The Hundred: ಜನ್ಮ ದಿನದಂದೇ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ ಆಂಗ್ಲ ವೇಗಿ..!
Tymal Mills: ಈ ಲೀಗ್ನಲ್ಲಿ ಸದರ್ನ್ ಬ್ರೇವ್ ತಂಡದ ಪರ ಕಣಕ್ಕಿಳಿದಿದ್ದ ವೇಗಿ ಟೈಮಲ್ ಮಿಲ್ಸ್ ಡೆತ್ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ. ಅದರಲ್ಲೂ ಈ ಹ್ಯಾಟ್ರಿಕ್ ವಿಕೆಟ್ನ ವಿಶೇತೆಯೆಂದರೆ ಮಿಲ್ಸ್, ತಮ್ಮ 31ನೇ ಜನ್ಮದಿನದಂದು ಈ ಸಾಧನೆ ಮಾಡಿದ್ದಾರೆ.
ಕ್ರಿಕೆಟ್ನಲ್ಲಿ (Cricket) ಡೆತ್ ಓವರ್ ಬೌಲರ್ಗಳಿಗೆ ಬಹಳ ಮಹತ್ವವಿದೆ. ಏಕೆಂದರೆ ಒಂದು ತಂಡದ ಸೋಲು ಅಥವಾ ಗೆಲುವು ಇನ್ನಿಂಗ್ಸ್‌ನ ಕೊನೆಯ ಓವರ್ಗಳನ್ನು ಬೌಲ್ ಮಾಡುವ ಬೌಲರ್ಗಳ ತಂತ್ರದ ಮೇಲೆ ನಿಂತಿರುತ್ತದೆ. ಒಂದು ವೇಳೆ ಆ ಬೌಲರ್ ರನ್ಗಳಿಗೆ ಕಡಿವಾಣ ಹಾಕಿದರೆ ತಂಡಕ್ಕೆ ಲಾಭ ಜಾಸ್ತಿ, ಇದಕ್ಕೆ ತದ್ವಿರುದ್ಧವಾಗಿ ಸರಾಗವಾಗಿ ರನ್ ಬಿಟ್ಟುಕೊಟ್ಟರೆ ತಂಡಕ್ಕೆ ಹಿನ್ನಡೆಯಾಗುವುದಂತು ಖಚಿತ. ಸಾಮಾನ್ಯವಾಗಿ ಡೆತ್ ಓವರ್ಗಳಲ್ಲಿ ಹೆಚ್ಚಾಗಿ ಬ್ಯಾಟರ್ಗಳ ಅಬ್ಬರವೇ ಹೆಚ್ಚಿರುತ್ತದೆ. ಅಪರೂಪಕ್ಕೊಮ್ಮೆ ಅದರಲ್ಲೂ ಕೆಲವೇ ಕೆಲವು ಅನಭವಿ ಬೌಲರ್ಗಳು ಮಾತ್ರ ಡೆತ್ ಓವರ್ಗಳಲ್ಲಿ ಮೇಲುಗೈ ಸಾಧಿಸುತ್ತಾರೆ. ಇದೀಗ ಅಂತಹದೆ ಘಟನೆಯೊಂದು ದಿ ಹಂಡ್ರೆಂಡ್ (The Hundred) ಲೀಗ್ನಲ್ಲಿ ನಡೆದಿದೆ.
ಈ ಲೀಗ್ನಲ್ಲಿ ಸದರ್ನ್ ಬ್ರೇವ್ ತಂಡದ ಪರ ಕಣಕ್ಕಿಳಿದಿದ್ದ ವೇಗಿ ಟೈಮಲ್ ಮಿಲ್ಸ್ ಡೆತ್ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ. ಅದರಲ್ಲೂ ಈ ಹ್ಯಾಟ್ರಿಕ್ ವಿಕೆಟ್ನ ವಿಶೇತೆಯೆಂದರೆ ಮಿಲ್ಸ್, ತಮ್ಮ 31ನೇ ಜನ್ಮದಿನದಂದು ಈ ಸಾಧನೆ ಮಾಡಿದ್ದಾರೆ.
87 ರನ್ಗಳಿಗೆ ಆಲ್ ಔಟ್
ವೇಲ್ಸ್ ಫೈರ್ ಮತ್ತು ಸದರ್ನ್ ಬ್ರೇವ್ ನಡುವೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೇಲ್ಸ್ ಫೈರ್ ತಂಡ 100 ಎಸೆತಗಳಲ್ಲಿ 87 ರನ್ಗಳಿಗೆ ಆಲ್ ಔಟ್ ಆಯಿತು. ಈ ತಂಡವನ್ನು ಆಲ್ ಔಟ್ ಮಾಡುವಲ್ಲಿ ಸದರ್ನ್ ಬ್ರೇವ್ ಬೌಲರ್ ಟೈಮಲ್ ಮಿಲ್ಸ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಹುಟ್ಟುಹಬ್ಬದಂದು 4 ವಿಕೆಟ್
ವೇಲ್ಸ್ ಫೈರ್ ವಿರುದ್ಧ ಟೈಮಲ್ ಮಿಲ್ಸ್ 20 ಎಸೆತಗಳನ್ನು ಬೌಲ್ ಮಾಡಿ ಕೇವಲ 13 ರನ್ ನೀಡಿ 4 ವಿಕೆಟ್ ಪಡೆದರು. ಈ ಪೈಕಿ, ಅವರು ವೆಲ್ಸ್ ಫೈರ್ ಇನ್ನಿಂಗ್ಸ್‌ನ ಕೊನೆಯ 3 ಎಸೆತಗಳಲ್ಲಿ ಅಂದರೆ, 98, 99 ಮತ್ತು 100 ನೇ ಎಸೆತದಲ್ಲಿ 3 ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. ಮಿಲ್ಸ್ ಅವರ ಹ್ಯಾಟ್ರಿಕ್ ವಿಕೆಟ್ ಬಲಿಯಾದ ಬ್ಯಾಟ್ಸ್‌ಮನ್‌ಗಳಲ್ಲಿ ಬೆನ್ ಗ್ರೀನ್, ಹ್ಯಾರಿಸ್ ರೌಫ್ ಮತ್ತು ಡೇವಿಡ್ ಪೈನ್ ಸೇರಿದ್ದರು. ಈ ಮೂವರನ್ನು 3 ಎಸೆತಗಳಲ್ಲಿ ಬೇಟೆಯಾಡುವ ಮೂಲಕ ಮಿಲ್ಸ್ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದರು.
⛔️ STOP SCROLLING! ⛔️
Enjoy this Tymal Mills hat-trick! 🤩#TheHundred pic.twitter.com/ILMlsGZX5P
— The Hundred (@thehundred) August 12, 2023
ಇನ್ನು ವೆಲ್ಸ್ ಫೈರ್ ನೀಡಿದ 88 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸದರ್ನ್ ಬ್ರೇವ್ ತಂಡ 41 ಎಸೆತಗಳು ಬಾಕಿ ಇರುವಂತೆಯೇ 9 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:23 am, Sun, 13 August 23