪ್ರಶಸ್ತಿಯನ್ನು ವಶಪಡಿಸಿಕೊಳ್ಳಲಿದೆ. ಭಾರತ ತಂಡ ಇದುವರೆಗೆ ಆಡಿರುವ 5 ಪಂದ್ಯಗಳ ಟಿ20 ಸರಣಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ಟೀಂ ಇಂಡಿಯಾದ ಐದನೇ ಐದು ಪಂದ್ಯಗಳ ಟಿ20 ಸರಣಿಯಾಗಿದ್ದು, ಈ ಸರಣಿಯನ್ನು ತನ್ನದಾಗಿಸಿಕೊಳ್ಳುವ ತವಕದಲ್ಲಿದೆ. ಇತ್ತ ವೆಸ್ಟ್ ಇಂಡೀಸ್ ಕೂಡ ಕೊನೆಯ ಟಿ20 ಪಂದ್ಯವನ್ನು ಗೆದ್ದು, ಟಿ20 ಸರಣಿಯನ್ನಾದರೂ ತನ್ನದಾಗಿಸಿಕೊಳ್ಳುವ ಇರಾದೆಯಲ್ಲಿದೆ.

ವಾಸ್ತವವಾಗಿ ಉಭಯ ತಂಡಗಳ ಅಂತಿಮ ಪಂದ್ಯಕ್ಕೆ ಫ್ಲೋರಿಡಾದ ಫೋರ್ಟ್ ಲಾಡರ್‌ ಮೈದಾನವೇ ಆತಿಥ್ಯವಹಿಸುತ್ತಿದೆ. ಈ ಮೈದಾನದಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರೆಸಿರುವ ಭಾರತ, ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯವನ್ನು ಇದೇ ಮೈದಾನದಲ್ಲಿ 9 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಭಾರತವೇ ಗೆಲುವಿನ ಫೆವರೇಟ್ ಎನಿಸಿಕೊಂಡಿದೆ. ಆದರೆ ಈ ಸರಣಿ ನಿರ್ಧಾರಕ ಪಂದ್ಯದಲ್ಲಿ ಮಳೆ ನಿರ್ಣಾಯಕ ಪಾತ್ರವನ್ನು ವಹಿಸುವ ಸಾಧ್ಯತೆ ಇದೆ ಎಂದು ಹವಾಮಾನ ವರದಿಯಲ್ಲಿ ಹೇಳಲಾಗಿದೆ.

ಸಂಜೆ 6 ಗಂಟೆಯವರೆಗೆ ಮಳೆಯಾಗುವ ಸಾಧ್ಯತೆ

weather.com ಪ್ರಕಾರ, ಇಂದು ಅಂದರೆ, ಆಗಸ್ಟ್ 13 ರಂದು ದಿನವಿಡೀ ಮೋಡ ಕವಿದ ವಾತಾವರಣವಿರಲಿದೆ. ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುತ್ತದೆ. ವಾಸ್ತವವಾಗಿ, ಮಧ್ಯಾಹ್ನದಿಂದ ಸಂಜೆ 6 ಗಂಟೆಯವರೆಗೆ ಮಳೆಯಾಗುವ ಸಾಧ್ಯತೆಯಿದೆ. ಅಂದರೆ ಪಂದ್ಯದ ಮೇಲೆ ಮಳೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿವೆ. ಪಂದ್ಯವನ್ನು ಸ್ಥಳೀಯ ಕಾಲಮಾನ ಬೆಳಗ್ಗೆ 10 ಗಂಟೆಗೆ ನಡೆಸಲು ನಿರ್ಧರಿಸಲಾಗಿದೆ. ಆದ್ದರಿಂದ ಪಂದ್ಯದ ಸಮಯದಲ್ಲಿ ಮಳೆಯು ಆಟಕ್ಕೆ ಅಡ್ಡಿಪಡಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಉಭಯ ಸಂಭಾವ್ಯ ತಂಡಗಳು

ಭಾರತ ತಂಡ: ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್.

ವೆಸ್ಟ್ ಇಂಡೀಸ್ ತಂಡ: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಶಾಯ್ ಹೋಪ್, ನಿಕೋಲಸ್ ಪೂರನ್, ರೋವ್ಮನ್ ಪೊವೆಲ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಅಕೇಲ್ ಹೊಸೈನ್, ಒಬೆದ್ ಮೆಕಾಯ್, ಅಲ್ಜಾರಿ ಜೋಸೆಫ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ